Narayan Rane Gets Bail; ಬಂಧನದ 8 ಗಂಟೆಗಳ ಬಳಿಕ ಜಾಮೀನು ಮೇಲೆ ಬಿಡುಗಡೆಯಾದ ಕೇಂದ್ರ ಸಚಿವ ರಾಣೆ

ಈ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾದ ಬಳಿಕ ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಣೆ ಅವರು, "ನಾನು ಸಾಮಾನ್ಯ ಮನುಷ್ಯನಲ್ಲ. ನಾನು ಯಾವುದೇ ಅಪರಾಧ ಮಾಡಿಲ್ಲ. ಆಗಸ್ಟ್ 15 ರ ಬಗ್ಗೆ ಯಾರಿಗಾದರೂ ತಿಳಿದಿಲ್ಲದಿದ್ದರೆ ಅದು ಅಪರಾಧ ಅಲ್ಲವೇ? ನಾನು ಹೇಳಿದ ಮಾತು ಹೊಡೆಯುತ್ತಿದ್ದೆ ಎಂದು. ಇದು ಅಪರಾಧವಲ್ಲ" ಎಂದು ಹೇಳಿದ್ದಾರೆ. 

ಸಿಎಂ ಉದ್ಧವ್ ಠಾಕ್ರೆ ಮತ್ತು ಕೇಂದ್ರ ಸಚಿವ ನಾರಾಯಣ ರಾಣೆ

ಸಿಎಂ ಉದ್ಧವ್ ಠಾಕ್ರೆ ಮತ್ತು ಕೇಂದ್ರ ಸಚಿವ ನಾರಾಯಣ ರಾಣೆ

 • Share this:
  ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ (Maharashtra Chief Minister Uddhav Thackeray) ಅವರಿಗೆ ಹೊಡೆಯುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಇಂದು ಮಧ್ಯಾಹ್ನ 2.25ಕ್ಕೆ ಬಂಧನಕ್ಕೆ ಒಳಗಾಗಿದ್ದ ಕೇಂದ್ರ ಸಚಿವ ನಾರಾಯಣ ರಾಣೆ (Union Minister Narayan Rane) ಅವರು ಇಂದು ರಾತ್ರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇದಕ್ಕೂ ಮುನ್ನ ಇವರನ್ನು ಮಹಾದ್​ನ ನ್ಯಾಯಾಲಕ್ಕೆ ಹಾಜರುಪಡಿಸಲಾಯಿತು. ಅಲ್ಲಿ ರಾಣೆ ಅವರ ವಕೀಲರು ಆರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು.

  ಸಚಿವ ರಾಣೆ ಅವರು ಬಿಜೆಪಿ ಜನ ಆಶೀರ್ವಾದ ಯಾತ್ರೆಯ ಕಾರ್ಯಕ್ರಮದ ಅಂಗವಾಗಿ ಮುಂಬೈನಿಂದ ಸಿಂದುದುರ್ಗ್​ವರೆಗೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದರು. ಸೋಮವಾರ ರಾತ್ರಿ ರತ್ನಗಿರಿಯ ಜಿಲ್ಲೆಯ ಛಿಪ್ಲುನ್​ ಯಾತ್ರೆಯಲ್ಲಿ ಸಿಎಂ ಠಾಕ್ರೆ ವಿರುದ್ಧ ಅಸಂಬದ್ಧ ಹೇಳಿಕೆ ನೀಡಿದ್ದರು. ಆಗಸ್ಟ್ 15ರ ​ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಮಯದಲ್ಲಿ ಮುಖ್ಯಮಂತ್ರಿ ತಮ್ಮ ಭಾಷಣದ ವೇಳೆ ಸ್ವಾತಂತ್ರ್ಯ ವರ್ಷವನ್ನೇ ಮರೆತಿದ್ದರು. ಬಳಿಕ ತಮ್ಮ ಭಾಷಣದ ನಡುವೆ ಸಹಾಯಕರಿಂದ ಮಾಹಿತಿ ಪಡೆದುಕೊಂಡರು. ಒಂದು ವೇಳೆ ನಾನು ಅಲ್ಲಿ ಇದ್ದಿದ್ದರೆ ಅವರಿಗೆ ಹೊಡೆಯುತ್ತಿದ್ದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ರಾಜ್ಯದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಶಿವಸೇನೆ ಕಾರ್ಯಕರ್ತರು ಎಲ್ಲ ಕಡೆ ಕೇಂದ್ರ ಸಚಿವ ರಾಣೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಈ ಸಂಬಂಧ ಎರಡು ಎಫ್​ಐಆರ್​ಗಳು ಕೂಡ ದಾಖಲಾಗಿದ್ದವು. ಹಾಗಾಗಿ ಇಂದು ಮಧ್ಯಾಹ್ನ 2.25ರ ಸಮಯದಲ್ಲಿ ರತ್ನಗಿರಿ ಬಳಿ ಪೊಲೀಸರು ಬಂಧಿಸಿದ್ದರು.

  ಏತನ್ಮಧ್ಯೆ, ಮಹಾರಾಷ್ಟ್ರ ಸರ್ಕಾರದ ಮೂಲಗಳು CNN-News18 ಗೆ ಪ್ರತ್ಯೇಕವಾಗಿ ಹೇಳಿದ್ದು, ಕಾನೂನಿಗಿಂತ ಮೇಲೆ ಯಾರೂ ಇಲ್ಲ ಎಂಬ ಸಂದೇಶವನ್ನು ಕಳುಹಿಸುವುದು. ರಾಣೆ ಜಾಮೀನು ಪಡೆಯುವುದರಲ್ಲಿ ಯಾವುದೇ ತೊಂದರೆ ಇಲ್ಲ ಮತ್ತು ಕೇಂದ್ರ ಸಚಿವರ ವಿರುದ್ಧ ಪ್ರಕರಣಗಳನ್ನು ಮುಂದುವರಿಸುವ ಉದ್ದೇಶವೂ ಇಲ್ಲ.  ಸಂದೇಶವು ಗಟ್ಟಿಯಾಗಿ ಮತ್ತು ಸ್ಪಷ್ಟವಾಗಿದೆ, ಅವಹೇಳನಕಾರಿ ಹೇಳಿಕೆಗಳನ್ನು ಸಹಿಸಲಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

  ಕೇಂದ್ರ ಸಚಿವ ನಾರಾಯಣ ರಾಣೆ ಹೇಳಿದ್ದೇನು?


  ಸೋಮವಾರ ನಡೆದ 'ಜನ್ ಆಶೀರ್ವಾದ್ ಯಾತ್ರೆಯ' ಸಮಯದಲ್ಲಿ, ಕೇಂದ್ರ ಸಚಿವ ನಾರಾಯಣ ರಾಣೆ ಅವರು, ಮುಖ್ಯಮಂತ್ರಿಗೆ ಸ್ವಾತಂತ್ರ್ಯದ ವರ್ಷ ಗೊತ್ತಿಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಅವರು ತಮ್ಮ ಭಾಷಣದ ಸಮಯದಲ್ಲಿ ಸ್ವಾತಂತ್ರ್ಯದ ವರ್ಷಗಳ ಎಣಿಕೆಯ ಬಗ್ಗೆ ವಿಚಾರಿಸಲು ಹಿಂದಕ್ಕೆ ವಾಲಿದರು. ನಾನು ಅಲ್ಲಿ ಇದ್ದಿದ್ದರೆ, (ಅವನಿಗೆ) ಕಪಾಳಕ್ಕೆ ಬಿಗಿಯುತ್ತಿದ್ದೆ ಎಂದು ಸಿಎಂ ಉದ್ಧವ್ ಠಾಕ್ರೆ ಉದ್ದೇಶಿಸಿ ಹೇಳಿದ್ದರು.


  ಇದನ್ನು ಓದಿ: TamilNadu| ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ತಮಿಳುನಾಡು ಬಿಜೆಪಿ ಪ್ರಧಾನ ಕಾರ್ಯದರ್ಶಿ; ಯೂಟ್ಯೂಬ್​ನಲ್ಲಿ ವಿಡಿಯೋ ವೈರಲ್!

  ಈ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾದ ಬಳಿಕ ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಣೆ ಅವರು, "ನಾನು ಸಾಮಾನ್ಯ ಮನುಷ್ಯನಲ್ಲ. ನಾನು ಯಾವುದೇ ಅಪರಾಧ ಮಾಡಿಲ್ಲ. ಆಗಸ್ಟ್ 15 ರ ಬಗ್ಗೆ ಯಾರಿಗಾದರೂ ತಿಳಿದಿಲ್ಲದಿದ್ದರೆ ಅದು ಅಪರಾಧ ಅಲ್ಲವೇ? ನಾನು ಹೇಳಿದ ಮಾತು ಹೊಡೆಯುತ್ತಿದ್ದೆ ಎಂದು. ಇದು ಅಪರಾಧವಲ್ಲ" ಎಂದು ಹೇಳಿದ್ದಾರೆ.  ಬಂಧನದ ಬಳಿಕ ಸಿಎನ್​ಎನ್​- ನ್ಯೂಸ್ 18 ಗೆ ಪ್ರತಿಕ್ರಿಯಿಸಿದ ರಾಣೆ ಅವರು ನನ್ನ ಹೇಳಿಕೆಗೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ. ಈ ಹಿಂದೆ ಉದ್ಧವ್ ಕೂಡ ಇಂತಹ ಹೇಳಿಕೆ ನೀಡಿದ್ದಾರೆ ಎಂದು ಹೇಳಿದ್ದಾರೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: