Afghanistan Crisis: ಇಂದು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದಿಳಿದ 145 ಮಂದಿ; ಈವರೆಗೆ 537 ಜನರ ಆಗಮನ

ಈವರೆಗೆ ಆಫ್ಘಾನಿಸ್ತಾನದಿಂದ 537 ಜನ ಭಾರತಕ್ಕೆ ಸುರಕ್ಷಿತವಾಗಿ ಮರಳಿದ್ದು, ಈ ಪೈಕಿ ಭಾನುವಾರ ಕಾಬೂಲ್ ವಿಮಾನ ನಿಲ್ದಾಣದಿಂದ 168 ಮಂದಿ ಬಂದಿದ್ದಾರೆ. ಅದರಲ್ಲಿ 7 ಜನ ಕನ್ನಡಿಗರು ಸುರಕ್ಷಿತವಾಗಿ ಮರಳಿದ್ದಾರೆ ಎಂದು ತಿಳಿದುಬಂದಿದೆ.

ಕಾಬೂಲ್​​ನಿಂದ ಭಾರತಕ್ಕೆ ಬಂದಿಳಿದ ಜನರು

ಕಾಬೂಲ್​​ನಿಂದ ಭಾರತಕ್ಕೆ ಬಂದಿಳಿದ ಜನರು

  • Share this:
ನವದೆಹಲಿ(ಆ. 23): ತಾಲಿಬಾನ್ ಅಧಿಕಾರಕ್ಕೆ ಬರುತ್ತಲೇ ಅಫ್ಘಾನಿಸ್ತಾನದಿಂದ ಹೊರಹೋಗಲು ಸಾವಿರಾರು ಜನರು ಪ್ರಯತ್ನಿಸುತ್ತಿದ್ದಾರೆ. ಭಾರತ, ಅಮೆರಿಕ ಸೇರಿದಂತೆ ವಿವಿಧ ದೇಶಗಳು ತಮ್ಮ ನಾಗರಿಕರನ್ನು ಅಫ್ಘಾನಿಸ್ತಾನದಿಂದ ವಾಪಸ್ ಕರೆಸಿಕೊಳ್ಳುವ ಪ್ರಯತ್ನದಲ್ಲಿವೆ. ಭಾರತ ವಿವಿಧ ರೀತಿಯಲ್ಲಿ ತನ್ನ ನಾಗರಿಕರನ್ನ ಅಲ್ಲಿಂದ ತೆರವುಗೊಳಿಸಿ ವಾಪಸ್ ಕರೆಸಿಕೊಳ್ಳುತ್ತದೆ. ಸೋಮವಾರ ಬೆಳಿಗ್ಗೆ ಎರಡು ವಿಮಾನಗಳ ಮೂಲಕ ಒಟ್ಟು 145 ಜನ‌ ಅಫ್ಘಾನಿಸ್ತಾನದಿಂದ ಭಾರತಕ್ಕೆ ಆಗಮಿಸಿದ್ದಾರೆ. ಇದರಿಂದ ಈವರೆಗೆ ಆಫ್ಘಾನಿಸ್ತಾನದಿಂದ ಭಾರತಕ್ಕೆ ಸುರಕ್ಷಿತವಾಗಿ ಮರಳಿದವರ ಸಂಖ್ಯೆ 537ಕ್ಕೆ ಏರಿದೆ. ಇದರಲ್ಲಿ ಕೆಲವರು ವಿದೇಶಿಗರೂ ಇದ್ದಾರೆ. ಅವರು ಭಾರತಕ್ಕೆ ಬಂದು ನಂತರ ಅವರವರ ದೇಶಕ್ಕೆ ಮರಳುತ್ತಿದ್ದಾರೆ.

ಏಳು ಮಂದಿ ಕನ್ನಡಿಗರ ರಕ್ಷಣೆ

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ ಅಲ್ಲಿನ‌ ಪರಿಸ್ಥಿತಿ ಭೀಕರವಾಗಿದ್ದು, ವಿದೇಶಿಗರು ಮಾತ್ರವಲ್ಲದೆ ಅಫ್ಘಾನಿಸ್ತಾನಿಗಳೇ ದೇಶ ಬಿಟ್ಟು ತೆರಳುತ್ತಿದ್ದಾರೆ. ಇದರಿಂದ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಲ್ತುಳಿತ ಮತ್ತು ಗುಂಡಿನ ದಾಳಿ‌ ಕೂಡ ನಡೆದಿದೆ. ಇಂಥ ಧಾರುಣ ಪರಿಸ್ಥಿತಿಯಿಂದ ಈವರೆಗೆ ಆಫ್ಘಾನಿಸ್ತಾನದಿಂದ 537 ಜನ ಭಾರತಕ್ಕೆ ಸುರಕ್ಷಿತವಾಗಿ ಮರಳಿದ್ದು, ಈ ಪೈಕಿ ಭಾನುವಾರ ಕಾಬೂಲ್ ವಿಮಾನ ನಿಲ್ದಾಣದಿಂದ 168 ಮಂದಿ ಬಂದಿದ್ದಾರೆ. ಅದರಲ್ಲಿ 7 ಜನ ಕನ್ನಡಿಗರು ಸುರಕ್ಷಿತವಾಗಿ ಮರಳಿದ್ದಾರೆ ಎಂದು ತಿಳಿದುಬಂದಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ಗಳಿಂದ ಘರ್ಷಣೆ ಆರಂಭವಾದ ವೇಳೆ ಕನ್ನಡಿಗರೂ ಸಹ ಕಾಬೂಲ್​ನಲ್ಲಿ ಸಿಲುಕಿದ್ದರು. ಕಳೆದ ಭಾನುವಾರವೇ 2 ಸೇನಾ ವಿಮಾನವನ್ನು ಕಾಬೂಲ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳುಹಿಸಿದ್ದ ಭಾರತ ಸರ್ಕಾರ ರಾಯಭಾರಿ ಕಚೇರಿ ಅಧಿಕಾರಿಗಳು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಜನರನ್ನು ರಕ್ಷಿಸಿತ್ತು. ಇದರಲ್ಲಿ ಅನೇಕರು ಕನ್ನಡಿಗರೂ ಸಹ ಇದ್ದರು. ಇದೀಗ ಇಂದೂ ಸಹ ಅಫ್ಘಾನಿಸ್ತಾನದಿಂದ ರಕ್ಷಿಸಲ್ಪಟ್ಟವರಲ್ಲಿ 7 ಜನ ಕನ್ನಡಿಗರಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:Morning Digest: ಇಂದಿನಿಂದ ಶಾಲೆಗಳು ಶುರು, ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕೂಟದಲ್ಲಿ ಭಾರತಕ್ಕೆ ಬೆಳ್ಳಿ; ಇಂದಿನ ಪ್ರಮುಖ ಸುದ್ದಿಗಳಿವು

ದಿನೇಶ್ ರೈ , ಜಗದೀಶ್ ಪೂಜಾರಿ, ಡಿಸೋಜ ಸೇರಿ ಮತ್ತೆ ಐವರನ್ನು ರಕ್ಷಿಸಲಾಗಿದ್ದು, ಈ ಎಲ್ಲರೂ ಮಂಗಳೂರು ಮೂಲದ ನಿವಾಸಿಗಳು ಎನ್ನಲಾಗಿದೆ. ಇವರು ಕಾಬೂಲ್ ಏರ್‌ಪೋರ್ಟ್ ನಲ್ಲಿ ಒಎಸ್​ಎಸ್​ ಎಂಬ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸ್ತಿದ್ದರು. ಆದರೆ, ಕಾಬೂಲ್ ದೀಢಿರೆಂದು ತಾಲಿಬಾನಿಗಳ ವಶವಾಶ ಕಾರಣ ವಿಚಲಿತರಾಗಿದ್ದರು. ಆದರೆ, ಇದೀಗ ಇವರನ್ನೂ ಸಹ ರಕ್ಷಿಸುವಲ್ಲಿ ಭಾರತ ಸರ್ಕಾರ ಯಶಸ್ವಿಯಾಗಿದೆ.
ಅಫ್ಘಾನಿಸ್ತಾನದಿಂದ ರಕ್ಷಿಸಲ್ಪಟ್ಟ ಎಲ್ಲರನ್ನೂ ವಿಮಾನ ನಿಲ್ದಾಣದಲ್ಲಿ ಆರ್​ಟಿ ಪಿಸಿಆರ್ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದ್ದು, ಅದರ ರಿಪೋರ್ಟ್ ಬಂದ ಬಳಿಕ ಅವರ ಊರುಗಳಿಗೆ ಕಳುಹಿಸಲು ಸಿದ್ದತೆ ನಡೆಸಲಾಗುತ್ತಿದೆ. ಭಾಹಶಃ ನಾಳೆ ಕೊರೋನಾ ವರದಿ ಸಿಗುವ ಸಾಧ್ಯತೆ ಇದ್ದು, ನಾಳೆಯೇ ಎಲ್ಲರೂ ದೆಹಲಿಯಿಂದ ಕರ್ನಾಟಕಕ್ಕೆ ಕರೆತರುವ ಸಾಧ್ಯತೆ ಇದೆ ಎಂದು ಎಂಇಎಯಿಂದ ಕರ್ನಾಟಕ ನೋಡಲ್ ಅಧಿಕಾರಿಗೆ ಮಾಹಿತಿ‌ ರವಾನೆಯಾಗಿದೆ ಎನ್ನಲಾಗಿದೆ.

ಇದಲ್ಲದೆ, ಮತ್ತೊಬ್ಬ ಕನ್ನಡಿಗ ಸದ್ಯ ಕಾಬೂಲ್ ಏರ್ ಪೋರ್ಟ್ ನಲ್ಲೇ ಸಿಲುಕಿದ್ದು, ಶೀಘ್ರದಲ್ಲೇ ಆತನನ್ನೂ ರಕ್ಷಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಬ್ಬ ಕನ್ನಡಿಗ ಕಾಬೂಲ್ ನಿಂದ ಇಟಲಿಗೆ ಪ್ರಯಾಣ ಮಾಡಿದ್ದಾರೆ ಎಂದೂ ತಿಳಿದುಬಂದಿದೆ.

ಇದನ್ನೂ ಓದಿ:Karnataka Weather Today: ಇಂದು-ನಾಳೆ ಕರ್ನಾಟಕದಲ್ಲಿ ಭಾರೀ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ಈ ನಡುವೆ ಅಫ್ಘಾನಿಸ್ತಾನದ ಅಲ್ಪಸಂಖ್ಯಾತ ಸಮುದಾಯದ ಪ್ರಜೆಗಳಿಗೂ ಭಾರತಕ್ಕೆ ಬರಲು ಅವಕಾಶ ನೀಡಲಾಗಿದೆ. ಹಲವು ಆಫ್ಘನ್ ಸಿಖ್ ಮತ್ತು ಹಿಂದೂಗಳು ಭಾರತಕ್ಕೆ ಬರಲು ಹಾತೊರೆಯುತ್ತಿದ್ದಾರೆ. ಆದರೆ, ತಾವೆಲ್ಲರೂ ಅಫ್ಘನ್ನರಾಗಿರುವುದಿರಂದ ಭಾರತಕ್ಕೆ ಹೋಗದಿರಿ ಎಂದು ತಾಲಿಬಾನ್ ತಾಕೀತು ಮಾಡುತ್ತಿದೆ ಎಂದೂ ವರದಿಯಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
Published by:Latha CG
First published: