Actor Morgan: ಚರ್ಮರೋಗ ಚಿಕಿತ್ಸೆ ಜಾಹೀರಾತಿಗೆ ಹಾಲಿವುಡ್ ನಟನ ಚಿತ್ರ ಬಳಕೆ, ನೋಡಿ ಜನ ಶಾಕ್!

ನಟ ಮೊರ್ಗನ್ ಫ್ರೀಮ್ಯಾನ್ಸ್ ಅವರ ಫೋಟೋವನ್ನು ಚರ್ಮರೋಗ ಚಿಕಿತ್ಸೆ ಕುರಿತ ಜಾಹೀರಾತಿಗೆ ಬಳಕೆ ಮಾಡಿಕೊಂಡಿದ್ದ ಕೇರಳದ ವಡಕರ ಕೋ-ಆಪರೇಟಿವ್ ಆಸ್ಪತ್ರೆ ಕೊನೆಗೂ ಕ್ಷಮೆಯಾಚಿಸಿದೆ. ನಟ ಮೊರ್ಗನ್ ಅಭಿಮಾನಿಗಳು ಆಸ್ಪತ್ರೆಗೆ ಛೀಮಾರಿ ಹಾಕಿದ್ದರು.

ಜಾಹೀರಾತಿನಲ್ಲಿ ನಟ ಮೊರ್ಗನ್ ಚಿತ್ರ

ಜಾಹೀರಾತಿನಲ್ಲಿ ನಟ ಮೊರ್ಗನ್ ಚಿತ್ರ

 • Share this:
  ಕೇರಳ: ಪ್ರಸಿದ್ಧ ಹಾಲಿವುಡ್ ( Hollywood), ಬಾಲಿವುಡ್ (Bollywood), ನಟ ಮೊರ್ಗನ್ ಫ್ರೀಮ್ಯಾನ್ಸ್ (actor Morgan freeman) ಅವರ ಫೋಟೋವನ್ನು ಚರ್ಮದ ಚಿಕಿತ್ಸೆ ಕುರಿತ ಜಾಹೀರಾತಿಗೆ ಬಳಕೆ ಮಾಡಿಕೊಂಡಿದ್ದ ಕೇರಳದ (Kerala) ವಡಕರ ಕೋ-ಆಪರೇಟಿವ್ ಆಸ್ಪತ್ರೆ (Hospital) ಈಗ ಕ್ಷಮೆಯಾಚಿಸಿದೆ. ನಟ ಮೊರ್ಗನ್ ಅವರ ಭಾವಚಿತ್ರವಿರುವ ಪೋಸ್ಟರ್ ನ್ನು ಆಸ್ಪತ್ರೆ ಜಾಹೀರಾತು ಮತ್ತು ಪ್ರಚಾರಕ್ಕೆ (advertisement) ಬಳಕೆ ಮಾಡಿದ್ದರ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿತ್ತು. ಚರ್ಮದ ಚಿಕಿತ್ಸೆಯಿಂದಾಗುವ ಪ್ರಯೋಜನಗಳು ಎಂಬ ಶೀರ್ಷಿಕೆಯಡಿ ನಟ ಮೊರ್ಗನ್ ಅವರ ಭಾವಚಿತ್ರವನ್ನು ಜಾಹೀರಾತು ಮತ್ತು ಪ್ರಚಾರಕ್ಕೆ ಬಳಕೆ ಮಾಡಲಾಗಿತ್ತು. ಚರ್ಮದ ಮೇಲಿನ ಗುಳ್ಳೆಗಳು, ನರಹುಲಿಗಳು, (skin tags) ಕೀವು ತುಂಬಿದ ಗುಳ್ಳೆಗಳನ್ನು ಚಿಕಿತ್ಸೆ ಮೂಲಕ ಗುಣಪಡಿಸಲಾಗುವುದು ಎಂದು ಆಸ್ಪತ್ರೆ ಜಾಹೀರಾತು ನೀಡಿತ್ತು. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ (social media) ಸಾಕಷ್ಟು ವಿರೋಧಕ್ಕೆ ಕಾರಣವಾಗಿತ್ತು.

  ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ ಆಸ್ಪತ್ರೆ

  ಅಷ್ಟೇ ಅಲ್ಲದೇ  ನಟನ ಅಭಿಮಾನಿಗಳು ಆಸ್ಪತ್ರೆಗೆ ಕರೆ ಮಾಡಿ ಛೀಮಾರಿ (slammed) ಹಾಕಿದ್ದರು. ಇದರಿಂದ ಎಚ್ಚೆತ್ತ ಆಸ್ಪತ್ರೆ ಮಂಡಳಿ ಕ್ಷಮೆಯಾಚಿಸಿದೆ (apology) . ಆಸ್ಪತ್ರೆಯ ಮಾರ್ಕೆಟಿಂಗ್ ಮ್ಯಾನೇಜರ್ ಟಿ ಸುನೀಲ್ , ಫೇಸ್ ಬುಕ್ ಮತ್ತು ಹಾಲಿವುಡ್, ನಟನ ಅಭಿಮಾನಿಗಳ ಬಳಿ ಕ್ಷಮೆ ಕೋರಿದ್ದಾರೆ.

  ಆಸ್ಪತ್ರೆ ವಿರುದ್ಧ ಕಿಡಿಕಾರಿದ ನೆಟ್ಟಿಗರು..

  ಕೆಲ ಟ್ವಿಟ್ಟಿಗರು ಜಾಹೀರಾತು ನೋಡ್ತಿದ್ದ ಹಾಗೆಯೇ ಫೋಟೋ ತೆಗೆದು, ‘ಸರ್, ಮೊರ್ಗನ್-ಫ್ರೀಮ್ಯಾನ್ ನಿಮ್ಮ ಭಾವಚಿತ್ರವನ್ನು ಭಾರತದ ರಾಜ್ಯ ಕೇರಳದ ಆಸ್ಪತ್ರೆಯೊಂದು ಚರ್ಮರೋಗದ ಕುರಿತ ಜಾಹೀರಾತಿನಲ್ಲಿ ಫೋಟೋವನ್ನು ಬಳಸಿದ್ದಾರೆ. ಚರ್ಮದ ಕಪ್ಪು ಕಲೆ, ನೆರಿಗೆ, ನರಹುಲಿ, ಗುಳ್ಳೆಗಳನ್ನು ಗುಣಪಡಿಸುವುದಾಗಿ ಹಾಕಿಕೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

  ‘ದಯವಿಟ್ಟು ನಟನಿಗೆ ಗೌರವ ನೀಡಿ’

  ಇನ್ನೊಬ್ಬರು ಟ್ವೀಟ್ ಮಾಡಿದ್ದು, ಒಹ್, ದೇವರೆ ! ಕೇರಳದ ಕೋ-ಆಪರೇಟಿವ್ ಚರ್ಮದ ಆಸ್ಪತ್ರೆ, ನಟ ಮೊರ್ಗನ್ ಫ್ರೀಮ್ಯಾನ್ ಅವರ ಫೋಟೋವನ್ನು ಚರ್ಮದ ಚಿಕಿತ್ಸೆ ಜಾಹೀರಾತಿಗೆ ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೇ ಮುಖದಲ್ಲಿನ ನರಹುಲಿಗಳು, ಕೀವು ತುಂಬಿದ ಗುಳ್ಳೆಗಳನ್ನು ಒಂದೇ ಚಿಕಿತ್ಸೆಯಲ್ಲಿ ಗುಣಪಡಿಸಲಾಗುವುದು ಎಂದು ಹೇಳಿಕೊಂಡಿದೆ. ದಯವಿಟ್ಟು ನಟನಿಗೆ ಗೌರವ ನೀಡಿ ಎಂದು ಹೇಳಿದ್ದಾರೆ.

  ಇದನ್ನೂ ಓದಿ: Kunchacko Boban: ಮಲಯಾಳಂ ಚಿತ್ರನಟ ಕರ್ನಾಟಕದಲ್ಲಿ ಪೋಸ್ಟ್ ಮ್ಯಾನ್, ಸರ್ಕಾರಿ ಕೆಲಸ ಕೊನೆಗೂ ಸಿಕ್ತು ಎಂದ ಬೋಬನ್!

  ಇನ್ನು ಕೆಲವರು ಬೇರೆ ಬೇರೆ ಜಾಹೀರಾತು ಕಂಪನಿಗಳು, ಹಾಲಿವುಡ್ ಮತ್ತು ಬಾಲಿವುಡ್ ನಟರನ್ನು ಹೇಗೆ ಬಳಸಿಕೊಂಡಿವೆ ಎಂಬುದರ ಫೋಟೋವನ್ನು ಶೇರ್ ಮಾಡಿದ್ದಾರೆ. ಕೆಲವು ಜಾಹೀರಾತುಗಳು ರಂಜನೀಯವಾಗಿವೆ. ರೋಡ್ ಪಕ್ಕದ ಸಲೂನ್ ಗಳು ಜೇನ್ ಅಥವಾ ಶಾರೂಖ್ ಖಾನ್, ಜೆಸ್ಸಿಕಾ ಅಲ್ಬಾ ಅವರ ಭಾವಚಿತ್ರವನ್ನು ಕೇರಂ ಪೌಡರ್ ಪ್ಯಾಕೆಟ್ ಗಳ ಮೇಲೆ, ಜಾನ್ ಟೆರ್ರಿ ಭಾವಚಿತ್ರವನ್ನು ಸಿಗರೇಟ್ ಪ್ಯಾಕೇಟ್ ಮೇಲೆ ಬಳಕೆ ಮಾಡಿರುವ ಬಗ್ಗೆ ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ.

  ಡಿಸೈನರ್ ಎಡವಟ್ಟು.. ಸಿಬ್ಬಂದಿ ಕಂಗಾಲು

  ಇನ್ನು 2013ರಲ್ಲಿ ಕೋಯಂಬತ್ತೂರಿನಲ್ಲಿ ಬಿಲ್ ಬೋರ್ಡ್ ಮಾಲೀಕ ನೆಲ್ಸನ್ ಮಂಡೇಲಾ ಅವರ ಭಾವಚಿತ್ರವನ್ನು ಜಾಹೀರಾತಿಗೆ ಬಳಸುವ ಮೂಲಕ ಅವರಿಗೆ ಶ್ರದ್ಧಾಂಜಲಿ ಅರ್ಪಿಸಬೇಕು ಎಂದಿದ್ದರು. ಆದರೆ ಕೆಲಸದ ಪಾಳಿಯಲ್ಲಿದ್ದ ವ್ಯಕ್ತಿ ಮಂಡೇಲಾ ಅವರ ಭಾವಚಿತ್ರದ ಬದಲು ನಟ ಮೊರ್ಗನ್ ಫ್ರೀಮ್ಯಾನ್ ಅವರ ಫೋಟೋವನ್ನು ಬಳಸಿದ್ದಾರೆ ಎಂದು ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

  ಇದನ್ನೂ ಓದಿ: ಹೇಗಿದ್ದವರು ಹೇಗಾಗಿದ್ದಾರೆ ಗೊತ್ತಾ ಹಾಲಿವುಡ್​ ನಟ Tom Cruise: ಪ್ಲಾಸ್ಟಿಕ್​ ಸರ್ಜರಿ ಎಫೆಕ್ಟಾ ಇದು ಎಂದ ನೆಟ್ಟಿಗರು..!

  ಬಟ್ಟೆ ವ್ಯಾಪಾರಿ ಚಂದ್ರಶೇಖರ್ ಮಾತನಾಡಿ, ಎಎಫ್ ಪಿ ಪ್ರಕಾರ, ಇದು ಡಿಸೈನರ್ ಮಾಡಿರುವ ತಪ್ಪು. ಮಂಡೇಲಾ ಅವರ ಸರಿಯಾದ ಭಾವಚಿತ್ರವನ್ನು ಹಾಕುವ ಮೂಲಕ ತಪ್ಪನ್ನು ಸರಿಪಡಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
  Published by:renukadariyannavar
  First published: