Sameer Sharma Suicide - ಮತ್ತೊಬ್ಬ ನಟ ಆತ್ಮಹತ್ಯೆ; ಮುಂಬೈನಲ್ಲಿ ಸಮೀರ್ ಶರ್ಮಾ ನೇಣಿಗೆ ಶರಣು

ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಸಮೀರ್ ಶರ್ಮಾ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಎರಡು ದಿನದ ಹಿಂದೆ ಅವರು ಸಾವನ್ನಪ್ಪಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಸಾವಿಗೆ ಕಾರಣ ಏನೆಂದು ಗೊತ್ತಾಗಿಲ್ಲ.

news18
Updated:August 6, 2020, 1:36 PM IST
Sameer Sharma Suicide - ಮತ್ತೊಬ್ಬ ನಟ ಆತ್ಮಹತ್ಯೆ; ಮುಂಬೈನಲ್ಲಿ ಸಮೀರ್ ಶರ್ಮಾ ನೇಣಿಗೆ ಶರಣು
ಸಮೀರ್ ಶರ್ಮಾ
  • News18
  • Last Updated: August 6, 2020, 1:36 PM IST
  • Share this:
ಮುಂಬೈ(ಆ. 06): ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ಪ್ರಕರಣ ರಾಷ್ಟ್ರಾದ್ಯಂತ ಸಂಚಲನ ಸೃಷ್ಟಿಸುತ್ತಿರುವಂತೆಯೇ ಮುಂಬೈನಲ್ಲಿ ಮತ್ತೊಬ್ಬ ನಟರು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. 44 ವರ್ಷದ ಕಿರುತೆರೆ ನಟ ಸಮೀರ್ ಶರ್ಮಾ ನಿನ್ನೆ ರಾತ್ರಿ ತಮ್ಮ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಎರಡು ದಿನದ ಹಿಂದೆ ಅವರು ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಸಾವಿಗೆ ಏನು ಕಾರಣ ಎಂಬುದು ಗೊತ್ತಾಗಿಲ್ಲ.

ಮಲದ್ ವೆಸ್ಟ್​ನ ನೇಹಾ ಸಿಎಚ್​ಎಸ್ ಬ್ಯುಲ್ಡಿಂಗ್​ನಲ್ಲಿರುವ ಅವರ ಅಪಾರ್ಟ್​ಮೆಂಟ್​​ನಲ್ಲಿ ಸಮೀರ್ ಶರ್ಮಾ ಅವರ ಮೃತ ದೇಹವನ್ನು ಮೊದಲು ಕಂಡವರು ವಾಚ್​ಮ್ಯಾನ್. ರಾತ್ರಿ ಭದ್ರತೆ ಪರಿಶೀಲಿಸುವ ವೇಳೆ ಫ್ಯಾನಿಗೆ ನೇಣುಬಿಗಿದುಕೊಂಡಿದ್ದ ಮೃತ ದೇಹವನ್ನು ಕಿಟಕಿಯಿಂದ ಕಂಡ ವಾಚ್​ಮ್ಯಾನ್ ಕೂಡಲೇ ಬ್ಯುಲ್ಡಿಂಗ್ ಸೂಪರ್​ವೈಸರ್​ಗೆ ತಿಳಿಸಿದ್ದಾನೆ. ನಂತರ ಪೊಲೀಸರಿಗೆ ಮಾಹಿತಿ ಹೋಗಿದೆ. ಸ್ಥಳಕ್ಕೆ ಬಂದ ಪೊಲೀಸರಿಗೆ ಯಾವುದೇ ಸೂಸೈಡ್ ನೋಟ್ ಸಿಕ್ಕಿಲ್ಲ.

ಮಲದ್ ಠಾಣೆಯ ಪೊಲೀಸರು ಇದೊಂದು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ. ಮೃತದೇಹವನ್ನು ಪೋಸ್ಟ್ ಮಾರ್ಟಂಗಾಗಿ ಕಳುಹಿಸಲಾಗಿದೆ ಎಂದು ಠಾಣೆಯ ಹಿರಿಯ ಇನ್ಸ್​ಪೆಕ್ಟರ್ ಜಾರ್ಜ್ ಫರ್ನಾಂಡಿಸ್ ತಿಳಿಸಿದ್ದಾರೆ.

ಇದನ್ನೂ ಓದಿ: ರಿಯಾ ಜತೆ ಯೂರೋಪ್​​ ಟ್ರಿಪ್​​ಗೆ ಹೋಗಿದ್ದೇ ಸುಶಾಂತ್​​ ಸಿಂಗ್​ ಸಾವಿಗೆ ಮುಳುವಾಯ್ತ?

ಸಮೀರ್ ಶರ್ಮಾ ಅವರು ನಟಿಸಿರುವ ಧಾರವಾಹಿಗಳಲ್ಲಿ “ಯೇ ರಿಷ್ತೇ ಹೈಂ ಪ್ಯಾರ್ ಕೇ” ಪ್ರಮುಖವಾದುದು. “ಕಹಾನಿ ಘರ್ ಘರ್ ಕೀ”, “ಕ್ಯೂಂಕಿ ಸಾಸ್ ಭೀ ಕಭಿ ಬಹು ಥೀ”, “ಜ್ಯೋತಿ”, “ಇಸ್ ಪ್ಯಾರ್ ಕೋ ಕ್ಯಾ ನಾಮ್ ದೂ” ಮೊದಲಾದ ಜನಪ್ರಿಯ ಸೀರಿಯಲ್​ಗಳಲ್ಲೂ ಅವರು ನಟಿಸಿದ್ದಾರೆ.

ಮಾಹಿತಿ ಕೃಪೆ: ಮಿಡ್ ಡೇ ಪತ್ರಿಕೆ
Published by: Vijayasarthy SN
First published: August 6, 2020, 1:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading