• Home
  • »
  • News
  • »
  • national-international
  • »
  • Ayodhya: ಮದುವೆಯಾದ 12 ವರ್ಷಗಳ ಬಳಿಕ ಬಹಿರಂಗವಾಯ್ತು ಹೆಂಡತಿಯ ಧರ್ಮ! ಗಂಡ ತಬ್ಬಿಬ್ಬು!

Ayodhya: ಮದುವೆಯಾದ 12 ವರ್ಷಗಳ ಬಳಿಕ ಬಹಿರಂಗವಾಯ್ತು ಹೆಂಡತಿಯ ಧರ್ಮ! ಗಂಡ ತಬ್ಬಿಬ್ಬು!

ಜಗಬೀರ್ ಕೋರಿ ಮತ್ತು  ಪೂಜಾ ಅಲಿಯಾಸ್ ಹಸೀನಾ ಬಾನು

ಜಗಬೀರ್ ಕೋರಿ ಮತ್ತು ಪೂಜಾ ಅಲಿಯಾಸ್ ಹಸೀನಾ ಬಾನು

ಉತ್ತರ ಪ್ರದೇಶದ ಅಯೋಧ್ಯಾ ನಿವಾಸಿಯಾದ ಜಗಬೀರ್ ಕೋರಿ ಎಂಬಾತ ತನ್ನ ಪತ್ನಿ ಪೂಜಾ ಎಂಬಾಕೆ ತನ್ನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿದಳು. ಆಕೆಯ ಕುಟುಂಬದವರು ಶಿರಚ್ಛೇದ ಬೆದರಿಕೆ ಹಾಕಿದ್ದರು ಎಂದು ಜಗಬೀರ್ ಕೋರಿ ಪೊಲೀಸರಿಗೆ ದೂರು ನೀಡಿದ್ದಾರೆ.

  • Share this:

ಈಗಂತೂ ಈ ಒಂದು ಧರ್ಮದಿಂದ (Religion) ಇನ್ನೊಂದು ಧರ್ಮಕ್ಕೆ ಮತಾಂತರವಾಗುವುದು, ಇನ್ನೊಬ್ಬರನ್ನು ತಮ್ಮ ಧರ್ಮವನ್ನು ಬಿಟ್ಟು ಬೇರೆ ಧರ್ಮಕ್ಕೆ ಬರುವಂತೆ ಆಮಿಷಗಳನ್ನು ಒಡ್ಡುವುದು, ಬೆದರಿಕೆ ಹಾಕುವುದು ಮತ್ತು ಭಾವನಾತ್ಮಕವಾಗಿ ಬ್ಲ್ಯಾಕ್‌ಮೇಲ್ (Blackmail) ಮಾಡುತ್ತಿರುವ ಅನೇಕ ಘಟನೆಗಳನ್ನು ನಾವು ತುಂಬಾನೇ ಕೇಳುತ್ತಿದ್ದೇವೆ. ಅದರಲ್ಲೂ ಕೆಲವೊಮ್ಮೆ ವ್ಯಕ್ತಿಗಳಿಗೆ ತಾವು ಯಾವ ಧರ್ಮದಲ್ಲಿ ಹುಟ್ಟಿದ್ದೇವೆ ಅಂತ ಅವರು ಬೆಳೆದ ನಂತರ ಗೊತ್ತಾಗುತ್ತಿದೆ. ಇಂತಹ ಘಟನೆಗಳು ತುಂಬಾನೇ ವಿರಳವಾಗಿದ್ದರೂ ಸಹ ಸಮಾಜದಲ್ಲಿ  ನಡೆಯುತ್ತಿವೆ. ಇಲ್ಲೊಂದು ಇಂತಹದೇ ಘಟನೆ ನಡೆದಿದೆ ನೋಡಿ, ಉತ್ತರ ಪ್ರದೇಶದ ಅಯೋಧ್ಯಾ (Ayodhya) ನಿವಾಸಿಯಾದ ಜಗಬೀರ್ ಕೋರಿ ಎಂಬಾತ ತನ್ನ ಪತ್ನಿ ಪೂಜಾ ಎಂಬಾಕೆ ತನ್ನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿದಳು. ಆಕೆಯ ಕುಟುಂಬದವರು ಶಿರಚ್ಛೇದ ಬೆದರಿಕೆ ಹಾಕಿದ್ದರು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.


ಇದು ಲವ್ ಜಿಹಾದ್ ಪ್ರಕರಣವೆಂದು ತೋರುತ್ತಿದೆ
ಅಯೋಧ್ಯೆಯ ಶಹನವಾಜ್ಪುರ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದ್ದು, ಇದು 'ಲವ್ ಜಿಹಾದ್' ಪ್ರಕರಣವೆಂದು ತೋರುತ್ತದೆ. ಜಗಬೀರ್ ತನ್ನ ಹೆಂಡತಿಯು ಯಾವ ಧರ್ಮಕ್ಕೆ ಸೇರಿದವರು ಮತ್ತು ಅವರ ಧಾರ್ಮಿಕ ಸಂಬಂಧದ ಬಗ್ಗೆ ತಿಳಿದಾಗ ಇದೆಲ್ಲವೂ ಗೊಂದಲ ಶುರುವಾಯಿತು ನೋಡಿ. ಹಸೀನಾ ಬಾನು ಕೆಲವು ವರ್ಷಗಳ ಹಿಂದೆ ಮಕ್ಕಳಿಗೆ ಇಸ್ಲಾಮಿಕ್ ಅಧ್ಯಯನವನ್ನು ಕಲಿಸುತ್ತಿದ್ದರು. ಜಗಬೀರ್ ಅವರೊಂದಿಗಿನ ವಿವಾದದ ನಂತರ ಪತ್ನಿ ತನ್ನ ತವರು ಮನೆಗೆ ತೆರಳಿದಳು. ಅಲ್ಲಿಂದ ಹಿಂದಿರುಗಿದ ನಂತರ, ಜಗಬೀರ್ ತಮ್ಮ ಮಕ್ಕಳಲ್ಲಿ ಒಬ್ಬರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂದು ಕಂಡುಕೊಂಡರು.


ಇದನ್ನೂ ಓದಿ:  Raids On PFI: ದೆಹಲಿಯ ಶಾಹೀನ್ ಬಾಗ್ ಸೇರಿದಂತೆ 8 ರಾಜ್ಯಗಳಲ್ಲಿ ಕ್ಷಿಪ್ರ ದಾಳಿ, 170 ಕಾರ್ಯಕರ್ತರ ಬಂಧನ


ಗಂಡನಿಗೆ ಈ ವಿಷಯ ತಿಳಿದಾಗ, ಹೆಂಡತಿಯ ಕುಟುಂಬವು ಜಗಬೀರ್ ಅವರಿಗೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ತುಂಬಾನೇ ಬಲವಂತಪಡಿಸಿತು ಮತ್ತು ಶಿರಚ್ಛೇದನ ಬೆದರಿಕೆ ಸಹ ಹಾಕಲಾಯಿತು ಎಂದು ಜಗಬೀರ್ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಅವರ ಕುಟುಂಬವು ನಾಸೀರ್ ಎಂದು ಗುರುತಿಸಲಾದ ಸ್ಥಳೀಯ ರೌಡಿಯನ್ನು ಸಂಪರ್ಕಿಸಿ ಜಗಬೀರ್ ಅವರನ್ನು ಇಸ್ಲಾಂಗೆ ಮತಾಂತರಗೊಳ್ಳಲು ಒತ್ತಾಯಿಸಿದರು. ಸೆಪ್ಟೆಂಬರ್ 18 ರಂದು, ದೂರಿನ ಮೇರೆಗೆ ಯುಪಿ ಪೊಲೀಸರು ನಾಸೀರ್ ಅವರನ್ನು ಕೂಡಲೇ ಬಂಧಿಸಿದರು. ಅವರೇ ಪ್ರಾಣ ಬೆದರಿಕೆಗಳನ್ನು ಹಾಕಿದವರು ಎಂದು ಆರೋಪಿಸಲಾಗಿದೆ.


ಪೂಜಾ ಅಲಿಯಾಸ್ ಹಸೀನಾ ಜಗಬೀರ್ ಗೆ ಸಿಕ್ಕಿದ್ದು ಹೀಗೆ
12 ವರ್ಷಗಳ ಹಿಂದೆ ರೈಲ್ವೆ ನಿಲ್ದಾಣದಲ್ಲಿ ಪೂಜಾ ಅಲಿಯಾಸ್ ಹಸೀನಾ ಅವರನ್ನು ಭೇಟಿಯಾಗಿದ್ದಾಗಿ ಜಗಬೀರ್ ಹೇಳಿಕೊಂಡಿದ್ದಾರೆ. ಅವಳು ಅಸಹಾಯಕಳೆಂದು ಹೇಳಿಕೊಂಡಳು, ಹಾಗಾಗಿ ಜಗಬೀರ್ ಅವರ ಕುಟುಂಬವು ಅವಳನ್ನು ಮನೆಗೆ ಕರೆದೊಯ್ದರು ಮತ್ತು ಸ್ವಲ್ಪ ಸಮಯದ ನಂತರ ಜಗಬೀರ್ ನೊಂದಿಗೆ ನ್ಯಾಯಾಲಯದಲ್ಲಿ ಮದುವೆ ಮಾಡಿಸಿದರು. ಈ ದಂಪತಿಗಳಿಗೆ ಈಗ ಒಬ್ಬ ಮಗ ಮತ್ತು ಒಬ್ಬ ಮಗಳು ಇದ್ದಾರೆ.


ಜುಲೈ ನಲ್ಲಿ ಸಹ ಇದೇ ರೀತಿ ಘಟನೆ ಬೆಳಕಿಗೆ ಬಂದಿತ್ತು
ಉತ್ತರಪ್ರದೇಶದ ಅಜಂಗಡದಲ್ಲಿ ವಾಸಿಸುತ್ತಿದ್ದ ಹಿಂದೂ ಹುಡುಗಿಯನ್ನು ಮುಸ್ಲಿಂ ವ್ಯಕ್ತಿಯೊಬ್ಬ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದನು. ಅವನು ಹಿಂದೂ ವ್ಯಕ್ತಿಯಾಗಿ ತನ್ನ ಗುರುತನ್ನು ಸೃಷ್ಟಿಸಿಕೊಂಡನು ಮತ್ತು ಹಿಂದೂ ಹುಡುಗಿಯನ್ನು ಮದುವೆಯಾದನು. ಮದುವೆಯ ನಂತರ ಅವನನ್ನು ಭೇಟಿಯಾಗಲು ಅವನ ಮನೆಗೆ ಹೋದಾಗ ಆ ಹುಡುಗಿಗೆ ಸತ್ಯ ಗೊತ್ತಾಗಿದೆ.


ಇದನ್ನೂ ಓದಿ: Baba Vanga: ಭಾರತದ ಬಗ್ಗೆ ಬಾಬಾ ವಂಗಾ ಭಯಾನಕ ಭವಿಷ್ಯವಾಣಿ, ದೇಶಾದ್ಯಂತ ಆವರಿಸುತ್ತಾ ಈ ಅಪಾಯ?


ಅವರಿಬ್ಬರೂ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಭೇಟಿಯಾದರು, ಅಲ್ಲಿ ಆ ವ್ಯಕ್ತಿಯು ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಅವರು ತಮ್ಮನ್ನು ರವೀಂದ್ರ ಎಂದು ಪರಿಚಯಿಸಿಕೊಂಡಿದ್ದರು. ಸತ್ಯ ಹೊರಬಂದ ನಂತರ ಆ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ. ಮಹಿಳೆ ನ್ಯಾಯಾಂಗದ ಮುಂದೆ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.

Published by:Ashwini Prabhu
First published: