ಬಿಹಾರದಲ್ಲಿ ಮೃತಪಟ್ಟ ಮಕ್ಕಳ ಸಂಖ್ಯೆ 126 ಕ್ಕೆ ಏರಿಕೆ; ಸಿಎಂ ನಿತೀಶ್​ ಕುಮಾರ್ ಆಸ್ಪತ್ರೆಗೆ ಮೊದಲ ಭೇಟಿ

ಈ ಪ್ರಕರಣ ಸಂಬಂಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸೋಮವಾರ ಕೇಂದ್ರ ಆರೋಗ್ಯ ಸಚಿವ ಮತ್ತು ಬಿಹಾರ ಸರ್ಕಾರಕ್ಕೆ ನೋಟಿಸ್​ ಕಳುಹಿಸಿದೆ.

Latha CG | news18
Updated:June 18, 2019, 2:46 PM IST
ಬಿಹಾರದಲ್ಲಿ ಮೃತಪಟ್ಟ ಮಕ್ಕಳ ಸಂಖ್ಯೆ 126 ಕ್ಕೆ ಏರಿಕೆ; ಸಿಎಂ ನಿತೀಶ್​ ಕುಮಾರ್ ಆಸ್ಪತ್ರೆಗೆ ಮೊದಲ ಭೇಟಿ
ಸಾಂದರ್ಭಿಕ ಚಿತ್ರ
  • News18
  • Last Updated: June 18, 2019, 2:46 PM IST
  • Share this:
ಪಾಟ್ನಾ,(ಜೂ.18): ಬಿಹಾರದಲ್ಲಿ ಮಹಾಮಾರಿ ಮೆದುಳು ಜ್ವರದಿಂದಾಗಿ ಸಾವನ್ನಪ್ಪುತ್ತಿರುವ ಮಕ್ಕಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಸೋಮವಾರ ಸತ್ತವರ ಸಂಖ್ಯೆ 100 ಇತ್ತು. ಇಂದು ಆ ಸಂಖ್ಯೆ ಏರಿಕೆಯಾಗಿದ್ದು, 126 ಮಕ್ಕಳು ಮೃತಪಟ್ಟಿದ್ದಾರೆ. ಮುಜಾಫರ್​​ನಗರವೊಂದರಲ್ಲೇ 107 ಮಕ್ಕಳು ತಮ್ಮ ಜೀವ ಕಳೆದುಕೊಂಡಿದ್ದಾರೆ.

ರಾಜ್ಯದಲ್ಲಿ ಮೆದುಳು ಜ್ವರ ರೋಗ ಹರಡಲು ಶುರುವಾಗಿ 17 ದಿನಗಳು ಕಳೆದಿವೆ. ಇಷ್ಟು ದಿನಗಳ ಬಳಿಕ ಇಂದು ಬಿಹಾರ ಸಿಎಂ ನಿತೀಶ್​ ಕುಮಾರ್​ ಮೊದಲ ಬಾರಿಗೆ ಮುಜಾಫರ್​ನಗರಕ್ಕೆ ಭೇಟಿ ನೀಡಲಿದ್ದಾರೆ.

ಮುಜಾಫರ್​ನಗರದ ಶ್ರೀ ಕೃಷ್ಣ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 85 ಮಕ್ಕಳು, ಕೇಜ್ರಿವಾಲ್​ ಮೆಟರ್ನಿಟಿ ಆಸ್ಪತ್ರೆಯಲ್ಲಿ 18 ಮಕ್ಕಳು ಅಸುನೀಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಕೆಲವು ದಿನಗಳ ಹಿಂದೆ ಬಿಹಾರ ಸಿಎಂ ನಿತೀಶ್​ ಕುಮಾರ್​ ಮೃತ ಮಕ್ಕಳ ಕುಟುಂಬಕ್ಕೆ 4 ಲಕ್ಷ ಪರಿಹಾರ ಘೋಷಿಸಿದ್ದರು.

ಇದನ್ನೂ ಓದಿ: ಬಿಹಾರದಲ್ಲಿ ಉಲ್ಬಣಿಸಿದ ಮೆದುಳು ಜ್ವರ; ಮಕ್ಕಳ ಸಾವಿನ ಸಂಖ್ಯೆ 100 ಕ್ಕೆ ಏರಿಕೆ

ಮಕ್ಕಳ ಸಾವಿನ ಸಂಬಂಧ ಸೋಮವಾರ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ಉನ್ನತ ಸಭೆಯೊಂದನ್ನು ನಡೆಸಿದ್ದರು. ಈ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಏಮ್ಸ್​ ಮತ್ತು ಐಸಿಎಂಆರ್​ನ ವೈದ್ಯರು ಭಾಗಿಯಾಗಿದ್ದರು. ತುರ್ತಾಗಿ ಉತ್ತಮ ಗುಣಮಟ್ಟದ ಸಂಶೋಧನಾ ತಂಡ ಅಗತ್ಯವಿದೆ ಎಂದು ಹೇಳಿದ್ದರು.

ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್​ ಭಾನುವಾರ ಮುಜಾಫರನಗರದ ಆಸ್ಪತ್ರೆಗೆ ಭೇಟಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಐದು ವೈರೋಲಾಜಿಕಲ್​ ಲ್ಯಾಬ್​ಗಳನ್ನು ತೆರೆಯವಂತೆ ಸೂಚನೆ ನೀಡಿದ್ದರು. ಜೊತೆಗೆ ಶ್ರೀಕೃಷ್ಣ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಯ ಮಕ್ಕಳ ಐಸಿಯುವಿನಲ್ಲಿ 100 ಹಾಸಿಗೆಗಳನ್ನು ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು.

ಈ ಪ್ರಕರಣ ಸಂಬಂಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸೋಮವಾರ ಕೇಂದ್ರ ಆರೋಗ್ಯ ಸಚಿವ ಮತ್ತು ಬಿಹಾರ ಸರ್ಕಾರಕ್ಕೆ ನೋಟಿಸ್​ ಕಳುಹಿಸಿದೆ.
First published:June 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ