Kangana VS Sena: ಶಿವಸೇನೆ ಈಗ ಸೋನಿಯಾ ಸೇನೆ - ನಟಿ ಕಂಗನಾ ರಣಾವತ್​​ ಟೀಕೆ

ಶಿವಸೇನೆ ಅಧಿಕಾರಕ್ಕಾಗಿ ಕಾಂಗ್ರೆಸ್​ ಜತೆ ಸೇರಿ ಸೋನಿಯಾ ಸೇನೆಯಾಗಿ ಬದಲಾಗಿದೆ. ನಾನಿಲ್ಲದ ಸಂದರ್ಭ ನೋಡಿ ನನ್ನ ಮನೆ ಕೆಡವಿದ ಗೂಂಡಾಗಳನ್ನು ಮಹಾನಗರ ಪಾಲಿಕೆ ಎಂದು ಕರೆಯಬೇಡಿ. ಹೀಗೆ ಕರೆದು ಸಂವಿಧಾನಕ್ಕೆ ಅವಮಾನ ಮಾಡಬೇಡಿ ಎಂದು ಕಂಗನಾ ಟ್ವೀಟ್​ ಮಾಡಿದ್ದಾರೆ.

ಕಂಗನಾ ಹಾಗೂ ಉದ್ಧವ್​ ಠಾಕ್ರೆ

ಕಂಗನಾ ಹಾಗೂ ಉದ್ಧವ್​ ಠಾಕ್ರೆ

 • Share this:
  ಮುಂಬೈ(ಸೆ.10): ನಟ ಸುಶಾಂತ್​​ ಸಿಂಗ್ ರಜಪೂತ್​​​​ ಸಾವಿನ ನಂತರ ಬಾಲಿವುಡ್​​ ನೆಪೋಟಿಸಂ ಬಗ್ಗೆ ನಟಿ ಕಂಗನಾ ರಣಾವತ್​ ಟೀಕಿಸುತ್ತಲೇ ಬಂದಿದ್ದರು. ಬಾಲಿವುಡ್​​ ಡ್ರಗ್ಸ್​​ ಮಾಫಿಯಾ ಬಗ್ಗೆಯೂ ಕಂಗನಾ ರಣಾವತ್​​​ ಇತ್ತೀಚೆಗೆ ತಮ್ಮ ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೀಗ ಮಹಾರಾಷ್ಟ್ರ ಸರ್ಕಾರದ ವಿರುದ್ಧವೂ ಕಂಗನಾ ತಿರುಗಿಬಿದ್ದಿದ್ದಾರೆ. ಹೀಗಾಗಿ ಆಡಳಿತರೂಢ ಸಿಎಂ ಉದ್ದವ್​ ಠಾಕ್ರೆ ನೇತೃತ್ವದ ಶಿವಸೇನೆ ವಿರುದ್ಧ ಕಿಡಿಕಾರಿದ್ದಾರೆ. ಈ ಸಂಬಂಧ ಟ್ವೀಟ್​ ಮಾಡಿರುವ ಕಂಗನಾ ರಣಾವತ್​​​, ಶಿವಸೇನೆ ಈಗ ಸೋನಿಯಾ ಸೇನೆಯಾಗಿ ಮಾರ್ಪಟ್ಟಿದೆ ಎಂದು ಟೀಕಿಸಿದ್ಧಾರೆ. ಕಾಂಗ್ರೆಸ್​ಗಾಗಿ ತನ್ನ ಎಲ್ಲಾ ಸಿದ್ದಾಂತಗಳನ್ನು ಬದಲಾಯಿಸಿಕೊಂಡ ಶಿವಸೇನೆ ಸೋನಿಯಾ ಸೇನೆಯಾಗಿದೆ ಎಂದು ಕಂಗನಾ ಲೇವಡಿ ಮಾಡಿದ್ಧಾರೆ. ಇದೀಗ ಕಂಗನಾ ಮಾಡಿದ ಈ ಟ್ವೀಟ್​ ಸುತ್ತ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಹಲವರು ಪರ-ವಿರೋಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ಧಾರೆ.

  ಶ್ರೀ ಬಾಳ ಸಾಹೇಬ್​ ಠಾಕ್ರೆಯವರ ನಿರ್ಮಿಸಿದ್ದ ಸಿದ್ದಾಂತಗಳ ಮೇಲೆ ಶಿವಸೇನೆ ಕಟ್ಟಲಾಗಿದೆ. ಈಗ ಶಿವಸೇನೆ ಅಧಿಕಾರಕ್ಕಾಗಿ ಕಾಂಗ್ರೆಸ್​ ಜತೆ ಸೇರಿ ಸೋನಿಯಾ ಸೇನೆಯಾಗಿ ಬದಲಾಗಿದೆ. ನಾನಿಲ್ಲದ ಸಂದರ್ಭ ನೋಡಿ ನನ್ನ ಮನೆ ಕೆಡವಿದ ಗೂಂಡಾಗಳನ್ನು ಮಹಾನಗರ ಪಾಲಿಕೆ ಎಂದು ಕರೆಯಬೇಡಿ. ಹೀಗೆ ಕರೆದು ಸಂವಿಧಾನಕ್ಕೆ ಅವಮಾನ ಮಾಡಬೇಡಿ ಎಂದು ಕಂಗನಾ ಟ್ವೀಟ್​ ಮಾಡಿದ್ದಾರೆ.

  ಇತ್ತೀಚೆಗೆ ಮುಂಬೈನ ಬಾಂದ್ರಾದಲ್ಲಿರುವ ಕಂಗನಾ ಮನೆಯನ್ನು ಅಕ್ರಮ ಎಂದು ಆರೋಪಿಸಿ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಧ್ವಂಸಗೊಳಿಸಿದ್ದರು. ಇದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ಕಂಗನಾ​ ಸ್ಟೇ ಆರ್ಡರ್​ ತಂದಿದ್ದರು. ಪಾಲಿಕೆ ಅಧಿಕಾರಿಗಳ ನಡೆ ಬಗ್ಗೆ ಹೈಕೋರ್ಟ್​ ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

  ಇದನ್ನೂ ಓದಿ: Loan Moratorium: ಸೆ.​​28 ರವರೆಗೂ ಇಎಂಐ ಮುಂದೂಡಿಕೆ - ಸುಪ್ರೀಂ ಕೋರ್ಟ್​ ಆದೇಶ
  Published by:Ganesh Nachikethu
  First published: