Actor Suriya: ಸಾಧಿಸಲು ಹಲವಾರು ವಿಷಯಗಳಿವೆ. ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಇರಿ, NEET ವಿದ್ಯಾರ್ಥಿಗಳಿಗೆ ನಟ ಸೂರ್ಯ ಮನವಿ..

NEET Exam: ನೋವು ಮತ್ತು ಕಷ್ಟಗಳು ಬೇಗನೆ ದೂರವಾಗುತ್ತವೆ,  ನೀವು ನಂಬುವ ಮತ್ತು ಪ್ರೀತಿಸುವವರೊಂದಿಗೆ ಎಲ್ಲದರ ಬಗ್ಗೆ ಮಾತನಾಡಿ. ಪೋಷಕರು, ಹಿರಿಯರು, ಸ್ನೇಹಿತರು ಅಥವಾ ಶಿಕ್ಷಕರ ಜೊತೆ ಹಂಚಿಕೊಳ್ಳಿ ಎಂದು ಸೂರ್ಯಾ ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ.

ನಟ ಸೂರ್ಯ

ನಟ ಸೂರ್ಯ

  • Share this:
ತಮಿಳು  ನಟ ಸೂರ್ಯ ಶಿವಕುಮಾರ್ ವೈದ್ಯಕೀಯ ಪ್ರವೇಶಕ್ಕಾಗಿ ಕಡ್ಡಾಯ ಪ್ರವೇಶ ಪರೀಕ್ಷೆಯಾದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಗೆ ವಿಚಾರವಾಗಿ ವಿದ್ಯಾರ್ಥಿಗಳಿಗೆ ಕೆಲ ಸಲಹೆಗಳನ್ನು ನೀಡಿದ್ದಾರೆ. ತಮಿಳಿನಲ್ಲಿ 1.54 ನಿಮಿಷಗಳ ವಿಡಿಯೋ ಮಾಡಿರುವ ಸೂರ್ಯ  ತನ್ನ ಸ್ವಂತ ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳನ್ನು ಪಡೆದಿರುವ ಬಗ್ಗೆ ನೆನಪಿಸಿಕೊಂಡಿದ್ದಾರೆ. ಅಲ್ಲದೇ , ಅಂಕಗಳ ವಿಚಾರವಾಗಿ ತಮ್ಮ ಜೀವನವನ್ನು ಕೊನೆಗೊಳಿಸಬೇಡಿ ಎಂದು ವಿದ್ಯಾರ್ಥಿಗಳಿಗೆ ಭಾವನಾತ್ಮಕವಾಗಿ ಮನವಿ ಮಾಡಿದ್ದಾರೆ.

ತಮಿಳುನಾಡಿನಲ್ಲಿ ಪ್ರವೇಶ ಪರೀಕ್ಷೆಯಲ್ಲಿ ವೈಫಲ್ಯದ ಭಯದಿಂದ ಕಳೆದ ಒಂದು ವಾರದಲ್ಲಿ ಮೂರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆ ನಟ ಈ ಮನವಿ ಮಾಡಿದ್ದಾರೆ.  ಅಂಕಗಳು ಮತ್ತು ಪರೀಕ್ಷೆಗಳು ಮಾತ್ರ ಜೀವನವನ್ನು ರೂಪಿಸುವುದಿಲ್ಲ ಎಂದು ನಾನು ನಿಮ್ಮಲ್ಲಿ ಒಬ್ಬನಂತೆ ಹೇಳಬಲ್ಲೆ. ಸಾಧಿಸಲು ಹಲವಾರು ವಿಷಯಗಳಿವೆ. ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಇರಿ. ನಿಮ್ಮನ್ನು ಪ್ರೀತಿಸುವ ಮತ್ತು ಅರ್ಥಮಾಡಿಕೊಳ್ಳುವ  ಜನರು ಹಲವರು ಇಲ್ಲಿದ್ದಾರೆ. ನಾವೆಲ್ಲರೂ  ಮುಂದಿನ ದಿನಗಳಲ್ಲಿ ಜೀವನದಲ್ಲಿ ಗೆಲುವು ಸಾಧಿಸಬಹುದು. ಯಾವುದೇ ಭಯ ಬೇಡ ಎಂದು ಅವರು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದಾರೆ.



ನೋವು ಮತ್ತು ಕಷ್ಟಗಳು ಬೇಗನೆ ದೂರವಾಗುತ್ತವೆ,  ನೀವು ನಂಬುವ ಮತ್ತು ಪ್ರೀತಿಸುವವರೊಂದಿಗೆ ಎಲ್ಲದರ ಬಗ್ಗೆ ಮಾತನಾಡಿ. ಪೋಷಕರು, ಹಿರಿಯರು, ಸ್ನೇಹಿತರು ಅಥವಾ ಶಿಕ್ಷಕರ ಜೊತೆ ಹಂಚಿಕೊಳ್ಳಿ ಎಂದು ಸೂರ್ಯಾ ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ.

ಈ ನೋವು ಮತ್ತು ಭಯ ಸ್ವಲ್ಪ ಸಮಯದಲ್ಲಿ ಮಾಯವಾಗುತ್ತದೆ. ಜೀವನವನ್ನು ಕೊನೆಗೊಳಿಸುವುದು ನಿಮ್ಮ ಹೆತ್ತವರಿಗೆ ಮತ್ತು ನಿಮ್ಮನ್ನು ಪ್ರೀತಿಸುವವರಿಗೆ ನೀವು ನೀಡುವ ಜೀವಮಾನದ ಶಿಕ್ಷೆಯಾಗಿದೆ ಎಂದು ಅವರು ಹೇಳಿದ್ದಾರೆ.  ಕೆಲವು ಕ್ಲಾಸ್ 12 ಟಾಪರ್​ಗಳು ಸೇರಿದಂತೆ ಕನಿಷ್ಠ 17 ವೈದ್ಯಕೀಯ  ಶಿಕ್ಷಣದ ಆಕಾಂಕ್ಷಿಗಳು ಕಳೆದ ಕೆಲವು ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನೀಟ್ ಕೋಚಿಂಗ್ ಸೆಂಟರ್‌ಗಳ ಪರಿಣಾಮವನ್ನು ಅಧ್ಯಯನ ಮಾಡಿದ ನಿವೃತ್ತ ನ್ಯಾಯಮೂರ್ತಿ ಎ ಕೆ ರಾಜನ್ ಸಮಿತಿಯು ಸಲ್ಲಿಸಿದ ವರದಿಯೊಂದಿಗೆ ಡಿಎಂಕೆ ಸರ್ಕಾರವು ಇತ್ತೀಚೆಗೆ ನೀಟ್ ಅನ್ನು ರದ್ದುಗೊಳಿಸುವ ಮತ್ತು ವೈದ್ಯಕೀಯ ಪ್ರವೇಶಕ್ಕೆ 12 ನೇ ತರಗತಿಯ ಅಂಕಗಳ ಆಧಾರದ ಮೇಲೆ ಸುಗಮಗೊಳಿಸುವ ಮಸೂದೆಯನ್ನು ಅಂಗೀಕರಿಸಿದೆ. ಆದರೆ, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಒಪ್ಪಿಗೆ ನೀಡಿದರೆ ಮಾತ್ರ ಇದು ಜಾರಿಗೆ ಬರಲು ಸಾಧ್ಯ.

ಇದನ್ನೂ ಓದಿ: ಆಂಧ್ರಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವೈಎಸ್​ಆರ್​ ಕಾಂಗ್ರೆಸ್ ಕ್ಲೀನ್ ಸ್ವೀಪ್

ಸುಮಾರು ಒಂದು ದಶಕದಿಂದ ತಮಿಳುನಾಡು ವೈದ್ಯಕೀಯ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಗಳನ್ನು ರದ್ದುಗೊಳಿಸಿದ್ದು, ನೀಟ್ ಶ್ರೀಮಂತರಿಗೆ ಅನುಕೂಲವಾಗಿದೆ ಬಡ ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವವರು ಖಾಸಗಿ ತರಬೇತಿಯನ್ನು ಪಡೆಯಲು ಸಾಧ್ಯವಾಗದ ಕಾರಣ ಹೊರಗುಳಿದಿದ್ದಾರೆ ಎಂದು ಸಮಿತಿ ವರದಿ ಮಾಡಿದೆ.

ಯುಪಿಎ ಆಡಳಿತಾವಧಿಯಲ್ಲಿ ಡಿಎಂಕೆ ಅದರ ಭಾಗವಾಗಿದ್ದಾಗ ನೀಟ್ ಅನ್ನು ಆರಂಭಿಸಲಾಗಿತ್ತು. ಆಗಿನ ತಮಿಳುನಾಡು ಮುಖ್ಯಮಂತ್ರಿ ಎಂಕೆ ಕರುಣಾನಿಧಿ ಅವರು ನೀಟ್ ನಿಂದ ರಾಜ್ಯಕ್ಕೆ ವಿನಾಯಿತಿ ನೀಡುವ ರಾಷ್ಟ್ರಪತಿ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಆ ಸರ್ಕಾರದ ನಂತರ ಬಂದ ಎಐಎಡಿಎಂಕೆ ಸರ್ಕಾರವು ತನ್ನ ಮಿತ್ರ ಪಕ್ಷವಾದ ಬಿಜೆಪಿಯಿಂದ ಇದೇ ರೀತಿಯ ವಿನಾಯಿತಿ ಪಡೆಯಲು ವಿಫಲವಾಯಿತು. ಬಿಜೆಪಿಯನ್ನು ಹೊರತುಪಡಿಸಿ, ಅದರ ಮಿತ್ರ ಪಕ್ಷಗಳು ಸೇರಿದಂತೆ ಇತರ ಎಲ್ಲ ಪಕ್ಷಗಳು ನೀಟ್ ರದ್ದತಿಯನ್ನು ಬೆಂಬಲಿಸಿವೆ.
Published by:Sandhya M
First published: