ಜಡೇಜಾ ದಾಖಲೆ ಮುರಿದ ಪೆಟ್ರೋಲ್: ಟ್ವಿಟರ್​ನಲ್ಲಿ ಕೇಂದ್ರ ಸರ್ಕಾರದ ಕಾಲೆಳೆದ ನಟಿ ರಮ್ಯಾ

news18
Updated:September 10, 2018, 1:34 PM IST
ಜಡೇಜಾ ದಾಖಲೆ ಮುರಿದ ಪೆಟ್ರೋಲ್: ಟ್ವಿಟರ್​ನಲ್ಲಿ ಕೇಂದ್ರ ಸರ್ಕಾರದ ಕಾಲೆಳೆದ ನಟಿ ರಮ್ಯಾ
news18
Updated: September 10, 2018, 1:34 PM IST
-ನ್ಯೂಸ್ 18 ಕನ್ನಡ

ಬೆಂಗಳೂರು(ಸೆ.10):  ಕಾಂಗ್ರೆಸ್ ಮಾಜಿ ಸಂಸದೆ ನಟಿ ರಮ್ಯಾ ಅವರು ಮೋದಿ ಸರ್ಕಾರವನ್ನು ಟ್ವಿಟರ್​ನಲ್ಲಿ ಕಾಲೆದಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಇಂದು ಭಾರತ್ ಬಂದ್​ಗೆ ಕರೆ ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ರಮ್ಯಾ ಕೆಲ ಹಾಸ್ಯಾಸ್ಪದ ಫೋಟೋಗಳನ್ನು ಹಾಕಿ ಸರ್ಕಾರವನ್ನು ಲೇವಡಿ ಮಾಡಿದ್ದಾರೆ.

ಅದರಲ್ಲಿ ಅಮೀರ್ ಖಾನ್ ನಟಿಸಿರುವ ಧೂಮ್3 ಮತ್ತು ದಂಗಲ್ ಚಿತ್ರಗಳ ಪೋಟೋಗಳನ್ನು ಯುಪಿಎ ಮತ್ತು ಎನ್​ಡಿಎ ಸರ್ಕಾರಕ್ಕೆ ಹೋಲಿಸಿದ್ದಾರೆ. ಇಲ್ಲಿ ಉತ್ತಮ ದೇಹಾದಾರ್ಢ್ಯ ಹೊಂದಿರುವ ಅಮೀರ್ ಖಾನ್​ ಚಿತ್ರವನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಪೆಟ್ರೋಲ್ ಬೆಲೆಗೆ ಹೋಲಿಸಿದರೆ, ದಂಗಲ್​ನಲ್ಲಿ ಮುದುಕನ ಪಾತ್ರದಲ್ಲಿ ಕಾಣಿಸಿಕೊಂಡ ಅಮೀರ್​ನ್ನು ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರದ ಪೆಟ್ರೋಲ್​ ದರಕ್ಕೆ ಹೋಲಿಸಿ ಟ್ರೋಲ್ ಮಾಡಿದ್ದಾರೆ.ನಿನ್ನೆ ನಡೆದ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಭಾರತದ ಪರ ರವೀಂದ್ರ ಜಡೇಜಾ ವೈಯಕ್ತಿಕ ಗರಿಷ್ಠ ಮೊತ್ತ 86 ರನ್​ಗಳಿಸಿದ್ದರು. ಇದನ್ನು ತಮ್ಮ ಟ್ವೀಟ್​ನಲ್ಲಿ ಹಾಸ್ಯಾತ್ಮಕವಾಗಿ ಪ್ರಸ್ತಾಪಿಸಿದ ರಮ್ಯಾ ಇದು ಭಾರತದ ಎರಡನೇ 2ನೇ ಗರಿಷ್ಠ ರನ್​ ಆಗಿದೆ. ಮೊದಲನೇ ಸ್ಥಾನದಲ್ಲಿ ಭಾರತದ ಪೆಟ್ರೋಲ್ ದರ 87 ಇದೆ ಎಂದು ಟ್ವೀಟ್​ ಮಾಡಿ ವ್ಯಂಗ್ಯವಾಡಿದ್ದಾರೆ.


ರಮ್ಯಾರವರು ಈ ಹಿಂದೆ ಕೂಡ ಹಲವು ಬಾರಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳನ್ನು ಮಾಡಿದ್ದರು. ಅದರ ಒಂದು ಸ್ಯಾಂಪಲ್ ಈಗಲೂ ತಮ್ಮ ಟ್ವೀಟರ್​ನಲ್ಲಿ ಪಿನ್​ ಮಾಡಿ ಉಳಿಸಿಕೊಂಡಿದ್ದಾರೆ.

First published:September 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...