ಬಾಲಿವುಡ್ ನಟ ಅರ್ಮಾನ್ ಕೊಹ್ಲಿಯನ್ನು( Armaan Kohli) ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ವಿಚಾರಣೆಗೆ ಒಳಪಡಿಸಿದ್ದು, ಮುಂಬೈನಲ್ಲಿ ಅವರ ಮನೆಯಲ್ಲಿ ನಿಷೇಧಿತ ಡ್ರಗ್ಸ್ಗಳನ್ನು ಪತ್ತೆ ಮಾಡಲಾಗಿದೆ ಎಂದು ಕೇಂದ್ರ ಸಂಸ್ಥೆಯ ಮೂಲಗಳು ತಿಳಿಸಿವೆ.
NCB ತಂಡವು ಶನಿವಾರ ಸಂಜೆ ಕೊಹ್ಲಿಯ ಮನೆ ಮೇಲೆ ದಾಳಿ ನಡೆಸಿತು ಮತ್ತು ನಂತರ ಆತನ ಮನೆಯಲ್ಲಿ ಕೆಲವು ಮಾದಕ ವಸ್ತುಗಳು ಪತ್ತೆಯಾಗಿದ್ದರಿಂದ ಅವರನ್ನು ದಕ್ಷಿಣ ಮುಂಬೈನ ಏಜೆನ್ಸಿಯ ಕಚೇರಿಗೆ ಕರೆದೊಯ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈಗ ಅವರನ್ನು ಅಧಿಕೃತವಾಗಿ ಬಂಧಿಸಲಾಗಿದೆ.
ಎನ್ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮತ್ತು ಇತರರು ಈ ಬಾಲಿವುಡ್ ನಟನನ್ನು ಪ್ರಶ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು. ಆತನ ನಿವಾಸದಿಂದ ಸಣ್ಣ ಪ್ರಮಾಣದ ಕೊಕೇನ್ ವಶ ಪಡಿಸಿಕೊಳ್ಳಲಾಗಿದೆ. ಆಗಸ್ಟ್ 28 ರಂದು ಎನ್ಸಿಬಿ ಡ್ರಗ್ ಪೆಡ್ಲರ್ ಒಬ್ಬನನ್ನು ಬಂಧಿಸಿದ ನಂತರ ಕೊಹ್ಲಿಯ ಮನೆ ಮೇಲೆ ದಾಳಿ ನಡೆಸಲಾಯಿತು, ಬಂಧಿತ ಡ್ರಗ್ ಪೆಡ್ಕರ್ 'ಕೊಹ್ಲಿ' ನನ್ನ ಗ್ರಾಹಕರಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಮೂಲಗಳ ಪ್ರಕಾರ ಆಪಾದಿತ ವ್ಯಾಪಾರಿ ಇತರ ಬಾಲಿವುಡ್ ವ್ಯಕ್ತಿಗಳಿಗೂ ಡ್ರಗ್ಸ್ ಪೂರೈಸುತ್ತಿದ್ದ ಎಂದು ಎನ್ಸಿಬಿ ಅಧಿಕಾರಿ ಹೇಳಿದೆ.
ವಶಪಡಿಸಿಕೊಂಡ ಕೊಕೇನ್ ಅನ್ನು ಮುಂಬೈಗೆ ತರಲು ಬಳಸಿದ ಮಾರ್ಗ ಮತ್ತು ಇದರ ಹಿಂದೆ ಇರುವ ಸಂಪರ್ಕಗಳನ್ನು ಮತ್ತು ಇತರ ಕಳ್ಳಸಾಗಣೆದಾರರನ್ನು ಒಳಗೊಂಡಂತೆ ಎನ್ಸಿಬಿ ಮುಂಬೈ ಚುರುಕಿನ ತನಿಖೆ ನಡೆಸುತ್ತಿದೆ. ಹೆಚ್ಚಿನ ತನಿಖೆ ನಡೆಯುತ್ತಿದ್ದು ಈ ಜಾಲದ ಹಿಂದೆ ಇರುವ ಯಾರನ್ನೂ ಬಿಡುವ ಮಾತೇ ಇಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ಕೊಹ್ಲಿ ಸಲ್ಮಾನ್ ಖಾನ್ ಹಾಗೂ ಇತರ ಪ್ರಸಿದ್ದ ನಟರು ನಟಿಸಿದ್ದ ಪ್ರೇಮ್ ರತನ್ ಧನ್ ಪಾಯೊದಲ್ಲಿ ಹಾಗೂ ಇತರೇ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು ಮತ್ತು ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ನ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು.
ಕೊಹ್ಲಿ ವಿರುದ್ಧದ ಎನ್ಸಿಬಿ ಕ್ರಮ ತೆಗೆದುಕೊಳ್ಳುವುದಕ್ಕಿಂತ ಮೊದಲು ಟಿವಿ ನಟ ಗೌರವ್ ದೀಕ್ಷಿತ್ ಅವರನ್ನು ಕೇಂದ್ರ ಡ್ರಗ್ಸ್ ವಿರೋಧಿ ಏಜೆನ್ಸಿ ಮುಂಬೈನಲ್ಲಿ ಹಿಂದಿನ ದಿನವೇ ಬಂಧಿಸಿತ್ತು.
ಇದನ್ನೂ ಓದಿ: ಬೇಸಿಗೆಯಲ್ಲಿ ಕಪ್ಪು ಕೋಟು ಧರಿಸುವುದಕ್ಕೆ ವಿನಾಯಿತಿ ನೀಡಿ ಎಂದು ಮನವಿ ಸಲ್ಲಿಸಿದ ವಕೀಲ
ಸ್ಯಾಂಡಲ್ವುಡ್ನಲ್ಲಿಯೂ ಭಾರೀ ಸದ್ದು ಮಾಡಿದ್ದ ಈ ಡ್ರಗ್ ವಿವಾದ ಈಗ ಬಾಲಿವುಡ್ ಅಂಗಳಕ್ಕೂ ಕಾಲಿಟ್ಟಿದೆ. ಆದರೆ ಈ ವಿವಾದ ಹಿಂದಿ ಚಿತ್ರರಂಗಕ್ಕೆ ಹೊಸಾ ವಿಚಾರ ಏನಲ್ಲ. ಏಕೆಂದರೆ ಈ ಉದ್ಯಮದಲ್ಲಿ ಈ ಡ್ರಗ್ ಬಳಕೆ ವಿಚಾರ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಂತೆ ಎನ್ನುವುದು ಅನೇಕ ಸಿನಿ ಪಂಡಿತರ ಮಾತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ