HOME » NEWS » National-international » ACTOR AND BJP MP SUNNY DEOL TESTS POSITIVE FOR CORONA VIRUS LG

Sunny Deol: ಬಾಲಿವುಡ್ ನಟ, ಸಂಸದ ಸನ್ನಿ ಡಿಯೋಲ್​ಗೆ ಕೊರೋನಾ ಪಾಸಿಟಿವ್

ನಾನು ಕೋವಿಡ್​-19 ಪರೀಕ್ಷೆಗೆ ಒಳಗಾಗಿದ್ದೆ. ವರದಿ ಪಾಸಿಟಿವ್ ಬಂದಿದೆ. ಸದ್ಯ ನಾನು ಐಸೋಲೇಷನ್​ಗೆ ಒಳಗಾಗಿದ್ದೇನೆ. ಆರಾಮಾಗಿದ್ದೇನೆ ಎನಿಸುತ್ತಿದೆ. ನನ್ನನ್ನು ಯಾರು ಸಂಪರ್ಕ ಮಾಡಿದ್ದೀರೋ ಅವರೆಲ್ಲರೂ ದಯವಿಟ್ಟು ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ, ಐಸೋಲೇಷನ್​ನಲ್ಲಿ ಇರಿ ಎಂದು ಮನವಿ ಮಾಡಿದ್ದಾರೆ.

news18-kannada
Updated:December 2, 2020, 11:39 AM IST
Sunny Deol: ಬಾಲಿವುಡ್ ನಟ, ಸಂಸದ ಸನ್ನಿ ಡಿಯೋಲ್​ಗೆ ಕೊರೋನಾ ಪಾಸಿಟಿವ್
ಸಂಸದ ಸನ್ನಿ ಡಿಯೋಲ್
  • Share this:
ನವದೆಹಲಿ(ಡಿ.12): ಬಾಲಿವುಡ್ ನಟ ಹಾಗೂ ಗುರುದಾಸ್ಪುರದ ಬಿಜೆಪಿ ಸಂಸದ ಸನ್ನಿ ಡಿಯೋಲ್​ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ತನಗೆ ಕೋವಿಡ್​ ಪಾಸಿಟಿವ್ ಇದೆ ಎಂಬುದನ್ನು ಸಂಸದ ಡಿಯೋಲ್ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಖಚಿತಪಡಿಸಿದ್ದಾರೆ. ಜೊತೆಗೆ ಅವರ ಜೊತೆ ಯಾರ್ಯಾರು ಸಂಪರ್ಕಕ್ಕೆ ಬಂದಿದ್ದರೋ ಅವರೆಲ್ಲರೂ ಕೊರೋನಾ ಪರೀಕ್ಷೆಗೆ ಒಳಪಡಬೇಕೆಂದು ಮನವಿ ಮಾಡಿದ್ದಾರೆ.

ನಾನು ಕೋವಿಡ್​-19 ಪರೀಕ್ಷೆಗೆ ಒಳಗಾಗಿದ್ದೆ. ವರದಿ ಪಾಸಿಟಿವ್ ಬಂದಿದೆ. ಸದ್ಯ ನಾನು ಐಸೋಲೇಷನ್​ಗೆ ಒಳಗಾಗಿದ್ದೇನೆ. ಆರಾಮಾಗಿದ್ದೇನೆ ಎನಿಸುತ್ತಿದೆ. ನನ್ನನ್ನು ಯಾರು ಸಂಪರ್ಕ ಮಾಡಿದ್ದೀರೋ ಅವರೆಲ್ಲರೂ ದಯವಿಟ್ಟು ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ, ಐಸೋಲೇಷನ್​ನಲ್ಲಿ ಇರಿ ಎಂದು ಮನವಿ ಮಾಡಿದ್ದಾರೆ.
Cyclone Burevi: ಡಿ.4ರಂದು ಕನ್ಯಾಕುಮಾರಿಗೆ ಅಪ್ಪಳಿಸಲಿದೆ ಬುರೇವಿ ಚಂಡಮಾರುತ; ರೆಡ್ ಅಲರ್ಟ್​ ಘೋಷಣೆಸನ್ನಿ ಡಿಯೋಲ್ ಇತ್ತೀಚೆಗೆ ಮುಂಬೈನಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಮನಾಲಿಗೆ ತೆರಳಿ ಅಲ್ಲಿ ಫಾರ್ಮ್​ಹೌಸ್​ ಒಂದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಮನಾಲಿಯಿಂದ ಮುಂಬೈಗೆ ವಾಪಸ್​ ತೆರಳುವ ಮುನ್ನ ಡಿಯೋಲ್​​ಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

ಡಿಯೋಲ್​​ಗೆ ಸದ್ಯ ಇವರಿಗೆ 64 ವರ್ಷ. ಐಸೋಲೇಷನ್​ನಲ್ಲಿರುವ ಸನ್ನಿಗೆ ಯಾವುದೇ ರೋಗ ಲಕ್ಷಣಗಳಿಲ್ಲ ಎಂದು ತಿಳಿದು ಬಂದಿದೆ.
Published by: Latha CG
First published: December 2, 2020, 11:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories