ಶಿವಮೊಗ್ಗದಲ್ಲಿ ನಡೆದ ಬಜರಂಗದಳ ಸದಸ್ಯ, ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷನ (Hindu Activist Harsha Murder) ಕೊಲೆ ಇದೀಗ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ. ಹಿಜಾಬ್ ಘಟನೆ ಬಳಿಕ ಶಿವಮೊಗ್ಗ (Shivamogga) ನಗರ ಪ್ರಕ್ಷಬ್ಧವಾಗಿದೆ. ಘಟನೆ ಸಂಬಂಧ ಹಲವಾರು ಬಿಜೆಪಿ ನಾಯಕರು, ಹಿಂದೂ ಸಂಘಟನೆ ಕಾರ್ಯಕರ್ತರು ಹರ್ಷನ ಸಾವಿಗೆ ನ್ಯಾಯ ಕೇಳಿದ್ದಾರೆ. ಸದ್ಯ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿರುವ ಈ ಘಟನೆ ಕುರಿತು ಇದೀಗ ಹೆಸರಾಂತ ನಟಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್ (Khushbu Sundar) ಕೂಡ ಧ್ವನಿ ಎತ್ತಿದ್ದಾರೆ. ಅಲ್ಲದೇ ಪ್ರಕರಣ ಸಂಬಂಧ ನ್ಯಾಯಕ್ಕೆ ಆಗ್ರಹಿಸಿದ್ದಾರೆ.
ಕೊಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಖುಷ್ಬೂ ಸುಂದರ್, ನ್ಯಾಯ ಸಿಗುವವರೆಗೆ ಹಕ್ಕಿಗಾಗಿ ಹೋರಾಡೋಣ. ನೀವು ಕೊಲೆ ಮಾಡಿ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಧರ್ಮ ಅಥವಾ ರಾಜಕೀಯ ನಮ್ಮ ಏಕತೆಯನ್ನು ವಿಭಜಿಸಲು ಸಾಧ್ಯವಿಲ್ಲ. ಈಗಾಗಲೇ ದೇಶ ವಿಭಜಿತವಾಗಿರುವುದು ಸಾಕು. ನಾವು ಒಟ್ಟಿಗೆ ನಿಲ್ಲುತ್ತೇವೆ, ಒಟ್ಟಿಗೆ ಇರುತ್ತೇವೆ. ಈಗಲೂ ಎಂದೆಂದಿಗೂ ಎಂದು ತಿಳಿಸಿದ್ದಾರೆ.
#JusticeforHarsha
let's fight for the right till justice prevails. You cannot commit a murder and get away with it. No religion or politics can divide our unity. Enough of the country being divided n biruficated. Together we stand,together we will. Now n forever. #OmShanti 🙏🙏
— KhushbuSundar or NakhatKhan (@khushsundar) February 21, 2022
People who endorse & encourage radicals in the garb of ‘freedom of expression’ have blood on their hands. #JusticeForHarsha pic.twitter.com/hYyLJ90ZwG
— RajyavardhanRathore (@Ra_THORe) February 21, 2022
ರಾಜಕೀಯ ನಾಯಕರ ಆರೋಪ- ಪ್ರತ್ಯಾರೋಪ
ಸದ್ಯ ಹರ್ಷ ಕೊಲೆ ಪ್ರಕರಣ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಘಟನೆ ಗಳು ಹಿಂದೆ ಮುಸ್ಲಿಂ ಗೂಂಡಾಗಳ ಕೈವಾಡ ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ನೇರವಾಗಿ ಆರೋಪಿಸಿದ್ದಾರೆ.
ಇದನ್ನು ಓದಿ: ಹಿಜಾಬ್ ಬಳಿಕ ಶಿವಮೊಗ್ಗ ಹಿಂದೂ ಸಂಘಟನೆ ಕಾರ್ಯಕರ್ತನ ಹತ್ಯೆ ಕುರಿತು Kamal Haasan ಪ್ರತಿಕ್ರಿಯೆ
ಇನ್ನು ಇತ್ತ ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ, ಎರಡು ವರ್ಷಗಳ ಹಿಂದೆಯೇ ಕೊಲೆಗೆ ಸಂಚು ರೂಪಿಸಿರುವ ಮಾಹಿತಿ ಇದೆ. ಯಾಕೆ ಯುವಕನ ರಕ್ಷಣೆ ಮಾಡಿಕೊಳ್ಳಲಿಲ್ಲ ಎಂದು ಬಿಜೆಪಿಗರ ನಡೆಯನ್ನು ಪ್ರಶ್ನಿಸಿದರು. ಇದು ಸ್ಯಾಂಪಲ್ಲೋ ಏನೋ ಗೊತ್ತಿಲ್ಲ, ಟ್ರೈಲರ್ ಬಿಡ್ತಾರೆ ನಂತರ ಪಿಕ್ಚರ್ ಬಿಡ್ತಾರೆ. ಈ ಕೊಲೆಯನ್ನು ನೋಡಿದ್ರೆ ಇದು ಪ್ರಾರಂಭಿಕ ಅನ್ನಿಸುತ್ತೆ. ಸರ್ಕಾರ ಇದನ್ನ ಮೊದಲೇ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಇದನ್ನು ಓದಿ: ತಮ್ಮದೇ ಸರ್ಕಾರ, ಸಿಎಂ ಬೊಮ್ಮಾಯಿ ವಿರುದ್ಧ MP Pratap Simha ಕೆಂಡಾಮಂಡಲ!
ಪ್ರಕರಣ ಕುರಿತು ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪ್ರಕರಣ ಸಂಬಂಧ ಸೂಕ್ತವಾದ ತನಿಖೆ ಆಗಬೇಕು , ಯಾವುದೇ ಕಾರಣಕ್ಕೂ ತಪ್ಪಿತಸ್ಥರ ರಕ್ಷಣೆ ಆಗಬಾರದು . ಶಿವಮೊಗ್ಗದಲ್ಲಿ ಶಾಂತಿ ಕಾಪಾಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದಿದ್ದಾರೆ.
ಮೂವರು ಆರೋಪಿಗಳ ಬಂಧನ
ಮೂಲಗಳ ಪ್ರಕಾರ ಸದ್ಯ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆರೋಪಿಗಳನ್ನ ಶಿವಮೊಗ್ಗದಿಂದ ಹೊರಗಿಟ್ಟು ವಿಚಾರಣೆ ನಡೆಸಲಾಗುತ್ತಿದೆಯಂತೆ. ಐದು ಮಂದಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಐವರು ಹರ್ಷನ ಮೇಲೆ ಅಟ್ಯಾಕ್ ಮಾಡಿರೋ ಬಗ್ಗೆ ಆರೋಪಿ ಬಾಯ್ಬಿಟ್ಟಿ ದ್ದಾನೆಂದು ಹೇಳಲಾಗುತ್ತಿದೆ. ಹಳೆ ವೈಷಮ್ಯ ಹಿನ್ನೆಲೆ ಈ ಕೊಲೆ ಮಾಡಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಉಳಿದ ಆರೋಪಿಗಳಿಗಾಗಿ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ ರಿಂದ ಹುಡುಕಾಟ ಮುಂದುವರೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ