ಕೊನೆ ಉಸಿರು ಇರುವವರೆಗೂ ನಲ್ಲಮಲ ಅರಣ್ಯ ಉಳಿಸಲು ಹೋರಾಡುತ್ತೇನೆ; ಜನಸೇನೆ ಅಧ್ಯಕ್ಷ ಪವನ್​​ ಕಲ್ಯಾಣ್​​

ಸದ್ಯ ಸಚಿವ ಕೆಟಿಆರ್​​ ಯಾವುದೇ ಗಣಿಗಾರಿಕೆಗೆ ಅವಕಾಶ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಂತೆಯೇ ಇನ್ನೊಮ್ಮೆ ಸಿಎಂ ಕೆ. ಚಂದ್ರಶೇಖರ್​​ ಅವರೊಂದಿಗೆ ಈ ಸಂಬಂಧ ಮಾತುಕತೆ ನಡೆಸುತ್ತೇವೆ ಎಂದಿದ್ದಾರೆ.

news18
Updated:September 17, 2019, 6:26 PM IST
ಕೊನೆ ಉಸಿರು ಇರುವವರೆಗೂ ನಲ್ಲಮಲ ಅರಣ್ಯ ಉಳಿಸಲು ಹೋರಾಡುತ್ತೇನೆ; ಜನಸೇನೆ ಅಧ್ಯಕ್ಷ ಪವನ್​​ ಕಲ್ಯಾಣ್​​
ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್
  • News18
  • Last Updated: September 17, 2019, 6:26 PM IST
  • Share this:
ಹೈದರಾಬಾದ್​​(ಸೆ.17): ಆಂಧ್ರಪ್ರದೇಶದ ನಲ್ಲಮಲ ಅರಣ್ಯದ ಉಳಿವಿಗಾಗಿ ಸಾಯುವವರೆಗೂ ಹೋರಾಟ ಮಾಡುತ್ತೇನೆ ಎಂದು ಜನಸೇನೆ ಅಧ್ಯಕ್ಷ ಪವನ್​​ ಕಲ್ಯಾಣ್ ಶಪಥ ಮಾಡಿದ್ದಾರೆ. ಇಲ್ಲಿ ಯಾವುದೇ ಕಾರಣಕ್ಕೂ ಯೂರೇನಿಯಂ ಗಣಿಕಾರಿಕೆ ಮಾಡಲು ಬಿಡುವುದಿಲ್ಲ. ನಾನು ಬೇಕಾದರೆ ಪ್ರಾಣತ್ಯಾಗಕ್ಕೂ ಸಿದ್ಧ ಎಂದು ತೆಲಂಗಾಣ ಸರ್ಕಾರಕ್ಕೆ ಸಂದೇಶ ರವಾನಿಸಿದ್ದಾರೆ.

ಇಂದು ನಗರದಲ್ಲಿ ಕಾಂಗ್ರೆಸ್​ ಸೇರಿದಂತೆ ಜನಸೇನೆ ಮತ್ತು ಕಮ್ಯನಿಷ್ಟ್​​ ಪಕ್ಷಗಳು ಸುದ್ದಿಗೋಷ್ಠಿ ನಡೆಸಿದವು. ಇಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತಾಡಿದ ನಟ ಪವನ್​​ ಕಲ್ಯಾಣ್​​, ನಾನು ನಲ್ಲಮಲ್ಲ ಅರಣ್ಯಕ್ಕಾಗಿ ಕೊನೆ ಉಸಿರು ಇರುವವರೆಗೂ ಹೋರಾಡಲು ಸಿದ್ಧನಿದ್ದೇನೆ. ಓರ್ವ ಯೋಧನಾಗಿ ನಮ್ಮ ನಾಡಿನ ರಕ್ಷಣೆಗೆ ನಿಲ್ಲುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗಷ್ಟೇ ನಲ್ಲಮಲ ಅರಣ್ಯ ಪ್ರದೇಶದಲ್ಲಿ ಯುರೇನಿಯಂ ಗಣಿಗಾರಿಕೆಗೆ ಯಾವುದೇ ಅನುಮತಿ ನೀಡಿಲ್ಲ ಎಂದು ತೆಲಂಗಾಣ ಸರ್ಕಾರದ ಸಚಿವ ಕೆ. ತಾರಕರಾಮ ರಾವ್(ಕೆಟಿಆರ್​​) ಸ್ಪಷ್ಟನೆ ನೀಡಿದ್ದಾರೆ. ಈ ಬೆನ್ನಲ್ಲೇ ಟ್ವೀಟ್​​ ಮಾಡಿದ್ದ 'ಗೀತ ಗೋವಿಂದಂ' ಖ್ಯಾತಿಯ ನಟ ವಿಜಯ್ ದೇವರಕೊಂಡ, ನಮ್ಮ ಹೋರಾಟಕ್ಕೆ ಸಂದ ಮೊದಲನೆಯ ಜಯ ಇದಾಗಿದೆ ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: ನಲ್ಲಮಲ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ಇಲ್ಲ ಎಂದ ಕೆಟಿಆರ್​​; ಇದು ನಮ್ಮ ಹೋರಾಟಕ್ಕೆ ಸಂದ ಮೊದಲ ಜಯ ಎಂದ ವಿಜಯ್​​ ದೇವರಕೊಂಡ

ಇಲ್ಲಿನ ನಲ್ಲಮಲ ಅರಣ್ಯ ಪ್ರದೇಶದಲ್ಲಿ ಯುರೇನಿಯಂ ಗಣಿಗಾರಿಕೆಗೆ ಅವಕಾಶ ಮಾಡಿಕೊಲಾಗಿದೆ ಎನ್ನಲಾಗಿತ್ತು. ಇದಕ್ಕೆ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ತೆಲುಗು ಖ್ಯಾತ ನಟ-ನಟಿಯರು, ಪರಿಸರವಾದಿಗಳು ಕೂಡ ಕಾಡಿನಲ್ಲಿ ಯಾವುದೇ ಗಣಿಗಾರಿಕೆ ಬೇಡ ಎಂದು ಧ್ವನಿ ಎತ್ತಿದ್ದರು.

ಜನಸೇನೆ ಮುಖ್ಯಸ್ಥ ಮತ್ತು ನಟ ಪವನ್​ ಕಲ್ಯಾಣ್​​, ನಟಿ ಸಮಂತಾ ಅಕ್ಕಿನೇನಿ, ನಿರ್ದೇಶಕ ಶೇಖರ್ ಕಮ್ಮುಲ, ವಿಜಯ ದೇವರಕೊಂಡ ಸೇರಿದಂತೆ ಪ್ರಮುಖ ರಾಜಕೀಯ ನಾಯಕರು ಸೇವ್ ನಲ್ಲಮಲ ಆಂದೋಲನಕ್ಕೆ ಬೆಂಬಲ ಸೂಚಿಸಿದ್ದರು.

ಸದ್ಯ ಸಚಿವ ಕೆಟಿಆರ್​​ ಯಾವುದೇ ಗಣಿಗಾರಿಕೆಗೆ ಅವಕಾಶ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಂತೆಯೇ ಇನ್ನೊಮ್ಮೆ ಸಿಎಂ ಕೆ. ಚಂದ್ರಶೇಖರ್​​ ಅವರೊಂದಿಗೆ ಈ ಸಂಬಂಧ ಮಾತುಕತೆ ನಡೆಸುತ್ತೇವೆ ಎಂದಿದ್ದಾರೆ.ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ
------------
First published:September 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ