• Home
 • »
 • News
 • »
 • national-international
 • »
 • Sushant Singh: ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಗೆ ಆದಿತ್ಯ ಠಾಕ್ರೆಯಿಂದ 44 ಕರೆಗಳು, ಸಂಸದನಿಂದ ಗಂಭೀರ ಆರೋಪ!

Sushant Singh: ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಗೆ ಆದಿತ್ಯ ಠಾಕ್ರೆಯಿಂದ 44 ಕರೆಗಳು, ಸಂಸದನಿಂದ ಗಂಭೀರ ಆರೋಪ!

ರಿಯಾ ಚಕ್ರವರ್ತಿ ಹಾಗೂ ಆದಿತ್ಯ ಠಾಕ್ರೆ

ರಿಯಾ ಚಕ್ರವರ್ತಿ ಹಾಗೂ ಆದಿತ್ಯ ಠಾಕ್ರೆ

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲಿ ಆದಿತ್ಯ ಠಾಕ್ರೆ ಭಾಗಿಯಾಗಿರುವುದನ್ನು ಸಂಸದ ರಾಹುಲ್ ಶಿವಾಲೆ ಪ್ರಶ್ನಿಸಿದ್ದಾರೆ. ಸಿಬಿಐ ತನಿಖೆಯ ಕುರಿತು ಮತ್ತಷ್ಟು ವಿವರ ಕೇಳಿದ ರಾಹುಲ್, ಆದಿತ್ಯ ಠಾಕ್ರೆಯಿಂದ ರಿಯಾ ಚಕ್ರವರ್ತಿ 44 ಕರೆಗಳನ್ನು ಸ್ವೀಕರಿಸಿದ್ದಾರೆ ಎಂದು ಆಪಾದಿಸಿದ್ದಾರೆ.

ಮುಂದೆ ಓದಿ ...
 • Trending Desk
 • 3-MIN READ
 • Last Updated :
 • Mumbai, India
 • Share this:

  ಮುಂಬೈ(ಡಿ.22): ಬಾಲಿವುಡ್‌ನ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಸಾವಿನ ವಿಚಾರ ಅವರ ಅಭಿಮಾನಿಗಳಿಗೆ ಕಹಿಸುದ್ದಿಯಾಗಿಯೇ ಉಳಿದಿದೆ. ಯಾರ ಸಹಾಯವೂ ಇಲ್ಲದೆ ಯಾವುದೇ ಗಾಡ್‌ಫಾದರ್‌ಗಳ ಬೆಂಬಲವಿಲ್ಲದೆ ಸುಶಾಂತ್ ಸಿಂಗ್ ಬಾಲಿವುಡ್‌ನಲ್ಲಿ ಹೆಸರು ಮಾಡಿದ್ದರು ಹಾಗೂ ತಮ್ಮ ಪ್ರತಿಭಾನ್ವಿತ ನಟನೆಯಿಂದ ಜನರ ಮೆಚ್ಚುಗೆ ಗಳಿಸಿದ್ದರು. ಆದರೆ ತಮ್ಮ ಗೆಳೆಯನ ಫ್ಲ್ಯಾಟ್‌ನಲ್ಲಿ ಸುಶಾಂತ್ ಶವವಾಗಿ ಪತ್ತೆಯಾಗಿದ್ದರು. ಪೊಲೀಸ್ ವರದಿಯಲ್ಲಿ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಉಲ್ಲೇಖಿಸಲಾಗಿತ್ತು.  ಇದೀಗ ಸದನದಲ್ಲಿ (Parliament) ಸುಶಾಂತ್ ಸಿಂಗ್ ಸಾವಿನ ಕುರಿತು ಮತ್ತಷ್ಟು ಸತ್ಯಗಳು ಹೊರಬರುತ್ತಿದ್ದು, ರಾಜಕೀಯ ರಂಗದಲ್ಲೂ ಸುಶಾಂತ್ ಸಾವು ಪ್ರತಿಧ್ವನಿಸುತ್ತಿದೆ.


  ಸುಶಾಂತ್ ಸಾವಿಗೂ ಆದಿತ್ಯ ಠಾಕ್ರೆಗೂ ಏನು ಸಂಬಂಧ?


  ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲಿ ಆದಿತ್ಯ ಠಾಕ್ರೆ ಭಾಗಿಯಾಗಿರುವುದನ್ನು ಸಂಸದ ರಾಹುಲ್ ಶಿವಾಲೆ ಪ್ರಶ್ನಿಸಿದ್ದಾರೆ. ಸಿಬಿಐ ತನಿಖೆಯ ಕುರಿತು ಮತ್ತಷ್ಟು ವಿವರ ಕೇಳಿದ ರಾಹುಲ್, ಆದಿತ್ಯ ಠಾಕ್ರೆಯಿಂದ ರಿಯಾ ಚಕ್ರವರ್ತಿ 44 ಕರೆಗಳನ್ನು ಸ್ವೀಕರಿಸಿದ್ದಾರೆ ಎಂದು ಆಪಾದಿಸಿದ್ದಾರೆ.


  ಲೋಕಸಭೆಯಲ್ಲಿ ಈ ವಿಷಯದ ಕುರಿತು ಪ್ರಸ್ತಾವಿಸಿದ ರಾಹುಲ್ ಶಿವಾಲೆ, ಆದಿತ್ಯ ಠಾಕ್ರೆಯಿಂದ ರಿಯಾ ಚಕ್ರವರ್ತಿ 44 ಕರೆಗಳನ್ನು ಸ್ವೀಕರಿಸಿದ್ದಾರೆ ಎಂಬುವುದಾಗಿ ಬಿಹಾರ ಪೊಲೀಸರು ತಿಳಿಸಿದ್ದಾರೆ. ಸಿಬಿಐ ತನಿಖೆ ಏನು ಹೇಳುತ್ತದೆ? ತನಿಖೆಯ ಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ.


  ರಿಯಾ ಚಕ್ರವರ್ತಿ


  ಮೌನ ಮುರಿದ ಆದಿತ್ಯ ಠಾಕ್ರೆ


  ರಾಹುಲ್ ಶಿವಾಲೆ ಆಪಾದನೆಗೆ ಖಾರವಾಗಿಯೇ ಪ್ರತಿಕ್ರಿಯಿಸಿದ ಆದಿತ್ಯ ಠಾಕ್ರೆ ಪಕ್ಷಕ್ಕೆ ನಿಷ್ಠರಲ್ಲದವರು ಏನು ಬೇಕಾದರೂ ಹೇಳುತ್ತಾರೆ ಒಂದು ರೀತಿಯಲ್ಲಿ ಎಲುಬಿಲ್ಲದ ನಾಲಿಗೆಯಂತೆ, ಇವರು ಏನೂ ಹೇಳಿದರೂ ಅದು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ ಹಾಗೂ ಇಂತಹವರಿಂದ ಹೆಚ್ಚಿನ ನಿರೀಕ್ಷೆ ನನಗಿಲ್ಲ ಎಂದು ತಿಳಿಸಿದ್ದಾರೆ.


  ಇದನ್ನೂ ಓದಿ: Sushant Singh Rajput: ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದ ಫ್ಯ್ಲಾಟ್​ಗೆ ಜನ ಸಿಕ್ತಿಲ್ಲ! ಎರಡೂವರೆ ವರ್ಷದಿಂದ ಖಾಲಿ


  ನಿಮ್ಮನ್ನು ಇನ್ನೂ ಜಾಸ್ತಿ ಪ್ರೀತಿಸುತ್ತೇನೆ ಎಂದು ಮಾತ್ರವೇ ನಾನು ಹೇಳುತ್ತೇನೆ. ತಮ್ಮ ಮನೆಗೆ, ಪಕ್ಷಕ್ಕೆ ನಿಷ್ಠರಲ್ಲದವರಿಂದ ಹಾಗೂ ಬಾಯಿಗೆ ಬಂದಂತೆ ಮಾತನಾಡುವವರಿಂದ ನಾವು ಏನನ್ನೂ ನಿರೀಕ್ಷಿಸುವುದಿಲ್ಲ ಎಂದು ತಿಳಿಸಿದ್ದಾರೆ.


  ಮುಖ್ಯಮಂತ್ರಿ ಶಿಂಧೆ ಅವರ ಭೂಹಗರಣ ಹಾಗೂ ನಮ್ಮ ರಾಜ್ಯದ ಮೇಲೆ ಎಸಗಿರುವ ಅವಮಾನಗಳನ್ನು ಕುರಿತು ದಾಳಿಮಾಡಬಾರದು ಎಂಬ ಕಾರಣಕ್ಕೆ ಇಂತಹ ವಿಷಯಗಳನ್ನು ಸದನದಲ್ಲಿ ಚರ್ಚಿಸುತ್ತಿದ್ದಾರೆ ಹಾಗೂ ವೃಥಾ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.


  ರಿಯಾ ಹಾಗೂ ಆದಿತ್ಯ ನಡುವೆ 44 ಫೋನ್ ಕರೆಗಳು 


  2020 ರಲ್ಲಿ ರಿಯಾ ಚಕ್ರವರ್ತಿ ಹಾಗೂ AU (ಆದಿತ್ಯ ಉದ್ಧವ್ ಠಾಕ್ರೆ) ನಡುವೆ ಅನೇಕ ಫೋನ್ ಕರೆಗಳು ನಡೆದಿದೆ ಎಂದು ಸುದ್ದಿಮಾಧ್ಯಮ ವರದಿ ಮಾಡಿತ್ತು. ಆದರೆ ಅದೇ ಸಂಖ್ಯೆಗೆ ಕರೆ ಮಾಡಿದಾಗ SU ಮೊದಲಕ್ಷರವಿರುವ ವ್ಯಕ್ತಿಯು ಕರೆಗಳನ್ನು ಸ್ವೀಕರಿಸಿದ್ದಾರೆ. ಇದೇ ಸಂಖ್ಯೆಗೆ ರಿಯಾ ಚಕ್ರವರ್ತಿ 44 ಕ್ಕಿಂತಲೂ ಹೆಚ್ಚಿನ ದೂರವಾಣಿ ಕರೆಗಳನ್ನು ಮಾಡಿದ್ದಾರೆ ಎಂಬುದು ಬಯಲಾಗಿತ್ತು.


  ಸುಶಾಂತ್ ಮರಣದ ಕುರಿತು ಆದಿತ್ಯ ಠಾಕ್ರೆ ಮೌನವಹಿಸಿದ್ದನ್ನು ಕುರಿತು ಬಿಹಾರ ಸರಕಾರ ಪ್ರಶ್ನಿಸಿತ್ತು. ಕಾಕತಾಳೀಯವೆಂಬಂತೆ ಯುವ ರಾಜಕಾರಣಿ ಟ್ವಿಟರ್‌ನಲ್ಲಿ ತಮ್ಮ ಬಳಕೆದಾರ ಹೆಸರನ್ನು @AUThackeray ಎಂದೇ ಇಟ್ಟುಕೊಂಡಿದ್ದಾರೆ.


  ಇದನ್ನೂ ಓದಿ: Sushant Singh Rajput: ಸುಶಾಂತ್​ನಂತೆಯೇ ಜೀವನ ಕೊನೆಗೊಳಿಸೋಕೆ ನಿರ್ಧರಿಸಿದ್ದೆ ಎಂದ ವಿವೇಕ್ ಒಬೆರಾಯ್ 


  ಆತ್ಯಹತ್ಯೆ ಮಾಡಿಕೊಂಡಿದ್ದ ಸುಶಾಂತ್ ಸಿಂಗ್ ರಜಪೂತ್


  ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರು ತಮ್ಮ 34 ನೇ ವಯಸ್ಸಿನಲ್ಲಿ ಜೂನ್ 14, 2020 ರಂದು ಮುಂಬೈನಲ್ಲಿ ನಿಧನರಾದರು. ತನ್ನ ಸ್ನೇಹಿತ ಮತ್ತು ಫ್ಲಾಟ್‌ಮೇಟ್‌ನ ಮುಂಬೈನ ಅಪಾರ್ಟ್ಮೆಂಟ್‌ನ ಬೆಡ್‌ರೂಮ್‌ ಒಂದರಲ್ಲಿ ಅವರು ಶವವಾಗಿ ಪತ್ತೆಯಾಗಿದ್ದರು. ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.


  ಸುಶಾಂತ್ ಹಾಗೂ ರಿಯಾ ನಡುವಿನ ಅನ್ಯೋನ್ಯತೆ


  ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ತಾನು ಹಾಗೂ ಸುಶಾಂತ್ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೆವು ಎಂಬ ವಿಚಾರ ಎಲ್ಲರಿಗೂ ತಿಳಿದಿತ್ತು. ಇತ್ತೀಚೆಗಷ್ಟೇ ಬಂಟಿ ಸಜ್‌ದೇವ್ ಅವರೊಂದಿಗೆ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ವದಂತಿ ಹಬ್ಬಿದೆ.


  ಸುಶಾಂತ್ ಹಾಗೂ ರಿಯಾ ಜೊತೆಗಿರುವ ಫೋಟೋಗಳನ್ನು ರಿಯಾ ತಮ್ಮ ಇನ್‌ಸ್ಟಾದಲ್ಲಿ ಆಗಾಗ್ಗೆ ಹಂಚಿಕೊಳ್ಳುತ್ತಿದ್ದು ನಿನ್ನನ್ನು ಪ್ರತಿ ದಿನ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

  Published by:Precilla Olivia Dias
  First published: