Bollywood Drugs: ಅನನ್ಯಾ ಪಾಂಡೆಗೆ ಮಾರಕವಾಗುತ್ತಾ ಮಾದಕ ಲಿಂಕ್?​: ನಟಿಯ ಲ್ಯಾಪ್​ಟಾಪ್,​ ಮೊಬೈಲ್​ NCB ವಶಕ್ಕೆ

Bollywood Drugs: ಬಾಲಿವುಡ್ ನಟ ಚಂಕಿ ಪಾಂಡೆ ಅವರ ಪುತ್ರಿ ಅನನ್ಯಾ ಪಾಂಡೆ ಅವರ ಮೊಬೈಲ್​ ಅನ್ನು ಎನ್​ಸಿಬಿ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ನಟಿ ಡ್ರಗ್​ ಪೆಡ್ಲರ್​ಗಳ ಚಾಟ್​​ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ.

ಎನ್​ಸಿಬಿ ವಿಚಾರಣಗೆ ಹಾಜರಾಗಿದ್ದ ಅನನ್ಯಾ ಪಾಂಡೆ

ಎನ್​ಸಿಬಿ ವಿಚಾರಣಗೆ ಹಾಜರಾಗಿದ್ದ ಅನನ್ಯಾ ಪಾಂಡೆ

  • Share this:
ಬಾಲಿವುಡ್(Bollywood)​ಗೂ ಮಾದಕ ಲೋಕಕ್ಕೂ ಅವಿನಾಭಾವ ಸಂಬಂಧವಿದೆ. ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​(sushant singh rajput)ಸಾವಿನ ನಂತರ ಚಿತ್ರರಂಗದಲ್ಲಿ ಮಾದಕ ಘಾಟು ಎಷ್ಟರ ಮಟ್ಟಿಗೆ ಇತ್ತು ಎಂಬುಂದು ಬಟಾಬಯಲಾಗಿತ್ತು. ಬಾಲಿವುಡ್​ ಹಾಗೂ ಮನರಂಜನಾ ಕ್ಷೇತ್ರದ ಸ್ಟಾರ್​ಗಳಿಗೆ ಡ್ರಗ್​ ಮಾಫಿಯಾದ ಜತೆ ನಂಟಿದೆ ಎಂಬುದು ಬಹಿರಂಗವಾಗುತ್ತಲೇ ಇದೆ. ಕೆಲವೇ ದಿನಗಳ ಹಿಂದೆ ಬಾಲಿವುಡ್​ನ ಖ್ಯಾತ ನಟನ ಪುತ್ರ ಹಾಗೂ ಸ್ನೇಹಿತರನ್ನ ಎನ್​ಸಿಬಿ(NCB) ಅಧಿಕಾರಿಗಳು ಬಂಧಿಸಿದ್ದರು. ಮತ್ತೆ ಎನ್​ಸಿಬಿ ಅಧಿಕಾರಿಗಳು ಬೇಟೆ ಮುಂದುವರೆಸಿದ್ದರು. ಈ ಬಾರಿ ಎನ್​ಸಿಬಿ ಬಲೆಯಲ್ಲಿ ಲಾಕ್​ ಆಗಿರುವುದು ಬಾಲಿವುಡ್​ ನಟಿ ಅನನ್ಯಾ ಪಾಂಡೆ(Ananya Pandya.)  ನಿನ್ನೆ ಅನನ್ಯಾ ಪಾಂಡೆ ಮನೆ ಮೇಲೆ ದಾಳಿ ಎನ್​ಸಿಬಿ ಅಧಿಕಾರಿಗಳು ನಡೆಸಿದ್ದರು. ಈ ವೇಳೆ ಅನನ್ಯಾ ಪಾಂಡೆಗೆ ಡ್ರಗ್​ ಪೆಡ್ಲರ್(Drug Peddler)​ಗಳ ಜತೆ ಲಿಂಕ್​ ಇರುವುದು ತಿಳಿದು ಬಂದಿದೆ. ಹೀಗಾಗಿ ಅನನ್ಯಾಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅದರಂತೆಯೇ ತಂದೆ, ಚಂಕಿ ಪಾಂಡೆ (Chunky Pandey) ಜತೆ ಅವರು ವಿಚಾರಣೆಗೆ ಹಾಜರಾಗಿದ್ದರು. ಬಳಿಕ ಅನನ್ಯಾ ಪಾಂಡೆಯವರ ಲ್ಯಾಪ್​ಟಾಪ್(Laptop)​ ಹಾಗೂ ಮೊಬೈಲ್(Mobile)​ ಅನ್ನು ಎನ್​ಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ವಾಟ್ಸ್​ಆಪ್​ನಲ್ಲಿ ಪೆಡ್ಲರ್​ಗಳ ಜತೆ ಚಾಟ್​?

ಬಾಲಿವುಡ್ ನಟ ಚಂಕಿ ಪಾಂಡೆ ಅವರ ಪುತ್ರಿ ಅನನ್ಯಾ ಪಾಂಡೆ ಅವರ ಮೊಬೈಲ್​ ಅನ್ನು ಎನ್​ಸಿಬಿ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ನಟಿ ಡ್ರಗ್​ ಪೆಡ್ಲರ್​ಗಳ ಚಾಟ್​​ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಡ್ರಗ್​ ಪೆಡ್ಲರ್​​ಗಳ ಜತೆ ನಿಕಟ ಸಂರ್ಪಕ ಹೊಂದಿದ್ದರು ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಆಕೆಯ ಫೋನ್​, ಲ್ಯಾಪ್​ಟಾಪ್​ ಸೀಜ್ ಮಾಡಲಾಗಿದೆ. ಒಂದು ವೇಳೆ ಡ್ರಗ್​ ಪೆಡ್ಲರ್​​ಗಳ ಜತೆ ನಡೆಸಿರುವ ಸಂದೇಶಗಳು ಸಿಕ್ಕರೆ, ಎನ್​ಸಿಬಿ ಅಧಿಕಾರಿಗಳು ಅನನ್ಯಾ ಪಾಂಡೆಯನ್ನು ಬಂಧಿಸಿ ಜೈಲಿಗಟ್ಟಲಿದ್ದಾರೆ. ದೊಡ್ಡ ದೊಡ್ಡ ನಟ, ನಟಿಯರು ಈ ಮಾದಕ ಲೋಕದಲ್ಲಿ ಮುಳುಗಿಹೋಗಿದ್ದಾರೆ ಎಂದು ಎಲ್ಲರಿಗೂ ಗೊತ್ತೇ ಇದೆ. ಆದರೆ ಯುವ ನಟಿಯರು ಈ ರೀತಿ ಡ್ರಗ್​ ಮಾಫಿಯಾ ಜತೆ ನಂಟು ಹೊಂದಿದ್ದಾರೆ ಎಂದರೇ ನಂಬಲಾಸಧ್ಯ.

ಇದನ್ನು ಓದಿ : ಎನ್​ಸಿಬಿ ಕೇವಲ ಸೆಲೆಬ್ರಿಟಿಗಳನ್ನು ಗುರಿಯಾಗಿಸಿಕೊಂಡಿದೆ; ಮೌನ ಮುರಿದ ಉದ್ದವ್​ ಠಾಕ್ರೆಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ Sushant Singh Rajput ಸ್ನೇಹಿತ ಕುನಾಲ್ ಜಾನಿ ಬಂಧನ

ದೊಡ್ಡ ದೊಡ್ಡ ಸ್ಟಾರ್​ಗಳಿಗೆ ನಡುಕ!

ಸುಶಾಂತ್​ ಸಾವಿನ ತನಿಖೆಯೇ ಬಾಲಿವುಡ್‌ ಮತ್ತು ಡ್ರಗ್ಸ್‌ ಮಾಫಿಯಾ ನಂಟಿನ ಹಲವು ಆಯಾಮಗಳನ್ನು ತೆರೆದಿಟ್ಟಿದೆ. ಮಾದಕ ವಸ್ತುಗಳ ಸೇವನೆ, ಡ್ರಗ್ಸ್‌ ಪೂರೈಸುವವರ ಜೊತೆಗಿನ ನಂಟು ಪ್ರಕರಣಗಳಲ್ಲಿ ಸಿನಿಮಾ ಕ್ಷೇತ್ರರ ಹೆಸರಾಂತ ಕಲಾವಿದರು– ನಿರ್ಮಾಪಕ–ನಿರ್ದೇಶಕರು ತನಿಖೆ ಎದುರಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್​ ಹಾಗೂ ಹಾಗೂ ಶ್ರದ್ಧಾ ಹೆಸರನ್ನು ವಿಚಾರಣೆಯಲ್ಲಿ ರಿಯಾ ಹೇಳಿದ್ದರು. ಈ ನಟಿಯರಿಗೆ ನೋಟಿಸ್​ ನೀಡಿ ಎನ್​​ಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಹೀಗೆ ಒಂದೊಂದೇ ಹೆಸರುಗಳು ಮಾದಕ ದ್ರವ್ಯದ ಮಾರಾಟ ಜಾಲದೊಂದಿಗೆ ಕೇಳಿಬಂದಿದ್ದು, ಇವರೆಲ್ಲರೂ ಎನ್‌ಸಿಬಿ ವಿಚಾರಣೆ ಎದುರಿಸಿದ್ದಾರೆ.

ಇದನ್ನು ಓದಿ : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ Sushant Singh Rajput ಸ್ನೇಹಿತ ಕುನಾಲ್ ಜಾನಿ ಬಂಧನ

ನಟಿಗೆ ಮಾದಕ ನಂಟೇ ಮಾರಕವಾಗುತ್ತಾ?

ನಾಲ್ಕು ವರ್ಷಗಳ ಹಿಂದಿನ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್, ಚಾರ್ಮಿ ಕೌರ್, ರಾಣಾ ದಗ್ಗುಬಾಟಿ ಸೇರಿದಂತೆ ಹಲವು ನಟರು ಹಾಗೂ ನಿರ್ದೇಶಕರು ಕಳೆದ ತಿಂಗಳು ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸಿದ್ದಾರೆ. ಡ್ರಗ್ಸ್‌ ಸಂಗ್ರಹಿಸಿಟ್ಟುಕೊಂಡ ಪ್ರಕರಣಗಳಲ್ಲಿ, ನಟರಾದ ಗೌರವ್ ದೀಕ್ಷಿತ್ ಹಾಗೂ ಅರ್ಮಾನ್‌ ಕೊಹ್ಲಿ ಅವರನ್ನು ತಿಂಗಳ ಹಿಂದಷ್ಟೇ ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಇದಾದ ಬಳಿಕ ಎನ್​ಸಿಬಿ ಅಧಿಕಾರಿಗಳು ಅನನ್ಯಾ ಪಾಂಡೆಯನ್ನು ವಿಚಾರಣೆ ನಡೆಸಿದ್ದು, ಮತ್ತೆ ಕರೆದಾಗ ಹಾಜರಾಗುವಂತೆ ಹೇಳಿದ್ದಾರೆ. ಚಿತ್ರಂಗದಲ್ಲಿ ಹೆಸರು ಮಾಡಬೇಕೆಂದು ಕೊಂಡಿದ್ದ ಯುವನಟಿಗೆ ಮಾದಕ ನಂಟೇ ಮಾರಕವಾಗುತ್ತಾ ಕಾದುನೋಡಬೇಕಿದೆ.
Published by:Vasudeva M
First published: