ವಯನಾಡ್(ಜು.23): ಕೇರಳದ ವಯನಾಡು ಜಿಲ್ಲೆಯ ಮಾನಂತವಾಡಿಯಲ್ಲಿರುವ ಎರಡು ಪಶುಸಂಗೋಪನಾ ಕೇಂದ್ರಗಳಲ್ಲಿ 'ಆಫ್ರಿಕನ್ ಹಂದಿಜ್ವರ' (African swine fever ) (ASF) ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಜಿಲ್ಲೆಯ ಎರಡು ಪಶುಸಂಗೋಪನಾ ಕೇಂದ್ರಗಳ ಹಂದಿಗಳಲ್ಲಿ ಈ ರೋಗ ದೃಢಪಟ್ಟಿದೆ. ಭೋಪಾಲ್ನ (Bhopal) ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ನಲ್ಲಿ ಮಾದರಿಗಳನ್ನು ಪರೀಕ್ಷಿಸಲಾಯಿತು. ಒಂದು ಕೇಂದ್ರದಲ್ಲಿ ಹಲವಾರು ಹಂದಿಗಳು (Pig) ಸಾವನ್ನಪ್ಪಿದ ನಂತರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೀಗ ಫಲಿತಾಂಶದಲ್ಲಿ ಈ ಜ್ವರ ದೃಢಪಟ್ಟಿದೆ. ಎರಡನೇ ಕೇಂದ್ರದಲ್ಲಿ 300 ಹಂದಿಗಳನ್ನು ಕೊಲ್ಲಲು (Killing 300 Pigs) ಸೂಚನೆ ನೀಡಲಾಗಿದೆ. ರೋಗ ಹರಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
ಈ ತಿಂಗಳ ಆರಂಭದಲ್ಲಿ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದ ನಂತರ ರಾಜ್ಯವು ಈಗಾಗಲೇ ಜೈವಿಕ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಿದೆ. ಬಿಹಾರ ಮತ್ತು ಕೆಲವು ಈಶಾನ್ಯ ರಾಜ್ಯಗಳಲ್ಲಿ 'ಆಫ್ರಿಕನ್ ಹಂದಿಜ್ವರ' ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಆಫ್ರಿಕನ್ ಹಂದಿ ಜ್ವರವು ಅತ್ಯಂತ ಸಾಂಕ್ರಾಮಿಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ.
ಮರಣ ಪ್ರಮಾಣ ಹೆಚ್ಚು
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಇದು ಕಾಡು ಮತ್ತು ಸಾಕು ಹಂದಿಗಳಲ್ಲಿ ಪ್ರಚಲಿತದಲ್ಲಿರುವ ಹೆಚ್ಚು ಸಾಂಕ್ರಾಮಿಕ ವೈರಲ್ ರೋಗವಾಗಿದೆ ಮತ್ತು ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿದೆ. ಈ ರೋಗದ ವಿರುದ್ಧ ಇನ್ನೂ ಯಾವುದೇ ಲಸಿಕೆ ಸಿದ್ಧವಾಗಿಲ್ಲ. ಇದು ಮನುಷ್ಯರಿಗೆ ಅಪಾಯವಲ್ಲ, ಆದರೆ ಇದು ಹಂದಿ ಉದ್ಯಮ ಮತ್ತು ರೈತರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿದೆ.
ಕೀನ್ಯಾದಲ್ಲಿ ಮೊದಲ ಪ್ರಕರಣ
ಆಫ್ರಿಕನ್ ಹಂದಿ ಜ್ವರ ಸಾಂಕ್ರಾಮಿಕ ರೋಗವಾಗಿದ್ದು, ಸಾಕು ಹಂದಿಗಳಿಗೆ ಮಾರಣಾಂತಿಕವೆನಿಸಿದೆ. ಇದು ಮೊಟ್ಟಮೊದಲ ಬಾರಿ 1921ರಲ್ಲಿ ಕೀನ್ಯಾದಲ್ಲಿ ಪತ್ತೆಯಾಗಿತ್ತು. ಆದರೆ ಈ ರೋಗ ಹಂದಿಗಳಿಂದ ಮಾನವರಿಗೆ ಹರಡುವುದಿಲ್ಲ.
ಇದನ್ನೂ ಓದಿ: National Mango Day: ಹಣ್ಣುಗಳ ರಾಜ ಮಾವಿಗೂ ಒಂದು ದಿನ! ರುಚಿಯಷ್ಟೇ ಇತಿಹಾಸವೂ ಸ್ವಾದಿಷ್ಟ
ಹಂದಿಗಳು ಮತ್ತು ಹಂದಿಮಾಂಸ ಸಂಬಂಧಿತ ಉತ್ಪನ್ನಗಳ ಅಂತರ-ರಾಜ್ಯ ಮಾರಾಟ ಮತ್ತು ಸಾಗಣೆಯ ಮೇಲಿನ ನಿಷೇಧವನ್ನು ರಾಜ್ಯ ಸರ್ಕಾರ ಇಂದು ವಿಸ್ತರಿಸಿದೆ.
ಎಲ್ಲಾ ಹಂದಿ ಸಾಕಣೆ ಕೇಂದ್ರಗಳಲ್ಲಿ ಜೈವಿಕ ಭದ್ರತೆ ಮತ್ತು ತ್ಯಾಜ್ಯ ವಿಲೇವಾರಿ ಕಾರ್ಯವಿಧಾನವು ಕೇಂದ್ರ ಸರ್ಕಾರದ ನಿರ್ದೇಶನದಂತೆ ಹಂದಿಜ್ವರ ಕ್ರಿಯಾ ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಎಲ್ಲಾ ಸಾಕಣೆ ಕೇಂದ್ರಗಳಲ್ಲಿ ಕಟ್ಟುನಿಟ್ಟಾದ ಕಾಳಜಿಯನ್ನು ನಿರ್ವಹಿಸಬೇಕು. ಯಾವುದೇ ರೋಗಲಕ್ಷಣಗಳ ಸಂದರ್ಭದಲ್ಲಿ ಈ ಪ್ರದೇಶದ ಸಂಬಂಧಪಟ್ಟ ಪಶುವೈದ್ಯರಿಗೆ ತಿಳಿಸಬೇಕು ಎಂದು ತಿಳಿಸಿದ್ದಾರೆ. ತಿರುವನಂತಪುರದಲ್ಲಿ ನಿಯಂತ್ರಣ ಕೊಠಡಿ ತೆರೆಯಲಾಗಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲೆಯ ಹಿರಿಯ ಪಶುಸಂಗೋಪನೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಇಲ್ಲಿಯವರೆಗೆ, ಬೇರೆಲ್ಲೂ ಸೋಂಕಿನ ಬಗ್ಗೆ ಯಾವುದೇ ಸೂಚನೆಗಳಿಲ್ಲ. ಮೊದಲ ಫಾರ್ಮ್ನಲ್ಲಿ ಈ ರೋಗದಿಂದಾಗಿ 23 ಹಂದಿಗಳು ಸತ್ತಿವೆ. ಶೀಘ್ರದಲ್ಲೇ, ಎರಡನೇ ಫಾರ್ಮ್ನ 300 ಹಂದಿಗಳನ್ನು ಕೊಲ್ಲಲಾಗುವುದು" ಎಂದು ಹೇಳಿದರು.
ಹೆಲ್ತ್ ಪ್ರೋಟೋಕಾಲ್ ಪ್ರಕಾರ ಕೊಂದ ಹಂದಿಗಳನ್ನು ಭೂಮಿಯಲ್ಲಿ ಆಳವಾಗಿ ಹೂಳಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಈ ಸಮಸ್ಯೆ ವರದಿಯಾದಾಗ, ನಾವು ಕಟ್ಟುನಿಟ್ಟಿನ ನಿಗಾ ವಹಿಸಿದ್ದೇವೆ ಮತ್ತು ಸರ್ಕಾರವು ಅಂತರ-ರಾಜ್ಯ ಸಾರಿಗೆ ಮತ್ತು ಹಂದಿಗಳು ಮತ್ತು ಹಂದಿಮಾಂಸ ಸಂಬಂಧಿತ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದೆ ಎಂದು ಅಧಿಕಾರಿ ಹೇಳಿದರು.
ಬಿಹಾರ ಮತ್ತು ಕೆಲವು ಈಶಾನ್ಯ ರಾಜ್ಯಗಳಲ್ಲಿ ಆಫ್ರಿಕನ್ ಹಂದಿ ಜ್ವರ ವರದಿಯಾಗಿದೆ ಎಂದು ಕೇಂದ್ರದ ಎಚ್ಚರಿಕೆಯ ನಂತರ ಕೇರಳವು ಈ ತಿಂಗಳ ಆರಂಭದಲ್ಲಿ ಜೈವಿಕ ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸಿತ್ತು.
ಇದನ್ನೂ ಓದಿ: ಕೊರೋನಾ ಬಳಿಕ ಆಫ್ರಿಕನ್ ಹಂದಿ ಜ್ವರದ ಭೀತಿ; 12 ಸಾವಿರ ಹಂದಿ ಕೊಲ್ಲಲು ಸರ್ಕಾರ ಆದೇಶ
ಆಹಾರ ಮತ್ತು ಕೃಷಿ ಸಂಸ್ಥೆ (FAO) ಪ್ರಕಾರ, ಆಫ್ರಿಕನ್ ಹಂದಿ ಜ್ವರವು ದೇಶೀಯ ಹಂದಿಗಳ ಅತ್ಯಂತ ಸಾಂಕ್ರಾಮಿಕ ಮತ್ತು ಮಾರಣಾಂತಿಕ ವೈರಲ್ ರೋಗವಾಗಿದೆ.
ಇದನ್ನು ಮೊದಲು ಕೀನ್ಯಾ, ಪೂರ್ವ ಆಫ್ರಿಕಾ, 1921 ರಲ್ಲಿ ವಿವರಿಸಲಾಯಿತು. ಶೀಘ್ರದಲ್ಲೇ ದಕ್ಷಿಣ ಆಫ್ರಿಕಾ ಮತ್ತು ಅಂಗೋಲಾದಲ್ಲಿ ವಸಾಹತುಗಾರರ ಹಂದಿಗಳನ್ನು ಕೊಲ್ಲುವ ರೋಗ ಎಂದು ವಿವರಿಸಲಾಯಿತು. ವಾರ್ಥಾಗ್ಗಳೊಂದಿಗಿನ ಸಂಪರ್ಕವು ವೈರಸ್ ಹರಡುವಲ್ಲಿ ಪ್ರಮುಖವಾದುದು ಎಂದು ಸಾಬೀತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ