• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Aero India 2023: ಶತ್ರು ರಾಷ್ಟ್ರದ ದಾಳಿ ಎದುರಿಸಲು ಬಂತು ಆ್ಯಂಟಿ ಡ್ರೋನ್ ಸಿಸ್ಟಮ್! ಇದರ ಹಿಂದಿರುವ ಸೇನಾಧಿಕಾರಿ ಬಗ್ಗೆ ನಿಮಗೆ ಗೊತ್ತಿರಲೇ ಬೇಕು

Aero India 2023: ಶತ್ರು ರಾಷ್ಟ್ರದ ದಾಳಿ ಎದುರಿಸಲು ಬಂತು ಆ್ಯಂಟಿ ಡ್ರೋನ್ ಸಿಸ್ಟಮ್! ಇದರ ಹಿಂದಿರುವ ಸೇನಾಧಿಕಾರಿ ಬಗ್ಗೆ ನಿಮಗೆ ಗೊತ್ತಿರಲೇ ಬೇಕು

ಲೆಫ್ಟಿನೆಂಟ್ ಕರ್ನಲ್ ಸದಾನಂದ್ ಚೌಹಾಣ್

ಲೆಫ್ಟಿನೆಂಟ್ ಕರ್ನಲ್ ಸದಾನಂದ್ ಚೌಹಾಣ್

ಕಂಪ್ಯೂಟರ್ ಇಂಜಿನಿಯರ್ ಆಗಿರುವ ಭಾರತೀಯ ಸೇನೆಯ ಕಾರ್ಪ್ಸ್ ಆಫ್ ಸಿಗ್ನಲ್ಸ್‌ನ ಲೆಫ್ಟಿನೆಂಟ್ ಕರ್ನಲ್ ಸದಾನಂದ್ ಚೌಹಾಣ್ ರೇಡಿಯೋ ಫ್ರೀಕ್ವೆನ್ಸಿ ಅಥವಾ RF-ಆಧಾರಿತ ಕೌಂಟರ್-ಡ್ರೋನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ.

 • Trending Desk
 • 3-MIN READ
 • Last Updated :
 • Bangalore [Bangalore], India
 • Share this:

ಭಾರತದ (India) ಮೇಲೆ ಶತ್ರು ರಾಷ್ಟ್ರಗಳು ಡ್ರೋನ್ ದಾಳಿಯನ್ನು (Drone Attack) ಆಗಾಗ್ಗೆ ನಡೆಸುತ್ತಿದ್ದು, ಕಳೆದ ವರ್ಷ ಎರಡು ಸ್ಪೋಟಕ ತುಂಬಿದ ಡ್ರೋನ್‌ಗಳು ಜಮ್ಮುವಿನಲ್ಲಿರುವ (Jammu and Kashmir) ಭಾರತೀಯ ವಾಯುಪಡೆ (ಐಎಎಫ್) ನಿಲ್ದಾಣಕ್ಕೆ ಅಪ್ಪಳಿಸಿ, ಭಾರತದ ರಕ್ಷಣಾ ಪರಿಸರ ವ್ಯವಸ್ಥೆಯನ್ನು ದಂಗುಬಡಿಸಿತ್ತು. ಶತ್ರು ಪಡೆಗಳಿಗೆ ಡ್ರೋಣ್ ದಾಳಿ ಅಗ್ಗದ ಹಾಗೂ ಸುಲಭದ ಆಯ್ಕೆ ಎಂದೆನಿಸಿದ್ದು, ಭಾರತವು ಉತ್ತಮವಾಗಿ ಸಿದ್ಧವಾಗಬೇಕಾಗಿದೆ. ಡ್ರೋನ್‌ಗಳ ಬಳಕೆಯು (Drone Use) ವೇಗವಾಗಿ ಬೆಳೆಯುತ್ತಿರುವುದರಿಂದ, ಅವುಗಳನ್ನು ಎದುರಿಸಲು ತಂತ್ರಜ್ಞಾನದ (Technology) ವಿಧಾನಗಳು ಸಹ ವಿಕಸನಗೊಳ್ಳಬೇಕಾಗಿವೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಸೇನಾ ಅಧಿಕಾರಿ ಅಭಿವೃದ್ಧಿಪಡಿಸಿದ ಡ್ರೋನ್


ಈ ನಡುವೆ ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಅಭಿವೃದ್ಧಿಪಡಿಸಿದ ಹೊಸ ಆ್ಯಂಟಿ-ಡ್ರೋನ್ ವ್ಯವಸ್ಥೆಯು ಮಾನವರಹಿತ ವೈಮಾನಿಕ ವಾಹನಗಳ (UAV) ಬೆದರಿಕೆಯನ್ನು ನಿಭಾಯಿಸಲು ರಾಷ್ಟ್ರದ ರಕ್ಷಣಾ ಪಡೆಗಳಿಗೆ ಹೆಚ್ಚಿನ ಶಕ್ತಿಯನ್ನು ನೀಡಲು ಸಿದ್ಧವಾಗಿದೆ.


ಕಂಪ್ಯೂಟರ್ ಇಂಜಿನಿಯರ್ ಆಗಿರುವ ಭಾರತೀಯ ಸೇನೆಯ ಕಾರ್ಪ್ಸ್ ಆಫ್ ಸಿಗ್ನಲ್ಸ್‌ನ ಲೆಫ್ಟಿನೆಂಟ್ ಕರ್ನಲ್ ಸದಾನಂದ್ ಚೌಹಾಣ್ ರೇಡಿಯೋ ಫ್ರೀಕ್ವೆನ್ಸಿ ಅಥವಾ RF-ಆಧಾರಿತ ಕೌಂಟರ್-ಡ್ರೋನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು, ಇದನ್ನು ಸೇನೆಯೂ ಆಂತರಿಕವಾಗಿ ಪರೀಕ್ಷಿಸಿದೆ ಹಾಗೂ ಕೆಲವೊಂದು ಗಡಿ ಪ್ರದೇಶಗಳಲ್ಲಿ ಪರೀಕ್ಷಾರ್ಥವಾಗಿ ಕೆಲವೊಂದು ಡ್ರೋನ್‌ಗಳನ್ನು ನಿಯೋಜಿಸಿದೆ.


ಲೆಫ್ಟಿನೆಂಟ್ ಕರ್ನಲ್ ಸದಾನಂದ್ ಚೌಹಾಣ್


ಡ್ರೋನ್ ಬಳಸಿ ಮಾದಕ ವಸ್ತು ಹಾಗೂ ಶಸ್ತ್ರಾಸ್ತ್ರ ಸಾಗಣೆ


ಡ್ರೋನ್ ದಾಳಿಯ ನಂತರ, ಗಡಿಯಾಚೆಯಿಂದ ಭಾರತಕ್ಕೆ ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳ ಸಾಗಣೆಗೆ ಡ್ರೋನ್‌ಗಳನ್ನು ಬಳಸುತ್ತಿರುವ ಹೆಚ್ಚಿನ ನಿದರ್ಶನಗಳು ವರದಿಯಾಗಿದ್ದು ಈ ನಡುವೆ ಪಂಜಾಬ್‌ನ ಭಾರತ-ಪಾಕಿಸ್ತಾನ ಗಡಿಯಲ್ಲಿ ಡ್ರೋನ್‌ಗಳ ಮೂಲಕ ದೇಶಕ್ಕೆ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುವ ಪ್ರಯತ್ನವನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ವಿಫಲಗೊಳಿಸಿತ್ತು.


ಡ್ರೋನ್ ವ್ಯವಸ್ಥೆಯು ಕಾರ್ಯಾಚರಣೆಯ ಉದ್ದೇಶಗಳನ್ನು ಪೂರ್ಣಗೊಳಿಸಿದ್ದು ತಂಡ ಕೂಡ ಧನಾತ್ಮಕ ಪ್ರತಿಕ್ರಿಯೆಗಳನ್ನು ನೀಡಿದೆ. ಸೇನೆಯು ಡ್ರೋನ್‌ನ ಶ್ರೇಣಿಯ ಮೇಲೆ ಕಾರ್ಯನಿರ್ವಹಿಸುತ್ತಿದ್ದು ಶತ್ರು ಪಡೆಗಳ ಡ್ರೋನ್‌ಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ. ಫೀಲ್ಡ್‌ನ ಯುನಿಟ್‌ಗಳಿಗೆ ತಕ್ಕಂತೆ ನಿರ್ದಿಷ್ಟ ಬದಲಾವಣೆಗಳನ್ನು ಮಾಡಬೇಕಾಗಿದೆ ಎಂದು ಚೌಹಾಣ್ ತಿಳಿಸಿದ್ದಾರೆ.
ಶತ್ರು ಡ್ರೋನ್‌ಗಳನ್ನು ತಡೆಯಲು ಹಲವಾರು ಕ್ರಮಗಳು


ಏರಿಯಲ್ ಬೆದರಿಕೆಗಳನ್ನು ಮಟ್ಟಹಾಕುವುದಕ್ಕಾಗಿ ಭಾರತೀಯ ಸೇನೆಯು ವಾಹನ ಆಧಾರಿತ ಡ್ರೋನ್ ಜ್ಯಾಮರ್‌ಗಳ ಪ್ರಸ್ತಾವನೆಯನ್ನು ಪಡೆದುಕೊಂಡಿದ್ದು, ಕಳೆದ ಎರಡು ವರ್ಷಗಳಲ್ಲಿ ಸೇನೆಯು ನೈಋತ್ಯ ಮತ್ತು ಉತ್ತರ ವಲಯಗಳಲ್ಲಿ ಗಡಿಯಾಚೆಯಿಂದ ಹಲವಾರು ಡ್ರೋನ್‌ಗಳನ್ನು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆಯು ಮಹತ್ವವನ್ನು ಪಡೆದುಕೊಂಡಿದೆ.


ಶತ್ರು ಡ್ರೋನ್‌ಗಳನ್ನು ನಿರ್ಬಂಧಿಸಲು ಹಲವಾರು ವಿಧಾನಗಳನ್ನು ಬಳಸಿದ್ದು ಅದರಲ್ಲೊಂದು ವಿಧಾನವು RF-ಜ್ಯಾಮಿಂಗ್ ಆಗಿದ್ದು ಡ್ರೋನ್ ಹಾಗೂ ಅದರ ಆಪರೇಟರ್ ದೊಡ್ಡ ಪ್ರಮಾಣದ RF ಇಂಪಿಂಗ್ ಅನ್ನು ಉತ್ಪಾದಿಸುವ ಮೂಲಕ ರೇಡಿಯೊ ಆವರ್ತನೆ ಲಿಂಕ್‌ ಅನ್ನು ಅಡ್ಡಿಪಡಿಸುತ್ತದೆ.


ಸರಕಾರ ಪ್ರಸ್ತುತಪಡಿಸಿರುವ ವಿಧಾನಗಳು


ಇನ್ನು ಸರಕಾರ ಕೂಡ ಡ್ರೋನ್ ವಿರೋಧಿ ತಂತ್ರಜ್ಞಾನದ ಅಗತ್ಯಕ್ಕೆ ಹೆಚ್ಚಿನ ಮಹತ್ವ ನೀಡಿದ್ದು, ಶತ್ರು ರಾಷ್ಟ್ರಗಳ ಅನಗತ್ಯ ಡ್ರೋನ್‌ಗಳನ್ನು ಎದುರಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)-ಅಭಿವೃದ್ಧಿಪಡಿಸಿದ ಆ್ಯಂಟಿ ಡ್ರೋಬ್ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ. ಇದರಲ್ಲೊಂದು ಡಿ-4 ಡ್ರೋನ್ ವ್ಯವಸ್ಥೆಯಾಗಿದ್ದು RF ಜ್ಯಾಮಿಂಗ್ ಮತ್ತು ಆಂಟಿ-ಜಿಎನ್‌ಎಸ್‌ಎಸ್ ತಂತ್ರಜ್ಞಾನಗಳೊಂದಿಗೆ ಸಂವಹನ ಲಿಂಕ್‌ಗಳನ್ನು ಜ್ಯಾಮ್ ಮಾಡುವ ಮೂಲಕ ಶತ್ರು ರಾಷ್ಟ್ರಗಳ ಡ್ರೋನ್‌ಗಳನ್ನು ತಟಸ್ಥಗೊಳಿಸುತ್ತದೆ.


ಆ್ಯಂಟಿ-ಡ್ರೋನ್ ವ್ಯವಸ್ಥೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿರುವುದು


ದುರ್ಬಲ ಸ್ಥಳಗಳ ಮೇಲೆ ದಾಳಿ ನಡೆಸುವ ಡ್ರೋನ್‌ಗಳನ್ನು ಪತ್ತೆಮಾಡುವುದು ಡಿ-4 ಡ್ರೋನ್‌ನ ಉದ್ದೇಶವಾಗಿದೆ. ಶತ್ರುವಿನ ಡ್ರೋನ್ ದಾಳಿಗಳನ್ನು ಮಟ್ಟಹಾಕಲು ಬಹು ಸಂವೇದಕಗಳು ಮತ್ತು ಎರಡು ವಿಭಿನ್ನ ಪ್ರತಿದಾಳಿಗಳನ್ನು ಪಡೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಸೇನೆ, ನೌಕಾಪಡೆ ಮತ್ತು ವಾಯುಪಡೆಗಳನ್ನು ಒಳಗೊಂಡಿರುವ ಭಾರತದ ರಕ್ಷಣಾ ಪಡೆ, ಗಡಿಯಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲು DRDO-ಅಭಿವೃದ್ಧಿಪಡಿಸಿದ ಆ್ಯಂಟಿ-ಡ್ರೋನ್ ವ್ಯವಸ್ಥೆಯನ್ನು ಪಡೆದುಕೊಂಡಿದೆ. ಈ ವ್ಯವಸ್ಥೆಯನ್ನು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ತಯಾರಿಸಿದೆ.

Published by:Sumanth SN
First published: