ರಜನಿಕಾಂತ್ ಬಿಜೆಪಿ ಸೇರಿಲ್ಲ, ಸೇರುತ್ತಾರೆಂದು ನಾವೆಂದೂ ಹೇಳಿಲ್ಲ; ಪಕ್ಷದ ಮುಖಂಡ ಮುರಳೀಧರ್ ರಾವ್ ಸ್ಪಷ್ಟನೆ

ರಜನಿಕಾಂತ್ ಬಿಜೆಪಿ ಸೇರಿದ್ದಾರೆ ಎಂದು ನಾವು ಯಾವತ್ತೂ ಹೇಳಿಲ್ಲ. ಅವರು ಬಿಜೆಪಿ ಸೇರಲು ಸಿದ್ಧವಿದ್ದಾರೆ ಎಂದು ಕೂಡ ನಾವು ಎಲ್ಲೂ ಹೇಳಿಲ್ಲ. ಅನವಶ್ಯಕವಾಗಿ ಈ ವಿಚಾರದಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ. ಮುರಳೀಧರ್ ರಾವ್ ಹೇಳಿದ್ದಾರೆ.

Sushma Chakre | news18-kannada
Updated:November 8, 2019, 7:00 PM IST
ರಜನಿಕಾಂತ್ ಬಿಜೆಪಿ ಸೇರಿಲ್ಲ, ಸೇರುತ್ತಾರೆಂದು ನಾವೆಂದೂ ಹೇಳಿಲ್ಲ; ಪಕ್ಷದ ಮುಖಂಡ ಮುರಳೀಧರ್ ರಾವ್ ಸ್ಪಷ್ಟನೆ
ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ್ ರಾವ್
  • Share this:
ಚೆನ್ನೈ (ನ. 8): ಸೂಪರ್​ಸ್ಟಾರ್ ರಜನಿಕಾಂತ್ ಬಿಜೆಪಿ ಸೇರಿದ್ದಾರೆ ಎಂಬ ವದಂತಿಗಳು ಎಲ್ಲೆಡೆ ಹರಿದಾಡಿದ್ದವು. ಆ ಸುದ್ದಿಯನ್ನು ಇಂದು ಖುದ್ದು ರಜನಿಕಾಂತ್ ಅವರೇ ಅಲ್ಲಗಳೆದಿದ್ದರು. ಇದೀಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜ್ಯ ಬಿಜೆಪಿ ಉಸ್ತುವಾರಿ ಪಿ. ಮುರಳೀಧರ್ ರಾವ್ ಕೂಡ ತಮಿಳು ನಟ ರಜನಿಕಾಂತ್ ಬಿಜೆಪಿ ಸೇರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಜನಿಕಾಂತ್ ಅವರ ಬಗ್ಗೆ ನಮಗೆ  ಯಾವುದೇ ತಪ್ಪು ಕಲ್ಪನೆ ಇಲ್ಲ. ಅವರು ಬಿಜೆಪಿ ಸೇರಿದ್ದಾರೆ ಎಂದು ನಾವು ಯಾವತ್ತೂ ಹೇಳಿಲ್ಲ. ಅವರು ಬಿಜೆಪಿ ಸೇರಲು ಸಿದ್ಧವಿದ್ದಾರೆ ಎಂಬುದು ಕೂಡ ಸತ್ಯ ಸಂಗತಿಯಲ್ಲ. ನಾವು ಆ ರೀತಿ ಎಲ್ಲೂ ಹೇಳಿಲ್ಲ. ಅನವಶ್ಯಕವಾಗಿ ಈ ವಿಚಾರದಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ತಿರುವಳ್ಳುವರ್​ ರೀತಿ ನನ್ನನ್ನೂ ಕೇಸರೀಕರಣಗೊಳಿಸಲು ಯತ್ನಿಸಿದರು, ಆದರೆ ನಾನು ಬಿಜೆಪಿಗನಲ್ಲ; ರಜನಿಕಾಂತ್​​

ಇತ್ತೀಚಿಗೆ ಹೊಸದಾಗಿ 6 ಕೋಟಿ ಜನ ಬಿಜೆಪಿ ಸದಸ್ಯತ್ವ ಪಡೆದಿದ್ದಾರೆ. ಇದರೊಂದಿಗೆ ನಮ್ಮ ಪಕ್ಷದ ಸದಸ್ಯರ ಸಂಖ್ಯೆ 17 ರಿಂದ 18 ಕೋಟಿಗೆ ಏರಿಕೆಯಾಗಿದೆ ಎಂದು ಮುರಳೀಧರ್ ರಾವ್ ಮಾಹಿತಿ ನೀಡಿದ್ದಾರೆ. ಇಂದು ಬೆಳಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಹಿರಿಯ ನಟ ರಜನಿಕಾಂತ್ ಇತ್ತೀಚೆಗೆ ತಮಿಳು ಕವಿ ತಿರುವಳ್ಳುವರ್ ಪ್ರತಿಮೆಗೆ ಕೇಸರಿ ಶಾಲು ಹೊದಿಸಿದ ಹಾಗೇ ನನ್ನನ್ನು ಕೇಸರೀಕರಣಗೊಳಿಸುವ ಪ್ರಯತ್ನ ನಡೆಯುತ್ತಿದೆ. ಆದರೆ, ತಮ್ಮ ಪಕ್ಷಕ್ಕೆ ಸೇರುವಂತೆ ನನಗೆ ಬಿಜೆಪಿ ಆಹ್ವಾನ ನೀಡಿಲ್ಲ. ವಿನಾಕಾರಣ ನನಗೆ ಕೇಸರಿ ಬಣ್ಣ ಬಳಿಯುವ ಪ್ರಯತ್ನಗಳು ನಡೆಯುತ್ತಿದೆ . ಈ ವಿವಾದದಲ್ಲಿ ನನ್ನನ್ನು ಅನಗತ್ಯವಾಗಿ ಎಳೆಯಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದರು.

 

First published:November 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ