• Home
  • »
  • News
  • »
  • national-international
  • »
  • Aero India 2021: ಏರ್ ಶೋ ಮೂಲಕ ನಮ್ಮ ದೇಶದ ಶಕ್ತಿ ಪ್ರದರ್ಶನವಾಗುತ್ತಿದೆ; ರಕ್ಷಣಾ ಸಚಿವ ರಾಜನಾಥ್ ಸಿಂಗ್

Aero India 2021: ಏರ್ ಶೋ ಮೂಲಕ ನಮ್ಮ ದೇಶದ ಶಕ್ತಿ ಪ್ರದರ್ಶನವಾಗುತ್ತಿದೆ; ರಕ್ಷಣಾ ಸಚಿವ ರಾಜನಾಥ್ ಸಿಂಗ್

ಬೆಂಗಳೂರಿನ ಏರೋ ಇಂಡಿಯಾದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಬೆಂಗಳೂರಿನ ಏರೋ ಇಂಡಿಯಾದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್

Aero India 2021: ದೇಶದ ಗಡಿಗೆ ಅಪಾಯ ಒಡ್ಡುವ ಉಗ್ರರ ಚಟುವಟಿಕೆಗಳನ್ನು ಮಟ್ಟ ಹಾಕುವ ಕೆಲಸ ಮಾಡಿಯೇ ತೀರುತ್ತೇವೆ. ಏರ್‌ ಶೋ ನಮ್ಮ ಶಕ್ತಿ ಪ್ರದರ್ಶನದ ಕಾರ್ಯಕ್ರಮ ಕೂಡ ಹೌದು ಎಂದು ರಾಜನಾಥ್ ಸಿಂಗ್ ಏರ್ ಶೋನಲ್ಲಿ ಹೇಳಿದ್ದಾರೆ.

  • Share this:

 ಬೆಂಗಳೂರು (ಫೆ. 3): ಕರ್ನಾಟಕ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದೆ. ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಬಸವಣ್ಣನಂತಹ ಮಹಾತ್ಮರಿಂದ ಪ್ರೇರಿತವಾದ ರಾಜ್ಯವಿದು. ಅನೇಕ ಅವಕಾಶಗಳಿಗೆ ಏರೋ ಇಂಡಿಯಾ-2021 ವೇದಿಕೆ ಒದಗಿಸುತ್ತದೆ. ಏರ್ ಶೋ ನಮ್ಮ ದೇಶದ ಶಕ್ತಿ ಪ್ರದರ್ಶನದ ವೇದಿಕೆಯೂ ಹೌದು. ವಿಶ್ವದ ಮೊಟ್ಟಮೊದಲ ಹೈಬ್ರಿಡ್ ಏರ್ ಶೋ ಇದಾಗಿದೆ. ಭಾರತೀಯ ತಯಾರಿಕೆಯ ತೇಜಸ್ ಯುದ್ಧವಿಮಾನಕ್ಕೆ ಸಾಕಷ್ಟು ಬೇಡಿಕೆಯಿದೆ. ಈಗಾಗಲೇ 83 ತೇಜಸ್ ವಿಮಾನಗಳಿಗೆ ಆರ್ಡರ್ ಬಂದಿದ್ದು, ಇದು ಅತ್ಯಂತ ಸಂತಸದ ವಿಚಾರವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.


ಮಾಲ್ಡೀವ್ಸ್, ಉಕ್ರೇನ್, ಮಡಗಾಸ್ಕರ್, ಗಿನಿಗಳಿಂದ ಈ ಏರ್ ಶೋಗೆ ರಕ್ಷಣಾ ಸಚಿವರು ಆಗಮಿಸಿದ್ದಾರೆ. ತೇಜಸ್ ಯುದ್ಧ ವಿಮಾನಗಳ ಜೊತೆಗೆ 83 ವಿಮಾನಗಳ ಆರ್ಡರ್ ಗೆ ಡೀಲ್ ಸೈನ್ ಮಾಡಲಾಗುತ್ತಿದೆ. ಇದರಲ್ಲಿ 75 LCA Tejas, Mk 1A ಮತ್ತು 8 ಟ್ರೇನರ್ ಏರ್ ಕ್ರಾಫ್ಟ್ ಗಳು ಸೇರಿವೆ. ಉಗ್ರರ ಹಾವಳಿ ಇಡೀ ವಿಶ್ವವನ್ನು ಕಾಡುತ್ತಿದೆ. ದೇಶದ ಗಡಿಗೆ ಅಪಾಯ ಒಡ್ಡುವ ಉಗ್ರರ ಚಟುವಟಿಕೆಗಳನ್ನು ಮಟ್ಟ ಹಾಕುವ ಕೆಲಸ ಮಾಡಿಯೇ ತೀರುತ್ತೇವೆ. ಏರ್‌ ಶೋ ನಮ್ಮ ಶಕ್ತಿ ಪ್ರದರ್ಶನದ ಕಾರ್ಯಕ್ರಮ ಕೂಡ ಹೌದು ಎಂದು ರಾಜನಾಥ್ ಸಿಂಗ್ ಏರ್ ಶೋನಲ್ಲಿ ಹೇಳಿದ್ದಾರೆ.ಇಡೀ ಪ್ರಪಂಚ ಕೋವಿಡ್​ನಿಂದ ತತ್ತರಿಸಿದೆ. ನಮ್ಮ ದೇಶದಲ್ಲೇ ತಯಾರಾದ ಎರಡು ಲಸಿಕೆಗಳು ಬೇರೆ ದೇಶಗಳಲ್ಲೂ ಜೀವ ಉಳಿಸುವ ಕೆಲಸ ಮಾಡುತ್ತಿವೆ. ನಾವು 217 ಮಿಲಿಯನ್ ಜನರಿಗೆ ಕೋವಿಡ್ ಲಸಿಕೆ ನೀಡುವ ಕೆಲಸ ಮಾಡುತ್ತಿದ್ದೇವೆ. ವಸುಧೈವ ಕುಟುಂಬಕಂ ಎನ್ನುವ ಧ್ಯೇಯದೊಂದಿಗೆ ಕೆಲಸ ಮಾಡುವ ದೇಶ ನಮ್ಮದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.ಎಲ್​ಸಿಎಚ್​ಗಳ ಹಾರಾಟದಿಂದ ಏರೋ ಇಂಡಿಯಾ ಆಕ್ರೋಬ್ಯಾಟ್ಸ್ ಆರಂಭವಾಗಿದೆ. ಧನುಶ್ ಫಾರ್ಮೇಶನ್- ಮೂರು ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ ಗಳ ಹಾರಾಟ ನಡೆದಿದೆ. ಹಾಕ್, ಸಿತಾರಾ ಮತ್ತು ಟಾನಿಯರ್ 22A ಹೆಲಿಕಾಪ್ಟರ್, ಆತ್ಮನಿರ್ಭರ್ ಫಾರ್ಮೇಶನ್ ಹಾರಾಟ ಮಾಡಿವೆ. ತೇಜಸ್ ಯುದ್ಧ ವಿಮಾನದ ಮುಂದಾಳತ್ವದಲ್ಲಿ 5 ವಿಮಾನಗಳು ಬಾನಂಗಳದಲ್ಲಿ ಹಾರಾಟ ನಡೆಸಿವೆ. ಈ 5 ಕೂಡ ದೇಸೀ ತಯಾರಿಕಾ ವಿಮಾನಗಳಾಗಿವೆ. ರ್ಯಾಡಾರ್ ಹೊತ್ತ ವಿಮಾನ ನೇತ್ರ ಹಾರಾಟ ನಡೆಸಿದೆ. ವಿಜಯ್ ಫಾರ್ಮೇಶನ್ ಹಾರಾಟ ನಡೆಸಿದೆ. ಅಕ್ಕಪಕ್ಕದಲ್ಲಿ 2 ಸುಖೋಯ್ ಯುದ್ಧವಿಮಾನಗಳು, ಎರಡು ತೇಜಸ್ ವಿಮಾನಗಳ ಆರ್ಭಟ ಜೋರಾಗಿತ್ತು. ಇದರ ಜೊತೆಗೆ 3 ರಫೇಲ್ ವಿಮಾನಗಳ ಹಾರಾಟವೂ ನಡೆದಿದೆ. ಗರುಡ್ ಫಾರ್ಮೇಶನ್, ಜಾಗ್ವಾರ್, ಹಾಕ್ ಮತ್ತು ಸುಖೋಯ್, ತ್ರಿಶೂಲ್ ಫಾರ್ಮೇಶನ್, ಸುಖೋಯ್ ಯುದ್ಧವಿಮಾನಗಳು ಯಲಹಂಕದ ವಾಯುನೆಲೆಯ ಬಾನಿನಲ್ಲಿ ಹಾರಾಟ ನಡೆಸಿವೆ.


ಇಂದಿನ ಏರ್ ಶೋನಲ್ಲಿ ಎಲ್​ಸಿಹೆಚ್ ಹಾರಾಟ ನಡೆಸಿದ್ದು, ಇದನ್ನು ಯುದ್ಧದಲ್ಲಿ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಹೆಚ್ಚು ಬಳಿಕೆ ಮಾಡಲಾಗುತ್ತದೆ. ಸಿಯಾಚಿನ್​ನಲ್ಲಿ ಹಾರಾಟ ಮಾಡಬಲ್ಲ ಏಕೈಕ ಎಲ್​ಸಿಹೆಚ್​ ಇದಾಗಿದೆ. ಹೆಚ್​ಎಎಲ್​ನಲ್ಲಿ ತಯಾರಾದ ಇಂಜಿನ್ ಹೊಂದಿರುವ ಎಲ್​ಸಿಹೆಚ್ ಮುಂದೆ ಎಷ್ಟು ವೇಗದಲ್ಲಿ ಸಾಗುತ್ತದೋ ಹಿಮ್ಮುಖದಲ್ಲೂ ಅಷ್ಟೇ ವೇಗವಾಗಿ ಹಾರಬಲ್ಲ ಶಕ್ತಿಯನ್ನು ಹೊಂದಿದೆ. ಇದು ವಿಶ್ವದ ಅತಿ ಲಘು ವಿಮಾನವಾಗಿದ್ದು, ಎಂತಹ ಪ್ರದೇಶದಲ್ಲೂ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ.


ಸೂರ್ಯ ಕಿರಣ್ ಹಾರಾಟ ಪ್ರೇಕ್ಷಕರ ಮತ್ತು ಗಣ್ಯರ ಗಮನ ಸೆಳೆದಿದ್ದು, 9 ವಿಮಾನಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಿದವು. ಏಷ್ಯಾದ ಏಕೈಕ 9 ವಿಮಾನಗಳ ತಂಡವೆಂಬ ಹೆಗ್ಗಳಿಕೆ ಸೂರ್ಯಕಿರಣ್​ದಾಗಿದೆ. ಇಂದಿನಿಂದ ರಾಜಧಾನಿ ಬೆಂಗಳೂರಿನಲ್ಲಿ 3 ದಿನಗಳ ಕಾಲ ಏರ್ ಶೋ ನಡೆಯಲಿದೆ. ಪ್ರತಿನಿತ್ಯ 2 ಬಾರಿ ಏರ್​ ಡಿಸ್​​ಪ್ಲೇ ನಡೆಯಲಿದೆ. 42 ವಿಮಾನಗಳು ದಿನಕ್ಕೆ ಎರಡು ಬಾರಿ ಹಾರಾಟ ನಡೆಸಿ ವೈಮಾನಿಕ ಪ್ರದರ್ಶನ ನಡೆಸಲಿವೆ. ಭಾರತ ಸೇರಿದಂತೆ ವಿವಿಧ ದೇಶಗಳ 63 ವಿಮಾನಗಳ ಪ್ರದರ್ಶನಗೊಳ್ಳಲಿವೆ.

Published by:Sushma Chakre
First published: