• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಒಮರ್​ ಅಬ್ದುಲ್ಲಾ ವ್ಯಂಗ್ಯ: ಏರ್​ ಕೂಲರ್​ಗಳೊಂದಿಗೆ ಟ್ರ್ಯಾಕ್ಟರ್​ ಓಡಿಸಿದರಾ ಕನಸಿನ ಕನ್ಯೆ ಹೇಮಾ..?

ಒಮರ್​ ಅಬ್ದುಲ್ಲಾ ವ್ಯಂಗ್ಯ: ಏರ್​ ಕೂಲರ್​ಗಳೊಂದಿಗೆ ಟ್ರ್ಯಾಕ್ಟರ್​ ಓಡಿಸಿದರಾ ಕನಸಿನ ಕನ್ಯೆ ಹೇಮಾ..?

ಒಮರ್​ ಅಬ್ದುಲ್ಲಾ-ಹೇಮಾ ಮಾಲಿನಿ

ಒಮರ್​ ಅಬ್ದುಲ್ಲಾ-ಹೇಮಾ ಮಾಲಿನಿ

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಜನ ಪ್ರತಿನಿಧಿಗಳಾದ ನಂತರ ಸಾಮಾನ್ಯ ಜನರ ಕೈಗೆ ಸಿಗುವುದು ಕಷ್ಟ ಅನ್ನೋ ಆರೋಪವಿದೆ. ಕಾರಣ ಅವರು ಅಷ್ಟು ಸುಲಭಾಗಿ ಜನರಿಗೆ ಲಭ್ಯವಿರುವುದಿಲ್ಲ. ಚುನಾವಣಾ ಪ್ರಚಾರದಲ್ಲಿ ಸಿಗುವ ತಾರೆಯರು ಮತ್ತೆ ಮುಂದಿನ ಚುನಾವಣೆಯಲ್ಲೇ ಕಾಣಿಸಿಕೊಳ್ಳುತ್ತಾರೆ ಎನ್ನಲಾಗುತ್ತದೆ. ಅದಕ್ಕೂ ಸಾಕಷ್ಟು ಕಾರಣಗಳಿವೆ. ಸದ್ಯ ಹೇಮಾ ಮಾಲಿನಿ ಅವರು ಆರಂಭಿಸಿರುವ ಚುನಾವಣಾ ಪ್ರಚಾರದ ಕುರಿತಾಗಿಯೂ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ.

ಮುಂದೆ ಓದಿ ...
  • News18
  • 4-MIN READ
  • Last Updated :
  • Share this:

ಚುನಾವಣೆ ಬಂತು ಎಂದರೆ ಸಾಕು ಒಬ್ಬೊಬ್ಬ ಅಭ್ಯರ್ಥಿಯೂ ತನ್ನದೇ ಆದ ರೀತಿಯಲ್ಲಿ ಚುನಾವಣಾ ಪ್ರಚಾರಕ್ಕೆ ಇಳಿಯುತ್ತಾರೆ. ಕೆಲವು ಅಭ್ಯರ್ಥಿಗಳು ಟೀ ಮಾರುತ್ತಾ... ದೋಸೆ ಹಾಕುತ್ತಾ... ಇಸ್ತ್ರಿ ಮಾಡುವ ಮೂಲಕ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ.

ಇದನ್ನೂ ಓದಿ: Happy BirthDay Rashmika: ರಶ್ಮಿಕಾ ಹುಟ್ಟುಹಬ್ಬಕ್ಕೆ ವಿಜಯ್​ ದೇವರಕೊಂಡ ಕೊಟ್ಟ ಪ್ರೀತಿಯ ಕಾಣಿಕೆ ಏನು ಗೊತ್ತಾ..?

ಕನಸಿನ ಕನ್ಯೆ ಹೇಮಾ ಮಾಲಿನಿ, ಬಿಜೆಪಿ ಅಭ್ಯರ್ಥಿಯಾಗಿ ಉತ್ತರಪ್ರದೇಶದ ಮಥುರಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಕೆಲವು ದಿನಗಳಿಂದ ತಮ್ಮ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಆರಂಭಿಸಿರುವ ಹೇಮಾ, ಶುಕ್ರವಾರ ಮಥುರಾದ ಗೋವರ್ಧನ್​ನಲ್ಲಿ ಕೃಷಿಕರೊಬ್ಬರ ಭೂಮಿಯಲ್ಲಿ ಟ್ರ್ಯಾಕ್ಟರ್​ ಓಡಿಸುವ ಮೂಲಕ ಚುನಾವಣಾ ಪ್ರಚಾರ ಮಾಡಿದ್ದಾರೆ.



ಹೇಮಾ ಅವರ ಈ ಚಿತ್ರಗಳು ಕಳೆದ ಶುಕ್ರವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸದ್ದು ಮಾಡುತ್ತಿವೆ. ಇದರ ಬೆನ್ನಲ್ಲೇ ಈಗ ನ್ಯಾಷನಲ್​ ಕಾನ್ಫರೆನ್ಸ್​ನ ಮುಖ್ಯಸ್ಥ ಒಮರ್​ ಅಬ್ದುಲ್ಲಾ ಹೇಮಾ ಮಾಲಿನಿ ಟ್ರ್ಯಾಕ್ಟರ್​ ಓಡಿಸಿರುವ ಕುರಿತು ವ್ಯಂಗ್ಯವಾಡಿ ಟ್ವೀಟ್​ ಮಾಡಿದ್ದಾರೆ.


'ಫೋಟೋದಲ್ಲಿ ಟ್ಯ್ರಾಕ್ಟರ್​ನಲ್ಲಿ ಕಾಣುವ ಆ ಡ್ರಮ್​ಗಳು ಏನು. ಅವುಗಳು ತಂಪಾದ ಗಾಳಿ ಬೀಸುವ ಏರ್​ ಕೂಲರ್​ಗಳಿರಬೇಕು. ವಾವ್​ ಎಂಥಾ ಫ್ಯಾನ್ಸಿ ಟ್ರ್ಯಾಕ್ಟರ್​' ಎಂದು ವ್ಯಂಗ್ಯವಾಗಿ ಒಮರ್​ ಟ್ವೀಟ್​ ಮಾಡಿದ್ದಾರೆ.


ಕಳೆದ ಸೋಮವಾರ ಹೇಮಾ ತಮ್ಮ ಟ್ವಿಟರ್​ನಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್​ ಮಾಡುವ ಮೂಲಕ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿರುವುದಾಗಿ ಬರೆದುಕೊಂಡಿದ್ದರು.

ಗೋವರ್ಧನ್​ ಕ್ಷೇತ್ರದಲ್ಲಿ ಕೃಷಿಯಲ್ಲಿ ತೊಡಗಿರುವ ಮಹಿಳೆಯರೊಂದಿಗೆ ಕೆಲ ಸಮಯ ಕಳೆಯುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿರುವುದಾಗಿ ಹೇಮಾ ಬರೆದುಕೊಂಡಿರುವ ಟ್ವೀಟ್​ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು.

PHOTOS: ಮಥುರಾದಲ್ಲಿ ಚುನಾವಣಾ ಪ್ರಚಾರದ ವೇಳೆ ಟ್ರ್ಯಾಕ್ಟರ್​ ಓಡಿಸಿದ ಹೇಮಾ ಮಾಲಿನಿ..!

First published: