• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ನಟಿ ಕಂಗನಾ ಕಚೇರಿ ಧ್ವಂಸ ಪ್ರಕ್ರಿಯೆಯಲ್ಲಿ ಕಾನೂನನ್ನು ಉಲ್ಲಂಘಿಸಲಾಗಿದೆ; ಬಾಂಬೆ ಹೈಕೋರ್ಟ್​ ಚಾಟಿ

ನಟಿ ಕಂಗನಾ ಕಚೇರಿ ಧ್ವಂಸ ಪ್ರಕ್ರಿಯೆಯಲ್ಲಿ ಕಾನೂನನ್ನು ಉಲ್ಲಂಘಿಸಲಾಗಿದೆ; ಬಾಂಬೆ ಹೈಕೋರ್ಟ್​ ಚಾಟಿ

ನಟಿ ಕಂಗನಾ.

ನಟಿ ಕಂಗನಾ.

ಸೆಪ್ಟೆಂಬರ್ 9 ರಂದು ಮುಂಬೈನ ಪಾಲಿಕೆ ಕಂಗನಾ ಅವರ ಒಡೆತನದ ಬಂಗಲೆಯಲ್ಲಿರುವ ಕಚೇರಿಯ ಒಂದು ಭಾಗವನ್ನು ನೆಲಸಮ ಮಾಡಿತ್ತು. ಮಹಾರಾಷ್ಟ್ರ ಸರ್ಕಾರ ಮತ್ತು ಆಡಳಿತಾರೂಡ ಶಿವಸೇನೆ ವಿರುದ್ಧ ಅವರು ಮಾಡಿದ ಟೀಕೆಗಳ ಪರಿಣಾಮವಾಗಿ ಪಾಲಿಕೆಯು ತನ್ನ ವಿರುದ್ಧದ ಕ್ರಮ ಕೈಗೊಂಡಿದೆ ಎಂದು ನಟಿ ಆರೋಪಿಸಿದ್ದರು.

ಮುಂದೆ ಓದಿ ...
  • Share this:

ಮುಂಬೈ (ನವೆಂಬರ್​ 27); ಬಾಲಿವುಡ್​ ನಟಿ ಕಂಗನಾ ರಣಾವತ್​ ತಮ್ಮ ಕಚೇರಿಯನ್ನು ಕಾನೂನು ಬಾಹೀರವಾಗಿ ನಿರ್ಮಿಸಿದ್ದಾರೆ ಎಂದು ಆರೋಪಿಸಿದ್ದ ಗ್ರೇಟರ್​ ಮುಂಬೈ ಮಹಾನಗರ ಪಾಲಿಕೆ ಸೆಪ್ಟೆಂಬರ್​ 09 ರಂದು ಅವರ ಕಚೇರಿಯನ್ನು ಧ್ವಂಸಗೊಳಿಸಿತ್ತು. ಈ ಸುದ್ದಿ ದೇಶದಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಮಹಾ ನಗರ ಪಾಲಿಕೆಯ ಈ ಕೃತ್ಯವನ್ನು ಖಂಡಿಸಿ ನಟಿ ಕಂಗನಾ ಹೈಕೋರ್ಟ್​ ಮೆಟ್ಟಿಲೇರಿದ್ದರು. ಇಂದು ಈ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ, "ಮುಂಬೈ ಪಾಲಿಕೆಯು ನಟಿ ಕಂಗನಾ ರಾಣಾವತ್ ಅವರ ಕಚೇರಿಯ ಒಂದು ಭಾಗವನ್ನು ನೆಲಸಮಗೊಳಿಸಿರುವುದು ಕಾನೂನಿನ ದುರುಪಯೋಗವಲ್ಲದೆ ಬೇರೇನಲ್ಲ" ಎಂದು ಚೀಮಾರಿಹಾಕಿದೆ. ಅಲ್ಲದೆ, ಅವರ ಬಂಗಲೆ ಕೆಡವಲು ಪಾಲಿಕೆ ನೀಡಿದ್ದ ನೋಟಿಸ್‌ನ್ನು ಅದು ರದ್ದುಮಾಡಿದ್ದು, ಕೆಡವಿದ ಕಟ್ಟಡದ ಮೌಲ್ಯ ಮಾಪನ ಮಾಡುವಂತೆ ನ್ಯಾಯಾಲಯ ಸೂಚಿಸಿದೆ.


ಸೆಪ್ಟೆಂಬರ್ 9 ರಂದು ಮುಂಬೈನ ಪಾಲಿಕೆ ಕಂಗನಾ ಅವರ ಒಡೆತನದ ಬಂಗಲೆಯಲ್ಲಿರುವ ಕಚೇರಿಯ ಒಂದು ಭಾಗವನ್ನು ನೆಲಸಮ ಮಾಡಿತ್ತು. ಮಹಾರಾಷ್ಟ್ರ ಸರ್ಕಾರ ಮತ್ತು ಆಡಳಿತಾರೂಡ ಶಿವಸೇನೆ ವಿರುದ್ಧ ಅವರು ಮಾಡಿದ ಟೀಕೆಗಳ ಪರಿಣಾಮವಾಗಿ ಪಾಲಿಕೆಯು ತನ್ನ ವಿರುದ್ಧದ ಕ್ರಮ ಕೈಗೊಂಡಿದೆ ಎಂದು ನಟಿ ಆರೋಪಿಸಿದ್ದರು.


ಇದನ್ನೂ ಓದಿ : ರಾಯ್ಟರ್ಸ್​ ವರ್ಷದ ಪೋಟೋ ಪ್ರಶಸ್ತಿ; ದೆಹಲಿ ಕೋಮು ಹಿಂಸಾಚಾರದ ಚಿತ್ರ ಆಯ್ಕೆ!


"ಪಾಲಿಕೆಯು ನಾಗರಿಕರ ಹಕ್ಕುಗಳ ವಿರುದ್ಧ ನಡೆಯುತ್ತಿದೆ. ಇದು ಕಾನೂನಿನ ದುರುಪಯೋಗವಲ್ಲದೆ ಬೇರೆನಲ್ಲ" ಎಂದು ನ್ಯಾಯಮೂರ್ತಿಗಳಾದ ಎಸ್.ಜೆ. ಕಥಾವಾಲಾ ಮತ್ತು ಆರ್.ಐ.ಛಗ್ಲಾ ಅವರ ವಿಭಾಗೀಯ ಪೀಠ ಹೇಳಿದೆ. ಯಾವುದೇ ನಾಗರಿಕರ ವಿರುದ್ಧ ಅಧಿಕಾರಿಗಳು ತೋಳ್ಬಲವನ್ನು ತೋರಿಸಲು ಅನುಮತಿಸುವುದಿಲ್ಲ ಎಂದು ಹೇಳಿದೆ.


ಕಂಗನಾ ಕೂಡಾ ಸರ್ಕಾರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳುವಾಗ ಸಂಯಮವನ್ನು ತೋರಿಸಬೇಕು ಎಂದು ನ್ಯಾಯಾಲಯವು ಹೇಳಲಿದ್ದು, ಶಿವಸೇನೆ ಸಂಸದ ಸಂಜಯ್ ರೌತ್ ಅವರ ಹೇಳಿಕೆ ಮತ್ತು ನಡವಳಿಕೆಯನ್ನು ನ್ಯಾಯಾಲಯ ಟೀಕಿಸಿದೆ. “ಇಂತಹ ನಡವಳಿಕೆಯು ಖಂಡಿತವಾಗಿಯೂ ಸಂಸದರೂ ಆಗಿರುವ ಸಂಜಯ್ ರಾವತ್‌ ಅವರಂತಹ ನಾಯಕನಿಗೆ ಸರಿಹೊಂದುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

top videos
    First published: