ಪ್ರಕೃತಿ ಮಿಶ್ರಾ (Prakruti Mishra), ಭಾರತೀಯ ನಟಿ (Heroine). ಒಡಿಯಾ ಚಲನಚಿತ್ರಗಳು ಮತ್ತು ಹಿಂದಿ ದೂರದರ್ಶನದಲ್ಲಿ ಕೆಲಸ ಮಾಡಿದ್ದಾರೆ. ಅವರು ಹಲೋ ಆರ್ಸಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಇತ್ತೀಚೆಗೆ ಜೈ ಕನ್ಹಯ್ಯಾ ಲಾಲ್ ಕಿ ಚಿತ್ರದಲ್ಲಿ ದೇವನಿಯಾಗಿ, ಬಿಟ್ಟಿ ಬಿಸಿನೆಸ್ ವಾಲಿಯಲ್ಲಿ ಬಿಟ್ಟಿಯಾಗಿ ಮತ್ತು ಏಸ್ ಆಫ್ ಸ್ಪೇಸ್ 2 ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಈಗ ನಾವು ಇವರ ಬಗ್ಗೆ ಹೇಳ್ತಿರೋದು ಇವರ ನಟನೆಯ ಬಗ್ಗೆ ಅಲ್ಲ. ಇವರಿಗೆ ರೋಡ್‍ನಲ್ಲೇ ಹೊಡೆದಿದ್ದಾರಂತೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ (National award winner) ಪ್ರಕೃತಿ ಮಿಶ್ರಾ ಮೇಲೆ ಬೀದಿಯಲ್ಲೇ ಸಹ ನಟನ ಪತ್ನಿ ಹಲ್ಲೆ (Assault) ಮಾಡಿದ್ದಾರೆ. ತನ್ನ ಪತಿಯ ಜೊತೆ ಅನೈತಿಕ ಸಂಬಂಧ ಇದೆ ಎಂದು ನಟಿಗೆ ಜನರ ಮುಂದೆಯೇ ಅವಮಾನ ಮಾಡಿದ್ದಾರೆ. ಅಲ್ಲದೇ ಥಳಿಸಿದ್ದಾರೆ ಕೂಡ. ನಟಿಗೆ ಹೊಡೆಯುತ್ತಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
ಬೀದಿಯಲ್ಲಿ ನಡೆದಿದ್ದೇನು?
ಕಾರಿನಲ್ಲಿದ್ದ ಸಹನಟ ಬಾಬುಶಾನ್ ರನ್ನು ಗೂಂಡಾಗಳು ಹೊಡೆಯುತ್ತಿದ್ದರು. ಪಕ್ಕದಲ್ಲಿ ಕುಳಿತಿದ್ದ ನಟಿ ಪ್ರಕೃತಿ ಮಿಶ್ರಾಗೆ ಸಹನಟನ ಪತ್ನಿ ಹಿಡಿದು ಹಲ್ಲೆ ಮಾಡುತ್ತಿದ್ದಳು. ಆಗ ಪ್ರಕೃತಿ ಅಲ್ಲಿದ್ದವರ ಸಹಾಯ ಕೇಳಿದ್ದಾಳೆ. ಹೇಗೋ ಆಕೆಯಿಂದ ತಪ್ಪಿಸಿಕೊಂಡು ಕೆಳಗೆ ಇಳಿದಿದ್ದಾರೆ. ಆಗ ಪ್ರಕೃತಿ ಹೋಗುತ್ತಿದ್ದರು, ಸಹನಟನ ಪತ್ನಿ ಹಿಂಬಾಲಿಸಿ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಆಗ ನಟಿ ಆಟೋ ಹಿಡಿದು ಮನೆಗೆ ಹೋಗಿದ್ದಾರೆ.
Whatever the cause, the victim is being beaten by a lady while screaming for aid. These unshameful bystanders are happily recording videos.#PrakrutiMishraBeatenByBabusanWife #PrakrutiMishra#Babusan pic.twitter.com/pAAOhPu13f
— SUBHRANSU PANDA (@AuthorSubhransu) July 23, 2022
ನಟಿ ಪ್ರಕೃತಿ ಹೇಳಿದ್ದೇನು?
"ಪ್ರತಿಯೊಂದು ಕಥೆಗೂ ಎರಡು ಮುಖಗಳಿವೆ. ದುರದೃಷ್ಟವಶಾತ್, ಜನರು ಏನನ್ನೂ ಕೇಳುವ ಮೊದಲು ಮಹಿಳೆಯರನ್ನು ದೂಷಿಸುವ ಇಂತಹ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ನಾನು ಮತ್ತು ನನ್ನ ಸಹನಟ ಬಾಬುಶಾನ್ ಉತ್ಕಲ್ ಅಸೋಸಿಯೇಷನ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಚೆನ್ನೈಗೆ ಹೋಗುತ್ತಿದ್ದೆವು. ಆಗ ಬಾಬುಶಾನ್ ಅವರ ಪತ್ನಿ ಕೆಲವು ಗೂಂಡಾಗಳೊಂದಿಗೆ ನಟನನ್ನು ಕೆಣಕಲು ಪ್ರಾರಂಭಿಸಿದರು ಮತ್ತು ನನ್ನ ಮೇಲೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಲ್ಲೆ ನಡೆಸಿದರು" ಎಂದು ನಟಿ ಪ್ರಕೃತಿ ಹೇಳಿದ್ದಾರೆ.
ಇದನ್ನೂ ಓದಿ: Payal Rajputh: ಕೈಯಲ್ಲಿ ಎಣ್ಣೆ ಬಾಟಲಿ ಹಿಡಿದು ಪಾಯಲ್ ಪೋಸ್, ನೀವು ಕುಡಿಯೋದು ಲೋಕಲ್ ಬ್ರ್ಯಾಂಡಾ ಅಂತ ಸಖತ್ ಟ್ರೋಲ್!
ಬಾಬುಶಾನ್ ಅವರ ಪತ್ನಿ ಮಾಡಿದ್ದು ಸರಿಯಲ್ಲ
ನನಗೂ, ಸಹನಟ ಬಾಬುಶಾನ್‍ಗೂ ಯಾವುದೇ ಸಂಬಂಧವಿಲ್ಲ ಎಂದು ನಟಿ ಪ್ರಕೃತಿ ಹೇಳಿದ್ದಾರೆ. ಅಲ್ಲದೇ ಆತನ ಪತ್ನಿ ಮಾಡಿದ್ದನ್ನು ನಾನು ಸ್ವೀಕರಿಸುವುದಿಲ್ಲ. ಏನನ್ನೂ ಸರಿಯಾಗಿ ತಿಳಿದುಕೊಳ್ಳದೇ ನನ್ನ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ ಎಂದು ಪ್ರಕೃತಿ ಹೇಳಿದ್ದಾರೆ.
ನನ್ನ ಗುರಿ ಮಹಿಳಾ ಸಬಲೀಕರಣ
ನಡು ರೋಡಿನಲ್ಲಿ ರಂಪಾಟವಾದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಅದಕ್ಕೆ ಪ್ರತಿಕ್ರತಿಯಿಸಿರುವ ನಟಿ ಪ್ರಕೃತಿ, "ಮಹಿಳಾ ಸಬಲೀಕರಣದ ಮೇಲೆ ಕೆಲಸ ಮಾಡುವುದು ನನ್ನ ಗುರಿ. ಈ ಸಮಾಜಕ್ಕೆ ನಿಜವಾದ ಕಿರುಕುಳವನ್ನು ತೋರಿಸಬೇಕು. ನಾನು ದೊಡ್ಡ ಗುರಿಯನ್ನು ಹೊಂದಿದ್ದೇನೆ. ಅಂತಿಮವಾಗಿ ನನ್ನ ಗುರಿ ಮಹಿಳಾ ಸಬಲೀಕರಣವನ್ನು ಸಾಧಿಸಲು ನಾನು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ," ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
ಇದನ್ನೂ ಓದಿ: Anushka Shetty: ಮುಂದಿನ ವರ್ಷ ಮದುವೆ ಆಗಲಿದ್ದಾರಂತೆ ಅನುಷ್ಕಾ, ಕುತೂಹಲಕಾರಿ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ
ಇನ್ನೊಬ್ಬರ ಗಂಡನನ್ನು ಕದಿಯುವುದ ಸಬಲೀಕರಣ?
ನಟಿ ಪ್ರಕೃತಿ ಮಹಿಳಾ ಸಬಲೀಕರಣ ಎಂಬ ಪೋಸ್ಟ್ ಒಬ್ಬ ಮಹಿಳೆ ಖಾರವಾಗಿ ಪ್ರತಿಕ್ರಿಯಿಸಿದ್ದಾಳೆ. ಮಹಿಳಾ ಸಬಲೀಕರಣವು ಇತರ ಮಹಿಳೆಯರ ಗಂಡನನ್ನು ಕದಿಯುವುದು ಮತ್ತು ಅವನ ಮಗುವಿನಿಂದ ತಂದೆಯನ್ನು ಕದಿಯುವುದು. ಇದು ಈ ಪೀಳಿಗೆಯು ಮಹಿಳಾ ಸಬಲೀಕರಣ. ಈ ಪೀಳಿಗೆ ಕಲಿಯುತ್ತಿರುವುದನ್ನು ನಾನು ನಿಮಗೆ ಪ್ರಶಂಸಿಸುತ್ತೇನೆ," ಎಂದು ಕಾಮೆಂಟ್ ಹಾಕಿದ್ದಾರೆ.
ಸಹ ನಟ ಬಾಬುಶಾನ್ ಹೇಳಿದ್ದೇನು?
"ನನ್ನ ಕುಟುಂಬವು ಗೊಂದಲದ ಮೂಲಕ ಹೋಗುತ್ತಿದೆ ಎಂದು ನನಗೆ ತಿಳಿದಿರಲಿಲ್ಲ. ನನ್ನ ಕುಟುಂಬಕ್ಕೆ ಈ ವಿಚಾರದಲ್ಲಿ ಸಮಸ್ಯೆಗಳಿದ್ದರೆ ನಾನು ಅವರ ಜೊತೆ ಸಿನಿಮಾ ಮಾಡುವುದಿಲ್ಲ. ಅಗತ್ಯವಿದ್ದರೆ, ನಾನು ಭವಿಷ್ಯದಲ್ಲಿ ಯಾವುದೇ ನಾಯಕಿಯರೊಂದಿಗೆ ಕೆಲಸ ಮಾಡುವುದಿಲ್ಲ "ಎಂದು ನಟ ಬಾಬುಶಾನ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ