• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Cheetah: ಚೀತಾಗಳನ್ನು ರಾಜಸ್ಥಾನ ಮತ್ತು ಇತರೆಡೆಗೆ ಸ್ಥಳಾಂತರಿಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

Cheetah: ಚೀತಾಗಳನ್ನು ರಾಜಸ್ಥಾನ ಮತ್ತು ಇತರೆಡೆಗೆ ಸ್ಥಳಾಂತರಿಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಚೀತಾ

ಚೀತಾ

ಚೀತಾಗಳಿಗೆ ರಾಜಸ್ಥಾನದಲ್ಲಿ ನೀವೇಕೆ ಸೂಕ್ತ ಸ್ಥಳವನ್ನು ಹುಡುಕುತ್ತಿಲ್ಲ? ರಾಜಸ್ಥಾನವನ್ನು ನಿಮ್ಮ ವಿರೋಧ ಪಕ್ಷದವರು ಆಳ್ವಿಕೆ ಮಾಡ್ತಿದ್ದಾರೆ ಎಂದ ಮಾತ್ರಕ್ಕೆ ನೀವು ಅದನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಹೇಳಿದೆ.

 • News18 Kannada
 • 2-MIN READ
 • Last Updated :
 • New Delhi, India
 • Share this:

ನವದೆಹಲಿ: ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ಭಾರತಕ್ಕೆ ಕರೆತಂದಿದ್ದ ಚೀತಾಗಳಲ್ಲಿ ಕೇವಲ ಎರಡು ತಿಂಗಳಲ್ಲಿ ಮೂರು ಚೀತಾಗಳು ಸಾವನ್ನಪ್ಪಿರುವ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಲ್ಲದೇ, ಇಂತಹ ವಿಷಯದಲ್ಲಿ ನಿಮ್ಮ ರಾಜಕಾರಣವನ್ನು ಬದಿಗಿಟ್ಟು ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನದಿಂದ ರಾಜಸ್ಥಾನ ಸೇರಿದಂತೆ ಇತರ ಕಡೆಗಳಿಗೆ ಸ್ಥಳಾಂತರಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.


ನೀವೇಕೆ ಸೂಕ್ತ ಸ್ಥಳವನ್ನು ಹುಡುಕುತ್ತಿಲ್ಲ?


ಎರಡು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಮೂರು ಚೀತಾಗಳು ಸಾವನ್ನಪ್ಪಿರೋದು ನಿಜಕ್ಕೂ ಕಳವಳಕಾರಿ ವಿಷಯವಾಗಿದೆ ಎಂದಿರುವ ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಸಂಜಯ್ ಕರೋಲ್ ಅವರಿದ್ದ ಸಾಂವಿಧಾನಿಕ ಪೀಠ, ತಜ್ಞರ ಅಭಿಪ್ರಾಯಗಳು ಮತ್ತು ಮಾಧ್ಯಮಗಳಲ್ಲಿ ಅನೇಕ ಲೇಖನಗಳು ಪ್ರಕಟವಾಗಿವೆ. ಇದರಲ್ಲಿ ಇಷ್ಟೊಂದು ಚಿರತೆಗಳಿಗೆ ಕುನೊ ಉದ್ಯಾನವನ ಸಾಕಾಗುವುದಿಲ್ಲ ಎಂದು ಹೇಳಲಾಗಿದೆ. ಒಂದೇ ಸ್ಥಳದಲ್ಲಿ ಚಿರತೆಗಳ ಗಮನ ಕೂಡ ಹೆಚ್ಚಿರುತ್ತದೆ. ರಾಜಸ್ಥಾನದಲ್ಲಿ ನೀವೇಕೆ ಸೂಕ್ತ ಸ್ಥಳವನ್ನು ಹುಡುಕುತ್ತಿಲ್ಲ? ರಾಜಸ್ಥಾನವನ್ನು ನಿಮ್ಮ ವಿರೋಧ ಪಕ್ಷದವರು ಆಳ್ವಿಕೆ ಮಾಡ್ತಿದ್ದಾರೆ ಎಂದ ಮಾತ್ರಕ್ಕೆ ನೀವು ಅದನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಛಾಟಿ ಬೀಸಿದೆ.


ಇದನ್ನೂ ಓದಿ: Cheetah: 1 ತಿಂಗಳಲ್ಲಿ 2 ಚೀತಾ ಸಾವು; ಕುನೋ ಉದ್ಯಾನದಿಂದ ಬೇರೆಡೆಗೆ ಸ್ಥಳಾಂತರಿಸಲು ಕೇಂದ್ರಕ್ಕೆ ಮಧ್ಯಪ್ರದೇಶ ಪತ್ರ


ಕೇಂದ್ರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ಟಾಸ್ಕ್ ಫೋರ್ಸ್ ಚೀತಾಗಳ ಸಾವಿನ ಬಗ್ಗೆ ಅಧ್ಯಯನ ನಡೆಸುತ್ತಿದೆ. ಮತ್ತು ಅವುಗಳನ್ನು ಇತರ ಅಭಯಾರಣ್ಯಗಳಿಗೆ ಸ್ಥಳಾಂತರಿಸುವುದು ಸೇರಿದಂತೆ ಎಲ್ಲಾ ಸಂಭಾವ್ಯ ಅಂಶಗಳ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಹೇಳಿದರು.


ಅಲ್ಲದೇ, ವರದಿಗಳ ಪ್ರಕಾರ ಎರಡು ಗಂಡುಗಳ ನಡುವಿನ ಜಗಳದಲ್ಲಿ ಗಾಯಗೊಂಡು ಒಂದು ಚಿರತೆ ಸಾವನ್ನಪ್ಪಿದೆ. ಒಂದು ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಸಾವನ್ನಪ್ಪಿದೆ. ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪಿದ ಚಿರತೆಯನ್ನು ಭಾರತಕ್ಕೆ ಕರೆತರುವ ಮುನ್ನವೇ ಅದಕ್ಕೆ ಸಮಸ್ಯೆಯಿತ್ತು ಎಂದು ತಿಳಿದು ಬಂದಿದೆ ಎಂದು ಐಶ್ವರ್ಯಾ ಬಾಟಿ ಹೇಳಿದರು.


ಸುಪ್ರೀಂ ಕೋರ್ಟ್ ಪ್ರಶ್ನೆಗಳ ಸುರಿಮಳೆ


ಆಗ ಮರು ಪ್ರಶ್ನೆ ಹಾಕಿದ ಸುಪ್ರೀಂ ಕೋರ್ಟ್, ಚೀತಾ ಕಾಯಿಲೆಯಿಂದ ಬಳಲುತ್ತಿದ್ದರೆ ಆ ಹೆಣ್ಣು ಚಿರತೆಯನ್ನು ಹೇಗೆ ಭಾರತಕ್ಕೆ ಕರೆತಂದಿರಿ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಬಾಟಿ, ಎಲ್ಲಾ ಚೀತಾಗಳ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ. ನಮ್ಮ ಕಾರ್ಯಪಡೆ ಈ ಸಮಸ್ಯೆಯ ಬಗ್ಗೆ ತನಿಖೆ ನಡೆಸುತ್ತಿದೆ ಎಂದರು. ಆಗ ‘ನೀವು ವಿದೇಶದಿಂದ ಚಿರತೆಗಳನ್ನು ತರುತ್ತಿರುವಿರಿ, ಇದು ಒಳ್ಳೆಯದು. ಆದರೆ ಅವುಗಳನ್ನು ರಕ್ಷಿಸಬೇಕಾಗಿದೆ. ಅವುಗಳಿಗೆ ಸೂಕ್ತವಾದ ಆವಾಸಸ್ಥಾನವನ್ನು ನೀಡಬೇಕು, ಕುನೊಗಿಂತ ಹೆಚ್ಚು ಸೂಕ್ತವಾದ ಆವಾಸಸ್ಥಾನಕ್ಕಾಗಿ ನೀವು ಏಕೆ ಹುಡುಕಬಾರದು? ಎಂದು ಹೇಳಿದ ಸುಪ್ರೀಂ ಕೋರ್ಟ್, ನಾವು ಸರ್ಕಾರದ ಮೇಲೆ ಯಾವುದೇ ಆಗ್ರಹಗಳನ್ನು ವ್ಯಕ್ತಪಡಿಸುತ್ತಿಲ್ಲ. ಆದರೆ ಸಾವಿನ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದೇವೆ.


ಇದನ್ನೂ ಓದಿ:Cheetah Death: ಆಫ್ರಿಕಾದಿಂದ ತಂದಿದ್ದ ಮತ್ತೊಂದು ಚೀತಾ ಸಾವು! ಒಂದೇ ತಿಂಗಳಲ್ಲಿ 2 ನಿಧನ; ಕಾರಣ ಏನು?

top videos  ಮಾರ್ಚ್ 27 ರಂದು ನಮೀಬಿಯಾದಿಂದ ಕರೆತಂದಿದ್ದ ಸಶಾ ಎಂಬ ಹೆಣ್ಣು ಚಿರತೆ ಮೂತ್ರಪಿಂಡದ ಕಾಯಿಲೆಯಿಂದ ಸಾವನ್ನಪ್ಪಿತು. ಏಪ್ರಿಲ್ 23 ರಂದು ದಕ್ಷಿಣ ಆಫ್ರಿಕಾದಿಂದ ಉದಯ್ ಚೀತಾ ಹೃದಯ-ಶ್ವಾಸಕೋಶದ ವೈಫಲ್ಯದಿಂದ ಸಾವನ್ನಪ್ಪಿತ್ತು. ಮತ್ತು ಮೇ 9 ರಂದು ದಕ್ಷಿಣ ಆಫ್ರಿಕಾದಿಂದ ಕರೆ ತಂದಿದ್ದ ದಕ್ಷಾ ಎಂಬ ಮತ್ತೊಂದು ಹೆಣ್ಣು ಚಿರತೆ ಗಂಡು ಚೀತಾದ ಜೊತೆ ಹಿಂಸಾತ್ಮಕ ರೂಪದಲ್ಲಿ ಮಿಲನ ಹೊಂದುವ ವೇಳೆ ಸಾವನ್ನಪ್ಪಿತ್ತು.

  First published: