News18 India World Cup 2019

ಲೈಂಗಿಕ ಕಿರುಕುಳ ಪ್ರಕರಣ ಸಿಜೆಐ ರಂಜನ್​ ಗೊಗೋಯ್​ಗೆ ಕ್ಲೀನ್​ಚಿಟ್; ನ್ಯಾಯಯುತ ತನಿಖೆಗೆ ಮಹಿಳಾ ನ್ಯಾಯವಾದಿಗಳ ಒತ್ತಾಯ

ತ್ರಿಸದಸ್ಯ ನ್ಯಾಯಮೂರ್ತಿಗಳ ಪೀಠ ಈ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿಲ್ಲ. ಹೀಗಾಗಿ ಮತ್ತೊಮ್ಮೆ ನ್ಯಾಯಯುತ ತನಿಖೆಯಾಗಲಿ ಎಂದು ಒತ್ತಾಯಿಸಿ ಮಹಿಳಾ ನ್ಯಾಯವಾದಿಗಳು ಸುಪ್ರೀಂ ಕೋರ್ಟ್ ಹೊರಗೆ ಇಂದು ಪ್ರತಿಭಟನೆ ನಡೆಸಿದ್ದಾರೆ. ಪರಿಣಾಮ 30 ಕ್ಕೂ ಹೆಚ್ಚು ಪ್ರತಿಭಟನಾ ನಿರತ ಮಹಿಳಾ ನ್ಯಾಯವಾದಿಗಳನ್ನ ಪೊಲೀಸರು ಬಂಧಿಸಿದ್ದಾರೆ.

MAshok Kumar | news18
Updated:May 7, 2019, 1:51 PM IST
ಲೈಂಗಿಕ ಕಿರುಕುಳ ಪ್ರಕರಣ ಸಿಜೆಐ ರಂಜನ್​ ಗೊಗೋಯ್​ಗೆ ಕ್ಲೀನ್​ಚಿಟ್; ನ್ಯಾಯಯುತ ತನಿಖೆಗೆ ಮಹಿಳಾ ನ್ಯಾಯವಾದಿಗಳ ಒತ್ತಾಯ
ಪ್ರತಿಭಟನಾ ನಿರತ ಮಹಿಳಾ ನ್ಯಾಯವಾದಿಗಳು.
MAshok Kumar | news18
Updated: May 7, 2019, 1:51 PM IST
ನವ ದೆಹಲಿ (ಮೇ.7) :  ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್​ ಅವರ ವಿರುದ್ಧದ ಲೈಂಗಿಕ ಕಿರುಕುಳ ಆರೋಪವನ್ನು ನ್ಯಾಯಯುತವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಇಂದು ಸುಪ್ರೀಂ ಆವರಣದಲ್ಲಿ ಪ್ರತಿಭಟನೆ ನಡೆಸಿದ 30ಕ್ಕೂ ಹೆಚ್ಚು ಮಹಿಳಾ ನ್ಯಾಯವಾದಿಗಳನ್ನು ಬಂಧಿಸಲಾಗಿದೆ.

ಕೆಲ ದಿನಗಳ ಹಿಂದೆ ಸುಪ್ರೀಂ ಕೋರ್ಟ್​ನ ಮಾಜಿ ಸಿಬ್ಬಂದಿಯೊಬ್ಬರು ನ್ಯಾಯಮೂರ್ತಿ ಗೊಗೋಯ್ ಅವರಿಂದ ತಮಗೆ ಲೈಂಗಿಕ ಕಿರುಕುಳವಾಗಿತ್ತೆಂದು ಆರೋಪಿಸಿದ್ದರು. ಇದು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ನಂತರ ಈ ಆರೋಪದ ತನಿಖೆಗಾಗಿ ಜಸ್ಟೀಸ್.ಎಸ್​.ಎ. ಬೋಬಡೆ ನೇತೃತ್ವದಲ್ಲಿ ಇಂದಿರಾ ಬ್ಯಾನರ್ಜಿ ಹಾಗೂ ಇಂದು ಮಲ್ಹೋತ್ರ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ರಚಿಸಲಾಗಿತ್ತು. ಸೋಮವಾರ ತನ್ನ ವರದಿಯನ್ನು ಸಲ್ಲಿಸಿರುವ ತ್ರಿಸದಸ್ಯ ಪೀಠ ಜಸ್ಟೀಸ್​ ರಂಜನ್ ಗೊಗೋಯ್ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಆದರೆ, ವರದಿಯನ್ನು ಬಹಿರಂಗಪಡಿಸಲು ಕೋರ್ಟ್ ನಿರಾಕರಿಸಿತ್ತು.

ಇದನ್ನೂ ಓದಿ : ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಜೆಐ ರಂಜನ್ ಗೊಗೋಯ್ ಆರೋಪಮುಕ್ತ; ವರದಿ ಬಹಿರಂಗಕ್ಕೆ ನಕಾರ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ತಮ್ಮ ಕಚೇರಿಯಲ್ಲಿ ನನ್ನ ಮೇಲೆ ಎರಡು ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದರು. ಈ ಕುರಿತ ಆಡಿಯೋ ಹಾಗೂ ವಿಡಿಯೋ ದಾಖಲೆ ನನ್ನ ಬಳಿ ಇದೆ ಎಂದು ಹೇಳಿದ್ದ ಮಹಿಳೆ ಏ.19 ರಂದು ಈ ಕುರಿತು ಪ್ರಕರಣ ದಾಖಲಿಸಿದ್ದರು. ಆದರೆ. ಪೊಲೀಸ್ ತನಿಖೆ ವೇಳೆ ಆಕೆ ಸೂಕ್ತ ಆಧಾರಗಳನ್ನು ಸಲ್ಲಿಸಿರಲಿಲ್ಲ. ಸೂಕ್ತ ಉತ್ತರವನ್ನೂ ನೀಡಿರಲಿಲ್ಲ. ಅಲ್ಲದೆ ಪ್ರಕರಣದ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡದೆ ನೇರವಾಗಿ ಸುಪ್ರಿಂ ಕೋರ್ಟ್​ನಲ್ಲೇ ಅರ್ಜಿ ದಾಖಲಿಸಿದ್ದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ ಎಂದು ತಮ್ಮ ವರದಿ ನೀಡಿದ್ದ ಜಸ್ಟೀಸ್ ಎಸ್​.ಎ. ಬೋಬಡೆ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೋಯ್​ರನ್ನು ಪ್ರಕಣದಿಂದ ಮುಕ್ತಗೊಳಿಸಿದ್ದರು.

ಇದನ್ನೂ ಓದು : ಮುಖ್ಯನ್ಯಾಯಮೂರ್ತಿ ಲೈಂಗಿಕ ಕಿರುಕುಳ ಪ್ರಕರಣದ ವಿಚಾರಣೆಯಿಂದ ಹಿಂಸರಿದ ನ್ಯಾ. ರಮಣ; ಷಡ್ಯಂತ್ರ ಪ್ರಕರಣದ ತನಿಖೆಗೆ ನ್ಯಾ. ಪಾಟ್ನಾಯಕ್ ನೇತೃತ್ವ

ಆದರೆ, ತ್ರಿಸದಸ್ಯ ನ್ಯಾಯಮೂರ್ತಿಗಳ ಪೀಠ ಈ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿಲ್ಲ. ಹೀಗಾಗಿ ಮತ್ತೊಮ್ಮೆ ನ್ಯಾಯಯುತ ತನಿಖೆಯಾಗಲಿ ಎಂದು ಒತ್ತಾಯಿಸಿ ಮಹಿಳಾ ನ್ಯಾಯವಾದಿಗಳು ಸುಪ್ರೀಂ ಕೋರ್ಟ್ ಹೊರಗೆ ಇಂದು ಪ್ರತಿಭಟನೆ ನಡೆಸಿದ್ದಾರೆ. ಪರಿಣಾಮ 30 ಕ್ಕೂ ಹೆಚ್ಚು ಪ್ರತಿಭಟನಾ ನಿರತ ಮಹಿಳಾ ನ್ಯಾಯವಾದಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಆದರೆ, ಈ ನಡುವೆ ಜಸ್ಟೀಸ್​ ರಂಜನ್​ ಗೊಗೋಯ್ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಸಿಬಿಐ ಅನುಮಾನ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವ ಪಡೆಯಲಿದೆ ಎಂಬುದು ಪ್ರಸ್ತುತ ಕುತೂಹಲಕ್ಕೆ ಕಾರಣವಾಗಿದೆ.
Loading...

First published:May 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...