• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Lung Transplant: 5 ವರ್ಷ ಆಕ್ಸಿಜನ್ ಥೆರಪಿಯಲ್ಲೇ ಆಫ್ರಿಕನ್ ಮಹಿಳೆ ಸೆಣಸಾಟ, ಆಪರೇಷನ್ ಮಾಡಿ ಮರುಜೀವ ನೀಡಿದ ಮುಂಬೈ ವೈದ್ಯರು!

Lung Transplant: 5 ವರ್ಷ ಆಕ್ಸಿಜನ್ ಥೆರಪಿಯಲ್ಲೇ ಆಫ್ರಿಕನ್ ಮಹಿಳೆ ಸೆಣಸಾಟ, ಆಪರೇಷನ್ ಮಾಡಿ ಮರುಜೀವ ನೀಡಿದ ಮುಂಬೈ ವೈದ್ಯರು!

ಮುಂಬೈ ವೈದ್ಯರಿಂದ  ಆಫ್ರಿಕಾ ಮೂಲದ ಮಹಿಳೆಗೆ ಯಶಸ್ವಿ ಶ್ವಾಸಕೋಶ ಕಸಿ (Photo: Global Hospital)

ಮುಂಬೈ ವೈದ್ಯರಿಂದ ಆಫ್ರಿಕಾ ಮೂಲದ ಮಹಿಳೆಗೆ ಯಶಸ್ವಿ ಶ್ವಾಸಕೋಶ ಕಸಿ (Photo: Global Hospital)

ಸಿಸ್ಟಿಕ್ ಫೈಬ್ರೋಸಿಸ್ ಮತ್ತು ಶ್ವಾಸಕೋಶದ ಅಧಿಕ ರಕ್ತದೊತ್ತಡದಿಂದಾಗಿ ಕಳೆದ ಐದು ವರ್ಷಗಳಿಂದ ಆಕ್ಸಿಜೆನ್ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದ 33 ವರ್ಷದ ಸೀಶೆಲ್ಸ್ ಮಹಿಳೆಗೆ ಮುಂಬೈ ವೈದ್ಯರು ಶ್ವಾಸಕೋಶದ ಕಸಿ ನಡೆಸಿ ಮರುಜೀವ ನೀಡಿದ್ದಾರೆ. ಆಕೆಯ ಹೋರಾಟ, ವೈದ್ಯರ ಪ್ರಯತ್ನ ಹೇಗಿತ್ತು ಅಂತ ನೀವೇ ತಿಳಿದುಕೊಳ್ಳಿ...

ಮುಂದೆ ಓದಿ ...
  • Trending Desk
  • 3-MIN READ
  • Last Updated :
  • Mumbai, India
  • Share this:

    ಮುಂಬೈ: ಈಗಂತೂ ವೈದ್ಯಕೀಯ ಕ್ಷೇತ್ರದಲ್ಲಿ ಏನೆಲ್ಲಾ ಶಸ್ತ್ರಚಿಕಿತ್ಸೆಗಳನ್ನು (Doctors)  ವೈದ್ಯರು ಮಾಡುತ್ತಿದ್ದಾರೆ ಅಂತ ನಾವೆಲ್ಲಾ ಸುದ್ದಿ ಮಾಧ್ಯಮಗಳಲ್ಲಿ ನೋಡುತ್ತಲೇ ಇದ್ದೇವೆ. ಆಧುನಿಕ ಜಗತ್ತಿನಲ್ಲಿ ಅಸಾಧ್ಯ ಅಂತಾ ಹೇಳುವ ಶಸ್ತ್ರಚಿಕಿತ್ಸೆಗಳು ಈಗ ತೀರ ಕಡಿಮೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇನ್ನು ಒಬ್ಬರು ದಾನ ಮಾಡಿದ ದೇಹದ ಪ್ರತಿಯೊಂದು ಅಂಗಾಂಗಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಇನ್ನೊಬ್ಬರಿಗೆ ಅದನ್ನು ಕಸಿ ಮಾಡುವಲ್ಲಿ ವೈದ್ಯರ ಪಾತ್ರ ತುಂಬಾನೇ ಮುಖ್ಯವಾಗಿದೆ. ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ನಡೆದಿದೆ ನೋಡಿ. ಸಿಸ್ಟಿಕ್ ಫೈಬ್ರೋಸಿಸ್ ಮತ್ತು ಶ್ವಾಸಕೋಶದ ಅಧಿಕ ರಕ್ತದೊತ್ತಡದಿಂದಾಗಿ ಕಳೆದ ಐದು ವರ್ಷಗಳಿಂದ ಆಕ್ಸಿಜನ್ (Oxygen Therapy ) ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದ 33 ವರ್ಷದ ಸೀಶೆಲ್ಸ್ ಮಹಿಳೆಗೆ ( Seychelles Woman) ಮುಂಬೈ ವೈದ್ಯರು (Mumbai Doctor)  ಶ್ವಾಸಕೋಶದ ಕಸಿ (Lung Transplantation) ನಡೆಸಿ ಮರುಜೀವ ನೀಡಿದ್ದಾರೆ.


    5 ವರ್ಷದಿಂದ ಆಕ್ಸಿಜನ್ ಚಿಕಿತ್ಸೆಯಲ್ಲಿದ್ರಂತೆ ಈ ಮಹಿಳೆ


    ಈ ಮಹಿಳೆಗೆ ಅವಳ ರಕ್ತನಾಳಗಳಲ್ಲಿನ ಒಂದೇ ರಕ್ತನಾಳವು ಅವಳ ಶ್ವಾಸಕೋಶವನ್ನು ಹೃದಯಕ್ಕೆ ಸಂಪರ್ಕಿಸಿತ್ತು. ಇದರಿಂದಾಗಿ ಅವರು ತುಂಬಾನೇ ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದರು.  2018 ರಲ್ಲಿ ಇವರನ್ನು ಸ್ಥಳೀಯ ಆಸ್ಪತ್ರೆಗೆ   ದಾಖಲಿಸಲಾಗಿತ್ತು.  ಅಂದಿನಿಂದ ಅವರು ಸುಮಾರು 5 ವರ್ಷಗಳವರೆಗೆ ಆಕ್ಸಿಜನ್ ನೆರವಿನಲ್ಲಿ  ಚಿಕಿತ್ಸೆ ಪಡೆಯುತ್ತಿದ್ದರು.


    ಆಕೆಗೆ ಸಿಸ್ಟಿಕ್ ಫೈಬ್ರೋಸಿಸ್ ಇರುವುದು ಪತ್ತೆಯಾಯಿತು, ಇದು ಶ್ವಾಸಕೋಶದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ . ರೋಗವು ಮುಂದುವರೆದಂತೆ, ಜನರು ಉಸಿರಾಟದ ತೊಂದರೆ, ದೀರ್ಘಕಾಲದ ಕೆಮ್ಮು, ಉಬ್ಬಸ ಜಾಸ್ತಿಯಾಗಿ ರಕ್ತವನ್ನು ಕೆಮ್ಮುವಂತಾಗುತ್ತದೆ ಎಂದು ವೈದ್ಯರು  ಮಾಹಿತಿ ನೀಡಿದ್ದರು.


    ಇದನ್ನೂ ಓದಿ: Singapore Trip: ಹಳ್ಳಿಯಲ್ಲಿದ್ದ ತಾಯಿಗೆ ಸಿಂಗಾಪುರ ಪ್ರವಾಸ ಮಾಡಿಸಿದ ಮಗ! ಪೋಸ್ಟ್ ನೋಡಿ ಭೇಷ್ ಎಂದ ನೆಟ್ಟಿಗರು

     ಕುಗ್ಗಿದ ಶ್ವಾಸಕೋಶದ ಬಲ


     ನಂತರ ಆ ಮಹಿಳೆಗೆ ಶ್ವಾಸಕೋಶದ ಹೃದ್ರೋಗದ ಕಾಯಿಲೆ ಶುರುವಾಯಿತು, ಅದು ಅವರ ಶ್ವಾಸಕೋಶದ ಬಲವನ್ನ ಇನ್ನಷ್ಟು ಕುಗ್ಗಿಸಿತು. ಇದಷ್ಟೇ ಅಲ್ಲದೆ ಮಹಿಳೆಗೆ ಶ್ವಾಸಕೋಶದ ಅಧಿಕ ರಕ್ತದೊತ್ತಡ ಇರುವುದು ಸಹ ತಿಳಿಯಿತು. ಅಂತಹ ಕಠಿಣವಾದ ಸಂದರ್ಭಗಳಲ್ಲಿ, ಎರಡೂ ಅಂಗಗಳು ನಿಷ್ಕ್ರಿಯವಾಗಿರುವುದರಿಂದ ಇವರಿಗೆ ಹೃದಯ ಮತ್ತು ಶ್ವಾಸಕೋಶದ ಕಸಿಯ ಅಗತ್ಯವಿತ್ತು.


    ಗ್ಲೋಬಲ್ ಹಾಸ್ಪಿಟಲ್​ನಲ್ಲಿ ಮಹಿಳೆಯ ಶಸ್ತ್ರಚಿಕಿತ್ಸೆ


    ಆ ಮಹಿಳೆಯನ್ನ ಮುಂಬೈನ ಗ್ಲೋಬಲ್ ಹಾಸ್ಪಿಟಲ್ ನಲ್ಲಿರುವ ವೈದ್ಯಕೀಯ ತಂಡದ ಬಳಿ ಕಳುಹಿಸಲಾಯಿತು.  ಅಲ್ಲಿ ಹಲವಾರು ಪರೀಕ್ಷೆಗಳಿಗೆ ಒಳಗಾದ ನಂತರ  ಶ್ವಾಸಕೋಶ ಕಸಿಗಾಗಿ ಮಾಡಲಾಯಿತು.


    ಮಹಿಳೆಗೆ ಚಿಕಿತ್ಸೆ ನೀಡುತ್ತಿರುವ ಶ್ವಾಸಕೋಶ ಕಸಿ ನಿರ್ದೇಶಕ ವೈದ್ಯ ಡಾ. ಸಮೀರ್ ಗಾರ್ಡೆ ಅವರು "ಮಹಿಳೆ ತೀವ್ರ ಉಸಿರಾಟದ ತೊಂದರೆಯೊಂದಿಗೆ ನಮ್ಮ ಬಳಿಗೆ ಬಂದರು. ಚಿಕ್ಕ ವಯಸ್ಸಿನಲ್ಲಿ, ಅವಳ ವೈದ್ಯಕೀಯ ಸ್ಥಿತಿಯಿಂದಾಗಿ ಅವರು ಏನು ಮಾಡುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಶ್ವಾಸಕೋಶದ ಕಸಿಯೊಂದೆ ಜೀವ ಉಳಿಸುತ್ತದೆ. ಮಾತ್ರವಲ್ಲದೆ ಜೀವನದ ಗುಣಮಟ್ಟವನ್ನು ಸಹ ಸುಧಾರಿಸುತ್ತದೆ. ಶಸ್ತ್ರಚಿಕಿತ್ಸೆಯ ನಂತರ ಅಂಗವು ಬಾಹ್ಯ ವಾತಾವರಣಕ್ಕೆ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶದ ಕಸಿ ನಿರ್ವಹಿಸಲು ಅತ್ಯಂತ ಸವಾಲಿನ ಕೆಸಲವಾಗಿರುತ್ತದೆ. ಜೊತೆಗೆ ರೋಗಿಯು ಆಫ್ರಿಕನ್ ಮೂಲದವರಾಗಿರುವುದರಿಂದ, ಭಾರತೀಯ ಮೂಲದ ಶ್ವಾಸಕೋಶಗಳನ್ನು ಕಸಿ ಮಾಡುವುದು ದೊಡ್ಡ ಸವಾಲನ್ನು ಒಡ್ಡಿತು” ಎಂದು ಮಾಹಿತಿ ನೀಡಿದರು.




    ರಕ್ತನಾಳಗಳನ್ನು ಜೋಡಿಸುವುದು ದೊಡ್ಡ ಸವಾಲಾಗಿತ್ತು


    ಗ್ಲೋಬಲ್ ಆಸ್ಪತ್ರೆಯ ಹಿರಿಯ ಸಲಹೆಗಾರ ಮತ್ತು ಪ್ರಮುಖ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸಕ ಡಾ.ಚಂದ್ರಶೇಖರ್ ಕುಲಕರ್ಣಿ ಅವರು “ರೋಗಿಯು ಶ್ವಾಸಕೋಶವನ್ನು ಹೃದಯಕ್ಕೆ ಸಂಪರ್ಕಿಸುವ ರಕ್ತನಾಳಗಳಲ್ಲಿ ಜನ್ಮಜಾತ ವ್ಯತ್ಯಾಸವನ್ನು ಹೊಂದಿದ್ದರಿಂದ 2022 ರ ಡಿಸೆಂಬರ್ 18 ರಂದು ನಡೆಸಿದ ಕಸಿ ಚಿಕಿತ್ಸೆ ತುಂಬಾನೇ ಸವಾಲಿನಿಂದ ಕೂಡಿತ್ತು.


    ಸಾಮಾನ್ಯವಾಗಿ ಪ್ರತಿ ಶ್ವಾಸಕೋಶವು ಹೃದಯದ ಮೇಲಿನ ಕೋಣೆಗೆ ಎರಡು ರಕ್ತನಾಳಗಳಿಂದ ಸಂಪರ್ಕ ಹೊಂದಿರುತ್ತದೆ, ಪ್ರತಿಯೊಂದೂ 1 ರಿಂದ 1.5 ಸೆಂಟಿ ಮೀಟರ್ ಗಾತ್ರದಲ್ಲಿರುತ್ತದೆ. ಈ ರೋಗಿಯಲ್ಲಿ, ನಾವು ಸರಿ ಸುಮಾರು 2 ಸೆಂಟಿ ಮೀಟರ್ ಉದ್ದದ ಒಂದೇ ರಕ್ತನಾಳವನ್ನು ಅಸಹಜ ಸ್ಥಾನದಲ್ಲಿತ್ತು ಹಾಗೂ ಇದು ಜನ್ಮಜಾತ ವ್ಯತ್ಯಾಸವಾಗಿತ್ತು. ಡೋನರ್​ನ ಪ್ರಮಾಣಿತ ಎರಡು ರಕ್ತನಾಳಗಳನ್ನು ಹೊಂದಿದ್ದನು. ಎರಡು ರಕ್ತನಾಳಗಳನ್ನು ಒಂದೇ ರಕ್ತನಾಳಕ್ಕೆ ಸರಿಹೊಂದಿಸುವುದು ಶಸ್ತ್ರಚಿಕಿತ್ಸೆಯ ಮುಖ್ಯ ಸವಾಲಾಗಿತ್ತು ” ಎಂದು ಹೇಳಿದ್ದಾರೆ.


    ದಾನಿ ಕುಟುಂಬಕ್ಕೆ ಧನ್ಯವಾದ ಹೇಳಿದ ಮಹಿಳೆ


    " ಅಂಗಾಂಗ ದಾನವು ಒಂದು ಉದಾತ್ತವಾದ ಕಾರ್ಯವಾಗಿದೆ.  ಈಗ ಮತ್ತೆ ನಾನು ಸ್ವತಃ ಎದ್ದು ನಿಲ್ಲಲು, ನಡೆದಾಡಲು ಮತ್ತು ಮುಕ್ತವಾಗಿ ಉಸಿರಾಡಲು ಸಾಧ್ಯವಾಗುತ್ತಿದೆ. ಇದು ನನ್ನಲ್ಲಿ ಸಂತೋಷವನ್ನುಂಟು ಮಾಡಿದೆ.  ಪ್ರತಿಯೊಬ್ಬರೂ ಅಂಗಾಂಗಗಳನ್ನು ದಾನ ಮಾಡಬೇಕು. ನನ್ನ ಜೀವವನ್ನು ಉಳಿಸಿದ್ದಕ್ಕಾಗಿ ಆ ದಾನಿಯ ಕುಟುಂಬಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ " ಎಂದು ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ತಿಳಿಸಿದ್ದಾರೆ.

    Published by:Rajesha B
    First published: