Afghanistan Taliban: ಹಿಂದೂ ಸಿಖ್ ಬಾಂಧವರೇ, ಅಪ್ಘನ್​ಗೆ ವಾಪಸ್ ಬನ್ನಿ; ತಾಲಿಬಾನ್ ಮನವಿ

ಅಪಘಾನಿಸ್ತಾನದಲ್ಲಿ ಅಲ್ಲಿನ ಅಲ್ಪಸಂಖ್ಯಾತ ಸಮುದಾಯದ ಮೇಲೆ ಇಂತಹ ಹಲವು ದಾಳಿಗಳು ನಡೆದ ಘಟನೆ ವರದಿಯಾಗುತ್ತಲೇ ಇವೆ.  ಮಾರ್ಚ್ 2020 ರಲ್ಲಿ, ಕಾಬೂಲ್‌ನ ಶಾರ್ಟ್ ಬಜಾರ್ ಪ್ರದೇಶದ ಶ್ರೀ ಗುರು ಹರ್ ರಾಯ್ ಸಾಹಿಬ್ ಗುರುದ್ವಾರದಲ್ಲಿ ಮಾರಣಾಂತಿಕ ದಾಳಿ ನಡೆಯಿತ್ತು.  

ತಾಲಿಬಾನ್ ನಾಯಕರು (ಸಂಗ್ರಹ ಚಿತ್ರ)

ತಾಲಿಬಾನ್ ನಾಯಕರು (ಸಂಗ್ರಹ ಚಿತ್ರ)

 • Share this:
  ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಭದ್ರತಾ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ ಎಂದು ತಾಲಿಬಾನ್ (Taliban) ಘೋಷಿಸಿದ್ದು ಅಲ್ಲಿಯ ಅಲ್ಪಸಂಖ್ಯಾತರಾದ ಹಿಂದೂಗಳು ಮತ್ತು ಸಿಖ್ಖರು (Hindu And Sikh Community)  ದೇಶಕ್ಕೆ ಮರಳುವಂತೆ ಒತ್ತಾಯ ಮಾಡಿದೆ. ತಾಲಿಬಾನ್ ರಾಜ್ಯ ಸಚಿವರ ಕಚೇರಿಯ ಮಹಾನಿರ್ದೇಶಕ ಡಾ ಮುಲ್ಲಾ ಅಬ್ದುಲ್ ವಾಸಿ ಜುಲೈ 24 ರಂದು ಅಫ್ಘಾನಿಸ್ತಾನದ (Afghanistan Updates) ಹಿಂದೂ ಮತ್ತು ಸಿಖ್ ಕೌನ್ಸಿಲ್‌ನ ಹಲವಾರು ಸದಸ್ಯರನ್ನು ಭೇಟಿಯಾಗಿದ್ದಾರೆ.  ಕಾಬೂಲ್‌ನಲ್ಲಿ ಹಿಂದೂ ಮತ್ತು ಸಿಖ್ ನಾಯಕರ ನಿಯೋಗವನ್ನು ಭೇಟಿ ಮಾಡಿ ವಿವಿಧ ಸಮಸ್ಯೆಗಳಿಂದಾಗಿ ದೇಶವನ್ನು ತೊರೆದ ಎಲ್ಲಾ ಭಾರತೀಯ ಮತ್ತು ಸಿಖ್ ಬಾಂಧವರು ಈಗ ಅಫ್ಘಾನಿಸ್ತಾನಕ್ಕೆ ಮರಳಬಹುದು ಎಂದು ವಿನಂತಿಯನ್ನೂ ಮಾಡಿದ್ದಾರೆ.  Taliban Requests ,

  ಜೂನ್ 18 ರಂದು ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ (ISKP) ಕಾಬೂಲ್‌ನ ಕಾರ್ಟೆ ಪರ್ವಾನ್ ಗುರುದ್ವಾರದ ಮೇಲೆ ದಾಳಿ ಮಾಡಿದ್ದು, ಮಾರಣಾಂತಿಕ ದಾಳಿಯ ಸಮಯದಲ್ಲಿ ಸಿಖ್ ಸೇರಿದಂತೆ ಇಬ್ಬರು ಪ್ರಾಣ ಕಳೆದುಕೊಂಡಿದ್ದರು.

  ಆದರೆ ತಾಲಿಬಾನ್ ಪ್ರಕಣೆ ಹೇಳೋದೇನು?
  ಆದರೆ ತಾಲಿಬಾನ್ ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಕಾಬೂಲ್‌ನ ಗುರುದ್ವಾರದ ಮೇಲೆ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯದ (ISKP) ದಾಳಿಯನ್ನು ತಡೆಗಟ್ಟಿದ್ದಕ್ಕಾಗಿ ಸಿಖ್ ನಾಯಕರು ತಾಲಿಬಾನ್‌ಗೆ ಧನ್ಯವಾದ ಅರ್ಪಿಸಿದ್ದಾರೆ.

  ಗುರುದ್ವಾರಕ್ಕೆ ನುಗ್ಗಿದ್ದ ಹಿಂಸಾಕೋರರು
  ಮೂಲಗಳ ಪ್ರಕಾರ ದಾಳಿಕೋರರು ಆವರಣವನ್ನು ಪ್ರವೇಶಿಸಿದಾಗ ಸುಮಾರು 25 ರಿಂದ 30 ಜನರು ತಮ್ಮ ಬೆಳಗಿನ ಪ್ರಾರ್ಥನೆಗಾಗಿ ಗುರುದ್ವಾರ ಸಂಕೀರ್ಣದೊಳಗೆ ಹಾಜರಿದ್ದರು. ಸುಮಾರು 10-15 ಜನರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

  ಅಫ್ಘಾನಿಸ್ತಾನದಲ್ಲಿ ಸಿಖ್ ಸಮುದಾಯ ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರು ಅಫ್ಘಾನಿಸ್ತಾನದಲ್ಲಿ ಹಿಂಸಾಚಾರಕ್ಕೆ ಗುರಿಯಾಗಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ 15 ರಿಂದ 20 ಭಯೋತ್ಪಾದಕರು ಕಾಬೂಲ್‌ನ ಕಾರ್ಟ್-ಎ-ಪರ್ವಾನ್ ಜಿಲ್ಲೆಯ ಗುರುದ್ವಾರಕ್ಕೆ ನುಗ್ಗಿ ಕಾವಲುಗಾರರನ್ನು ಕಟ್ಟಿಹಾಕಿದ್ದರು. 

  ಇದನ್ನೂ ಓದಿ: Kargil Vijay Diwas: ಭಾರತೀಯ ಸೇನೆ ಪಾಕಿಸ್ತಾನದ ಹುಟ್ಟಡಗಿಸಿದ ಕ್ಷಣವದು ಕಾರ್ಗಿಲ್ ವಿಜಯ ದಿವಸ!

  27 ಸಿಖ್ಖರು ಮೃತಪಟ್ಟಿದ್ದರು
  ಅಪಘಾನಿಸ್ತಾನದಲ್ಲಿ ಅಲ್ಲಿನ ಅಲ್ಪಸಂಖ್ಯಾತ ಸಮುದಾಯದ ಮೇಲೆ ಇಂತಹ ಹಲವು ದಾಳಿಗಳು ನಡೆದ ಘಟನೆ ವರದಿಯಾಗುತ್ತಲೇ ಇವೆ.  ಮಾರ್ಚ್ 2020 ರಲ್ಲಿ, ಕಾಬೂಲ್‌ನ ಶಾರ್ಟ್ ಬಜಾರ್ ಪ್ರದೇಶದ ಶ್ರೀ ಗುರು ಹರ್ ರಾಯ್ ಸಾಹಿಬ್ ಗುರುದ್ವಾರದಲ್ಲಿ ಮಾರಣಾಂತಿಕ ದಾಳಿ ನಡೆಯಿತ್ತು.  ಇದರಲ್ಲಿ 27 ಸಿಖ್ಖರು ಮೃತಪಟ್ಟಿದ್ದರು. ಅಲ್ಲದೇ ಹಲವರು ಗಾಯಗೊಂಡಿದ್ದರು. ಇಸ್ಲಾಮಿಕ್ ಸ್ಟೇಟ್ ಉಗ್ರರು ದಾಳಿಯ ಹೊಣೆ ಹೊತ್ತುಕೊಂಡಿತ್ತು.

  ಇದನ್ನೂ ಓದಿ: Presidential Place: ವಿವಿಧ ದೇಶಗಳ ರಾಷ್ಟ್ರಪತಿ ಭವನಗಳು ಹೇಗಿವೆ? ಇಲ್ಲಿದೆ ನೋಡಿ

  ಈ ಎಲ್ಲ ದಾಳಿಗಳ ನಡುವೆಯೇ ಭಯೋತ್ಪಾದಕ ದಾಳಿಯಲ್ಲಿ ಹಾನಿಗೊಳಗಾದ ಕಾಬೂಲ್‌ನ ಗುರುದ್ವಾರ ಕಾರ್ಟೆ ಪರ್ವಾನ್ ಅನ್ನು ನವೀಕರಿಸಲು ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನ ಸರ್ಕಾರ ನಿರ್ಧರಿಸಿದೆ. ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಲು ಆಂತರಿಕ ಸಚಿವಾಲಯದ (MoI) ಉನ್ನತ ಮಟ್ಟದ ನಿಯೋಗವು ಗುರುದ್ವಾರಕ್ಕೆ ಹಲವಾರು ಬಾರಿ ಭೇಟಿ ನೀಡಿದೆ ಎಂದು ಮೂಲಗಳು ಬಹಿರಂಗಪಡಿಸಿವೆ.

  ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರದಿಂದ ವಿವಿಧ ಕಾರ್ಯಕ್ರಮ
  ಈ ವಾರ ಅಫ್ಘಾನಿಸ್ತಾನ ಸಮ್ಮೇಳನಕ್ಕಾಗಿ 20 ಕ್ಕೂ ಹೆಚ್ಚು ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಒಂದೆಡೆ ಸೇರಿಸುತ್ತಿದೆ. ಭಾಗವಹಿಸುವವರಲ್ಲಿ ಯುದ್ಧ ಪೀಡಿತ ದೇಶದ ಆಡಳಿತ ತಾಲಿಬಾನ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಪ್ರತಿನಿಧಿಗಳು ಸೇರಿದ್ದಾರೆ.

  ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಮರಳಿದ ಮೊದಲ ವರ್ಷವನ್ನು ಆಚರಿಸಲು ತಾಲಿಬಾನ್ ತಯಾರಿ ನಡೆಸುತ್ತಿರುವಾಗ ಎರಡು ದಿನಗಳ ಅಂತರರಾಷ್ಟ್ರೀಯ ಕಾರ್ಯಕ್ರಮವು ಮಂಗಳವಾರದವರೆಗೆ ನಡೆಯಲಿದೆ.
  Published by:guruganesh bhat
  First published: