Attack On Actor Komal: ಅಪರಿಚಿತ ವ್ಯಕ್ತಿಯಿಂದ ನಟ ಕೋಮಲ್​ ಮೇಲೆ ಹಲ್ಲೆ

Actor Komal: ಸಂಪಿಗೆ ರಸ್ತೆಯಲ್ಲಿ ಕೋಮಲ್​ ಅವರು ಕಾರಿನಲ್ಲಿ ಹೋಗುವಾಗ ಹಿಂದಿನಿಂದ ಬೈಕ್​ನಲ್ಲಿ ಬಂದ ವ್ಯಕ್ತಿ ಕಾರನ್ನು ಅಡ್ಡಗಟ್ಟಿದ್ದಾರೆ. ನಂತರ ಕಾರಿನ ಬಾಗಿಲು ತೆಗೆದು ಕೋಮಲ್​ ಅವರ ಮೇಲೆ ಹಲ್ಲೆ ಮಾಡಿದ್ದಾರೆ.

Anitha E | news18
Updated:August 13, 2019, 7:44 PM IST
Attack On Actor Komal: ಅಪರಿಚಿತ ವ್ಯಕ್ತಿಯಿಂದ ನಟ ಕೋಮಲ್​ ಮೇಲೆ ಹಲ್ಲೆ
ನಟ ಕೋಮಲ್​
  • News18
  • Last Updated: August 13, 2019, 7:44 PM IST
  • Share this:
ನಟ ಕೋಮಲ್ ಮೇಲೆ ನಾಲ್ಕು ಜನ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಶ್ರೀರಾಮಪುರ ರೈಲ್ವೆ ಅಂಡರ್ ಪಾಸ್​​​ ಬಳಿ ನಡೆದಿದೆ. ಮಗಳನ್ನು ಟ್ಯೂಶನ್​ ಕ್ಲಾಸ್​ಗೆ ಬಿಟ್ಟು ಬರುತ್ತಿರುವ ವೇಳೆ  ಈ ಘಟನೆ ನಡೆದಿದ್ದು, ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಲಾಗಿದೆ.


ಶ್ರೀರಾಮಪುರ ರೈಲ್ವೆ ಅಂಡರ್ ಪಾಸ್ ಬಳಿ ಕೋಮಲ್​ ಅವರು ಕಾರಿನಲ್ಲಿ ಹೋಗುವಾಗ ಬೈಕ್​ನಲ್ಲಿ ಬಂದ ಸವಾರರಿಗೆ ಸೈಡ್​ ಕೊಡಲಿಲ್ಲ ಅನ್ನೋ ಕಾರಣಕ್ಕೆ ಮಾತಿನ ಚಕಮಕಿ ನಡೆದಿದೆ. ನಂತರ ಕಾರಿನ ಬಾಗಿಲು ತೆಗೆದು ಹೊರ ಬಂದ ಕೋಮಲ್​ ಮೇಲೆ ಹಲ್ಲೆಕೋರರು ದಾಳಿ ಮಾಡಿದ್ದಾರೆ. ಕೋಮಲ್​ ಮುಖಕ್ಕೆ ಗಾಯವಾಗಿದ್ದು, ಸದ್ಯ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. 


ಚಿಕಿತ್ಸೆ ಪಡೆಯುತ್ತಿರುವ ನಟ ಕೋಮಲ್​

Loading...ರಸ್ತೆಯಲ್ಲಿ ಕೋಮಲ್​ ಮೇಲೆ ಹಲ್ಲೆ ನಡೆಯುತ್ತಿದ್ದಾಗ ಅಲ್ಲಿಯೇ ನರೆದಿದ್ದ ಜನ ತಡೆದಿದ್ದಾರೆ. ನಂತರ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಮಲ್ಲೇಶ್ವರದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  ಹಲ್ಲೆ ಮಾಡಿದ ವ್ಯಕ್ತಿಯನ್ನು ವಿಜಯ್​ ಎಂದು ಗುರುತಿಸಲಾಗಿದೆ.
ಇನ್ನು ತಮ್ಮನ ಮೇಲೆ ಹಲ್ಲೆಗೆ ಸಂಭಂದಿಸಿದಂತೆ ನಟ ಜಗ್ಗೇಶ್​ ನ್ಯೂಸ್​ 18 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ. ತಮ್ಮ ಮಗುವನ್ನಾ ಟ್ಯೂಶನ್ ಗೆ ಬಿಡಲಿಕ್ಕೆ ಹೋಗುತ್ತಿದ್ದ. ಈ ಸಮಯದಲ್ಲಿ ಶ್ರೀರಾಮಪುರ ರೈಲ್ವೆ ಅಂಡರ್ ಪಾಸ್ ಬಳಿ ನಾಲ್ಕು ಜನ ಬೈಕ್ ಸವಾರರು ಕೋಮಲ್​​ ಹಲ್ಲೆ ನಡೆಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಕ್ಯಾತೇ ತೆಗೆದು ಗಲಾಟೆ ಮಾಡಿದ್ದಾರೆ. ಮೂವರು ಕಿಡಿಗೇಡಿಗಳು ಕೋಮಲ್​​ನನ್ನು ಥಳಿಸಿದರೆ, ಇನ್ನೋರ್ವ ಹಲ್ಲೆ ಮಾಡಿದ್ದಾನೆ ಎಂದರು. 

"ನಾಲ್ಕು ಜನ ಕುಡಿದ ಮತ್ತಿನಲ್ಲಿ ಹೊಡೆದಿದ್ದಾರೆ. ಈ ರೀತಿಯ ಘಟನೆ ಬೆಂಗಳೂರಿನಲ್ಲಿ ಆಗಬಾರದು. ನನ್ನ ತಮ್ಮ ಅಥವಾ ನಟ ಅಂತಾ ಅಲ್ಲ, ಯಾವ ಜನರಿಗೂ ಕೂಡ ಹೀಗಾಗಬಾರದು. ಕುಡಿದು, ಗಾಂಜಾ ಹೊಡೆದು ಈ ರೀತಿ ಹಲ್ಲೆ ಮಾಡುವ ಘಟನೆಗಳು ನಗರದಲ್ಲಿ ನಡೆಯುತ್ತಲೇ ಇದೆ. ನನಗೆ ಯಾರು ಏನ್ ಮಾಡಿದ್ದಾರೆ ಎಂದು ಗೊತ್ತಾಗಲಿದೆ. ಇಂಡಸ್ಟ್ರಿಯವರು ಮಾಡಿದ್ದಾರಾ, ಅಥವಾ ಬೇರೆಯವರು ಮಾಡಿದ್ದಾರ ಎಂದು ಗೊತ್ತಿಲ್ಲ. ಆದರೆ ಇಂಡಸ್ಟ್ರಿಯವರು ಮಾಡಿದ್ರೆ ಖಂಡಿತಾ ನಾನು ಬಿಡಲ್ಲ. ನಾನು ಮೂವತ್ತು ವರ್ಷದಿಂದ ಇಂಡಸ್ಟ್ರಿಯಲ್ಲೇ ಇದ್ದೇನೆ. ನಾನಾದ್ರೆ ಬ್ಯಾಡ್ ವರ್ಡ್ಸ್ ನಲ್ಲಿ ಬೈಯೋದು ಗೊತ್ತು. ಕೋಮಲ್ ಪಾಪದವನು, ಅವನಿಗೆ ಇವೆಲ್ಲಾ ಗೊತ್ತಾಗಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು ಜಗ್ಗೇಶ್​​.
First published:August 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...