Black pepper : ಕಾಳುಮೆಣಸಿಗೆ ಈಗ ಭಾರೀ ರೇಟ್, ಒಂದೇ ಸಲ 500 ಹೆಚ್ಚಳ

Black pepper price hike : ಕರ್ನಾಟಕವು ಅತಿ ಹೆಚ್ಚು ಕಾಳುಮೆಣಸು ಉತ್ಪಾದನೆ ಮಾಡುವ ರಾಜ್ಯವಾಗಿದ್ದು, ಕರ್ನಾಟಕದ ಬಳಿಕ ಕಾಳುಮೆಣಸು ಉತ್ಪಾದನೆಯಲ್ಲಿ ಕೇರಳ ಇದೆ.. ಇನ್ನು ಪ್ರಸ್ತುತ ದೇಶದಲ್ಲಿ ಬದಲಾಗಿರುವ ಹವಮಾನ ಪರಿಸ್ಥಿತಿಗಳಿಂದ ಮುಂದಿನ ವರ್ಷ ಕರ್ನಾಟಕ ಸೇರಿ ಇತರ ಕಾಳುಮೆಣಸು ಬೆಳೆಯುವ ರಾಜ್ಯಗಳಲ್ಲಿ ಕಾಳುಮೆಣಸಿನ ಉತ್ಪಾದನೆ ಕಡಿಮೆ ಸಹ ಇರಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನಮ್ಮ ಅಡುಗೆ(Kitchen) ಮನೆಯಲ್ಲಿರುವ ಮಸಾಲೆ(Spice) ವಸ್ತುಗಳೆಲ್ಲವೂ ಒಂದಲ್ಲಾ ಒಂದು ಔಷಧೀಯ( ಗುಣವನ್ನು ಹೊಂದಿವೆ. ಅಲ್ಲದೇ ಭಾರತೀಯ ಮಸಾಲೆ ಪದಾರ್ಥಗಳಿಗೆ ಅಂತರಾಷ್ಟ್ರೀಯ(International) ಮಟ್ಟದಲ್ಲಿ ಭಾರೀ ಬೇಡಿಕೆ ಇದೆ.. ಎಲ್ಲಾ ಮಸಾಲೆ ಪದಾರ್ಥಗಳಲ್ಲಿ ಕಾಳುಮೆಣಸಿಗೆ(pepper) ಅಗ್ರಗಣ್ಯ ಸ್ಥಾನ ಇದೆ.. ನಿತ್ಯಹರಿದ್ವರ್ಣದ ಕಾಡುಗಳಿಂದ ಬಂದ ಬಳ್ಳಿಯಲ್ಲಿ ಬೆಳೆಯುವ ಪುಟ್ಟ ಕಾಳುಮೆಣಸುಗಳು ಆಹಾರಕ್ಕೆ ರುಚಿಯನ್ನು(Taste) ನೀಡುತ್ತದೆ.. ಹೀಗಾಗಿ ಭಾರತದಲ್ಲಿ ಬೆಳೆಯುವ ಕಾಳುಮೆಣಸುಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಬೇಡಿಕೆ ಇದೆ.

  ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಕಾಳುಮೆಣಸಿಗೆ ಹೆಚ್ಚಿದ ಬೇಡಿಕೆ

  ಲಾಕ್ ಡೌನ್ ನಿರ್ಬಂಧ ಸಡಿಲವಾದ ಬಳಿಕ ಹಾಗೂ ಹಬ್ಬಗಳಿಗೆ ನಿರ್ಬಂಧ ಸಡಿಲ ವಾಗಿರುವುದರಿಂದ ಮಾರುಕಟ್ಟೆಯಲ್ಲಿ ಕಾಳುಮೆಣಸಿನ ಬೆಲೆ ನಿಧಾನಗತಿಯಲ್ಲಿ ಏರಿಕೆಯಾಗಿದೆ.. ಹೀಗಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಕರಿಮೆಣಸಿನ ಬೆಲೆ ಪ್ರತೀ ಕಿಲೋಗೆ 500ಕ್ಕಿಂತ ಹೆಚ್ಚಾಗಿದೆ. ಕಳೆದ ಒಂದು ವಾರದಲ್ಲಿ ಶೇ 5ರಷ್ಟು ಏರಿಕೆಯಾಗಿ ಪ್ರತಿ ಕೇಜಿಗೆ 511 ರೂಪಾಯಿಗೆ ತಲುಪಿದೆ.. ಮುಂದಿನ ವರ್ಷ ಕಾಳುಮೆಣಸಿನ ಕೊಯ್ಲು ಅವಧಿ ಮುಗಿಯುವವರೆಗೂ ಕಾಳುಮೆಣಸಿನ ಬೆಲೆ ಹೆಚ್ಚಾಗಿದೆ.. ಆದರೆ ಪ್ರತಿಕೂಲ ಅವಮಾನ ಇರುವುದರಿಂದ ಮುಂದಿನ ವರ್ಷ ಕಾಳುಮೆಣಸಿನ ಬೆಲೆ ಕಡಿಮೆ ಆಗಬಹುದು ಎಂಬ ಆತಂಕದಲ್ಲಿ ಮೆಣಸು ಬೆಳೆಗಾರರು ಹಾಗೂ ರಫ್ತುದಾರರು ಆತಂಕದಲ್ಲಿದ್ದಾರೆ..

  ಇದನ್ನೂ ಓದಿ : ಏನೆಲ್ಲಾ ಕುಡಿದರೆ ದೇಹದ ತೂಕ ಕಡಿಮೆ ಆಗುತ್ತದೆ; ಇಲ್ಲಿದೆ ನಿಮ್ಮ ಆರೋಗ್ಯದ ಗುಟ್ಟಿನ ಪಟ್ಟಿ

  ಕಾಳುಮೆಣಸಿನ ಖರೀದಿ ಹೆಚ್ಚಿಸಿದ ಚೀನಾ, ಉತ್ಪಾದನೆಯಲ್ಲಿ ಕುಸಿತ ಕಂಡ ವಿಯೆಟ್ನಾಂ

  ಭಾರತದ ನೆರೆಯ ರಾಷ್ಟ್ರ ಚೀನಾ ಕಾಳುಮೆಣಸಿನ ಖರೀದಿಯನ್ನು ಹೆಚ್ಚಳ ಮಾಡಿದೆ.. ಇದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಕಾಳುಮೆಣಸು ಉತ್ಪಾದನೆ ಮಾಡುತ್ತಿದ್ದ ವಿಯೆಟ್ನಾಂ ಉತ್ಪಾದನೆಯಲ್ಲಿ ಕುಂಠಿತಗೊಂಡಿದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಾಳುಮೆಣಸಿನ ಬೆಲೆಗಳು ಜೂನ್ ನಿಂದ ನಿರಂತರವಾಗಿ ಏರಿಕೆಯಾಗುತ್ತಿವೆ. ವರ್ಷದಿಂದ ವರ್ಷಕ್ಕೆ ಕಾಳುಮೆಣಸಿನ ಉತ್ಪಾದನೆಯಲ್ಲಿ ಸುಮಾರು 18 ಪ್ರತಿಶತದಷ್ಟು ಕಡಿಮೆಯಾಗಿದೆ. ಕೊರೊನಾ ಹಾವಳಿಯಿಂದ ಎರಡನೇ ಅತಿದೊಡ್ಡ ಸಾಂಬಾರು ಪದಾರ್ಥಗಳ ಉತ್ಪಾದಕ ಎಂದೇ ಖ್ಯಾತಿ ಪಡೆದಿದ್ದ ಬ್ರೆಜಿಲ್ನಲ್ಲಿ ಕೂಡ ಕಾಳುಮೆಣಸಿನ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕುಸಿತವಾಗಿದೆ..

  ಬಾಫ್ನಾ ಎಂಟರ್‌ಪ್ರೈಸಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜೋಜನ್ ಮಲೈಲ್ ಪ್ರಕಾರ ವಿಯೆಟ್ನಾಂ, ಬ್ರೆಜಿಲ್ ಮತ್ತು ಇಂಡೋನೇಷ್ಯಾದಲ್ಲಿ  ಕಾಳುಮೆಣಸಿನ ಬೆಲೆಗಳು ಪ್ರತಿ ಟನ್‌ಗೆ 4,300ರಿಂದ 4,500 ಯುಎಸ್​ಡಿಯಲ್ಲಿ ವಹಿವಾಟು ನಡೆಸುತ್ತಿವೆ. ಇನ್ನು . ಮಲೇಷ್ಯಾದ ಮೆಣಸು ಪ್ರತಿ ಟನ್‌ಗೆ 5,200 ಯುಎಸ್​ಡಿಗೆ ಮಾರಾಟವಾಗುತ್ತಿದ್ದು, ಭಾರತೀಯ ಮೆಣಸು ಪ್ರತಿ ಟನ್‌ಗೆ 6,780 ಡಾಲರ್​ನಂತೆ ಅತ್ಯಧಿಕ ಬೆಲೆಯನ್ನು ಹೊಂದಿದೆಯಂತೆ..

  ದೇಶದಲ್ಲಿ ವಾರ್ಷಿಕವಾಗಿ 60 ಸಾವಿರ ಟನ್ ಬೇಡಿಕೆ

  ನಮ್ಮ ದೇಶದಲ್ಲಿ ಆಹಾರಕ್ಕೆ ಮಸಾಲೆಯುಕ್ತ ಆಹಾರಕ್ಕೆ ಹೆಚ್ಚು ಆದ್ಯತೆ ನೀಡುವುದರಿಂದ ವಾರ್ಷಿಕವಾಗಿ ಸುಮಾರು 60000 ಟನ್ ಕಾಳುಮೆಣಸಿನ ಬೇಡಿಕೆ ಇದೆ.
  ಅದರಲ್ಲೂ ಗುಜರಾತ್ ಹರಿಯಾಣ ರಾಜಸ್ಥಾನದ ಉದ್ದಿಮೆದಾರರು ಹಾಗೂ ಹೋಟೆಲ್ ಮತ್ತು ಕೇಟರಿಂಗ್ ನವರಿಂದ ಕಾಳುಮೆಣಸಿಗೆ ಭಾರಿ ಬೇಡಿಕೆ ಇದೆ..

  ಇದನ್ನೂ ಓದಿ : ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕೆ? ಹಾಗಿದ್ರೆ ಚಿಂತಿಸಬೇಡಿ

  ಕಾಳುಮೆಣಸು ಉತ್ಪಾದನೆಯಲ್ಲಿ ಕರ್ನಾಟಕಕ್ಕೆ ಮುಂಚೂಣಿ ಸ್ಥಾನ

  ವಿಯೆಟ್ನಾಮ್ ಮತ್ತು ಭಾರತ ಸೇರಿ ವಿಶ್ವದಾದ್ಯಂತ ಶಾಖೆಗಳನ್ನು ಹೊಂದಿರುವ ನೆದರ್ಲ್ಯಾಂಡ್ಸ್ ಮೂಲದ ಮಸಾಲೆ ಸಂಸ್ಕರಣೆ ಮತ್ತು ಕಂಪನಿಯಾದ ನೆಟ್ ಸ್ಪೈಸಸ್ ಸಂಶೋಧನಾ ವರದಿಯ ಪ್ರಕಾರ ಭಾರತದಲ್ಲಿ ಕರ್ನಾಟಕವು ಅತಿ ಹೆಚ್ಚು ಕಾಳುಮೆಣಸು ಉತ್ಪಾದನೆ ಮಾಡುವ ರಾಜ್ಯವಾಗಿದ್ದು, ಕರ್ನಾಟಕದ ಬಳಿಕ ಕಾಳುಮೆಣಸು ಉತ್ಪಾದನೆಯಲ್ಲಿ ಕೇರಳ ಇದೆ.. ಇನ್ನು ಪ್ರಸ್ತುತ ದೇಶದಲ್ಲಿ ಬದಲಾಗಿರುವ ಹವಮಾನ ಪರಿಸ್ಥಿತಿಗಳಿಂದ ಮುಂದಿನ ವರ್ಷ ಕರ್ನಾಟಕ ಸೇರಿ ಇತರ ಕಾಳುಮೆಣಸು ಬೆಳೆಯುವ ರಾಜ್ಯಗಳಲ್ಲಿ ಕಾಳುಮೆಣಸಿನ ಉತ್ಪಾದನೆ ಕಡಿಮೆ ಸಹ ಇರಲಿದೆಯಂತೆ..

  ಭಾರತದಲ್ಲಿ ಹೆಚ್ಚಿದೆ ಕಾಳುಮೆಣಸಿನ ಆಮದು

  ಕಳೆದ ಹಲವು ವರ್ಷಗಳಿಂದ ಭಾರತದಲ್ಲಿ ಕಾಳುಮೆಣಸಿನ ರಫ್ತು ಪ್ರಮಾಣ ಗಣನೀಯವಾಗಿ ಕುಸಿದಿದೆ.. ಸರಿ ಸುಮಾರು 16,000ರಿಂದ 17,000 ಟನ್‌ಗಳಷ್ಟು ಕಾಳುಮೆಣಸಿನ ರಫ್ತು ಕುಸಿದಿರುವುದರಿಂದ, ವಿಯೆಟ್ನಾಂ ಮತ್ತು ಶ್ರೀಲಂಕಾದಿಂದ ಕಾಳುಮೆಣಸನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.. ಹೀಗಾಗಿ ಭಾರತ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಳುಮೆಣಸಿನ ನಿವ್ವಳ ಆಮದುದಾರನಾಗಿ ಪರಿವರ್ತನೆಯಾಗಿದೆ.
  2021ರ ಜನವರಿಯಿಂದ ಸೆಪ್ಟೆಂಬರ್‌ವರೆಗೆ 22,469 ಟನ್‌ಗಳಷ್ಟಿದ್ದವು, ಇದು ವರ್ಷದಿಂದ ವರ್ಷಕ್ಕೆ ಶೇ 37 ಶೇಕಡಾ ಹೆಚ್ಚಳವಾಗಿದೆ. ಜೊತೆಗೆ ಭಾರತ ಕಾಳುಮೆಣಸು ಆಮದು ಮಾಡಿಕೊಳ್ಳುವುದರಿಂದ ಭಾರತದಲ್ಲಿ ಕಾಳುಮೆಣಸಿನ ದೇಶೀಯ ಮಾರುಕಟ್ಟೆ ವಿಸ್ತಾರವಾಗಿದೆ..
  Published by:ranjumbkgowda1 ranjumbkgowda1
  First published: