ನಲ್ಲಮಲ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ಇಲ್ಲ ಎಂದ ಕೆಟಿಆರ್​​; ಇದು ನಮ್ಮ ಹೋರಾಟಕ್ಕೆ ಸಂದ ಮೊದಲ ಜಯ ಎಂದ ವಿಜಯ್​​ ದೇವರಕೊಂಡ

ಇಲ್ಲಿನ ನಲ್ಲಮಲ ಅರಣ್ಯ ಪ್ರದೇಶದಲ್ಲಿ ಯುರೇನಿಯಂ ಗಣಿಗಾರಿಕೆಗೆ ಅವಕಾಶ ಮಾಡಿಕೊಲಾಗಿದೆ ಎನ್ನಲಾಗಿತ್ತು. ಇದಕ್ಕೆ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ತೆಲುಗು ಖ್ಯಾತ ನಟ-ನಟಿಯರು, ಪರಿಸರವಾದಿಗಳು ಕೂಡ ಕಾಡಿನಲ್ಲಿ ಯಾವುದೇ ಗಣಿಗಾರಿಕೆ ಬೇಡ ಎಂದು ಧ್ವನಿ ಎತ್ತಿದ್ದರು.

news18
Updated:September 15, 2019, 1:02 PM IST
ನಲ್ಲಮಲ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ಇಲ್ಲ ಎಂದ ಕೆಟಿಆರ್​​; ಇದು ನಮ್ಮ ಹೋರಾಟಕ್ಕೆ ಸಂದ ಮೊದಲ ಜಯ ಎಂದ ವಿಜಯ್​​ ದೇವರಕೊಂಡ
ನಟ ವಿಜಯ್​ ದೇವರಕೊಂಡ
news18
Updated: September 15, 2019, 1:02 PM IST
ಹೈದರಾಬಾದ್​​(ಸೆ.15): ಆಂಧ್ರಪ್ರದೇಶದ ನಲ್ಲಮಲ ಅರಣ್ಯ ಪ್ರದೇಶದಲ್ಲಿ ಯುರೇನಿಯಂ ಗಣಿಗಾರಿಕೆಗೆ ಯಾವುದೇ ಅನುಮತಿ ನೀಡಿಲ್ಲ ಎಂದು ತೆಲಂಗಾಣ ಸರ್ಕಾರದ ಸಚಿವ ಕೆ. ತಾರಕರಾಮ ರಾವ್(ಕೆಟಿಆರ್​​) ಸ್ಪಷ್ಟನೆ ನೀಡಿದ್ದಾರೆ. ಈ ಬೆನ್ನಲ್ಲೀಗ ಟ್ವೀಟ್​​ ಮಾಡಿರುವ 'ಗೀತ ಗೋವಿಂದಂ' ಖ್ಯಾತಿಯ ನಟ ವಿಜಯ್ ದೇವರಕೊಂಡ, ನಮ್ಮ ಹೋರಾಟಕ್ಕೆ ಸಂದ ಮೊದಲನೆಯ ಜಯ ಇದಾಗಿದೆ ಎಂದು ಬರೆದುಕೊಂಡಿದ್ದಾರೆ.


Loading...

ಇಲ್ಲಿನ ನಲ್ಲಮಲ ಅರಣ್ಯ ಪ್ರದೇಶದಲ್ಲಿ ಯುರೇನಿಯಂ ಗಣಿಗಾರಿಕೆಗೆ ಅವಕಾಶ ಮಾಡಿಕೊಲಾಗಿದೆ ಎನ್ನಲಾಗಿತ್ತು. ಇದಕ್ಕೆ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ತೆಲುಗು ಖ್ಯಾತ ನಟ-ನಟಿಯರು, ಪರಿಸರವಾದಿಗಳು ಕೂಡ ಕಾಡಿನಲ್ಲಿ ಯಾವುದೇ ಗಣಿಗಾರಿಕೆ ಬೇಡ ಎಂದು ಧ್ವನಿ ಎತ್ತಿದ್ದರು.

ಜನಸೇನೆ ಮುಖ್ಯಸ್ಥ ಮತ್ತು ನಟ ಪವನ್​ ಕಲ್ಯಾಣ್​​, ನಟಿ ಸಮಂತಾ ಅಕ್ಕಿನೇನಿ, ನಿರ್ದೇಶಕ ಶೇಖರ್ ಕಮ್ಮುಲ, ವಿಜಯ ದೇವರಕೊಂಡ ಸೇರಿದಂತೆ ಪ್ರಮುಖ ರಾಜಕೀಯ ನಾಯಕರು ಸೇವ್ ನಲ್ಲಮಲ ಆಂದೋಲನಕ್ಕೆ ಬೆಂಬಲ ಸೂಚಿಸಿದ್ದರು.

ಸದ್ಯವೀಗ ಸಚಿವ ಕೆಟಿಆರ್​​ ಯಾವುದೇ ಗಣಿಗಾರಿಕೆಗೆ ಅವಕಾಶ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಂತೆಯೇ ಇನ್ನೊಮ್ಮೆ ಸಿಎಂ ಕೆ. ಚಂದ್ರಶೇಖರ್​​ ಅವರೊಂದಿಗೆ ಈ ಸಂಬಂಧ ಮಾತುಕತೆ ನಡೆಸುತ್ತೇವೆ ಎಂದಿದ್ದಾರೆ. ಇದನ್ನು ರೀಟ್ವೀಟ್​​ ಮಾಡಿರುವ ವಿಜಯ್​​ ದೇವರಕೊಂಡ, ನಮ್ಮ ಹೋರಾಟಕ್ಕೆ ಸಂದ ಮೊದಲ ಜಯ ಇದಾಗಿದೆ ಎಂದಿದ್ಧಾರೆ.

ಈ ಹಿಂದೆ ಇನ್ನೊಂದು ಟ್ವೀಟ್​​ನಲ್ಲಿ "20000 ಸಾವಿರ ಎಕರೆ ನಲ್ಲಮಲ ಅರಣ್ಯ ಪ್ರದೇಶ ಅಪಾಯದಲ್ಲಿದೆ. ನಾವು ಈಗಾಗಲೇ ಇದ್ದ ಕೆರೆಗಳನ್ನು ನಾಶ ಮಾಡಿದ್ದೇವೆ. ಕೇರಳ, ಕರ್ನಾಟಕ ಸೇರಿದಂತೆ ದೇಶಾದ್ಯಂತ ಪ್ರವಾಹಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ನಾವು ನಮ್ಮ ಅರಣ್ಯ ನಾಶ ಮಾಡಿದ್ದರಿಂದಲೇ ಇಂತಹ ಅನಾಹುತ ಸಂಭವಿಸಿದೆ. ಈಗ ಅಂತಹುದ್ದೇ ಮತ್ತೊಂದು ಕೆಲಸಕ್ಕೆ ಕೈ ಹಾಕಿದ್ದೇವೆ. ಹಚ್ಚ ಹಸುರಿನ ನಲ್ಲಮಲ ಅರಣ್ಯವನ್ನು ನಾಶ ಮಾಡಲು ಸಿದ್ಧವಾಗುತ್ತಿದ್ದೇವೆ ಎಂದು ವಿಜಯ್​ ದೇವರಕೊಂಡ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ದಿನಕ್ಕೊಂದು ದೇಶ, ಗಳಿಗೆಗೊಂದು ವೇಷ ಬದಲಿಸುವ ಮೋದಿಗೆ ನೆರೆ ಸಂತ್ರಸ್ತರ ಭೇಟಿ ಮಾಡಲು ಸಮಯವಿಲ್ಲವೇ?; ಸಿದ್ದರಾಮಯ್ಯ ಪ್ರಶ್ನೆ

ನಿಮಗೆ ಯುರೇನಿಯಂ ಬೇಕೆಂದರೇ ಖರೀದಿಸಿ. ಎಲ್ಲಿಂದ ಬೇಕಾದರೂ ಯುರೇನಿಯಂ ಕೊಂಡುಕೊಳ್ಳಬಹುದು, ಆದರೆ ನಲ್ಲಮಲ ಕಾಡು ಕೊಳ್ಳಲು ಸಾಧ್ಯವೇ? ಇಲ್ಲ. ಒಂದು ವೇಳೆ ಯುರೇನಿಯಂ ಸಿಗದಿದ್ದರೆ, ನಾವೇ ಸೋಲಾರ್ ಎನರ್ಜಿಯನ್ನು ಉತ್ಪಾದಿಸೋಣ ಎಂದು ಟ್ವೀಟ್​ ಮಾಡಿದ್ದಾರೆ.

ಹಾಗೆಯೇ ಪ್ರತಿಯೊಬ್ಬರ ಮನೆ ಮೇಲೆ ಸೋಲಾರ್ ಪ್ಯಾನಲ್ಸ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿ. ಈ ಮೂಲಕ ಬೇಕಾದ ಸೋಲಾರ್​​ ಶಕ್ತೆಯನ್ನು ಉತ್ಪಾದಿಸಲು ಪ್ರೋತ್ಸಾಹಿಸಿ. ಮನುಷ್ಯನಿಗೆ ಉಸಿರಾಡಲು ಗಾಳಿ, ಕುಡಿಯಲು ನೀರು ಇಲ್ಲದ ಮೇಲೆ ಯುರೇನಿಯಂನಿಂದ ಏನು ಪ್ರಯೋಜನೆ. ಈಗಲೂ ಈ ಗಣಿಗಾರಿಕೆ ಸಮರ್ಥಿಸಿಕೊಂಡವರಿಗೆ  "WTF (What The F**K)" ಎನ್ನುವ ಮೂಲಕ ತಪರಾಕಿ ಬಾರಿಸಿದ್ಧಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ
----------
First published:September 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...