HOME » NEWS » National-international » ADIA RELIANCE DEAL ABU DHABIS SOVEREIGN FUND TO INVEST RS 5512 CRORE IN RELIANCE RETAIL SNVS

ADIA-Reliance Retail – ಅಬುಧಾಬಿಯ ಎಡಿಐಎಯಿಂದ ರಿಲಾಯನ್ಸ್ ರೀಟೇಲ್​ನಲ್ಲಿ 5,512 ಕೋಟಿ ರೂ ಹೂಡಿಕೆ

ಕಳೆದ ನಾಲ್ಕು ವಾರಗಳಿಂದ ರಿಲಾಯನ್ಸ್ ರೀಟೇಲ್​ನಲ್ಲಿ ಹಲವು ಕಂಪನಿಗಳು ಹೂಡಿಕೆ ಮಾಡಿವೆ. ಸಿಲ್ವರ್ ಲೇಕ್, ಕೆಕೆಆರ್, ಜನರಲ್ ಅಟ್ಲಾಂಟಿಕ್, ಮುಬಾದಲ, ಜಿಐಸಿ, ಟಿಪಿಜಿ ಮತ್ತು ಈಗ ಎಡಿಐಎ ಸಂಸ್ಥೆಗಳಿಂದ ಆಗಿರುವ ಹೂಡಿಕೆಯ ಮೊತ್ತ 37,710 ಕೋಟಿ ಆಗಿದೆ.

news18
Updated:October 6, 2020, 7:40 PM IST
ADIA-Reliance Retail – ಅಬುಧಾಬಿಯ ಎಡಿಐಎಯಿಂದ ರಿಲಾಯನ್ಸ್ ರೀಟೇಲ್​ನಲ್ಲಿ 5,512 ಕೋಟಿ ರೂ ಹೂಡಿಕೆ
ಸಾಂದರ್ಭಿಕ ಚಿತ್ರ
  • News18
  • Last Updated: October 6, 2020, 7:40 PM IST
  • Share this:
ಮುಂಬೈ(ಅ. 06): ರಿಲಾಯನ್ಸ್ ಇಂಡಸ್ಟ್ರೀಸ್​ನ ಅಂಗವಾದ ರಿಲಾಯನ್ಸ್ ರೀಟೇಲ್​ನಲ್ಲಿ ಅಬು ಧಾಬಿಯ ಎಡಿಐಎ ಸಂಸ್ಥೆ 5,512.50 ಕೋಟಿ ರೂ ಹೂಡಿಕೆ ಮಾಡಿ ಶೇ. 1.2ರಷ್ಟು ಪಾಲನ್ನು ಖರೀದಿಸುತ್ತಿದೆ. ಈ ಹೂಡಿಕೆಯಿಂದ ರಿಲಾಯನ್ಸ್ ರೀಟೇಲ್ ವೆಂಚರ್ಸ್ ಲಿ ಸಂಸ್ಥೆಯ ಈಕ್ವಿಟಿ ಮೌಲ್ಯ 4.285 ಲಕ್ಷ ಕೋಟಿ ಆಗಿದೆ ಎಂದು ಆರ್​ಐಎಲ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕಳೆದ ನಾಲ್ಕು ವಾರಗಳಿಂದ ರಿಲಾಯನ್ಸ್ ರೀಟೇಲ್​ನಲ್ಲಿ ಹಲವು ಕಂಪನಿಗಳು ಹೂಡಿಕೆ ಮಾಡಿವೆ. ಸಿಲ್ವರ್ ಲೇಕ್, ಕೆಕೆಆರ್, ಜನರಲ್ ಅಟ್ಲಾಂಟಿಕ್, ಮುಬಾದಲ, ಜಿಐಸಿ, ಟಿಪಿಜಿ ಮತ್ತು ಈಗ ಎಡಿಐಎ ಸಂಸ್ಥೆಗಳಿಂದ ರಿಲಾಯನ್ಸ್ ರೀಟೇಲ್​ನಲ್ಲಿ ಆಗಿರುವ ಹೂಡಿಕೆಯ ಮೊತ್ತ ಬರೋಬ್ಬರಿ 37,710 ಕೋಟಿ ರೂ ಆಗಿದೆ.

ಅಬು ಧಾಬಿ ಇನ್ವೆಸ್ಟ್​ಮೆಂಟ್ ಅಥಾರಿಟಿ (ಎಐಡಿಎ) ಸಂಸ್ಥೆಯ ಹೂಡಿಕೆ ಬಗ್ಗೆ ಮಾತನಾಡಿದ ರಿಲಾಯನ್ಸ್ ಇಂಡಸ್ಟ್ರೀಸ್​ನ ಛೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಮುಕೇಶ್ ಅಂಬಾನಿ ಅವರು, “ಎಐಡಿಎಯ ಈಗಿನ ಹೂಡಿಕೆಯಿಂದ ಬಹಳ ಖುಷಿಯಾಗಿದೆ. ರಿಲಾಯನ್ಸ್ ಸಂಸ್ಥೆಗೆ ಅದು ಬೆಂಬಲ ಮುಂದುವರಿಸುತ್ತಿರುವುದು ಹರ್ಷ ತಂದಿದೆ. ಜಾಗತಿಕವಾಗಿ ನಾಲ್ಕು ದಶಕಗಳಿಂದ ಮೌಲ್ಯವೃದ್ಧಿಸುವ ಕೆಲಸ ಮಾಡುತ್ತಿರುವ ಎಐಡಿಎ ಸಂಸ್ಥೆಯ ಈ ಹೂಡಿಕೆಯಿಂದ ಬಹಳ ಪ್ರಯೋಜನ ಆಗುತ್ತದೆಂದು ಆಶಿಸುತ್ತೇನೆ” ಎಂದಿದ್ದಾರೆ.

ಇದನ್ನೂ ಓದಿ: RAISE 2020: ಬುದ್ಧಿವಂತ ದತ್ತಾಂಶವೇ ಇವತ್ತಿನ ಡಿಜಿಟಲ್ ಬಂಡವಾಳ – ಮುಕೇಶ್ ಅಂಬಾನಿ

“ಬೇಡಿಕೆ ಆಧಾರಿತ ಬೆಳವಣಿಗೆ ಮತ್ತು ವೇಗದ ತಂತ್ರಜ್ಞಾನ ಪ್ರಗತಿ ಇರುವ ಏಷ್ಯನ್ ಮಾರುಕಟ್ಟೆಗಳಲ್ಲಿ ಮುಂಚೂಣಿಯಲ್ಲಿರುವ ವ್ಯವಹಾರಗಳಲ್ಲಿ ಹೂಡಿಕೆ ಮಾಡುವ ನಮ್ಮ ಕಾರ್ಯತಂತ್ರದ ಭಾಗವಾಗಿ ರಿಲಾಯನ್ಸ್ ರೀಟೇಲ್​ನಲ್ಲಿ ಹೂಡಿಕೆ ಮಾಡಿದ್ದೇವೆ” ಎಂದು ಅಬು ಧಾಬಿ ಇನ್ವೆಸ್ಟ್​ಮೆಂಟ್ ಅಥಾರಿಟಿಯ ಪ್ರೈವೇಟ್ ಈಕ್ವಿಟೀಸ್ ಡಿಪಾರ್ಟ್​ಮೆಂಟ್​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಹಮದ್ ಶಹವಾನ್ ಅಲ್ದಹೇರಿ ತಿಳಿಸಿದ್ದಾರೆ.

ಇದನ್ನೂ ಓದಿ: ಜಾಗತಿಕ ಕಂಪನಿಗಳಾದ ಜಿಐಸಿ, ಟಿಪಿಜಿಯಿಂದ ರಿಲಯನ್ಸ್​ನಲ್ಲಿ ಒಂದೇ ದಿನ 7,350 ಕೋಟಿ ರೂ. ಹೂಡಿಕೆ

ಎಐಡಿಎ ಜೊತೆಗಿನ ಈ ಒಪ್ಪಂದ ಸಾಕಾರಗೊಳ್ಳಲು ರಿಲಾಯನ್ಸ್ ರೀಟೇಲ್​ಗೆ ಹಣಕಾಸು ಸಲಹೆಗಾರನಾಗಿ ಕೆಲಸ ಮಾಡಿದ್ದು ಮಾರ್ಗನ್ ಸ್ಟಾನ್ಲೀ ಎಂಬ ಹಣಕಾಸು ಸಲಹಾ ಸಂಸ್ಥೆ. ಹಾಗೆಯೇ, ಸೈರಿಲ್ ಅಮರ್​ಚಂದ್ ಮಂಗಲದಾಸ್ ಮತ್ತು ಡೇವಿಡ್ ಪೋಲ್ಕ್ ಅಂಡ್ ವಾರ್ಡ್​ವೆಲ್ ಸಂಸ್ಥೆಗಳು ಕಾನೂನು ಸಲಹೆಗಾರನಾಗಿ ಮಾರ್ಗದರ್ಶನ ಮಾಡಿದೆ.

ಎಐಡಿಎ ಸಂಸ್ಥೆ ಈ ಮುಂಚೆಯೂ ರಿಲಾಯನ್ಸ್ ಇಂಡಸ್ಟ್ರೀಸ್​ನ ಇತರ ಅಂಗ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.
Published by: Vijayasarthy SN
First published: October 6, 2020, 7:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories