HOME » NEWS » National-international » ACTRESS POLITICIAN NAGMA TESTED POSITIVE FOR COVID 19 SESR

Nagma: ಕೊವೀಡ್ ಲಸಿಕೆ ಪಡೆದ ಬಳಿಕ ಸೋಂಕಿಗೆ ತುತ್ತಾದ ನಟಿ ನಗ್ಮಾ

ಕೋವಿಡ್​ ಲಸಿಕೆ ಪಡೆದ ಕೆಲವೇ ದಿನಗಳಲ್ಲಿ ಸೋಂಕು ಪತ್ತೆಯಾಗಿದೆ. ನನ್ನ ಸಂಪರ್ಕಕ್ಕೆ ಒಳಗಾದವರು ಮುನ್ನೆಚ್ಚರಿಕೆ ವಹಿಸಿ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

news18-kannada
Updated:April 8, 2021, 4:20 PM IST
Nagma: ಕೊವೀಡ್ ಲಸಿಕೆ ಪಡೆದ ಬಳಿಕ ಸೋಂಕಿಗೆ ತುತ್ತಾದ ನಟಿ ನಗ್ಮಾ
ನಗ್ಮಾ
  • Share this:
ನಟಿ, ರಾಜಕಾರಣಿ ನಗ್ಮಾ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಕುರಿತು ಟ್ವೀಟರ್​ ಮೂಲಕ ದೃಢಪಡಿಸಿರುವ ಅವರು, ಇತ್ತೀಚೆಗಷ್ಟೇ ತಾವು ಕೊವೀಡ್​ ಲಸಿಕೆ ಮೊದಲ ಡೋಸ್​ ಪಡೆದಿದ್ದರೂ ತಮಗೆ ಕೋವಿಡ್​ ಸೋಂಕು ದೃಢಪಟ್ಟಿದೆ. ಸೋಂಕಿನ ಹಿನ್ನಲೆ ತಾವು ಹೋಂ ಕ್ವಾರಂಟೈನ್​ಗೆ ಒಳಗಾಗುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಏ.2 ರಂದು ನಟಿ ನಗ್ಮಾ ಕೋವಿಡ್​ ಲಸಿಕೆ ಪಡೆದಿದ್ದರು. ಸೋಂಕಿಗೆ ತುತ್ತಾಗಿರುವ ಹಿನ್ನಲೆ 50 ವರ್ಷದ ನಟಿ ತಮ್ಮ ಸಂಪರ್ಕಕ್ಕೆ ಒಳಗಾದ ಕಾಂಗ್ರೆಸ್​ ಮುಖಂಡರು ಮತ್ತು ಅಭಿಮಾನಿಗಳು ಎಚ್ಚರಿಕೆವಹಿಸುವಂತೆ ಮನವಿ ಮಾಡಿದ್ದಾರೆ.



ಕೋವಿಡ್​ ಲಸಿಕೆ ಪಡೆದ ಕೆಲವೇ ದಿನಗಳಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾದಗ ಸೋಂಕು ಪತ್ತೆಯಾಗಿದೆ. ನನ್ನ ಸಂಪರ್ಕಕ್ಕೆ ಒಳಗಾದವರು ಮುನ್ನೆಚ್ಚರಿಕೆ ವಹಿಸಿ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಕೋವಿಡ್​ ಲಸಿಕೆ ಮೊದಲ ಡೋಸ್​ ಪಡೆದ ತಕ್ಷಣ ಸುರಕ್ಷಿತರೂ ಎಂದು ತಿಳಿಯಬೇಡಿ ಅಗತ್ಯ ಮುನ್ನೇಚ್ಚರಿಕೆ ವಹಿಸಿ ಎಂದಿದ್ದಾರೆ. ಮಾರ್ಚ್​ 9ರಂದು ಕೋವಿಡ್​ ಲಸಿಕೆ ಪಡೆದ ಅವರು, ಮಾರ್ಚ್​ 26ರಂದು ತಮಗೆ ಕೊರೋನಾ ಸೋಂಕು ದೃಢವಾಗಿದ್ದ ಬಗ್ಗೆ ತಿಳಿಸಿದ್ದರು.

ಕೋವಿಡ್​ ಎರಡನೇ ಅಲೆಯಿಂದಾಗಿ ದೇಶದಲ್ಲಿ ಸೋಂಕಿತರ ಸಂಖ್ಯೆ ಏರುತ್ತಿದೆ. ಲಸಿಕೆ ಪಡೆದವರು ಕೂಡ ಕೊರೋನಾ ಸೋಂಕಿಗೆ ತುತ್ತಾಗುತ್ತಿರುವುದು ವರದಿಯಾಗುತ್ತಿದೆ. ಇದು ಕೇಂದ್ರ ಸರ್ಕಾರವನ್ನು ಕೂಡ ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಇದೇ ಹಿನ್ನಲೆ ಲಸಿಕೆ ಪಡೆದವರು ಕೂಡ ಕೊರೋನಾ ಪಾಸಿಟಿವ್ ಆಗುತ್ತಿರುವವರ ಮಾಹಿತಿ ಕಲೆ ಹಾಕಲಿ ಕೇಂದ್ರ ಆರೋಗ್ಯ ಇಲಾಖೆ ನಿರ್ಧರಿಸಿದೆ.

ಬುಧವಾರ ದೇಶದಲ್ಲಿ  1,26,789 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 59,258 ಜನ ಮಾತ್ರ. ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ 1,29,28,574ಕ್ಕೆ ಏರಿಕೆ ಆಗಿದೆ.‌ ಬುಧವಾರ ಒಂದೇ ದಿನ ಕೊರೋನಾಗೆ 685 ಜನರು ಬಲಿ ಆಗಿದ್ದಾರೆ. ಈವರೆಗೆ ಕೊರೋನಾ ರೋಗದಿಂದ ಸತ್ತವರ ಸಂಖ್ಯೆ 1,66,862ಕ್ಕೆ ಏರಿಕೆ ಆಗಿದೆ.
Published by: Seema R
First published: April 8, 2021, 4:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories