ಮಹಿಳೆಯ ಮೇಲೆ ಅತ್ಯಾಚಾರ ಆರೋಪ; ಸಾಮಾಜಿಕ ಕಾರ್ಯಕರ್ತನ ಬಂಧನ

ಬೇಲಾಪುರದ ಹೋಟೆಲ್ ವೊಂದಕ್ಕೆ ಬಂದರೆ ಕೊಟ್ಟಿರುವ ಹಣವನ್ನು ನೀಡುತ್ತೇನೆ ಎಂದು ಹೇಳಿದ್ದ. ಅಲ್ಲದೇ ತಮ್ಮ ಸಂಘಟನೆ ವತಿಯಿಂದ ಹೋಟೆಲ್ ನಲ್ಲಿ ಸಮ್ಮೇಳನ ಆಯೋಜಿಸಲಾಗಿದ್ದು, ನೀವೂ ಕೂಡ ಭಾಗಿಯಾಗಿ ಎಂದು ಹೇಳಿದ್ದ. ಆತನ ಮಾತು ನಂಬಿ ಹೋಟೆಲ್ ಗೆ ಹೋದ ಮಹಿಳೆಯ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದಾನೆ ಎಂದು ಅತ್ಯಾಚಾರ ಸಂತ್ರಸ್ತೆ ಆರೋಪಿಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಸಾಮಾಜಿಕ ಕಾರ್ಯಕರ್ತನೊಬ್ಬನನ್ನು ನವೀ ಮುಂಬೈನ ಬೇಲಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸೋಲಾಪುರ ನಿವಾಸಿ, ವಿಶ್ವ ಮರಾಠಾ ಸಂಘಟನೆಯ ಮುಖ್ಯಸ್ಥ ಬಾಪು ಪಾಟೀಲ್(39) ಎಂದು ಗುರುತಿಸಲಾಗಿದೆ.

  ಬಾಪು ಪಾಟೀಲ್ ಮತ್ತು ಅತ್ಯಾಚಾರ ಸಂತ್ರಸ್ತೆ 2 ವರ್ಷಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರ ಪರಿಚಯವಾಗಿದ್ದರು. ತಾನು ವಿಶ್ವ ಮರಾಠಾ ಸಂಘಟನೆಯ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿರುವುದಾಗಿ ಆರೋಪಿ ಮಹಿಳೆಗೆ ತಿಳಿಸಿದ್ದ. ಬಳಿಕ ನವೀ ಮುಂಬೈನಲ್ಲಿ ನೀವು ಕೂಡ ತಮ್ಮ ಸಂಘಟನೆಯ ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸುವಂತೆ ಕೇಳಿಕೊಂಡಿದ್ದ. ಅದಕ್ಕೆ ಒಪ್ಪಿದ್ದ ಮಹಿಳೆ ಸಂಘಟನೆಯ ಚಟುವಟಿಕೆಗಳ ಮೂಲಕ ಆತನ ಜೊತೆ ನಿರಂತರ ಸಂಪರ್ಕದಲ್ಲಿದ್ದರು.

  ಸಿಎಂ ಮನೆಯಲ್ಲಿಯೇ ಹಾವು, ಚೇಳುಗಳಿವೆ- ವಿಜಯೇಂದ್ರ ತಮಗೆ ಬೇಡವಾದವರ ಸಿಡಿ ತಯಾರಿಸ್ತಾರೆ- ಯತ್ನಾಳ ಗಂಭೀರ ಆರೋಪ

  ಕೊರೊನಾ ಸಾಂಕ್ರಾಮಿಕದಿಂದ ದೇಶದಲ್ಲಿ ಲಾಕ್ ಡೌನ್ ಹೇರಿದ ಬಳಿಕ ತಾನು ಆರ್ಥಿಕ ಸಂಕಷ್ಟದಲ್ಲಿದ್ದೇನೆ ಎಂದು ಮಹಿಳೆಯ ಬಳಿ ಹೇಳಿಕೊಂಡಿದ್ದ. ಹೀಗಾಗಿ ಜನವರಿಯಲ್ಲಿ ಅವರು ಆತನಿಗೆ 72 ಸಾವಿರ ರೂ. ಹಣ ನೀಡಿದ್ದರು. ಬಳಿಕ ಬೇಲಾಪುರದ ಹೋಟೆಲ್ ವೊಂದಕ್ಕೆ ಬಂದರೆ ಕೊಟ್ಟಿರುವ ಹಣವನ್ನು ನೀಡುತ್ತೇನೆ ಎಂದು ಹೇಳಿದ್ದ. ಅಲ್ಲದೇ ತಮ್ಮ ಸಂಘಟನೆ ವತಿಯಿಂದ ಹೋಟೆಲ್ ನಲ್ಲಿ ಸಮ್ಮೇಳನ ಆಯೋಜಿಸಲಾಗಿದ್ದು, ನೀವೂ ಕೂಡ ಭಾಗಿಯಾಗಿ ಎಂದು ಹೇಳಿದ್ದ. ಆತನ ಮಾತು ನಂಬಿ ಹೋಟೆಲ್ ಗೆ ಹೋದ ಮಹಿಳೆಯ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದಾನೆ ಎಂದು ಅತ್ಯಾಚಾರ ಸಂತ್ರಸ್ತೆ ಆರೋಪಿಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಮಹಿಳೆಯ ಮೇಲೆ ಕಾಮುಕನಂತೆ ಎರಗಿದ್ದ ಬಾಪು ಪಾಟೀಲ್ ಆಕೆಯ ಫೋಟೋಗಳನ್ನು ತೆಗೆದುಕೊಂಡಿದ್ದ. ಏನಾದರೂ ಪೊಲೀಸರಿಗೆ ದೂರು ನೀಡಿದರೆ ನಿನ್ನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ. ಮಹಿಳೆ ನೀಡಿದ ದೂರಿನ ಮೇರೆಗೆ ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ಬಾಪು ಪಾಟೀಲ್ ಅವರನ್ನು ಬಂಧಿಸಲಾಗಿದೆ ಎಂದು ಹಿರಿಯ ದಂಡಾಧಿಕಾರಿ ಅನಿಲ್ ಪಾಟೀಲ್ ಅವರು ಹೇಳಿದ್ದಾರೆ.
  Published by:Latha CG
  First published: