Video: ಅಪಘಾತಕ್ಕೆ ಒಳಗಾದ ಯುವಕನ ಪ್ರಾಣ ರಕ್ಷಿಸಿದ Sonu Sood; ನಟನ ಮಾನವೀಯತೆಗೆ ಶ್ಲಾಘನೆ

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಯುವಕನ ಪ್ರಾಣ ರಕ್ಷಣೆ ಮಾಡುವ ಮೂಲಕ ಆಪತ್ಬಾಂಧವ ಆಗಿದ್ದಾರೆ

ಸೋನು ಸೂದ್​

ಸೋನು ಸೂದ್​

 • Share this:
  ಕೋವಿಡ್​ ಸಮಯದಲ್ಲಿ ಅನೇಕರಿಗೆ ಸಕಾಲಕ್ಕೆ ನೆರವು ನೀಡುವ ಮೂಲಕ ರಿಯಲ್ ಹೀರೋ ಆದವರು ಬಾಲಿವುಡ್ ನಟ ಸೋನ್​ ಸೂದ್ (Sonu Sood)​. ತಮ್ಮ ಫೌಂಡೇಷನ್​ ಮೂಲಕ ತಮ್ಮ ಸಮಾಜ ಮುಖಿ ಕೆಲಸಗಳನ್ನು ಸೋನು ಸೂದ್​ ಇನ್ನೂ ಮುಂದುವರೆಸಿ ಅನೇಕರ ಪಾಲಿಗೆ ಆಸರೆ ಆಗಿದ್ದಾರೆ. ಅವರ ಮಾನವೀಯತೆ ಗುಣಕ್ಕೆ ಇಡೀ ದೇಶದ ಜನರು ಶ್ಲಾಘನೆ ವ್ಯಕ್ತಪಡಿಸಿದರು. ಇದೀಗ ಮತ್ತೊಮ್ಮೆ ಅವರು ರಸ್ತೆ ಅಪಘಾತದಲ್ಲಿ (Road Accident) ಗಂಭೀರವಾಗಿ ಗಾಯಗೊಂಡ ಯುವಕನ ಪ್ರಾಣ ರಕ್ಷಣೆ ಮಾಡುವ ಮೂಲಕ ಆಪತ್ಬಾಂಧವ ಆಗಿದ್ದಾರೆ. ಪಂಜಾಬ್‌ನ ಮೋಗಾದಲ್ಲಿ ಗಂಭೀರ ಕಾರು ಅಪಘಾತದಲ್ಲಿ ಸಿಲುಕಿದ ಯುವಕನನ್ನು ಕಂಡ ತಕ್ಷಣ ಅವರ ಪ್ರಾಣ ರಕ್ಷಣೆಗೆ ಧಾವಿಸಿದ್ದಾರೆ. ಆತನ ವಿಡಿಯೋವನ್ನು ಅವರ ಚಾರಿಟಿ ಫೌಂಡೇಶನ್ ಪೇಜ್​ನಲ್ಲಿ ಹಂಚಿಕೊಂಡಿದ್ದು, ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿದ್ದಾರೆ.

  ಏನಿದು ಘಟನೆ
  ಪಂಜಾಬ್​ನ ಮೋಗಾದಲ್ಲಿ ಹೈವೆ ಮೇಲೆ ಹಾದು ಹೋಗುತ್ತಿರುವಾಗ ಭೀಕರ ಅಪಘಾತ ನಡೆದಿದೆ. ಅಪಘಾತದಲ್ಲಿ ಕಾರು ನಜ್ಜು ಗುಜ್ಜಾಗಿದ್ದು, ಯುವಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಾರಿನಲ್ಲಿ ಸಿಲುಕಿಕೊಂಡಿದ್ದ.  ಇದೇ ವೇಳೆ ಮೊಗಾದಲ್ಲಿ ಸೋನು ಸೂದ್ ತನ್ನ ಸಹೋದರಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಮಾಳವಿಕಾ ಸೂದ್ ಪರ ಪ್ರಚಾರ ಮುಗಿಸಿ ಮಂಗಳವಾರ ಅದೇ ಮಾರ್ಗವಾಗಿ ಹೋಗುತ್ತಿದ್ದ ಸೋನು ಸೂದ್​ ಕಾರು ಘಟನೆ ಕಂಡು ನಿಲ್ಲಿಸಿ, ರಕ್ಷಣೆಗೆ ಧಾವಿಸಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಂತ್ರಸ್ತನನ್ನು ಕಾರಿನಿಂದ ಹೊರ ತರಲು ಮುಂದಾಗಿದ್ದಾರೆ. ಅಪಘಾತದ ರಭಸಕ್ಕೆ ಕಾರಿನ ಬಾಗಿಲು ಜಾಮ್ ಆಗಿತ್ತು. ಕಡೆಗೆ ಬಾಗಿಲು ತೆರೆದು ಯುವಕನನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕನಿಗೆ ಸಕಾಲಕ್ಕೆ ಚಿಕಿತ್ಸೆ ಸಿಕ್ಕಿದ್ದರಿಂದ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

  ಸೂದ್​ ಕಾರ್ಯಕ್ಕೆ ಶ್ಲಾಘನೆ
  ಯುವಕದ ಸ್ಥಿತಿ ಇದೀಗ ಸ್ಥಿರವಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಪ್ರತಿಯೊಂದು ಜೀವವೂ ಮಹತ್ವದ್ದು ಎಂಬ ಸಂದೇಶದೊಂದಿಗೆ ಈ ವಿಡಿಯೋವನ್ನು ಸೋನು ಸೂದ್​ ಹಂಚಿಕೊಂಡಿದ್ದಾರೆ. ಅವರ ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ಕಾರ್ಯಕ್ಕೆ ಶ್ಲಾಘಿಸಿದ್ದಾರೆ.

  ರಿಯಲ್ ಹೀರೋ ಆಗಿ ಹೊರ ಹೊಮ್ಮಿದ ಸೋನು ಸೂದ್

  ದೇಶದಲ್ಲಿ ಕೋವಿಡ್ ಮೊದಲ ಅಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದ ವಲಸೆ ಕಾರ್ಮಿಕರಿಗೆ ಆಹಾರ ನೀಡುವುದರ ಜೊತೆಗೆ ಊರಿಗೆ ತೆರಳು ಅವರು ಸಾರಿಗೆ ವ್ಯವಸ್ಥೆ ಮಾಡಿಕೊಟ್ಟರು. ಇನ್ನು ಎರಡನೇ ಅಲೆಯಲ್ಲಿ ಅನೇಕ ಸಂತ್ರಸ್ತರಿಗೆ ವೈದ್ಯಕೀಯ ಸೌಲಭ್ಯ ನೀಡಿದರು. ಅನೇಕರು ವೈದ್ಯಕೀಯ ಸೇವೆಗೆ ದೇಶದ ಉದ್ದಗಲದ ಜನರು ಸೋನು ಸೂದ್​ಗೆ ಟ್ವೀಟ್ ಮಾಡಿ ಸಹಾಯ ಪಡೆದರು. ಮಾರಣಾಂತಿಕ ಕೋವಿಡ್ ಸೋಂಕಿನ ವಿರುದ್ದ ಅನೇಕರ ಪಾಲಿನ ಹೀರೋ ಆಗಿ ಅವರು ಹೊರ ಹೊಮ್ಮಿದರು.

  ಇದನ್ನು ಓದಿ: ಅಧಿಕಾರಕ್ಕೆ ಬಂದ 10ದಿನದೊಳಗೆ ರೈತರ ಸಾಲಮನ್ನಾ; ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್​​​​

  ಸಾಂಕ್ರಾಮಿಕದ ಸಮಯದಲ್ಲಿ ವಿದೇಶದಲ್ಲಿದ್ದ ಅದೆಷ್ಟೋ ಭಾರತೀಯರನ್ನು ತಾಯ್ನಾಡಿಗೆ ಕರೆಸಿಕೊಳ್ಳುವಲ್ಲಿ ಸ್ಪೈಸ್‌ ಜೆಟ್ ಹಾಗೂ ಸೋನು ಸೂದ್ ಸೇನೆಯೊಂದಿಗೆ ಕೈ ಜೋಡಿಸಿದ್ದರು. ವಿದೇಶದಲ್ಲಿ ಸಿಲುಕಿದ್ದ ಅದೆಷ್ಟೋ ಭಾರತೀಯರನ್ನು ಮರಳಿ ತಾಯ್ನಾಡಿಗೆ ಕರೆತರುವಲ್ಲಿ ಕೈ ಜೋಡಿಸಿದ ಸೋನು ಸೂದ್ ಅವರ ಸಾಟಿಯಿಲ್ಲದ ಕೊಡುಗೆಯನ್ನು ಗೌರವಿಸುವ ಸಲುವಾಗಿ ವಿಮಾನದಲ್ಲಿ ನಟ ಸೂದ್ ಫೋಟೋವನ್ನು ಅಂಟಿಸುವ ಮೂಲಕ ವಿಶೇಷವಾಗಿ ವಿಮಾನವನ್ನು ಅಲಂಕರಿಸಿತು. ವಿಮಾನದಲ್ಲಿ ಸೂದ್​​ ಫೋಟೋ ಹಾಕುವ ಮೂಲಕ ಅವರಿಗೆ ಗೌರವ ನೀಡಿತ್ತು

  ಸಾಮಾಜಿಕ ಕಾರ್ಯದ ಜೊತೆ ಸಿನಿಮಾದಲ್ಲೂ ಕೂಡ ಅವರು ಬ್ಯುಸಿಯಾಗಿದ್ದಾರೆ. ಪೃಥ್ವಿರಾಜ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಸೋನು ಸೂದ್​ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ  ಜನಪ್ರಿಯ ರಿಯಾಲಿಟಿ ಶೋ ರೋಡೀಸ್‌ನಲ್ಲಿ ನಿರೂಪಕರಾಗಿದ್ದಾರೆ.
  Published by:Seema R
  First published: