ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ರಕ್ಕಸರ ಅಟ್ಟಹಾಸ ಮಿತಿಮೀರಿದೆ. ದಿನದಿಂದ ದಿನಕ್ಕೆ ತಾಲಿಬಾನಿಗಳ ಕ್ರೌರ್ಯ ಹೆಚ್ಚಾಗುತ್ತಿದೆ. ಜೀವ ಕೈಯಲ್ಲಿ ಹಿಡಿದು ಅಲ್ಲಿನ ಜನ ಬದುಕುವ ಪರಸ್ಥತಿ ಎದುರಾಗಿದೆ. ಪ್ರಶ್ನೆ ಮಾಡಲು ಧೈರ್ಯವಿಲ್ಲದೇ, ಅವರು ಹೇಳಿದಂತೆ ಕೇಳಿಕೊಂಡು ಇಲ್ಲಿನ ಜನ ಜೀವನ ನಡೆಸುತ್ತಿದ್ದಾರೆ. ಹದಗಟ್ಟ ಭದ್ರತಾ ಪರಿಸ್ಥಿತಿ ಮುಂದುವರೆದಿದೆ. ಹೇಳುವವರು, ಕೇಳುವವರು ಇಲ್ಲದೇ ತಾವು ಮಾಡಿದ್ದೇ ರೂಲ್ಸ್ ಎಂಬಂತೆ ತಾಲಿಬಾನಿಗಳು ಮೆರೆಯುತ್ತಿದ್ದಾರೆ. ಮೊನೆಯಷ್ಟೇ ತಾಲಿಬಾನ್ ಹಂಗಾಮಿ ಸಚಿವ ಹಕ್ಕಾನಿ ಸೂಸೈಡ್ ಬಾಂಬರ್ಗಳನ್ನು ರಿಯಲ್ ಹೀರೋಗಳು ಎಂದು ಕರೆದಿದ್ದು, ಎಲ್ಲೆಡೆ ಸಖತ್ ವೈರಲ್ ಆಗಿತ್ತು. ಪ್ರತಿದಿನ ಒಂದಲ್ಲ ಒಂದೂ ತಾಲಿಬಾನಿಗಳ ಕೃತ್ಯ ಬೆಳಕಿಗೆ ಬರುತ್ತಲ್ಲೇ ಇದೆ. ಇದೀಗ ಆಫ್ಘನ್ ಸಿಖ್ಖರಿಗೆ ತಾಲಿಬಾನ್ ವಾರ್ನಿಂಗ್ ನೀಡಿದೆ. ಅಫ್ಘಾನಿಸ್ತಾನ ತಾಲಿಬಾನ್ ಕೈ ವಶ ವಾಗುವ ಮುಂಚೆಯಿಂದಲೂ ಇಲ್ಲಿ ಸಿಖ್ ಸಮುದಾಯ ಶೋಚನೀಯ ಪರಿಸ್ಥಿತಿಯಲ್ಲಿತ್ತು. ಇದೀಗ ತಾಲಿಬಾನಿಗಳ ಕಣ್ಣು ಸಿಖ್ ಸಮುದಾಯದ ಮೇಲೆ ಬಿದ್ದಿದೆ.
`ಇಸ್ಲಾಂಗೆ ಮತಾಂತರವಾಗಿ, ಇಲ್ಲ ದೇಶ ಬಿಟ್ಟು ಹೋಗಿ’
ಸಿಖ್ ಸಮುದಾಯ, ಸುನ್ನಿ ಇಸ್ಲಾಂಗೆ ಮತಾಂತರವಾಗಬೇಕು, ಇಲ್ಲವಾದರೆ ದೇಶ ಬಿಟ್ಟು ಹೋಗಬೇಕು ಎಂದು ತಾಲಿಬಾನಿಗಳು ತಾಕೀತು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಅಫ್ಘಾನಿಸ್ತಾನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸಿಖ್ ಸಮುದಾಯದ ಜನರು ಆಶ್ರಯ ಪಡೆದುಕೊಂಡಿದ್ದರು. ಆದರೆ ಇಲ್ಲಿನ ವ್ಯವಸ್ಥಿತ ತಾರತ್ಯಮ ಮತ್ತು ಅತಿರೇಕದ ಧಾರ್ಮಿಕ ಹಿಂಸಾಚಾರಗಳ ಉಲ್ಬಣದಿಂದ ಹಾಳಾಗಿದೆ ಎಂದು ಹಕ್ಕುಗಳ ಮತ್ತು ಭದ್ರತೆಯ ಅಂತಾರಾಷ್ಟ್ರೀಯ ಒಕ್ಕೂಟ ಹೇಳಿದೆ.
ಇದನ್ನು ಓದಿ :
ಆಫ್ಘನ್ ಮಹಿಳಾ ವಾಲಿಬಾಲ್ ಆಟಗಾರ್ತಿಯ ಹತ್ಯೆ; ಶಿರಚ್ಚೇದ ಮಾಡಿ ಕ್ರೌರ್ಯ ಮೆರೆದ ತಾಲಿಬಾನಿಗಳು
ಸಿಖ್ ಸಮುದಾಯದವರ ಮೇಲೆ ಉಗ್ರರ ಅಟ್ಟಹಾಸ
ಸಿಖ್ ಸಮುದಾಯದವರು ಹೆಚ್ಚು ಕಾಬೂಲ್ನಲ್ಲಿ ವಾಸಿಸುತ್ತಿದ್ದಾರೆ. ಇನ್ನೂ ಘಜ್ನಿ ಹಾಗೂ ನಾಂಗರ್ಹರ್ನಲ್ಲೂ ಕೆಲವು ಜನರು ವಾಸಿಸುತ್ತಿದ್ದಾರ. ಆಫ್ಘನ್ ತಾಲಿಬಾನಿಗಳ ಕೈವಶವಾದರೂ ಏನು ಕೇಳದೆ ತಮ್ಮ ಪಾಡಿಗೆ ಸಿಖ್ಖರು ಜೀವನ ನಡೆಸಿಕೊಂಡು ಹೋಗುತ್ತಿದ್ದಾರೆ. ಆದರೆ ವಾರದ ಹಿಂದೆ ಕಾಬೂಲ್ ನ ಕರ್ತ್ -ಇ- ಪರ್ವಾನ್ ಜಿಲ್ಲೆಯ ಗುರುದ್ವಾರಕ್ಕೆ ಆಗಮಿಸಿದ ತಾಲಿಬಾನಿಗಳು ಅಲ್ಲಿದ್ದ ಸಿಖ್ಖರ ಮೇಲೆ ಹಲ್ಲೆ ಮಾಡಿದ್ದಾರೆ. 15 ರಿಂದ 20 ಉಗ್ರರು ಗುರುದ್ವಾರದ ಭದ್ರತಾ ಕಾವಲುಗಾರರನ್ನು ಕಟ್ಟಿಹಾಕಿ ಚಿತ್ರ ಹಿಂಸೆ ನೀಡಿದ್ದರು. ಇಂತಹ ದಾಳಿ ಹಾಗೂ ಹಿಂಸಾಚಾರಗಳು ಅಫ್ಘಾನಿಸ್ತಾನದ ಸಿಖ್ಖರಿಗೆ ಸರ್ವೆ ಸಾಮನ್ಯವಾಗಿದೆ.
ಈ ಹಿಂದೆಯೂ ಸಿಖ್ಖರ ಮೇಲೆ ದಾಳಿ
ಅಫ್ಘಾನಿಸ್ತಾನ ತಾಲಿಬಾನ್ ಕೈವಶವಾಗುವ ಮುಂಚೆಯಿಂದಲೂ ಸಿಖ್ಖರ ಮೇಲೆ ದಾಳಿ ನಡೆಯುತ್ತಲೇ ಇದೆ. ಈ ಹಿಂದೆ ಆಫ್ಘನ್ ಸಿಖ್ ಮುಖಂಡರೊಬ್ಬರನ್ನು ಉಗ್ರರು ಕಿಡ್ನಾಪ್ ಮಾಡಿದ್ದರು. ಆದರೆ ಅಲ್ಲಿನ ಸರ್ಕಾರ ಈ ಕೇಸ್ ಕ್ಲೋಸ್ ಮಾಡಿಸಿ, ತನಗೆ ಏನು ತಿಳಿಯದಂತೆ ಇತ್ತು. ಮಾರ್ಚ್ 2019ರಲ್ಲಿ ಇದೇ ರೀತಿ ಸಿಖ್ ಸಮುದಾಯದ ವ್ಯಕ್ತಿಯೊಬ್ಬನನ್ನು ಅಪಹರಿಸಿ ಹತ್ಯೆ ಮಾಡಲಾಗಿತ್ತು.
ಇದನ್ನು ಓದಿ :
ತಾಲಿಬಾನಿಗಳಿಂದ ಸೂಸೈಡ್ ಬಾಂಬರ್ಗಳ ಕುಟುಂಬಕ್ಕೆ ಹಣ, ಭೂಮಿ ನೀಡುವ ಭರವಸೆ
ಭಾರತಕ್ಕೆ ಬಂದಿದ್ದ ಆಫ್ಘನ್ ಸಿಖ್ಖರು
ಇನ್ನೂ ಸಿಖ್ಖರು ಅಫ್ಘಾನಿಸ್ತಾನದಲ್ಲಿ ಅನೇಕ ದಶಕಗಳಿಂದ ವಾಸಿಸುತ್ತಿದ್ದಾರೆ. ಆದರೆ ಇವರಿಗೆ ಸೂಕ್ತ ಮನೆ, ಅಗತ್ಯ ಸೌಲಭ್ಯಗಳನ್ನು ನೀಡುವಲ್ಲಿ ಅಲ್ಲಿನ ಸರ್ಕಾರ ವಿಫಲವಾಗಿದೆ. ಹೀಗಾಗಿ ಅನೇಕ ಸಿಖ್ಖರು ಅಫ್ಘಾನಿಸ್ತಾನ ತೊರೆದು ಭಾರತಕ್ಕೆ ಬಂದಿದ್ದಾರೆ. ಮಾರ್ಚ್ 26, 2020ರಂದು ಕಾಬೂಲ್ನಲ್ಲಿನ ಗುರುದ್ವಾರದಲ್ಲಿ ತಾಲಿಬಾನ್ ಉಗ್ರರಿಂದ ಸಿಖ್ಖರ ನರಮೇದ ನಡೆದಿತ್ತು. ಇದಾದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಆಫ್ಘನ್ ಸಿಖ್ಖರು ದೇಶ ತೊರೆದು ಭಾರತಕ್ಕೆ ಬಂದಿದ್ದರು. ಇದೀಗ ಮತ್ತೆ ತಾಲಿಬಾನಿಗಳು ಇಸ್ಲಾಂಗೆ ಮತಾಂತರವಾಗಿ, ಇಲ್ಲ ದೇಶ ಬಿಟ್ಟು ಹೋಗಿ ಎಂದು ತಾಕೀತು ಮಾಡಿದ್ದಾರೆ. ತಾಲಿಬಾನಿಗಳ ಈ ಎಚ್ಚರಿಕೆಯಿಂದ ಆಫ್ಘನ್ ಸಿಖ್ಖರು ದಿಕ್ಕುತೋಚದೆ ಕಂಗಾಲಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ