• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Afghanistan Crisis| ನಿರಾಶ್ರಿತರ ಕಾರ್ಡ್​ಗಾಗಿ ಒತ್ತಾಯ; ದೆಹಲಿಯಲ್ಲಿ ಅಫ್ಘಾನ್​ ನಿರಾಶ್ರಿತರಿಂದ ಪ್ರತಿಭಟನೆ

Afghanistan Crisis| ನಿರಾಶ್ರಿತರ ಕಾರ್ಡ್​ಗಾಗಿ ಒತ್ತಾಯ; ದೆಹಲಿಯಲ್ಲಿ ಅಫ್ಘಾನ್​ ನಿರಾಶ್ರಿತರಿಂದ ಪ್ರತಿಭಟನೆ

ಪ್ತತಿಭಟನಾ ನಿರತ ಅಫ್ಘಾನ್ ನಿರಾಶ್ರಿತರು.

ಪ್ತತಿಭಟನಾ ನಿರತ ಅಫ್ಘಾನ್ ನಿರಾಶ್ರಿತರು.

ಇನ್ನು ಮೌನವಾಗಿರಲು ಸಾಧ್ಯವಿಲ್ಲ, ನಮಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಉತ್ತರ ನೀಡಬೇಕು, ನಮಗೆ ನ್ಯಾಯ ಬೇಕು. ನಮಗೆ ಭವಿಷ್ಯ ಬೇಕು. ನಮ್ಮ ಭವಿಷ್ಯವನ್ನು ರೂಪಿಸಬೇಕಾದ ಕರ್ತವ್ಯ ವಿಶ್ವ ಸಂಸ್ಥೆಗೆ ಇದೆ" ಎಂದು ಪ್ರತಿಭಟನಾ ನಿರತರು ದೆಹಲಿಯಲ್ಲಿ ಘೋಷಣೆ ಕೂಗಿದ್ದಾರೆ.

  • Share this:

ನವ ದೆಹಲಿ (ಆಗಸ್ಟ್​ 25); ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿ ಸಿಕೊಳ್ಳುತ್ತಿದ್ದಂತೆ ಲಕ್ಷಾಂತರ ಜನ ಕಾಬೂಲ್ ನಗರವನ್ನು ತೊರೆಯಲು ಮುಂದಾಗಿದ್ದರು. ಅದರಲ್ಲೂ ಮುಖ್ಯವಾಗಿ ಮುಸ್ಲೀಮರಲ್ಲದ ಇತರೆ ಅಲ್ಪ ಸಂಖ್ಯಾತ ಸಮುದಾಯದ ಜನರಿಗೆ ಜೀವ ಭಯ ಉಂಟಾಗಿತ್ತು, ಕಾಬೂಲ್ ನಗರವನ್ನು ತೊರೆಯಲು ಜನ ಮನಸ್ಸು ಮಾಡಲು ಇದೂ ಒಂದು ಕಾರಣವಾಗಿತ್ತು. ಪರಿಣಾಮ ಭಾರತ ಸರ್ಕಾರ ವಿಶೇಷ ವಿಮಾನಗಳನ್ನು ಕಾಬೂಲ್ ನಗರಕ್ಕೆ ಕಳುಹಿಸುವ ಮೂಲಕ ಅನೇಕ ನಿರಾಶ್ರಿತರನ್ನು ರಕ್ಷಿಸಿ ಭಾರತಕ್ಕೆ ಕರೆ ತಂದಿತ್ತು. ಆದರೆ, ಅಫ್ಘನ್​ನಿಂದ ಭಾರತಕ್ಕೆ ಆಗಮಿಸಿರುವ ನಿರಾಶ್ರಿತರಿಗೆ ಈವರೆಗೆ ನಿರಾಶ್ರಿತರ ಕಾರ್ಡ್​ ನೀಡಿಲ್ಲ. ಇದರಿಂದ ಬೇಸತ್ತಿರುವ ನೂರಾರು ಅಫ್ಘಾನಿಸ್ತಾನದ ಪ್ರಜೆಗಳು ನಿರಾಶ್ರಿತರ ಕಾರ್ಡ್‌ಗಾಗಿ ಒತ್ತಾಯಿಸಿ ಬುಧವಾರ ನವದೆಹಲಿಯಲ್ಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ (UNHRC) ಹೊರಗೆ ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯಾಗಿದೆ.


ನಿರಾಶ್ರಿತರ ಕಾರ್ಡ್‌ಗಾಗಿ ಅಫ್ಘಾನ್ ನಿರಾಶ್ರಿತರು ಕಳೆದ ಮೂರು ದಿನಗಳಿಂದ ಯುಎನ್‌ಎಚ್‌ಆರ್‌ಸಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ನಿರಾಶ್ರಿತರ ಕಾರ್ಡುಗಳು ಸಿಗದ ಹಿನ್ನೆಲೆ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


"ಇನ್ನು ಮೌನವಾಗಿರಲು ಸಾಧ್ಯವಿಲ್ಲ, ನಮಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಉತ್ತರ ನೀಡಬೇಕು, ನಮಗೆ ನ್ಯಾಯ ಬೇಕು. ನಮಗೆ ಭವಿಷ್ಯ ಬೇಕು. ನಮ್ಮ ಭವಿಷ್ಯವನ್ನು ರೂಪಿಸಬೇಕಾದ ಕರ್ತವ್ಯ ವಿಶ್ವ ಸಂಸ್ಥೆಗೆ ಇದೆ" ಎಂದು ಪ್ರತಿಭಟನಾ ನಿರತರು ದೆಹಲಿಯಲ್ಲಿ ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ.


ಈ ಬಗ್ಗೆ ಪ್ರತಿಭಟನಾಕಾರರೊಬ್ಬರು ಮಾಧ್ಯಮಗಳ ಎದುರು ತಮ್ಮ ನೋವನ್ನು ತೋಡಿಕೊಂಡಿದ್ದು, "ನಾವು ಅಫ್ಘಾನಿಸ್ತಾನದ ನಾಗರಿಕರಿಗೆ ನಿರಾಶ್ರಿತರ ಕಾರ್ಡುಗಳನ್ನು ನೀಡಬೇಕು ಎಂದು ಒತ್ತಾಯಿಸುತ್ತೇವೆ. ನಾವು ಈವರೆಗೆ ಶೀಘ್ರವಾಗಿ ಅಫ್ಘಾನಿಸ್ತಾನಕ್ಕೆ ಹಿಂತಿರುಗುತ್ತೇವೆ ಎಂದೇ ಭಾವಿಸಿದ್ದೆವು. ಆದರೆ, ಅಲ್ಲಿನ ಪರಿಸ್ಥಿತಿ ಪೂರ್ತಿ ಹದಗೆಟ್ಟಿದೆ. ತಾಲಿಬಾನ್ ಪೂರ್ತಿ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದೆ. ಇದು ನಿಜಕ್ಕೂ ನಮ್ಮ ಭವಿಷ್ಯದ ಬಗೆಗಿನ ಪ್ರಶ್ನೆಯಾಗಿದೆ" ಎಂದು ತಿಳಿಸಿದ್ದಾರೆ.


ಇದನ್ನೂ ಓದಿ; Afghanistan Crisis 2021| ಅಫ್ಘನ್​ನಲ್ಲಿರುವ ಕೆಲವು ಹಿಂದೂಗಳು-ಸಿಖ್ಖರು ಭಾರತಕ್ಕೆ ಹಿಂದಿರುಗಲು ಬಯಸುತ್ತಿಲ್ಲ ಏಕೆ?


"ವಿಶ್ವಸಂಸ್ಥೆಯು ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ನಾವು ಪ್ರತಿಭಟನೆಯನ್ನು ಮುಂದುವರಿಸುತ್ತೇವೆ. ಕಳೆದ ಮೂರು ದಿನಗಳಿಂದ ನಾವು ಪ್ರತಿಭಟನೆ ಮಾಡುತ್ತಿದ್ದೇವೆ, ಆದರೆ ಅಧಿಕಾರಿಗಳು ಕಚೇರಿಯ ಗೇಟ್‌ಗಳಿಗೂ ಕೂಡ ಬಂದಿಲ್ಲ. ಏನನ್ನೂ ಉತ್ತರಿಸಿಲ್ಲ"
ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಮತ್ತೊಬ್ಬ ಪ್ರತಿಭಟನಾಕಾರ "ನಮ್ಮ ಭವಿಷ್ಯವು ಈಗ ಮಂಕಾಗಿದೆ, ನಮ್ಮ ಮಕ್ಕಳು ಕೂಡ ಓದಲು ಸಾಧ್ಯವಿಲ್ಲ, ಯುವಕರಿಗೆ ಉದ್ಯೋಗ ಕೂಡ ಸಿಗುವುದಿಲ್ಲ" ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Basanagouda Patil Yatnal| ರಾಹುಲ್ ಗಾಂಧಿ ವಿರುದ್ಧ ಯತ್ನಾಳ್ ಟೀಕೆ ಸರಿಯಲ್ಲ, ಪಂಚಮಸಾಲಿ ಮುಖಂಡರಿಂದಲೇ ಟೀಕೆ!


ತಾಲಿಬಾನ್ ಕಳೆದ ವಾರ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡಿತು. ಅಂದಿನಿಂದ ಅಫ್ಘಾನ್ ಪ್ರಜೆಗಳ ದಂಡೇ ಉತ್ತಮ ಭವಿಷ್ಯದ ಭರವಸೆಯಲ್ಲಿ ದೇಶವನ್ನು ತೊರೆಯುತ್ತಿದೆ. ಭಾರತಕ್ಕೆ ಬರುವ ಪ್ರತಿಯೊಬ್ಬ ಅಫ್ಘಾನ್ ಪ್ರಜೆಯೂ ಇ-ವಿಸಾ ಹೊಂದಿರಬೇಕು ಎಂದು ಒಕ್ಕೂಟ ಸರ್ಕಾರದ ಗೃಹ ಸಚಿವಾಲಯ ಬುಧವಾರ ಸೂಚನೆ ಹೊರಡಿಸಿದೆ. ಇ-ವಿಸಾ ಆರು ತಿಂಗಳ ಅವಧಿ ಹೊಂದಿರುತ್ತದೆ. ಯಾವುದೇ ಧರ್ಮದವರು ಇ-ವಿಸಾಗೆ ಅರ್ಜಿ ಸಲ್ಲಿಸಬಹುದಾಗಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

top videos
    First published: