Rahul Gandhi: ರಾಹುಲ್ ಗಾಂಧಿಗೂ, ಬಾಲಿವುಡ್ ಸಿನಿಮಾ ಸೋಲಿಗೂ ಎತ್ತಣ ಸಂಬಂಧ? ಹೀಗ್ಯಾಕಂದ್ರು ಈ ನಟಿ?

ಬಾಲಿವುಡ್ ದಿಗ್ಗಜರ ಸಿನಿಮಾಗಳೂ ಮಕಾಡೆ ಮಲಗುತ್ತಿರುವುದೇಕೆ ಅಂತ ಬಾಲಿವುಡ್ ಸಿನಿ ಪಂಡಿತರು ತಲೆ ಕೆರೆದುಕೊಳ್ಳುತ್ತಾದ್ದಾರೆ. ಇಂತ ಹೊತ್ತಲ್ಲಿ ಬಾಲಿವುಡ್ ನಟಿಯೊಬ್ಬರು (Bollywood Actress) ಬಾಲಿವುಡ್ ಸಿನಿಮಾಗಳ ಸೋಲನ್ನು ಕಾಂಗ್ರೆಸ್ ನಾಯಕ (Congress Leader) ರಾಹುಲ್ ಗಾಂಧಿ (Rahul Gandhi) ಅವರಿಗೆ ಹೋಲಿಸಿದ್ದಾರೆ.

ಸ್ವರಾ ಭಾಸ್ಕರ್ ಮತ್ತು ರಾಹುಲ್ ಗಾಂಧಿ

ಸ್ವರಾ ಭಾಸ್ಕರ್ ಮತ್ತು ರಾಹುಲ್ ಗಾಂಧಿ

  • Share this:
ಮುಂಬೈ: ಒಂದು ಕಾಲದಲ್ಲಿ ಇಡೀ ಭಾರತೀಯ ಚಿತ್ರರಂಗವನ್ನು (Indian Film Industry) ಆಳಿದ್ದ ಬಾಲಿವುಡ್ ಸಿನಿಮಾಗಳು (Bollywood Cinema) ಸೋಲಿನ ಸುಳಿಯಲ್ಲಿ ಸಿಲುಕಿ ನರಳುತ್ತಿದೆ. 2022ನೇ ವರ್ಷವಂತೂ ಬಾಲಿವುಡ್ ಸಿನಿಮಾಗಳ ಪಾಲಿಗೆ ಅದೃಷ್ಟಹೀನ ವರ್ಷ (unlucky year) ಅಂತಾನೇ ಹೇಳಬಹುದು. ಕನ್ನಡ ಚಿತ್ರರಂಗದ (Kannada Film Industry) ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಕೆಜಿಎಫ್‌ 2 ಹಿಂದಿ ವರ್ಷನ್ (KGF 2 Hindi Version) ಬಿಟ್ಟರೆ ಹಿಂದಿಯ ಯಾವ ಸಿನಿಮಾಗಳೂ ಈ ಬಾರಿ ಲಾಭ ತಂದುಕೊಟ್ಟಿಲ್ಲ ಎಂಬುದು ಇತ್ತೀಚಿಗಿನ ವರದಿ. ಬಾಲಿವುಡ್ ದಿಗ್ಗಜರ ಸಿನಿಮಾಗಳೂ ಮಕಾಡೆ ಮಲಗುತ್ತಿರುವುದೇಕೆ ಅಂತ ಬಾಲಿವುಡ್ ಸಿನಿ ಪಂಡಿತರು ತಲೆ ಕೆರೆದುಕೊಳ್ಳುತ್ತಾದ್ದಾರೆ. ಇಂತ ಹೊತ್ತಲ್ಲಿ ಬಾಲಿವುಡ್ ನಟಿಯೊಬ್ಬರು (Bollywood Actress) ಬಾಲಿವುಡ್ ಸಿನಿಮಾಗಳ ಸೋಲನ್ನು ಕಾಂಗ್ರೆಸ್ ನಾಯಕ (Congress Leader) ರಾಹುಲ್ ಗಾಂಧಿ (Rahul Gandhi) ಅವರಿಗೆ ಹೋಲಿಸಿದ್ದಾರೆ.

ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾದ ಸ್ವರಾ ಭಾಸ್ಕರ್

ತಮ್ಮ ವಿವಾದಿತ ಹೇಳಿಕೆಗಳಿಂದಲೇ ಸುದ್ದಿಯಾಗುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್, ಇದೀಗ ಮತ್ತೊಂದು ಹೇಳಿಕೆ ನೀಡಿ, ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ತುತ್ತಾಗಿದ್ದಾರೆ. ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಭಾಗಿಯಾಗಿದ್ದ ಸ್ವರಾ ಭಾಸ್ಕರ್, ಬಾಲಿವುಡ್ ಸಿನಿಮಾಗಳ ಸತತ ಸೋಲನ್ನು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರಿಗೆ ಹೋಲಿಕೆ ಮಾಡಿದ್ದಾರೆ.

ಸಿನಿಮಾ ಸೋಲನ್ನು ರಾಹುಲ್ ಗಾಂಧಿಗೆ ಹೋಲಿಸಿದ ನಟಿ!

ಹಿಂದಿ ಚಿತ್ರರಂ‌ಗದ ಸದ್ಯದ ಸ್ಥಿತಿಗತಿಯನ್ನು ರಾಹುಲ್ ಗಾಂಧಿಗೆ ಹೋಲಿಸಿದ್ದಾರೆ. ಇತ್ತೀಚೆಗೆ ಹಿಂದಿ ಸಿನಿಮಾಗಳು ಸೋಲುತ್ತಿವೆಯಲ್ಲ, ಅದಕ್ಕೆ ಕಾರಣ ಏನಿರಬಹುದು ಎಂದು ಟಿವಿ ಸಂದರ್ಶಕರು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸ್ವರಾ ಭಾಸ್ಕರ್, ಹಿಂದಿ ಸಿನಿಮಾಗಳ ಸೋಲು ರಾಹುಲ್ ಗಾಂಧಿಯವರಂತೆ ಆಗಿದೆ. ರಾಹುಲ್ ಗಾಂಧಿ ಅವರನ್ನು ಜನರು ಪಪ್ಪು ಎಂದು ವ್ಯಂಗ್ಯವಾಗಿ ಕರೆಯುತ್ತಿದ್ದಾರೆ. ನಾನು ಅವರನ್ನು ನೇರವಾಗಿ ಭೇಟಿ ಮಾಡಿದ್ದೇನೆ. ಅವರಷ್ಟುಬುದ್ಧಿವಂತರು, ಸ್ಪಷ್ಟತೆ ಇರುವಂತ ನಾಯಕರು ಬಹುಶಃ ಯಾರೂ ಇಲ್ಲ. ಆದರೂ  ಅವರನ್ನು ‘ಪಪ್ಪು’, ‘ಪಪ್ಪು’ ಎಂದು ಗೇಲಿ ಮಾಡಲಾಗುತ್ತಿದೆ. ಹಾಗೆಯೇ ಬಾಲಿವುಡ್‌ ಕೂಡ ಪಪ್ಪುಫಿಕೇಶನ್‌ನಲ್ಲಿ ನರಳುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: Congress Election: ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆಯಲ್ಲಿ ವಿಳಂಬ ಏಕೆ? ಬಯಲಾಯ್ತು ಮಹತ್ವದ ಕಾರಣ!

“ಓಟಿಟಿಗಳು ಬಾಲಿವುಡ್‌ಗೆ ಹೊಡೆತ ನೀಡುತ್ತಿದೆ"

ಇನ್ನು ಕೊರೋನಾ ನಂತರದ ಆರ್ಥಿಕ ಹಿಂಜರಿತವೇ ಬಾಕ್ಸ್ ಆಫೀಸ್ ತುಂಬದೇ ಇರಲು ಪ್ರಮುಖ ಕಾರಣವಾಗಿತ್ತು ಅಂತ ಸ್ವರಾ ಭಾಸ್ಕರ್ ಹೇಳಿದ್ದಾರೆ. ಬಾಲಿವುಡ್ ಸಿನಿಮಾಗಳ ಸೋಲು ಈಗ ಮತ್ತೊಂದು ರೂಪ ಪಡೆದುಕೊಂಡಿದೆ. ಓಟಿಟಿಯು ಜನರನ್ನು ಚಿತ್ರಮಂದಿರಗಳಿಗೆ ಬಾರದಂತೆ ಮಾಡುತ್ತಿದೆ ಎಂದು ಸ್ವರಾ ಭಾಸ್ಕರ್ ವಿಶ್ಲೇಷಿಸಿದ್ದಾರೆ.

“ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್‌ ಬಗ್ಗೆ ದ್ವೇಷ”

ಮುಂದುವರೆದು ಮಾತನಾಡಿದ ಅವರು, ನಟ ಸುಶಾಂತ್ ಸಿಂಗ್ ರಜಪೂತ್ ಅವರ ದುರಂತ ಸಾವಿನ ನಂತರ ಬಾಲಿವುಡ್‌ ಬಗ್ಗೆ ಜನ ದ್ವೇಷ ಬೆಳೆಸಿಕೊಂಡಿದ್ದಾರೆ. ಥಿಯೇಟರ್‌ಗಳಲ್ಲಿ ಯಾವುದೇ ಪ್ರದರ್ಶನಗಳಿಲ್ಲದಿದ್ದಲ್ಲಿ ಬಾಲಿವುಡ್‌ನವರು ಹೊಣೆಯಾಗುತ್ತಾರೆ ಎಂಬುದು ಸುಳ್ಳು ಅಂತ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: Sonali Phogat Passes Away: ಬಿಜೆಪಿ ನಾಯಕಿ, ಟಿಕ್​ಟಾಕ್ ಸ್ಟಾರ್ ಸೋನಾಲಿ ಫೋಗಟ್ ಇನ್ನಿಲ್ಲ

ಸ್ವರಾ  ಭಾಸ್ಕರ್ ಮುಂದಿನ ಸಿನಿಮಾ ಯಾವುದು?

ನಟಿ ಸ್ವರಾ ಭಾಸ್ಕರ್ ಶೀಘ್ರದಲ್ಲೇ ಜಹಾನ್ ಚಾರ್ ಯಾರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಕೊನೆಯದಾಗಿ ವೀರೇದಿ ವೆಡ್ಡಿಂಗ್ ಸಿನಿಮಾದಲ್ಲಿ ಸ್ವರಾ ನಟಿಸಿದ್ದರು. ಇದೀಗ ಜಹಾರ್ ಚಾರ್ ಯಾರ್ ಚಿತ್ರದ ಮೂಲಕ ನಟಿ ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.
Published by:Annappa Achari
First published: