Afghanistan: ಅಫ್ಘಾನಿಸ್ತಾನದ ಭೂಮಿಯೊಳಗಿಗೆ 1 ಟ್ರಿಲಿಯನ್ ಡಾಲರ್ ಮೊತ್ತದ ಸಂಪತ್ತು! ತಾಲಿಬಾನಿಗಳಿಗೆ ಇದು ಗೊತ್ತಾ?

ಸರಿ ಸುಮಾರು 1 ಟ್ರಿಲಿಯನ್​ ಮೌಲ್ಯದ ಖನಿಜ ನಿಕ್ಷೇಪಗಳು ಇದ್ದು ಜೊತೆಗೆ ಲಿಥಿಯಂನ ದೊಡ್ಡ ನಿಕ್ಷೇಪವೊಂದು ಅಫ್ಘಾನ್​ ಭೂಮಿ ಅಡಗಿಸಿಕೊಂಡಿದೆ.

ಅಫ್ಘಾನ್​​​ನಲ್ಲಿ 2013ರಲ್ಲಿ ಪತ್ತೆಯಾದ ತಾಮ್ರದ ನಿಕ್ಷೇಪ

ಅಫ್ಘಾನ್​​​ನಲ್ಲಿ 2013ರಲ್ಲಿ ಪತ್ತೆಯಾದ ತಾಮ್ರದ ನಿಕ್ಷೇಪ

 • Share this:
  ಎರಡು ದಶಕಗಳ ಬಳಿಕ ಅಫ್ಘಾನ್ ಅಧಿಕಾರ ಪಡೆಯುವಲ್ಲಿ ತಾಲಿಬಾನ್​ ಯಶಸ್ವಿಯಾಗಿದೆ. ಜಗತ್ತಿನ ಮುಂದೆ ಬಡ ದೇಶ ಎಂದು ಬಿಂಬಿತವಾಗಿರುವ ಅಫ್ಘಾನ್​​ನಲ್ಲಿ ಖನಿಜಗಳ ಸಾಗರವೇ ಇದ್ದು, ಈ ಖನಿಜ ಸಂಪತ್ತನನು ತಾಲಿಬಾನ್​ ಹೇಗೆ ಉಪಯೋಗಿಸಿಕೊಳ್ಳಲಿದೆ ಎಂಬ ಪ್ರಶ್ನೆ ಈಗ ಮೂಡಿದೆ. ಅಮೆರಿಕದ ಸೇನಾ ಪಡೆ ಮತ್ತು ಭೂ ಗರ್ಭ ಶಾಸ್ತ್ರಜ್ಞರು ಅಫ್ಘಾನ್​ನಲ್ಲಿರುವ ಖನಿಜ ಸಂಪತ್ತಿನ ಬಗ್ಗೆ ತಿಳಿಸಿದ್ದಾರೆ. ದೇಶದಲ್ಲಿ ಕಬ್ಬಿಣ, ತಾಮ್ರ ಮತ್ತು ಚಿನ್ನದ ಖನಿಜ ಸಂಪತ್ತಿದೆ. ಸರಿ ಸುಮಾರು 1 ಟ್ರಿಲಿಯನ್​ ಮೌಲ್ಯದ ಖನಿಜ ನಿಕ್ಷೇಪಗಳು ಇದೆ. ಜೊತೆಗೆ ಲಿಥಿಯಂನ ದೊಡ್ಡ ನಿಕ್ಷೇಪವೊಂದು ಅಫ್ಘಾನ್​ ಭೂಮಿ ಅಡಗಿಸಿಕೊಂಡಿದೆ.

  ಈ ಕುರಿತು ಮಾತನಾಡಿರುವ ಎಕಾಲಾಜಿಕಲ್​ ಫ್ಯೂಚರ್​ ಗ್ರೂಪ್​ ವಿಜ್ಞಾನಿ ಮತ್ತು ಭದ್ರತಾ ತಜ್ಞರು, ಅಫ್ಘಾನಿಸ್ತಾನ ಅಮೂಲಗ್ಯ ಲೋಹಗಳಿಂದ ಕೂಡಿದ ಶ್ರೀಮಂತ ದೇಶವಾಗಿದ್ದು, 21 ನೇ ಶತಮಾನದ ಉದಯೋನ್ಮುಖ ಆರ್ಥಿಕತೆಗೆ ಇದು ಅವಶ್ಯವಾಗಿದೆ ಎಂದಿದ್ದಾರೆ.
  ಅಪಾರ ಸಂಪತ್ತನ್ನು ಹೊಂದಿದ್ದರೂ ಯಾಕೆ ಇನ್ನು ಇವು ಹೊರ ಬಂದಿಲ್ಲ ಎಂಬ ಕಾರಣಕ್ಕೆ ಉತ್ತರ ಅಫ್ಘಾನ್​ನಲ್ಲಿನ ಭದ್ರತಾ ಸವಾಲು, ಮೌಲಸೌಕರ್ಯ ಕೊರತೆ, ತೀವ್ರ ಬರಗಾಲ ಎನ್ನಲಾಗಿದೆ. ಸದ್ಯ ಈಗ ತಾಲಿಬಾನ್​ ವಶದಲ್ಲಿದ್ದರೂ ಈ ಖನಿಜಗಳು ಭೂಮಿಯಿಂದ ಹೊರಬರುವುದು ಅಸಾಧ್ಯ. ಇದೇ ಕಾರಣಕ್ಕೆ ಚೀನಾ, ಪಾಕಿಸ್ತಾನ ಹಾಗೂ ಭಾರತ ಈ ಬಗ್ಗೆ ಆಸಕ್ತಿವಹಿಸಿದೆ ಎಂದಿದ್ದಾರೆ.

  ಅಫ್ಘಾನ್​ ಸರ್ಕಾರಗಳು ಶೇ 90ರಷ್ಟು ಬಡತನದಲ್ಲಿದ್ದವು. ವಿಶ್ವ ಬ್ಯಾಂಕ್​ ನೆರವಿನ ನಂತರವೂ ಅಲ್ಲಿ ದುರ್ಬಲತೆ ಮತ್ತು ಅವಲಂಬನೆ ಹೆಚ್ಚಿದೆ ಎಂದು ಇತ್ತಿಚೆಗೆ ಅಮೆರಿಕದ ಕಾಂಗ್ರೆಷನಲ್​ ರಿಸರ್ಚ್​ ಸರ್ವಿಸ್​ ವರದಿ ಮಾಡಿದೆ.

  ಇನ್ನು ಇಲ್ಲಿ ಖಾಸಗಿ ವಲಯಗಳ ಅಭಿವೃದ್ಧಿ ನಿರೀಕ್ಷೆ ಮಾಡಬಹುದು ಅಂದರೆ ಅದು ಸಾಧ್ಯವಿಲ್ಲ ಕಾರಣ ಇಲ್ಲಿನ ವೈವಿಧ್ಯತೆಯು ಅಭದ್ರತೆ, ರಾಜಕೀಯ ಅಸ್ಥಿರತೆ, ದುರ್ಬಲ ಸಂಸ್ಥೆಗಳು, ಅಸಮರ್ಪಕ ಮೂಲಸೌಕರ್ಯ, ವ್ಯಾಪಕ ಭ್ರಷ್ಟಾಚಾರ ಮತ್ತು ಕಠಿಣ ವ್ಯಾಪಾರ ವಾತಾವರಣ ಖಾಸಗಿ ವಲಯಕ್ಕೆ ಉತ್ತಮ ಅವಕಾಶ ನೀಡುವುದಿಲ್ಲ
  ಸಂಪನ್ಮೂಲ ಹೊಂದಿದ್ದರೂ ದುರ್ಬಲ ಸರ್ಕಾರ ಹೊಂದಿದ್ದರೆ ಅವು ಶಾಪ ಎಂದೇ ಪರಿಗಣಿಸಲಾಗುತ್ತದೆ. ಏಕೆಂದರೆ ಈ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳುಲು ಸ್ಥಳೀಯ ಜನರಿಗೆ ಸಾಧ್ಯವಾಗದು. ಇದರಿಂದ ದೇಶದ ಆರ್ಥಿಕತೆಗೆ ಯಾವುದೇ ಪ್ರಯೋಜನಗಳು ಇಲ್ಲ ಎಂದು ಈ ಹಿಂದೆ ಸೋವಿಯತ್​ ಯೂನಿಯನ್​ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

  ಅಫ್ಘಾನಿಸ್ತಾನದಲ್ಲಿರುವ ಲಿಥಿಯಂ ನಿಕ್ಷೇಪಗಳಿದ್ದು, ಇದಕ್ಕೆ ವಿಶ್ವದ ಅತಿದೊಡ್ಡ ಮೀಸಲು ನೆಲೆಯಾದ ಬೊಲಿವಿಯಾದಲ್ಲಿ ಪ್ರತಿಸ್ಪರ್ಧಿಯಾಗಬಹುದು ಎಂದು ಯುಎಸ್ ಸರ್ಕಾರ ಅಂದಾಜಿಸಿದೆ.

  ಇದನ್ನು ಓದಿ: ಪಾಕಿಸ್ತಾನದಲ್ಲಿ ಸ್ವಾತಂತ್ರ್ಯ ದಿನದಂದೇ ಮಹಿಳಾ ಟಿಕ್​ಟಾಕರ್​ ಮೇಲೆ ದೌರ್ಜನ್ಯ

  ಅಫ್ಘಾನಿಸ್ತಾನವು ಕೆಲವು ವರ್ಷಗಳ ಕಾಲ ಶಾಂತತೆ ನೆಲೆಸಿ, ಅದರ ಖನಿಜ ಸಂಪನ್ಮೂಲಗಳ ಅಭಿವೃದ್ಧಿಗೆ ಅವಕಾಶ ನೀಡಿದರೆ, ಅದು ಒಂದು ದಶಕದೊಳಗೆ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಬಹುದು ಎಂದು ಅಮೆರಿಕದ ಯುಎಸ್ ಜಿಯಾಲಾಜಿಕಲ್ ಸರ್ವೇಯ ಮಿರ್ಜಾದ್ ಸೈನ್ಸ್ ನಿಯತಕಾಲಿಕೆಯಲ್ಲಿ ವರದಿ ಮಾಡಲಾಗಿದೆ.

  ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮಾಜಿ ನಿರ್ದೇಶಕ ಮೊಸಿನ್​ ಖಾನ್​ ಹೇಳುವ ಪ್ರಕಾರ, ಅಫ್ಘಾನ್​ನಲ್ಲಿ ಶಾಂತಿ ನೆಲೆಸುವುದಿಲ್ಲ, ಈ ಸಂಪತ್ತು ಕೂಡ ನೆಲದಲ್ಲೇ ಉಳಿದು ಹೋಗಲಿದೆ ಎಂದಿದ್ದಾರೆ.

  ಇನ್ನು ಈ ಖನಿಜ ಸಂಪತ್ತು ಹೊರ ತೆಗೆಯಲು ಹೆಚ್ಚಿನ ಹೂಡಿಕೆ, ತಂತ್ರಜ್ಞಾನದ ಜೊತೆಗೆ ಸಮಯದ ಅವಶ್ಯಕತೆ ಇದೆ. ಈ ಗಣಿಗಾರಿಕೆ ವಲಯವನ್ನು ಅಭಿವೃದ್ಧಿಪಡಿಸಲು ತಾಲಿಬಾನ್ ತನ್ನ ಹೊಸ ಶಕ್ತಿಯನ್ನು ಬಳಸುವ ಅವಕಾಶವಿದೆ ಎಂದು ಸ್ಕೂನೊವರ್ ತಿಳಿಸಿದ್ದಾರೆ.

  ಆಫ್ಘಾನಿಸ್ತಾನದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಕಷ್ಟವಾಗಿದ್ದು, ಅಲ್ಲದೇ ಖಾಸಗಿ ಹೂಡಿಕೆದಾರರು ಸವಾಲು ಎದುರಿಸಲು ಸಿದ್ದವಿಲ್ಲದಿರುವುದರಿಂದ ಈ ಖನಿಜ ಸಂಪತ್ತು ಹೊರ ತೆಗೆಯುವುದು ಸವಾಲಾಗಿದೆ.

  ತಾಲಿಬಾನ್​ ಚೀನಾದೊಂದಿಗೆ ಉತ್ತಮ ಸಂಬಂಧ ಹೊಂದಿದ್ದು, ಈ ಬಗ್ಗೆ ಚೀನಾ ಎಚ್ಚರಿಕೆ ಹೆಜ್ಜೆ ಇಡಲಿದೆಯಾ ಎಂಬುದನ್ನು ಕಾದು ನೀಡಬೇಕು. ಚೀನಾ ತಾಲಿಬಾನ್​ಗಳೊಂದಿಗೆ ಉದ್ಯಮದ ಪಾಲುದಾರಿಕೆ ಹೊಂದುವ ಬಗ್ಗೆ ಅನುಮಾನವಿದ್ದರೂ, ಅಸ್ಥಿರತೆ ಮುಂದುವರೆದಿದೆ. ಈ ಹಿಂದೆ ತಾಮ್ರದ ಯೋಜನೆಗೆ ಮುಂದಾಗಿತು ಆದರೂ ಅದು ವಿಫಲವಾಗಿತ್ತು.
  Published by:Seema R
  First published: