Taliban Rules: ಅಫ್ಘನ್ ಯುವತಿಯರು ವಿದೇಶಕ್ಕೆ ಹೋಗುವಂತಿಲ್ಲ! ತಾಲಿಬಾನ್ ಸರ್ಕಾರದ ಹೊಸ ರೂಲ್ಸ್

ತಾಲಿಬಾನ್ ಸರ್ಕಾರ ಅಫ್ಘಾನಿಸ್ತಾನದಲ್ಲಿ ಆಡಳಿತ ಗದ್ದುಗೆ ಏರಿ ಒಂದು ವರ್ಷ ಆಯ್ತು. ಇದೇ ನೆಪದಲ್ಲಿ ರಾಜಧಾನಿ ಕಾಬೂಲ್ ಸೇರಿದಂತೆ ದೇಶದ ಪ್ರಮುಖ ಸ್ಥಳಗಳಲ್ಲಿ ತಾಲಿಬಾನ್ ಸೈನಿಕರು ಬಂದೂಕು ಹಿಡಿದು, ವಿಜಯೋತ್ಸವ ಆಚರಿಸಿದ್ದೂ ಆಯಿತು. ಅದರ ಬೆನ್ನಲ್ಲೇ ಈಗ ತಾಲಿಬಾನ್ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಾಬೂಲ್, ಅಘ್ಘಾನಿಸ್ತಾನ: ತಾಲಿಬಾನ್ (Taliban) ಪಡೆಯು ಅಫ್ಘಾನಿಸ್ತಾನದಲ್ಲಿ (Afghanistan) ಆಡಳಿತ ಗದ್ದುಗೆ ಏರಿ ಒಂದು ವರ್ಷ ಆಯ್ತು. ಇದೇ ನೆಪದಲ್ಲಿ ರಾಜಧಾನಿ ಕಾಬೂಲ್ (Kabul) ಸೇರಿದಂತೆ ದೇಶದ ಪ್ರಮುಖ ಸ್ಥಳಗಳಲ್ಲಿ ತಾಲಿಬಾನ್ ಸೈನಿಕರು ಬಂದೂಕು (Gun) ಹಿಡಿದು, ವಿಜಯೋತ್ಸವ ಆಚರಿಸಿದ್ದೂ ಆಯಿತು. ಅದರ ಬೆನ್ನಲ್ಲೇ ಈಗ ತಾಲಿಬಾನ್ ಸರ್ಕಾರ (Taliban Government) ಹೊಸ ನಿಯಮವನ್ನು ಜಾರಿಗೆ ತಂದಿದೆ. ಅದರ ಪ್ರಕಾರ ಅಫ್ಘಾನಿಸ್ತಾನ ಯುವತಿಯರು (Young Girls) ಶಿಕ್ಷಣಕ್ಕಾಗಿ (Education) ದೇಶಬಿಟ್ಟು ಬೇರೆ ಯಾವುದೇ ದೇಶಗಳಿಗೆ ಹೋಗುವಂತಿಲ್ಲ. ಹೀಗಂತ ತಾಲಿಬಾನ್ ಸರ್ಕಾರದ ಮುಖ್ಯಸ್ಥರು ಫರ್ಮಾನು (Order) ಹೊರಡಿಸಿದ್ದಾರೆ.

ಅಫ್ಘನ್ ಹೆಣ್ಣು ಮಕ್ಕಳು ವಿದೇಶಕ್ಕೆ ಹೋಗುವಂತಿಲ್ಲ

ಅಘ್ಘಾನಿಸ್ತಾನದ ಯುವತಿಯರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವುದನ್ನು ತಾಲಿಬಾನ್‌ ಸರ್ಕಾರ ನಿರ್ಬಂಧಿಸಿದೆ. ಖಜಕಿಸ್ತಾನ ಹಾಗೂ ಕತಾರ್‌ ದೇಶಗಳಿಗೆ ಸಾಮಾನ್ಯವಾಗಿ ಅಫ್ಘಾನಿಸ್ತಾನದ ಹೆಣ್ಣುಮಕ್ಕಳು ವಿದ್ಯಾಭ್ಯಾಸಕ್ಕಾಗಿ ತೆರಳುತ್ತಿದ್ದರು. ಇದಕ್ಕೆ ತಾಲಿಬಾನ್‌ ಸರ್ಕಾರ ನಿಷೇಧ ಹೇರಿದ್ದು ಕೇವಲ ಗಂಡುಮಕ್ಕಳು ಮಾತ್ರವೇ ಹೆಚ್ಚಿನ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಬಹುದು ಎಂದು ಹೇಳಿದೆ.

1 ವರ್ಷದಿಂದ ತಾಲಿಬಾನಿಗಳ ಆಡಳಿತ

ಕಳೆದ ವರ್ಷ ಆಗಸ್ಟ್ 2021 ರಲ್ಲಿ ದೇಶವನ್ನು ವಶಪಡಿಸಿಕೊಂಡ ನಂತರ ಭಯೋತ್ಪಾದಕ ಗುಂಪು ಇಸ್ಲಾಂ ಧರ್ಮದ ಕಠಿಣ ವ್ಯಾಖ್ಯಾನದ ಆಧಾರದ ಮೇಲೆ ಅಫ್ಘಾನಿಸ್ತಾನವನ್ನು ಆಳುತ್ತಿದೆ. ಅಧಿಕಾರದ ಹಿಡಿತವನ್ನು ತಮ್ಮ ಕೈಗೆ ತೆಗೆದುಕೊಂಡ ತಾಲಿಬಾನಿಗಳು, ಅಫ್ಘಾನಿಸ್ತಾನದ ಆರ್ಥಿಕ ಕುಸಿತಕ್ಕೆ ಕಾರಣರಾದರು.

ಇದನ್ನೂ ಓದಿ: Family Fight: ಹೆಂಡ್ತಿ ಯಾಕ್ ಹಿಂಗ್ ಕಾಡ್ತಿ ಅಂತ 80 ಅಡಿ ಮರವೇರಿದ ಗಂಡ! ಒಂದು ತಿಂಗಳಾದ್ರೂ ಕೆಳಕ್ಕೆ ಬರಲೇ ಇಲ್ಲ!

ಬಾಲಕಿಯರ ಶಾಲೆಗಳನ್ನು ಮುಚ್ಚಿದ್ದ ತಾಲಿಬಾನಿಗಳು

ಆಗಸ್ಟ್ 2021 ರಲ್ಲಿ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ನಂತರ ತಾಲಿಬಾನ್ ಮೊದಲು ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡಲು ಪ್ರಾರಂಭಿಸಿತು. ತಾಲಿಬಾನ್ ಸರ್ಕಾರವು ಹುಡುಗಿಯರಿಗಾಗಿ ಇರುವ ಪ್ರೌಢಶಾಲೆಗಳು ಮತ್ತು ಕಾಲೇಜುಗಳನ್ನು ಮೊದಲ ಹಂತದಲ್ಲಿ ಮುಚ್ಚಿತ್ತು. ಆದರೆ, ದೇಶದಲ್ಲಿ ಮಹಿಳೆಯರ ಪ್ರತಿಭಟನೆಗಳು ತೀವ್ರವಾದ ಬೆನ್ನಲ್ಲಿಯೇ 6ನೇ ತರಗತಿಯವರೆಗೆ ಮಹಿಳೆಯರಿಗೂ ಶಾಲೆಯನ್ನು ತೆರೆಯಲು ಅನುಮತಿ ನೀಡಲಾಗಿತ್ತು.

ಮಹಿಳಾ ಉನ್ನತ ಶಿಕ್ಷಣದ ವಿರುದ್ಧ ಫರ್ಮಾನು

ಅಫ್ಘಾನಿಸ್ತಾನದ ಗೃಹ ಸಚಿವ ಮತ್ತು ತಾಲಿಬಾನ್‌ನ ಸಹ-ಉಪ ನಾಯಕ ಸಿರಾಜುದ್ದೀನ್ ಹಕ್ಕಾನಿ ಅವರು ಹೈಸ್ಕೂಲ್ ತೆರೆಯುವ ಭರವಸೆ ನೀಡಿದ್ದರು. ಆದರೆ ಇದೀಗ ಉನ್ನತ ಶಿಕ್ಷಣದ ವಿರುದ್ಧ ಹೊಸ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಅದರೊಂದಿಗೆ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಬದುಕು ಇನ್ನಷ್ಟು ನರಕವಾಗುವುದು ನಿಶ್ಚಿತವಾಗಿದೆ.

ಪುರುಷರಿಲ್ಲದೇ ಮಹಿಳೆಯರು ಹೊರಹೋಗುವಂತಿಲ್ಲ

ಅಫ್ಘಾನಿಸ್ತಾನದ ಮಹಿಳೆಯರು ಈಗ ಪುರುಷ ಸಂಗಾತಿಯಿಲ್ಲದೆ ತಮ್ಮ ಮನೆಗಳನ್ನು ತೊರೆಯುವುದನ್ನು ನಿರ್ಬಂಧಿಸಲಾಗಿದೆ. ಈ ಹಿಂದೆ ಅಧಿಕೃತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರಿಗೆ ನಿರ್ಬಂಧ ವಿಧಿಸಲಾಗಿತ್ತು. ಆರನೇ ತರಗತಿಗಿಂತ ಹೆಚ್ಚಿನ ವಿದ್ಯಾರ್ಥಿನಿಯರಿಗೆ ಶಾಲೆ, ಕಾಲೇಜು ಅಥವಾ ವಿಶ್ವವಿದ್ಯಾನಿಲಯಗಳಿಗೆ ಹೋಗಲು ಅವಕಾಶವಿಲ್ಲ. ತಾಲಿಬಾನ್ ನಾಯಕರು ಮಹಿಳೆಯರನ್ನು ಎಲ್ಲವನ್ನೂ ಒಳಗೊಳ್ಳುವ ಬುರ್ಖಾದಿಂದ ಮುಚ್ಚಿಕೊಳ್ಳುವಂತೆ ಆಗ್ರಹ ಮಾಡಿದ್ದಾರೆ.

ಪಾರ್ಕ್‌ನಲ್ಲೂ ಮಹಿಳೆಯರಿಗೆ ನಿರ್ಬಂಧ

ತಾಲಿಬಾನ್ ಆಡಳಿತವು ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಮಹಿಳೆಯರು ಹಾಗೂ ಪುರುಷರು ಜೊತೆಯಾಗಿ ಹೋಗುವಂತಿಲ್ಲ ಎಂದು ಹೇಳಿದೆ. ಹೊಸ ತೀರ್ಪಿನ ಪ್ರಕಾರ, ಪುರುಷರು ಈಗ ಬುಧವಾರದಿಂದ ಶನಿವಾರದವರೆಗೆ ಮತ್ತು ಮಹಿಳೆಯರು ಭಾನುವಾರದಿಂದ ಮಂಗಳವಾರದವರೆಗೆ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಹೋಗಲು ಸಾಧ್ಯವಾಗುತ್ತದೆ ಎಂದು ಸುದ್ದಿ ಸಂಸ್ಥೆ ಸ್ಪುಟ್ನಿಕ್ ವರದಿ ಮಾಡಿದೆ.

ಇದನ್ನೂ ಓದಿ: Economic Crisis: ಇತ್ತ ಉಕ್ರೇನ್ ಯುದ್ಧ ಮುಂದುವರಿಕೆ, ಅತ್ತ ಯೂರೋಪ್ ಆರ್ಥಿಕತೆ ಕುಸಿತ! ಮುಂದೇನು ಗತಿ?

ಆರ್ಥಿಕವಾಗಿ ಸಂಕಷ್ಟದಲ್ಲಿರುವ ಆಘ್ಘಾನ್

ದೇಶಕ್ಕೆ ಅಂತರಾಷ್ಟ್ರೀಯ ನೆರವು ಸ್ಥಗಿತಗೊಂಡಿರುವುದರಿಂದ ಆಫ್ಘನ್ನರು ಬಡತನ ಮತ್ತು ಆಹಾರದ ಅಭದ್ರತೆಯ ನಡುವೆ ಬದುಕುತ್ತಿದ್ದಾರೆ.  ಪಾಕಿಸ್ತಾನ ಮತ್ತು ಚೀನಾವನ್ನು ಹೊರತುಪಡಿಸಿ ಯಾವುದೇ ರಾಷ್ಟ್ರವು ಕಾಬೂಲ್‌ನಲ್ಲಿನ ಆಡಳಿತದೊಂದಿಗೆ ಔಪಚಾರಿಕ ಅಥವಾ ಅನೌಪಚಾರಿಕವಾಗಿ ಐಕಮತ್ಯವನ್ನು ವ್ಯಕ್ತಪಡಿಸಿಲ್ಲ.
Published by:Annappa Achari
First published: