Afghanistan: ಅಫ್ಘಾನ್ ನಿರಾಶ್ರಿತರಿಂದ ದೆಹಲಿ UNHCR ಕಚೇರಿ ಎದುರು ಪ್ರತಿಭಟನೆ

ಅಫಘಾನ್ ನಿರಾಶ್ರಿತರು ಯುಎನ್ಎಚ್​ಆರ್​ಸಿ (UNHCR) ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ಅಫಘಾನ್ ನಿರಾಶ್ರಿತರು ಯುಎನ್ಎಚ್​ಆರ್​ಸಿ (UNHCR) ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ಭಾರತದಲ್ಲಿ ಸುಮಾರು 21,000 ಅಫಘಾನ್ ನಿರಾಶ್ರಿತರಿದ್ದಾರೆ, ಅವರಲ್ಲಿ 7,000 ಜನರು ಮಾತ್ರ ಮಾನ್ಯ ದಾಖಲೆಗಳು (ನೀಲಿ ಕಾಗದ ಪತ್ರಗಳನ್ನು  valid documents, blue paper) ಅಥವಾ ಕಾರ್ಡ್‌ಗಳನ್ನು ಹೊಂದಿದ್ದಾರೆ.

 • Share this:

  ತಾಲಿಬಾನ್ ಉಗ್ರ ಸಂಘಟನೆಯು ಯುದ್ಧ-ಪೀಡಿತ ಅಫ್ಘಾನಿಸ್ತಾನ ರಾಷ್ಟ್ರವನ್ನು ಸ್ವಾಧೀನಪಡಿಸಿಕೊಂಡ ನಂತರ ಅಫ್ಘಾನಿಸ್ತಾನದಲ್ಲಿ ಬಿಕ್ಕಟ್ಟು ಉಂಟಾಗಿದ್ದು, ದಿನದಿಂದ ದಿನಕ್ಕೆ ದೇಶ ತೊರೆಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಭಾರತದಲ್ಲಿ ವಾಸವಾಗಿರುವ ಹೆಚ್ಚಿನ ಸಂಖ್ಯೆಯ ಅಫಘಾನ್ ನಿರಾಶ್ರಿತರು ಯುಎನ್ಎಚ್​ಆರ್​ಸಿ (UNHCR) ಕಚೇರಿಯ ಮುಂದೆ ಸೋಮವಾರ ವಿಶ್ವಸಂಸ್ಥೆ (UN) ಹಾಗೂ ಅದರ ಇತರೇ ಅಂಗ ಸಂಸ್ಥೆಗಳಿಂದ ವಲಸಿಗರ ಪರವಾಗಿ "ಬೆಂಬಲ ಪತ್ರಗಳನ್ನು" ಬಿಡುಗಡೆ ಮಾಡಬೇಕು ಹಾಗೂ ಇತರ ದೇಶಗಳಿಗೆ ವಲಸೆ ಹೋಗುವಂತಹ ಉತ್ತಮ ಅವಕಾಶಕ್ಕೆ ನೆರವಿಗೆ ನಿಲ್ಲಬೇಕು ಎಂದು ಪ್ರತಿಭಟನಾಕಾರರು ವಸಂತ್​ ವಿಹಾರದಲ್ಲಿ ಇರುವ ಕಚೇರಿಯ ಎದುರು ಒತ್ತಾಯಿಸಿದರು.


  ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮವು ‘We want future’, ‘We want justice’,'ಇನ್ನು ಮೌನ ಸಾಕು' ಅನ್ಯಾಯದ ವಿರುದ್ದ ದನಿ ಎತ್ತಬೇಕು ಎಂಬ ಘೋಷಣೆಗಳನ್ನು ಕೂಗಿದರು ಮತ್ತು ಪರಸ್ಪರ ಚಪ್ಪಾಳೆ ತಟ್ಟಿ ವಿಶೇಷ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಬ್ಯಾನರ್​, ಭಿತ್ತಿ ಪತ್ರಗಳನ್ನು ಹಿಡಿದು ನಿಂತಿದ್ದ ಸಾಕಷ್ಟು ಮಂದಿ ಮಹಿಳೆಯರು ಭಾಗವಹಿಸಿದ್ದರು. 'ಯುಎನ್ ಜಿನೀವಾ ಅಫ್ಘಾನ್ ನಿರಾಶ್ರಿತರಿಗೆ ಸಹಾಯ ಮಾಡಿ' ಮತ್ತು 'ಎಲ್ಲಾ ಅಫಘಾನ್ ನಿರಾಶ್ರಿತರಿಗೆ ನಿವಾಸಿ ವೀಸಾಗಳನ್ನು ನೀಡಿ  ' ಈ ಪ್ರತಿಭಟನೆಯ ನೇತೃತ್ವವನ್ನು ಅಫಘಾನ್ ಒಗ್ಗಟ್ಟಿನ ಸಮಿತಿ (ಎಎಸ್‌ಸಿ) ಆಯೋಜಿಸಿತ್ತು ಮತ್ತು ಪ್ರತಿಭಟನಾಕಾರರು ಮಧ್ಯಾಹ್ನದವರೆಗೂ ಘೋಷಣೆಗಳನ್ನು ಕೂಗುತ್ತಿದ್ದರು, ಪ್ರತಿಭಟನೆಯು ಕನಿಷ್ಠ ಎರಡು ಮೂರು ದಿನಗಳವರೆಗೆ ಮುಂದುವರಿಯುತ್ತದೆ ಎಂದು ಅವರ ನಾಯಕರೊಬ್ಬರು ಹೇಳಿದರು.


  ಪ್ರತಿಭಟನಾಕಾರರು ದೆಹಲಿಯ ಲಜಪತ್ ನಗರದ 'ಲಿಟಲ್ ಕಾಬೂಲ್', (‘Little Kabul’) ಭೋಗಲ್, ನೋಯ್ಡಾ, ಗ್ರೇಟರ್ ನೋಯ್ಡಾ, ಫರಿದಾಬಾದ್ ಮತ್ತು ಇತರ ಸ್ಥಳಗಳಿಂದ ಬಂದಿದ್ದರು. ಸಮಿತಿಯ ಮುಖ್ಯಸ್ಥ ಅಹ್ಮದ್ ಜಿಯಾ ಘನಿ (Ahmad Zia Ghani) ಮಾತನಾಡಿ, ಭಾರತದಲ್ಲಿ ಸುಮಾರು 21,000 ಅಫಘಾನ್ ನಿರಾಶ್ರಿತರಿದ್ದಾರೆ, ಅವರಲ್ಲಿ 7,000 ಜನರು ಮಾತ್ರ ಮಾನ್ಯ ದಾಖಲೆಗಳು (ನೀಲಿ ಕಾಗದ ಪತ್ರಗಳನ್ನು  valid documents, blue paper) ಅಥವಾ ಕಾರ್ಡ್‌ಗಳನ್ನು ಹೊಂದಿದ್ದಾರೆ ಎಂದು ಹೇಳಿದರು.


  "ಭಾರತದಲ್ಲಿ ಆಫ್ಘನ್ನರ ಜೀವನವು ಉತ್ತಮವಾಗಿಲ್ಲ, ಮತ್ತು ಇಲ್ಲಿ ಯಾವುದೇ ಅವಕಾಶವಿಲ್ಲದೆ ಕಷ್ಟಕರ ಜೀವನ ನಡೆಸುತ್ತಿದ್ದೇವೆ. ನಾವುಇನ್ನೊಂದು ದೇಶಕ್ಕೆ ಹೋಗಲು ಮತ್ತು ನಮಗಾಗಿ ಮತ್ತು ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಹುಡುಕಲು ಏಕೆ ಅವಕಾಶ ನೀಡಬಾರದು ಎಂದು ಪ್ರಶ್ನಿಸಿದರು.


  ಯುಎನ್‌ಎಚ್‌ಸಿಆರ್ ನಮ್ಮ ಮನವಿಯನ್ನು ಪರಿಗಣಿಸಬೇಕು, ಬೆಂಬಲ ಪತ್ರಗಳನ್ನು ನೀಡಬೇಕು ಮತ್ತು ಹಳೆಯ ಪ್ರಕರಣಗಳಿಗೆ ಮತ್ತೆ ಜೀವ ನೀಡಬೇಕು "ಎಂದು ಅವರು ಪಿಟಿಐಗೆ ತಿಳಿಸಿದರು.


  ಇದನ್ನೂ ಓದಿ: Kolkata: ಅಕ್ರಮ ಸಿಗರೇಟು ದಾಸ್ತಾನು; ಸೀಜ್​ ಮಾಡಲು ಬಂದ ಆದಾಯ ತೆರಿಗೆ ಅಧಿಕಾರಿಗಳಿಗೆ ಬೆದರಿಕೆ, ಹೈಡ್ರಾಮಾ


  ಎಎಸ್‌ಸಿ (ASC) ಸ್ವಯಂಸೇವಕರು ತಮ್ಮ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ತಮ್ಮ ತೋಳುಗಳಿಗೆ ನೀಲಿ ಪಟ್ಟಿ ಧರಿಸಿದ್ದರು, ಮಹಿಳೆಯರು ಮತ್ತು ಮಕ್ಕಳು ಅಫಘಾನ್ ಹಾಡುಗಳನ್ನು ಹಾಗೂ ಸರ್ಜಾಮಿನ್ ಮನ್ (Sarzamine Mann) ಹಾಡಿದರು.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published: