Actress Suicide: NCB ಅಧಿಕಾರಿಗಳ ಸೋಗಿನಲ್ಲಿ ಬಂದು ಹಣ ಕೇಳಿದ ಖದೀಮರು, ಡ್ರಗ್ಸ್ ಜಾಲಕ್ಕೆ ಹೆದರಿ ನಟಿ ಆತ್ಮಹತ್ಯೆ

ಮಹಿಳೆಯೊಬ್ಬರು ತಮ್ಮ ಜೀವ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ಕರೆ ಮಾಡಿದ ವ್ಯಕ್ತಿ ಗಾಬರಿಯಲ್ಲೇ ಹೇಳಿದ್ದರು. ಪೊಲೀಸರು ವಿಳಾಸ ತಿಳಿದು ಸ್ಥಳ ತಲುಪುವ ವೇಳೆಗೆ 28 ವರ್ಷದ ಮಹಿಳೆ ತಾನು ವಾಸಿಸುತ್ತಿದ್ದ ಫ್ಲಾಟ್​ನ ಸೀಲಿಂಗ್ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ಮುಂಬೈ: “ನೀವು ಇರುವ ಸ್ಥಳದಲ್ಲಿ ಡ್ರಗ್ ಪ್ರಕರಣ (Drug Case) ಸಂಬಂಧಿತ ತನಿಖೆ ನಡೆಯುತ್ತಿದೆ. ನಿಮ್ಮ ಹೆಸರನ್ನು ತನಿಖೆಯ ಪಟ್ಟಿಯಿಂದ ಕೈಬಿಡಲು ನಾವು ಸಹಾಯ ಮಾಡುತ್ತೇವೆ. ಅದಕ್ಕಾಗಿ ನಮಗೆ 20 ಲಕ್ಷ ರೂಪಾಯಿಗಳನ್ನು (20 lakh rupees) ಕೊಡಿ” ಹೀಗೆಂದು ಮಹಿಳೆಯೊಬ್ಬರಿಗೆ ಇಬ್ಬರು ವ್ಯಕ್ತಿಗಳು ಹೇಳಿದ್ದಾರೆ. ತಾವು ಎನ್​ಸಿಬಿ ಅಧಿಕಾರಿಗಳು (NCB Officers) ಎಂದು ಪರಿಚಯಿಸಿಕೊಂಡ ಆ ಇಬ್ಬರು ನಂತರ ಮಹಿಳೆಗೆ ಪದೇ ಪದೇ ಕರೆ ಮಾಡಿ ಹಣಕ್ಕಾಗಿ ಪೀಡಿಸಿದ್ದಾರೆ. ಇದೆಲ್ಲದರಿಂದ ಮನನೊಂದು ಹೆದರಿಕೊಂಡ ಮಹಿಳೆ ತನ್ನ ಮನೆಯ ಸೀಲಿಂಗ್ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ (Dies by Suicide) ಮಾಡಿಕೊಂಡಿದ್ದಾರೆ. ಪೊಲೀಸ್ ತನಿಖೆಯ ವೇಳೆ ಆ ಇಬ್ಬರು ವ್ಯಕ್ತಿಗಳು ಎನ್​ಸಿಬಿ ಹೆಸರಿನಲ್ಲಿ ಅಮಾಯಕರಿಂದ (Innocent) ಹಣ ವಸೂಲಿ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.

    ದುರದೃಷ್ಟ ಎಂದರೆ ಇದೇ ಎನಿಸುತ್ತದೆ. ಆಕೆ ಉದಯೋನ್ಮುಖ ನಟಿ. ತನ್ನ ಕೆಲವು ಸ್ನೇಹಿತರ ಜೊತೆ ಡಿಸೆಂಬರ್ 20 ರಂದು ಮುಂಬೈನ ಪ್ರತಿಷ್ಟಿತ ಹೋಟೆಲೊಂದಕ್ಕೆ ಡಿನ್ನರ್​​ಗಾಗಿ ತೆರಳಿದ್ದರು. ಅಲ್ಲಿ ಈ ಗುಂಪನ್ನು ಭೇಟಿ ಮಾಡಿದ ಇಬ್ಬರು ವ್ಯಕ್ತಿಗಳು ತಾವು NCB ಅಧಿಕಾರಿಗಳು ಎಂದು ಪರಿಚಯಿಸಿಕೊಂಡರು. ಈಕೆಯನ್ನು ಡ್ರಗ್ ಪ್ರಕರಣದ ಎಫ್​ಐಆರ್​ನಲ್ಲಿ ಹೆಸರಿಸದೇ ಇರಲು 20 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ಆ ಹೋಟೆಲಿನಲ್ಲಿ ಒಂದು ಡ್ರಗ್ ಪ್ರಕರಣ ಸಂಬಂಧ ರೇಡ್ ಆಗಿದೆ ಎಂದು ತಿಳಿಸಿದರು ಎಂದು ಅಮಬೋಲಿ ಪೊಲೀಸರು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

    ಮಹಿಳೆ ಸಾಯುತ್ತಿದ್ದಾಳೆ ಎಂದು ಕರೆ ಬಂದಿತ್ತು

    ಗುರುವಾರ ಅಂಬೋಲಿ ಪೊಲೀಸ್ ಠಾಣೆಗೆ ಒಂದು ಕರೆ ಬಂದಿತ್ತು. ಮಹಿಳೆಯೊಬ್ಬರು ತಮ್ಮ ಜೀವ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ಕರೆ ಮಾಡಿದ ವ್ಯಕ್ತಿ ಗಾಬರಿಯಲ್ಲೇ ಹೇಳಿದ್ದರು. ಪೊಲೀಸರು ವಿಳಾಸ ತಿಳಿದು ಸ್ಥಳ ತಲುಪುವ ವೇಳೆಗೆ 28 ವರ್ಷದ ಮಹಿಳೆ ತಾನು ವಾಸಿಸುತ್ತಿದ್ದ ಫ್ಲಾಟ್​ನ ಸೀಲಿಂಗ್ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಪ್ರೇಮಿಯ ಸುಳ್ಳು ಕರೆಯಿಂದ ನೊಂದು, ಅವನಿಲ್ಲದೇ ನಾನು ಬದುಕಿರಲಾರೆ ಎಂದು ನೇಣಿಗೆ ಕೊರಳೊಡ್ಡಿದ ಯುವತಿ

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ 38 ವರ್ಷದ ಸೂರಜ್ ಮೋಹನ್ ಪರ್ದೇಶಿ ಮತ್ತು 35 ವರ್ಷದ ಪ್ರವೀಣ್ ರಘುನಾಥ್ ವಾಲಿಂಬೆ ಎನ್ನುವ ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳು ಪದೇ ಪದೇ ಹಣಕ್ಕಾಗಿ ಪೀಡಿಸಿ ಕರೆ ಮಾಡುತ್ತಿದ್ದರಿಂದ ರೋಸಿಹೋಗಿ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಗುರುವಾರ ಡಿಸೆಂಬರ್ 23ರಂದು ಘಟನೆ ನಡೆದಿದೆ. ಥಾಣೆಯಲ್ಲಿ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದ್ದು ಆತ್ಮಹತ್ಯೆಗೆ ಪ್ರಚೋದನೆ, ಹಣ ವಸೂಲಿ, ಮೋಸ ಮತ್ತಿತರ ಅಪರಾಧಗಳಿಗೆ ಸಂಬಂಧಿಸಿದಂತೆ ಇಬ್ಬರ ಮೇಲೂ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆಕೆ ಉದಯೋನ್ಮುಖ ನಟಿ

    ಪಶ್ಚಿಮ ಬಂಗಾಳ ಮೂಲದ 28 ವರ್ಷದ ಮಹಿಳೆ ನಟಿಯಾಗುವ ಪ್ರಯತ್ನದಲ್ಲಿ ಇದ್ದರು. ಆಕೆ ಬಾಡಿಗೆ ಫ್ಲಾಟ್​ನಲ್ಲಿ ವಾಸಿಸುತ್ತಿದ್ದರು. ಎನ್​ಸಿಬಿ ಹೆಸರಿನಲ್ಲಿ ಅನೇಕರು ಹೀಗೆ ಅಮಾಯಕರಿಂದ ಹಣ ಕೀಳುವ ಕೆಲಸದಲ್ಲಿ ತೊಡಗಿಕೊಂಡಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: Suicide Machine: ನೋವಿಲ್ಲದೇ ಬರೀ ಒಂದು ನಿಮಿಷದಲ್ಲಿ ಸಾಯಲು ಸಹಾಯ ಮಾಡುತ್ತೆ ಈ ಯಂತ್ರ

    ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಸಚಿವ ಮತ್ತು ಎನ್​​ಸಿಪಿ ನಾಯಕ ನವಾಬ್ ಮಲಿಕ್ ಈ ಪ್ರಕರಣದ ಬಗ್ಗೆ ವಿವರವಾದ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. “ಓಶಿವಾರಾ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ನಟಿಯೊಬ್ಬರು ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸ್ ತನಿಖೆಯ ವೇಳೆ ಯಾರೋ ಆಕೆಯಿಂದ ಎನ್​ಸಿಬಿ ಹೆಸರಿನಲ್ಲಿ ಹಣ ವಸೂಲಿ ಮಾಡಲು ಪ್ರಯತ್ನಿಸುತ್ತಿದ್ದರು ಎನ್ನುವುದು ತಿಳಿದುಬಂದಿದೆ. ಎನ್​ಸಿಬಿ ಅಧಿಕಾರಿಗಳು ಹೀಗೆ ಹಣ ವಸೂಲಿ ಮಾಡಲೆಂದೇ ಒಂದು ಖಾಸಗಿ ಸೈನ್ಯ ಇಟ್ಟಿದ್ದಾರೆ ಎಂದು ಅವರು ಟ್ವೀಟ್ ಮೂಲಕ ಗಂಭೀರವಾಗಿ ಆರೋಪಿಸಿದರು.
    Published by:Soumya KN
    First published: