ಸುಖೇಶ್ ಚಂದ್ರಶೇಖರ್ ಒಳಗೊಂಡ ಮನಿ ಲಾಂಡರಿಂಗ್ ಕೇಸ್ ನಲ್ಲಿ (Money Laundering Case) ತನ್ನ ಹೆಸರನ್ನು ಬಲವಂತವಾಗಿ ಬಳಕೆ ಮಾಡಲಾಗಿದೆ ಎಂದು ಬಾಲಿವುಡ್ ನಟಿ ನೋರಾ ಫತೇಹಿ (Bollywood Actress Nora Fatehi) ಆರೋಪ ಮಾಡಿದ್ದಾರೆ. ಸುಖೇಶ್ ಚಂದ್ರಶೇಖರ್ ಗೆ ಸಂಬಂಧಪಟ್ಟ 200 ಕೋಟಿ ರೂ. ವಂಚನೆ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ವಿಚಾರದಲ್ಲಿ ನಟಿ ಜಾಕ್ಲಿನ್ ಫರ್ನಾಂಡಿಸ್ ವಿರುದ್ಧ ಬಾಲಿವುಡ್ ನಟಿ ನೋರಾ ಫತೇಹಿ ಕೇಸ್ ದಾಖಳು ಮಾಡಿದ್ದಾರೆ. ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪ ಮಾಡಿರುವ ನಟಿ ನೋರಾ ಫತೇಹಿ, ನಟಿ ಜಾಕ್ಲಿನ್ ಫರ್ನಾಂಡಿಸ್ ಸೇರಿ ಹದಿನೈದು ಮಾಧ್ಯಮ ಕಂಪನಿಗಳ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ನಟಿ ಜಾಕ್ಲಿನ್ ಫರ್ನಾಂಡಿಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ನಟಿ ನೋರಾ ಫತೇಹಿ
ಸುಖೇಶ್ ಚಂದ್ರಶೇಖರ್ ಗೆ ಸಂಬಂಧಪಟ್ಟ 200 ಕೋಟಿ ರೂ. ವಂಚನೆ ಪ್ರಕರಣ ಈಗ ಜೋರಾಗಿ ಸದ್ದು ಮಾಡ್ತಿದೆ. ಈ ವಿಚಾರದಲ್ಲಿ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದಲ್ಲಿ ನಟಿಯರಾದ ನೋರಾ ಫತೇಹಿ ಮತ್ತು ಜಾಕ್ಲಿನ್ ಫರ್ನಾಂಡಿಸ್ ಹೆಸರು ಸೇರಿದೆ.
ಈ ಮಧ್ಯೆ ಈಗ ನಟಿ ನೋರಾ ಫತೇಹಿ, ತನ್ನ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ನಟಿ ಜಾಕ್ಲಿನ್ ಫರ್ನಾಂಡಿಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಜೊತೆಗೆ ಹದಿನೈದು ಮಾಧ್ಯಮ ಕಂಪನಿಗಳ ವಿರುದ್ಧವೂ ಕೇಸ್ ದಾಖಲಿಸಿದ್ದಾರೆ.
ಹಣ ವರ್ಗಾವಣೆ ಪ್ರಕರಣದಲ್ಲಿ ತನ್ನ ಹೆಸರು ಬಲವಂತವಾಗಿ ಬಳಕೆ ಮಾಡಲಾಗಿದೆ- ನೋರಾ ಫತೇಹಿ
ಸುಖೇಶ್ ಚಂದ್ರಶೇಖರ್ ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈಗ ನಟಿಯರಿಬ್ಬರು ಮುಖಾಮುಖಿಯಾಗಿದ್ದಾರೆ. ಸುಖೇಶ್ ಚಂದ್ರಶೇಖರ್ ಒಳಗೊಂಡ 200 ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣದಲ್ಲಿ ತನ್ನ ಹೆಸರನ್ನು ಬಲವಂತವಾಗಿ ಬಳಕೆ ಮಾಡಿದ್ದಾರೆ ಎಂದು ನೋರಾ ಫತೇಹಿ ಗಂಭೀರ ಆರೋಪ ಮಾಡಿದ್ದಾರೆ.
ಮಾಹಿತಿ ಪ್ರಕಾರ, ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ನಲ್ಲಿ ನಟಿ ಜಾಕ್ಲಿನ್ ಫರ್ನಾಂಡಿಸ್ ಮತ್ತು ಮಾಧ್ಯಮ ಕಂಪನಿಗಳ ವಿರುದ್ಧ ನಟಿ ನೋರಾ ಫತೇಹಿ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ತಿಳಿದು ಬಂದಿದೆ.
ನಟಿ ಜಾಕ್ಲಿನ್, ದುರುದ್ದೇಶದಿಂದ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ನಟಿ ಜಾಕ್ಲಿನ್ ತಮ್ಮ ಸ್ವಂತ ಹಿತಾಸಕ್ತಿಗಾಗಿ, ತಮ್ಮ ವೃತ್ತಿಜೀವನಕ್ಕೆ ಕಳಂಕ ತರುವ ಕೆಲಸ ಮಾಡ್ತಿದ್ದಾರೆ ಅಂತಾ ನೋರಾ ಆರೋಪಿಸಿದ್ದಾರೆ. ನಟಿ ಜಾಕ್ಲಿನ್ ಅವಹೇಳನಕಾರಿ ಹೇಳಿಕೆ ನಂತರ, ತಾನು ಅನೇಕ ಬ್ರ್ಯಾಂಡ್ ಡೀಲ್, ಹಲವು ಪ್ರದರ್ಶನದ ಆಫರ್ ಕಳೆದುಕೊಂಡಿದ್ದಾಗಿ ನಟಿ ನೋರಾ ಆರೋಪಿಸಿದ್ದಾರೆ.
ತನ್ನ ವಿರುದ್ಧ ಸಂಚು ರೂಪಿಸಿ ಸಾಮಾಜಿಕ ಗೌರವಕ್ಕೆ ಧಕ್ಕೆ ತಂದಿದ್ದಾರೆ- ನೋರಾ ಆರೋಪ
ನಟಿ ನೋರಾ ಫತೇಹಿ ತಾವು ಸಲ್ಲಿಸಿದ ದೂರಿನಲ್ಲಿ ನಟಿ ಜಾಕ್ಲಿನ್ ಫರ್ನಾಂಡಿಸ್ ಮತ್ತು ಮಾಧ್ಯಮ ಕಂಪನಿಗಳು ಪರಸ್ಪರ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡ್ತಿವೆ ಅಂತಾ ನೋರಾ ಆರೋಪ ಮಾಡಿದ್ದಾರೆ.
ಜೊತೆಗೆ ನಟಿ ಜಾಕ್ಲಿನ್ ಫರ್ನಾಂಡಿಸ್ ಅವರಿಗೆ ಚಿತ್ರರಂಗದಲ್ಲಿ ಸ್ಪರ್ಧೆ ಮಾಡಲು ಸಾಧ್ಯವಾಗ್ತಿಲ್ಲ. ಹಾಗಾಗಿ ತನ್ನ ವಿರುದ್ಧ ಸಂಚು ರೂಪಿಸಿ, ತಮ್ಮ ಸಾಮಾಜಿಕ ಘನತೆ ಮತ್ತು ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ನಟಿ ನೋರಾ ಆರೋಪ ಮಾಡಿದ್ದಾರೆ.
ನಟಿ ಜಾಕ್ಲಿನ್ ಫರ್ನಾಂಡಿಸ್ ಗೆ ತನ್ನ ಚಿತ್ರರಂಗದಲ್ಲಿ ತನ್ನ ವಿರುದ್ಧ ಸ್ಪರ್ಧಿಸಲು ಸಾಧ್ಯವಾಗ್ತಿಲ್ಲ. ಹೀಗಾಗಿ ಮಾಧ್ಯಮಗಳನ್ನು ಬಳಸಿಕೊಂಡು, ಅವುಗಳ ಮೂಲಕ ಅವಹೇಳನಕಾರಿ ಹೇಳಿಕೆ ನೀಡಿ, ತಮ್ಮ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನ ಮತ್ತು ಗೌರವಕ್ಕೆ ನಟಿ ಜಾಕ್ಲಿನ್ ಧಕ್ಕೆ ತಂದಿದ್ದಾರೆ. ಈ ಮೂಲಕ ತನ್ನ ಇಮೇಜ್ಗೆ ಕಳಂಕ ತರುವ ಪ್ರಯತ್ನ ಸಹ ಮಾಡಲಾಗಿದೆ ಎಂದು ನಟಿ ನೋರಾ ಫತೇಹಿ ಗಂಭೀರ ಆರೋಪ ಮಾಡಿದ್ದಾರೆ.
ನಟಿ ನೋರಾ ತಮ್ಮ ದೂರಿನಲ್ಲಿ, ತಾವು ಚಿತ್ರರಂಗದಲ್ಲಿ ವೇಗವಾಗಿ ಬೆಳವಣಿಗೆಯಾಗುತ್ತಿರುವುದನ್ನು ಸಹಿಸಲಾಗದೇ, ತಮ್ಮ ವಿರುದ್ಧ ಸ್ಪರ್ಧಿಸಲು ಸಾಧ್ಯವಾಗದೇ ನಟಿ ಜಾಕ್ಲಿನ್ ಫರ್ನಾಂಡಿಸ್ ಅಸಮರ್ಥರಾಗಿದ್ದಾರೆ. ತಮ್ಮ ವೃತ್ತಿಜೀವನದ ಬೆಳವಣಿಗೆಯನ್ನು ಸಹಿಸದೇ, ತಮ್ಮ ವಿರುದ್ಧ ಇಲ್ಲ ಸಲ್ಲದ ಅವಹೇಳನಕಾರಿ ಹೇಳಿಕೆ ನೀಡಿ, ಸಂಚು ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್-ಪೂಜಾ ಹೆಗ್ಡೆ ಡೇಟಿಂಗ್ ಸುದ್ದಿ ನಿಜನಾ? ಬಾಲಿವುಡ್ ಬ್ಯಾಡ್ ಬಾಯ್ ಹೇಳೋದೇನು?
ಜಾಕ್ಲಿನ್ ಮತ್ತು ನೋರಾ ಫತೇಹಿ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲ
ಇನ್ನು ಜಾರಿ ನಿರ್ದೇಶನಾಲಯವು, ಸುಖೇಶ್ ಚಂದ್ರಶೇಖರ್ ಒಳಗೊಂಡ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತೀವ್ರ ತನಿಖೆ ನಡೆಸುತ್ತಿದೆ. ತನಿಖೆ ವೇಳೆ ನಟಿ ಜಾಕ್ಲಿನ್ ಫರ್ನಾಂಡಿಸ್ ಮತ್ತು ನಟಿ ನೋರಾ ಫತೇಹಿ ಅವರನ್ನು ವಿಚಾರಣೆ ಮಾಡಿದೆ. ಇನ್ನು ನೋರಾ ಮತ್ತು ಜಾಕ್ಲಿನ್ ಇಬ್ಬರೂ ಸುಖೇಶ್ ಚಂದ್ರಶೇಖರ್ ರಿಂದ ದುಬಾರಿ ಉಡುಗೊರೆ ಪಡೆದ ಆರೋಪ ಎದುರಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ