• Home
  • »
  • News
  • »
  • national-international
  • »
  • Nalini Sriharan: ರಾಜೀವ್‌ ಗಾಂಧಿ ಕುಟುಂಬದವರನ್ನು ಭೇಟಿಯಾಗುವುದು ಜೀವನದ ಅತ್ಯಂತ ಕಷ್ಟದ ಕ್ಷಣ: ನಳಿನಿ ಶ್ರೀಹರನ್‌

Nalini Sriharan: ರಾಜೀವ್‌ ಗಾಂಧಿ ಕುಟುಂಬದವರನ್ನು ಭೇಟಿಯಾಗುವುದು ಜೀವನದ ಅತ್ಯಂತ ಕಷ್ಟದ ಕ್ಷಣ: ನಳಿನಿ ಶ್ರೀಹರನ್‌

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರು ಅಪರಾಧಿಗಳಲ್ಲಿ ಒಬ್ಬರಾಗಿದ್ದ ನಳಿನಿ ಶ್ರೀಹರನ್

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರು ಅಪರಾಧಿಗಳಲ್ಲಿ ಒಬ್ಬರಾಗಿದ್ದ ನಳಿನಿ ಶ್ರೀಹರನ್

ಬಿಡುಗಡೆ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮೂರು ದಶಕಗಳ ತಮ್ಮ ಸೆರೆವಾಸದಲ್ಲಿ ತಾವು ಎದುರಿಸಿದ ಅನೇಕ ವಿಷಯಗಳನ್ನು ಮುಕ್ತವಾಗಿ ಮಾಧ್ಯಮದವರ ಮುಂದೆ ಹಂಚಿಕೊಂಡಿದ್ದಾರೆ. ಆ ವಿಷಯಗಳೇನು? ಎಂಬೆಲ್ಲ ಮಾಹಿತಿಯನ್ನು ತಿಳಿಯಲು ಮುಂದೆ ಓದಿ.

  • Trending Desk
  • Last Updated :
  • New Delhi, India
  • Share this:

    ಚೆನ್ನೈ(ನ.14): 1991 ರ ರಾಜೀವ್ ಗಾಂಧಿ ಹತ್ಯೆ (Assassination of Rajiv Gandhi) ಪ್ರಕರಣದ ಆರು ಅಪರಾಧಿಗಳಲ್ಲಿ ಒಬ್ಬರಾಗಿದ್ದ ನಳಿನಿ ಶ್ರೀಹರನ್ (Nalini Sriharan) ಅವರು ತಮಿಳುನಾಡು (Tamil Nadu) ಜೈಲಿನಿಂದ ಶನಿವಾರ ಸಂಜೆ ಬಿಡುಗಡೆಯಾಗಿದ್ದಾರೆ. ಬಿಡುಗಡೆ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮೂರು ದಶಕಗಳ ತಮ್ಮ ಸೆರೆವಾಸದಲ್ಲಿ ತಾವು ಎದುರಿಸಿದ ಅನೇಕ ವಿಷಯಗಳನ್ನು ಮುಕ್ತವಾಗಿ ಮಾಧ್ಯಮದವರ ಮುಂದೆ ಹಂಚಿಕೊಂಡಿದ್ದಾರೆ. ಆ ವಿಷಯಗಳೇನು? ಎಂಬೆಲ್ಲ ಮಾಹಿತಿಯನ್ನು ತಿಳಿಯಲು ಮುಂದೆ ಓದಿ.


    ʼಕುಟುಂಬವೇ ನನ್ನ ಮೊದಲ ಆದ್ಯತೆʼ


    ಜೈಲಿನಿಂದ ಬಿಡುಗಡೆಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಳಿನಿ ಅವರು “ಈ ಕೂಡಲೇ, ತನ್ನ ಪತಿ ಮತ್ತು ಸಹ-ಅಪರಾಧಿ ಮುರುಗನ್ ಜೊತೆಗೆ ಯುಕೆಯಲ್ಲಿ ವಾಸಿಸುವ ಮಗಳನ್ನು ಭೇಟಿಯಾಗುವುದು ನನ್ನ ಮೊದಲ ಆದ್ಯತೆ” ಎಂದು ಹೇಳಿದರು.


    ʼರಾಜೀವ್‌ ಗಾಂಧಿ ಕುಟುಂಬದ ಭೇಟಿ ಅತ್ಯಂತ ಹಿಂಜರಿಕೆಯನ್ನುಂಟು ಮಾಡುವ ಸಂಗತಿʼ -ನಳಿನಿ ಶ್ರೀಹರನ್‌


    “ಮೇ 1991 ರಲ್ಲಿ ರಾಜೀವ್ ಗಾಂಧಿಯನ್ನು ಕೊಂದ ನಂತರ ಅವರ ಕುಟುಂಬ ಮತ್ತು ಇತರ ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗುವ ಸಾಧ್ಯತೆ ಇದೆಯೇ ಎಂದು ಮಾಧ್ಯಮಗಳು ನಳಿನಿ ಅವರನ್ನು ಕೇಳಿದಾಗ, ಅವರು ಅದರ ಬಗ್ಗೆ ನನ್ನಲ್ಲಿ ಯಾವ ಉತ್ತರವೂ ಇಲ್ಲ. ರಾಜೀವ್ ಗಾಂಧಿ ಕುಟುಂಬವನ್ನು ಭೇಟಿಯಾಗಲು ನನಗೆ ಹಿಂಜರಿಕೆ ಇರುವುದು ಸತ್ಯ. ಅವರಿಗೆ ಅತ್ಯಂತ ಕಷ್ಟಕರ ದಿನವೆಂದರೆ ರಾಜೀವ್ ಗಾಂಧಿಯವರ ಪುತ್ರಿ ಪ್ರಿಯಾಂಕಾ ಗಾಂಧಿಯವರ ಭೇಟಿ ಮಾಡಿದ ದಿನ ಎಂದು ಸಹ ಹೇಳಿಕೊಂಡಿದ್ದಾರೆ” ಎಂದು ನಳಿನಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.


    ಇದನ್ನೂ ಓದಿ: Rajiv Gandhi Assassins Release: ರಾಜೀವ್ ಹಂತಕರ ಬಿಡುಗಡೆಗೆ ಕಾಂಗ್ರೆಸ್‌ ವಿರೋಧ, ಸೋನಿಯಾ ನಿಲುವಿಗೆ ಸಿಂಘ್ವಿ ಆಕ್ಷೇಪ!


    ರಾಜೀವ್ ಗಾಂಧಿ ಮಕ್ಕಳು ತನ್ನ ತಂದೆಯನ್ನು ಕಳೆದುಕೊಂಡರು


    “ರಾಜೀವ್‌ ಗಾಂಧಿ ಮಕ್ಕಳು ತಮ್ಮ ತಂದೆಯನ್ನು ಕಳೆದುಕೊಂಡರು. ಅವರ ತಂದೆ ಅವರಿಗೆ ಅತ್ಯಂತ ಆತ್ಮೀಯ ವ್ಯಕ್ತಿಯಾಗಿದ್ದವರು. ನಾನು ರಾಜೀವ್‌ ಗಾಂಧೀ ಅವರನ್ನು ಕೊಂದ ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಯಾಗಿರುವೆ. ಅವರ ಕುಟುಂಬದವರು ಈಗಲೂ ಸಹ ಅಪಾರ ನೋವನ್ನು ಅನುಭವಿಸುತ್ತಿರಬೇಕು. ಇದಕ್ಕೆ ಯಾವಾಗಲೂ ನನಗೆ ಪಶ್ಚಾತ್ತಾಪವಿದೆ. ಒಂದು ವೇಳೆ ಆ ಕುಟುಂಬದವರು ನನ್ನನ್ನು ನೋಡಲು ಬಯಸಿದರೆ, ನಾನು ಖಂಡಿತ ಅವರನ್ನು ಭೇಟಿ ಮಾಡುತ್ತೇನೆ” ಎಂದು ನಳಿನಿ ಹೇಳಿದರು.


    ಪ್ರಿಯಾಂಕಾ ದೇವರಂತಿದ್ದರು


    ಪ್ರಿಯಾಂಕಾ ಗಾಂಧಿ ಅವರು 2008ರಲ್ಲಿ ನಳಿನಿ ಅವರನ್ನು ಭೇಟಿಯಾಗಲು ವೆಲ್ಲೂರು ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ್ದರ ಬಗ್ಗೆ ಮಾಧ್ಯಮದವರು ಪ್ರಶ್ನೆಯನ್ನು ಕೇಳಿದಾಗ ಅವರ ಉತ್ತರ ಹೀಗಿತ್ತು. "ನನಗೆ ಅವರ ಭೇಟಿ ನಂಬಲು ಅಸಾಧ್ಯವಾದ ಸಂಗತಿಯಾಗಿತ್ತು. ಅವರು ನಿಜಕ್ಕೂ ನನ್ನನ್ನು ಭೇಟಿಯಾಗಲು ಬಂದಿರುವರೇ ಎಂದು ಖಚಿತಪಡಿಸಿಕೊಳ್ಳಲು ಅವರನ್ನು ಸ್ಪರ್ಶಿಸಬೇಕಾಗಿತ್ತು. ಅವರು ನೋಡಲು ದೇವರಂತಿದ್ದರು. ನನಗೆ ಆಗ ಭಯವಾಗಿತ್ತು.


    ಅಪ್ಪನ ಹತ್ಯೆ ಬಗ್ಗೆ ಕೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದರು


    ಅವರು ತಮ್ಮ ತಂದೆಯ ಹತ್ಯೆಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಲು ಬಯಸಿದ್ದರು. ಅವರು ಆ ಕ್ಷಣ ಬಿಕ್ಕಿ ಬಿಕ್ಕಿ ಅತ್ತರು. ನನಗೆ ತಿಳಿದಿದ್ದನ್ನೆಲ್ಲಾ ಅವರಿಗೆ ಹೇಳಿದೆ. ನಂತರ ಅವರು ಸುರಕ್ಷಿತವಾಗಿ ದೆಹಲಿಯನ್ನು ತಲುಪಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸಿದೆ ಮತ್ತು ಉಪವಾಸ ಕೂಡ ಮಾಡಿದೆ” ಎಂದು ನಳಿನಿ ಭಾವಪರವಶರಾಗಿ ಈ ಮಾಹಿತಿಯನ್ನು ಹಂಚಿಕೊಂಡರು.


    1991ರಲ್ಲಿ ರಾಜೀವ್ ಗಾಂಧಿ ಹತ್ಯೆ ಸಂದರ್ಭದ ಸಂಗ್ರಹ ಫೋಟೋ


    ರಾಜೀವ್‌ ಗಾಂಧಿ ಹತ್ಯಾ ಪ್ರಕರಣದ ಆರು ಮಂದಿಯಲ್ಲಿ ನಾಲ್ವರು ಶ್ರೀಲಂಕಾ ಪ್ರಜೆಗಳಾಗಿದ್ದಾರೆ. ಅವರಲ್ಲಿ ಒಬ್ಬರಾಗಿರುವ ಮುರುಗನ್ ಅವರನ್ನು 31 ವರ್ಷಗಳ ಸೆರೆವಾಸದ ನಂತರ ಔಪಚಾರಿಕವಾಗಿ ಬಿಡುಗಡೆ ಮಾಡಿದ ನಂತರ ಶನಿವಾರ ಸಂಜೆ ವೆಲ್ಲೂರು ಕೇಂದ್ರ ಕಾರಾಗೃಹದಿಂದ ತಿರುಚ್ಚಿ ಶಿಬಿರಕ್ಕೆ ಕರೆದೊಯ್ಯಲಾಯಿತು.


    ʼಶೀಘ್ರವೇ ನನ್ನ ಮಗಳನ್ನು ಸೇರುವುದೇ ನನ್ನ ಗುರಿʼ


    “ತಿರುಚ್ಚಿಯ ವಿಶೇಷ ನಿರಾಶ್ರಿತರ ಜೈಲು ಶಿಬಿರದಿಂದ ತಮ್ಮ ಪತಿ ಮತ್ತು ಈ ಪ್ರಕರಣದ ಸಹ ಅಪರಾಧಿಯಾಗಿರುವ ಮುರುಗನ್ ಅವರನ್ನು ಭೇಟಿ ಮಾಡುವುದು ಮತ್ತು ತಮ್ಮ ಮಗಳನ್ನು ಸೇರಲು ಪಾಸ್‌ಪೋರ್ಟ್ ಮತ್ತು ವೀಸಾ ಪಡೆಯುವುದು ತನ್ನ ಮೊದಲ ಆದ್ಯತೆಯಾಗಿದೆ” ಎಂದು ನಳಿನಿ ಹೇಳಿದರು.


    “ನಾವು ಶೀಘ್ರ ಪಾಸ್‌ಪೋರ್ಟ್ ಮತ್ತು ದಾಖಲೆಗಳಿಗಾಗಿ ಶ್ರೀಲಂಕಾದ ಹೈಕಮಿಷನ್ ಅನ್ನು ಸಂಪರ್ಕಿಸುತ್ತೇವೆ ಇದರಿಂದ ನಮ್ಮ ಮಗಳು ನಮ್ಮನ್ನು ಯುಕೆಗೆ ಕರೆದುಕೊಂಡು ಹೋಗಲು ಸಹಾಯವಾಗುತ್ತದೆ” ಎಂದು ನಳಿನಿ ಹೇಳಿದರು.


    ʼಸತತವಾಗಿ ಪ್ರಯತ್ನಿಸಿದರ ಫಲವೇ ಈ ಬಿಡುಗಡೆʼ


    "ನಾನು ನನ್ನ ಬಂಧನದ ಮೊದಲ ದಿನದಿಂದಲೂ, ನನ್ನ ಬಿಡುಗಡೆಗಾಗಿ ಸತತವಾಗಿ ಪ್ರಯತ್ನಿಸುತ್ತಿದ್ದೆ. ಈ ಪ್ರಯತ್ನಗಳಲ್ಲಿ ನಾನು ಅನೇಕ ಹಿನ್ನಡೆಗಳನ್ನು ಎದುರಿಸಿದ್ದೇನೆ. ಆ ಸಂದರ್ಭದಲ್ಲಿ ನಾನು ಸಾಯಬೇಕೆಂಬ ಯೋಚನೆಗಳು ಸಹ ಬರುತ್ತಿದ್ದವು. ಆದರೆ ಸಾಯಲು ನನಗೆ ಇಷ್ಟವಿರಲಿಲ್ಲ. ಪ್ರತಿ ಬಾರಿಯೂ, ನಾನು ನನ್ನ ಬಿಡುಗಡೆಗಾಗಿ ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಿದ್ದೆ” ಎಂದು ನಳಿನಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

    Published by:Precilla Olivia Dias
    First published: