ಕಾಬೂಲ್: ಅಫ್ಘಾನಿಸ್ತಾನದ ವಿಶ್ವವಿದ್ಯಾನಿಲಯಗಳಲ್ಲಿ (Afghanistan University) ಮಹಿಳೆಯರಿಗೆ (Womens) ಶಿಕ್ಷಣವನ್ನು (Education) ನಿಷೇಧಿಸಲಾಗಿದ್ದು, ಈ ವಿರುದ್ಧ ವಿಶ್ವಾದ್ಯಂತ ಟೀಕೆ ಮತ್ತು ಪ್ರತಿಭಟನೆಗಳು ನಡೆಯುತ್ತಿದೆ. ಈ ನಡುವೆ ಅಫ್ಘಾನಿಸ್ತಾನದ ಕಾಬೂಲ್ (Kabul) ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರು (Profesor) ತಮ್ಮ ಡಿಪ್ಲೋಮಾ ಪ್ರಮಾಣಪತ್ರವನ್ನು (Diploma Certificates) ಲೈವ್ನಲ್ಲಿ (Live) ಹರಿದು ಹಾಕಿದ್ದಾರೆ. ಅಲ್ಲದೇ ಇಂದಿನಿಂದ, ನನಗೆ ಈ ಡಿಪ್ಲೋಮಾಗಳ ಅಗತ್ಯವಿಲ್ಲ. ಏಕೆಂದರೆ ಈ ದೇಶವು ಶಿಕ್ಷಣಕ್ಕೆ ಸೂಕ್ತವಾದ ಸ್ಥಳವಲ್ಲ. ನನ್ನ ಸಹೋದರಿ (Siter) ಮತ್ತು ನನ್ನ ತಾಯಿಗೆ (Mother) ಓದಲು ಅವಕಾಶವಿಲ್ಲದಿರುವಾಗ ಈ ಶಿಕ್ಷಣವನ್ನು ನಾನೂ ಸ್ವೀಕರಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ. ಟಿವಿ ಲೈವ್ ಪ್ರೋಗ್ರಾಮ್ನಲ್ಲಿ, ದೇಶದ ಮಹಿಳೆಯರಿಗೆ ಶಿಕ್ಷಣ ಪಡೆಯಲು ಅವಕಾಶವಿಲ್ಲದಿರುವಾಗ, ಈ ಸರ್ಟಿಫಿಕೇಟ್ಗಳ ಅಗತ್ಯ ನನಗೂ ಇಲ್ಲ ಎಂದು ಡಿಪ್ಲೋಮಾ ಪ್ರಮಾಣಪತ್ರಗಳನ್ನು ಪ್ರಾಧ್ಯಾಪಕರು ಹರಿದು ಹಾಕಿದ್ದಾರೆ.
ಸರ್ಟಿಫಿಕೇಟ್ ಹರಿದು ಹಾಕಿರುವ ವೀಡಿಯೋ ವೈರಲ್
ಇನ್ನೂ ಈ ವೀಡಿಯೋವನ್ನು ಸಾಮಾಜಿಕ ಕಾರ್ಯಕರ್ತೆ ಶಬ್ನಮ್ ನಸಿಮಿ ಅವರು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವೀಡಿಯೊದಲ್ಲಿ ಕಾಬೂಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ತಮ್ಮ ಡಿಪ್ಲೋಮಾ ಪ್ರಮಾಣಪತ್ರಗಳನ್ನು ಹಿಡಿದುಕೊಂಡು ಅವುಗಳನ್ನು ಒಂದೊಂದಾಗಿ ಹರಿದು ಹಾಕುವುದನ್ನು ಕಾಣಬಹುದಾಗಿದೆ.
Astonishing scenes as a Kabul university professor destroys his diplomas on live TV in Afghanistan —
“From today I don’t need these diplomas anymore because this country is no place for an education. If my sister & my mother can’t study, then I DON’T accept this education.” pic.twitter.com/cTZrpmAuL6
— Shabnam Nasimi (@NasimiShabnam) December 27, 2022
ಸರ್ಟಿಫಿಕೇಟ್ಗಳನ್ನು ಹರಿದು ಹಾಕುತ್ತಾ ಪ್ರಾಧ್ಯಾಪಕರು, ಈ ದೇಶ ಶಿಕ್ಷಣಕ್ಕೆ ಸೂಕ್ತವಾದ ಸ್ಥಳವಲ್ಲ. ಹೀಗಾಗಿ ನನಗೆ ಈ ಸರ್ಟಿಫಿಕೇಟ್ಗಳ ಅಗತ್ಯವಿಲ್ಲ. ನನ್ನ ಸಹೋದರಿ ಹಾಗೂ ತಾಯಿಗೆ ಓದಲು ಅವಕಾಶವಿಲ್ಲದಿದ್ದರೆ, ನಾನು ಕೂಡ ಈ ಶಿಕ್ಷಣವನ್ನು ಸ್ವೀಕರಿಸುವುದಿಲ್ಲ ಎಂದಿದ್ದಾರೆ.
ಅಫ್ಘಾನಿಸ್ತಾನ ವಶದ ಬಳಿಕ ಮಹಿಳೆಯರ ಮೇಲೆ ನಿರ್ಬಂಧ ಹೇರಿದ ತಾಲಿಬಾನ್
ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಮಹಿಳೆಯರ ಮೇಲೆ ಕಟ್ಟುನಿಟ್ಟಾದ ನಿಯಮಗಳು ಮತ್ತು ನಿರ್ಬಂಧವನ್ನು ಹೇರಿದ ತಾಲಿಬಾನ್, ಇದೀಗ ಅವರಿಗೆ ವಿಶ್ವವಿದ್ಯಾಲಯಗಳಲ್ಲಿನ ಶಿಕ್ಷಣವನ್ನು ನಿಷೇಧಿಸಿದೆ. ಆರಂಭದಲ್ಲಿ ಲಿಂಗ-ಬೇರ್ಪಡಿಸಿದ ತರಗತಿಗಳು ಮತ್ತು ಪ್ರವೇಶಗಳಂತಹ ಹೊಸ ನಿಯಮಗಳನ್ನು ಜಾರಿಗೆ ತರಲು ಶಿಕ್ಷಣ ಸಂಸ್ಥೆಗಳಿಗೆ ಆದೇಶಿಸಲಾಯಿತು.
ನಂತರ ಮಾರ್ಚ್ನಿಂದ ಇಸ್ಲಾಮಿಸ್ಟ್ ಆಡಳಿತವು ಯು-ಟರ್ನ್ ಹೊಡೆದಿದ್ದು, ಬಾಲಕಿಯರಿಗೆ ಮಾಧ್ಯಮಿಕ ಶಿಕ್ಷಣ ನೀಡುವುದನ್ನು ನಿಷೇಧಿಸಿದೆ. ಜೊತೆಗೆ ತಾಲಿಬಾನ್, ಮಹಿಳೆಯರಿಗೆ ಹೆಚ್ಚಿನ ಉದ್ಯೋಗವಕಾಶವನ್ನು ನಿರ್ಬಂಧಿಸಿದ್ದು, ಹಿಜಬ್ ಮತ್ತು ಬುರ್ಖಾ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಇಷ್ಟೇ ಅಲ್ಲದೇ ಸಾರ್ವಜನಿಕ ಉದ್ಯಾನವನಗಳು ಮತ್ತು ಜಿಮ್ಗಳಿಗೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ.
ಡಿ.20ರಿಂದ ಮಹಿಳೆಯರಿಗೆ ವಿಶ್ವವಿದ್ಯಾಲಯ ಪ್ರವೇಶ ನಿಷೇಧಿಸಿದ ತಾಲಿಬಾನ್
ಅಫ್ಘಾನಿಸ್ತಾನದ ಮಹಿಳೆಯರ ಶಿಕ್ಷಣ ಮತ್ತು ಅವರ ಆಯ್ಕೆಯ ವೃತ್ತಿಜೀವನವನ್ನು ಮುಂದುವರಿಸುವ ಆಕಾಂಕ್ಷೆಗಳನ್ನು ಹತ್ತಿಕ್ಕಲು, ಷರಿಯಾ-ಕಂಪ್ಲೈಂಟ್ ತಾಲಿಬಾನ್ ಆಡಳಿತವು ಡಿಸೆಂಬರ್ 20 ರಂದು ಮಹಿಳಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಪ್ರವೇಶವನ್ನು ನಿಷೇಧಿಸಿತು. ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಿಶ್ವವಿದ್ಯಾನಿಲಯಗಳಿಗೆ ಮುಂದಿನ ಸೂಚನೆ ಬರುವವರೆಗೆ ಮಹಿಳಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಶಿಕ್ಷಣದ ಪ್ರವೇಶವನ್ನು ಸ್ಥಗಿತಗೊಳಿಸುವಂತೆ ಅಫ್ಘಾನಿಸ್ತಾನದ ಶಿಕ್ಷಣ ಸಚಿವಾಲಯವು ಪತ್ರದ ಮೂಲಕ ಆದೇಶಿಸಿದೆ.
ಇದನ್ನೂ ಓದಿ: Education: ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ತಾಲಿಬಾನ್ ಅಡ್ಡಿ, ನಿಜಕ್ಕೂ ಆಗಿದ್ದೇನು? ಇಲ್ಲಿದೆ ಮಾಹಿತಿ
ತಾಲಿಬಾನ್ ನಡೆಗೆ ಪ್ರಪಂಚಾದ್ಯಂತ ಆಕ್ರೋಶ
ತಾಲಿಬಾನ್ನ ಈ ನಡೆ ಜಾಗತಿಕ ಆಕ್ರೋಶಕ್ಕೆ ಕಾರಣವಾಗಿದ್ದು, ಹಲವಾರು ದೇಶಗಳು ತಾಲಿಬಾನ್ ಆದೇಶವನ್ನು ಖಂಡಿಸಿವೆ. ಅಫ್ಘಾನಿಸ್ತಾನದ ಹಲವಾರು ವಿಶ್ವವಿದ್ಯಾನಿಲಯಗಳವಿದ್ಯಾರ್ಥಿಗಳು ವಿದ್ಯಾರ್ಥಿನಿಯರೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸಿದರು. ಜಲಾಲಾಬಾದ್ನ ನಂಗರ್ಹಾರ್ ವಿಶ್ವವಿದ್ಯಾನಿಲಯದಲ್ಲಿ ಮತ್ತು ಅಫ್ಘಾನಿಸ್ತಾನದ ಕಂದಹಾರ್ ವಿಶ್ವವಿದ್ಯಾಲಯದಲ್ಲಿ ಹಲವಾರು ವಿದ್ಯಾರ್ಥಿಗಳು ಈ ಬಗ್ಗೆ ಪ್ರತಿಭಟನೆ ನಡೆಸಿದರು. ಅಲ್ಲದೇ ಪರೀಕ್ಷೆ ನಡೆಯುತ್ತಿದ್ದ ವೇಳೆ ಅನೇಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೇ ಅರ್ಧದಲ್ಲಿಯೇ ಪರೀಕ್ಷಾ ಕೊಠಡಿಯಿಂದ ಹೊರ ನಡೆದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ