Modi Mann ki Baat: ನಾಲ್ಕು ತಿಂಗಳ ವಿರಾಮ; ಇಂದು ಮತ್ತೆ ಕೇಳಲಿದೆ ಪ್ರಧಾನಿ ಮೋದಿ ಮನದಾಳದ ಮಾತು!

Mann ki Baat: ಫೆ.24ರಂದು ಮನ್​ ಕಿ ಬಾತ್​ನಲ್ಲಿ ಮಾತನಾಡಿದ್ದ ಮೋದಿ, ಲೋಕಸಭಾ ಚುನಾವಣೆ ಹಿನ್ನೆಯಲ್ಲಿ ಮಾರ್ಚ್​​ ಹಾಗೂ ಏಪ್ರಿಲ್​ನಲ್ಲಿ ಈ ಕಾರ್ಯಕ್ರಮ ಪ್ರಸಾರವಾಗುವುದಿಲ್ಲ ಎಂದು ಹೇಳಿದ್ದರು.

Rajesh Duggumane | news18
Updated:June 30, 2019, 9:51 AM IST
Modi Mann ki Baat: ನಾಲ್ಕು ತಿಂಗಳ ವಿರಾಮ; ಇಂದು ಮತ್ತೆ ಕೇಳಲಿದೆ ಪ್ರಧಾನಿ ಮೋದಿ ಮನದಾಳದ ಮಾತು!
ನರೇಂದ್ರ ಮೋದಿ
Rajesh Duggumane | news18
Updated: June 30, 2019, 9:51 AM IST
ನವದೆಹಲಿ (ಜೂ.30): ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್​ ಕಿ ಬಾತ್​’ ಕಾರ್ಯಕ್ರಮ ಇಂದು ಪ್ರಸಾರವಾಗಲಿದೆ. 11 ಗಂಟೆಗೆ ಜನರ ಬಳಿ ಮೋದಿ ತಮ್ಮ ಮನದಾಳದ ಮಾತನ್ನು ಹೇಳಿಕೊಳ್ಳಲಿದ್ದಾರೆ. ಮೋದಿ ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಿದ ನಂತರ ಪ್ರಸಾರವಾಗುತ್ತಿರುವ ಮೊದಲ ‘ಮನ್​ ಕಿ ಬಾತ್​’ ಕಾರ್ಯಕ್ರಮ ಇದಾಗಿದೆ.

ಫೆ.24ರಂದು ಮನ್​ ಕಿ ಬಾತ್​ನಲ್ಲಿ ಮಾತನಾಡಿದ್ದ ಮೋದಿ, "ಲೋಕಸಭಾ ಚುನಾವಣೆ ಹಿನ್ನೆಯಲ್ಲಿ ಮಾರ್ಚ್​​ ಹಾಗೂ ಏಪ್ರಿಲ್​ನಲ್ಲಿ ಈ ಕಾರ್ಯಕ್ರಮ ಪ್ರಸಾರವಾಗುವುದಿಲ್ಲ," ಎಂದಿದ್ದರು. ಅಂತೆಯೇ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದ ಅವರು, ಮೇ ತಿಂಗಳ ಕೊನೆಯ ಭಾನುವಾರದಂದು ಮನ್​ ಕಿ ಬಾತ್​ನಲ್ಲಿ ಮಾತನಾಡುವುದಾಗಿ ಹೇಳಿದ್ದರು.

ನಾಲ್ಕು ತಿಂಗಳ ವಿರಾಮದ ನಂತರ ಈ ಕಾರ್ಯಕ್ರಮವನ್ನು ಮೋದಿ ಮತ್ತೆ ಪುನರಾರಂಭಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, “ನಾಲ್ಕು ತಿಂಗಳುಗಳ ನಂತರ ಮತ್ತೆ ಮನ್​ ಕಿ ಬಾತ್​ನಲ್ಲಿ ಪಾಲ್ಗೊಳ್ಳುತ್ತಿದ್ದೇನೆ. 130 ಕೋಟಿ ಭಾರತಿಯರ ಶಕ್ತಿಯನ್ನು ಸಂಭ್ರಮಿಸಬೇಕಿದೆ,” ಎಂದಿದ್ದಾರೆ.

2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಮೋದಿ 53 ಬಾರಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ದೇಶದ ಜನರೆಗೋಸ್ಕರ ಈ ಕಾರ್ಯಕ್ರಮ ನಡೆಸುತ್ತಿರುವುದಾಗಿ ಅವರು ಹೇಳಿದ್ದರು.

ಇದನ್ನೂ ಓದಿ: ಮನ್​ ಕಿ ಬಾತ್​ನಿಂದ ಬಡವರ ಹೊಟ್ಟೆ ತುಂಬಲ್ಲ, ಯುವಕರಿಗೆ ಉದ್ಯೋಗ ಸಿಗಲ್ಲ; ಮೋದಿ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ

First published:June 30, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...