ಅಗಸ್ಟಾ ವೆಸ್ಟ್​ಲ್ಯಾಂಡ್​ ಹಗರಣ; ಕಪ್ಪುಹಣ ಸಂಗ್ರಹ ಆರೋಪದಲ್ಲಿ ವಕೀಲ ಗೌತಮ್ ಖೇತಾನ್​ ಬಂಧನ

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿದ್ದ 3,600 ಕೋಟಿ  ರೂ. ಮೌಲ್ಯದ ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದ ಸಂಬಂಧ ಹಲವರನ್ನು ಬಂಧಿಸಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಮತ್ತು ಮಧ್ಯವರ್ತಿಯಾಗಿದ್ದ ಕ್ರಿಶ್ಚಿಯನ್ ಮೈಕಲ್ ಅವರನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿತ್ತು.

Sushma Chakre | news18
Updated:January 26, 2019, 1:34 PM IST
ಅಗಸ್ಟಾ ವೆಸ್ಟ್​ಲ್ಯಾಂಡ್​ ಹಗರಣ; ಕಪ್ಪುಹಣ ಸಂಗ್ರಹ ಆರೋಪದಲ್ಲಿ ವಕೀಲ ಗೌತಮ್ ಖೇತಾನ್​ ಬಂಧನ
ಗೌತಮ್​ ಖೈತಾನಿ
  • News18
  • Last Updated: January 26, 2019, 1:34 PM IST
  • Share this:
ನವದೆಹಲಿ (ಜ.26): ದೇಶಾದ್ಯಂತ ಬಹುಚರ್ಚೆಗೊಳಗಾಗಿದ್ದ ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್​ ಹಗರಣದ ಆರೋಪಿಯಾಗಿದ್ದ ವಕೀಲ ಗೌತಮ್ ಖೇತಾನ್​ ಅವರನ್ನು ಕಪ್ಪುಹಣ ಸಂಗ್ರಹದ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಇಂದು ಬಂಧಿಸಿದೆ.

ಕಾಳಧನ ಕಾಯ್ದೆಯಡಿ ಗೌತಮ್ ಖೇತಾನ್​ ಅವರನ್ನು ಇಡಿ ಬಂಧಿಸಿದೆ. ಕಳೆದ ವಾರ ಗೌತಮ್​ ಖೇತಾನ್​ಗೆ ಸಂಬಂಧಿಸಿದಂತೆ ದೆಹಲಿಯಲ್ಲಿರುವ ಆಫೀಸ್​, ಇತರೆ ಪ್ರಾಪರ್ಟಿಗಳ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಸಾಕಷ್ಟು ಮಹತ್ವದ ಮಾಹಿತಿಗಳನ್ನು ಕಲೆಹಾಕಿತ್ತು. ಅಲ್ಲಿ ಸಿಕ್ಕಿದ ಮಾಹಿತಿಗಳ ಆಧಾರದಲ್ಲಿ ಖೈತಾನ್​ ಯುಪಿಎ ಅವಧಿಯಲ್ಲಿ ಅಗಸ್ಟಾ ವೆಸ್ಟ್​ಲ್ಯಾಂಡ್​ ಸೇರಿದಂತೆ ಹಲವು ರಕ್ಷಣಾ ಡೀಲ್​ಗಳಲ್ಲಿ ಭಾಗಿಯಾಗಿದ್ದು ತಿಳಿದುಬಂದಿತ್ತು.

ಇದನ್ನೂ ಓದಿ: ಅಗಸ್ಟಾ ವೆಸ್ಟ್​ಲ್ಯಾಂಡ್ ಹಗರಣ: ‘ಸೋನಿಯಾ’ಗೆ ಮಾಹಿತಿ ರವಾನಿಸುತ್ತಿದ್ದಾರೆ ಮೈಕೆಲ್​​; ‘ಇಡಿ’ ಗಂಭೀರ ಆರೋಪ!


 ಗೌತಮ್​ ಖೇತಾನ್​ ಅಗಸ್ಟಾ ವೆಸ್ಟ್​ಲ್ಯಾಂಡ್​ ವಿವಿಐಪಿ ಚಾಪರ್​ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಕ್ರಮವಾಗಿ ಸಾಕಷ್ಟು ಆಸ್ತಿಗಳನ್ನು ಸಂಪಾದಿಸಿರುವ ಗೌತಮ್​ ಅವರನ್ನು ಕಾಳಧನ ಕಾಯ್ದೆಯಡಿ ಬಂಧನ ಮಾಡಲಾಗಿದೆ.  3,600 ಕೋಟಿ ರೂ. ಮೌಲ್ಯದ ಅಗಸ್ಟಾ ವೆಸ್ಟ್​ಲ್ಯಾಂಡ್​ ಹಗರಣದ ಬಗ್ಗೆ ಸಿಬಿಐ ಸಲ್ಲಿಸಿದ್ದ ಚಾರ್ಜ್​ಶೀಟ್​ನಲ್ಲಿದ್ದಆರೋಪಿಗಳ ಪಟ್ಟಿಯಲ್ಲಿ ಗೌತಮ್​ ಹೆಸರೂ ಇತ್ತು. ಉಳಿದಂತೆ, ಯುಪಿಎ ಸರ್ಕಾರದ ಅವಧಿಯ ಭಾರತೀಯ ನೌಕಾಸೇನೆಯ ಮುಖ್ಯಸ್ಥ ಎಸ್​.ಪಿ. ತ್ಯಾಗಿ, ತ್ಯಾಗಿ ಅವರ ಆಪ್ತ ಸಂಜೀವ್​ ತ್ಯಾಗಿ ಮತ್ತು ವಾಯುಸೇನೆಯ ಇನ್ನೋರ್ವ ಮುಖ್ಯಸ್ಥ ಜೆ.ಎಸ್​. ಗುಜ್ರಾಲ್​ ಅವರ ಹೆಸರು ಚಾರ್ಜ್​ಶೀಟ್​ನಲ್ಲಿತ್ತು. ​ಇದನ್ನೂ ಓದಿ: ಅಗಸ್ಟಾವೆಸ್ಟ್​ಲ್ಯಾಂಡ್ ಹಗರಣ: 5 ದಿನ ಸಿಬಿಐ ಕಸ್ಟಡಿಗೆ ಕ್ರಿಶ್ಚಿಯನ್ ಮೈಕೆಲ್

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿದ್ದ 3,600 ಕೋಟಿ  ರೂ. ಮೌಲ್ಯದ ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದ ಸಂಬಂಧ ಹಲವರನ್ನು ಬಂಧಿಸಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಮತ್ತು ಮಧ್ಯವರ್ತಿಯಾಗಿದ್ದ ಕ್ರಿಶ್ಚಿಯನ್ ಮೈಕಲ್ ಅವರನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿತ್ತು.

ಕಳೆದ ಡಿ.22ರಂದು ದೆಹಲಿ ಕೋರ್ಟ್​ಗೆ ಆರೋಪಿಯನ್ನು ಹಾಜರುಪಡಿಸಿದ ಬಳಿಕ ಜಾರಿ ನಿರ್ದೇಶನಾಲಯ ಮೈಕೆಲ್​ ಅವರನ್ನು ವಶಕ್ಕೆ ಪಡೆದಿತ್ತು. ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯ ಕ್ರಿಶ್ಚಿಯನ್ ಮೈಕಲ್ ನ್ನು ವಶಕ್ಕೆ ಕೇಳಿತ್ತು. ಕ್ರಿಶ್ಚಿಯನ್ ಮೈಕಲ್ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿದ್ದ ದೆಹಲಿ ಕೋರ್ಟ್, ಡಿ.28 ವರೆಗೆ ಆತನನ್ನು ನ್ಯಾಯಾಂಗ ಬಂಧನಕ್ಕೆ ನೀಡಿತ್ತು.

 

First published:January 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading