ಗಂಗಾ ನದಿ ಶುದ್ಧೀಕರಣಕ್ಕಾಗಿ ಹೋರಾಟ ಮಾಡುತ್ತಲೇ ಪ್ರಾಣಬಿಟ್ಟ ಪರಿಸರವಾದಿ ಜಿಡಿ ಅಗರ್ವಾಲ್​

Seema.R | news18
Updated:October 11, 2018, 5:23 PM IST
ಗಂಗಾ ನದಿ ಶುದ್ಧೀಕರಣಕ್ಕಾಗಿ ಹೋರಾಟ ಮಾಡುತ್ತಲೇ ಪ್ರಾಣಬಿಟ್ಟ ಪರಿಸರವಾದಿ ಜಿಡಿ ಅಗರ್ವಾಲ್​
Seema.R | news18
Updated: October 11, 2018, 5:23 PM IST

ನ್ಯೂಸ್​ 18 ಕನ್ನಡ


ನವದೆಹಲಿ (ಅ.11): ಗಂಗಾ ನದಿ ಶುದ್ಧೀಕರಣಕ್ಕಾಗಿ ಕಳೆದ 109 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದ ಪರಿಸರವಾದಿ ಹಾಗೂ ಐಐಟಿ ನಿವೃತ್ತ ಪ್ರಾಧ್ಯಾಪಕ ಜಿ.ಡಿ ಅಗರ್ವಾಲ್​ (87) ನಿಧನರಾಗಿದ್ದಾರೆ.


ಗಂಗಾ ನದಿ ಶುದ್ದೀಕರಣ, ನದಿಪಾತ್ರದ ಸಂರಕ್ಷಣೆಗಾಗಿ ಪರಿಸರ ತಜ್ಞ, ಸಾಮಾಜಿಕ ಕಾರ್ಯಕರ್ತ ಅಗರ್ವಾಲ್​ ಜೂನ್​ 22ರಿಂದ ಹರಿದ್ವಾರದಲ್ಲಿ ಉಪವಾಸ ನಡೆಸುತ್ತಿದ್ದರು.


ಕಳೆದ 111ದಿನಗಳಿಂದ ಉಪವಾಸ ನಿರತರರಾಗಿದ್ದ ಇವರು ಹೃದಯಾಘಾತಕ್ಕೆ ಒಳಗಾಗಿದ್ದರು. ತಕ್ಷಣಕ್ಕೆ ಅವರನ್ನು ದೆಹಲಿಯ ಏಮ್ಸ್​ಗೆ ದಾಖಲಿಸಲಾಗಿತ್ತು. ಆದರೆ ಅವರು ಬದುಕುಳಿಯಲಿಲ್ಲ ಎಂದು ಮೂಲಗಳು ತಿಳಿಸಿವೆ.



ಗಂಗಾ ನದಿ ಶುದ್ಧೀಕರಣ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಕಳೆದ 30 ವರ್ಷಗಳಿಂದ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಕೇವಲ ಗಂಗಾ ನದಿ ಶುದ್ಧೀಕರಣ ಮಾಡುತ್ತೇವೆ ಎಂದು ಹೇಳುತ್ತಿದೆ. ಆದರೆ ಯಾವುದೇ ಕಾರ್ಯ ನಡೆದಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.


ಉಪವಾಸದ ವೇಳೆ ಅವರು ಕೇವಲ ಜೇನುತುಪ್ಪ ಮಿಶ್ರಿತ ನೀರನ್ನು ಮಾತ್ರ ಸೇವಿಸುತ್ತಿದ್ದರು. ಕಳೆದು ಎರಡು ದಿನಗಳ ಹಿಂದೆ ನೀರನ್ನು ಕೂಡ ಅವರು ತ್ಯಜಿಸಿದ್ದರು. ಜಿ.ಡಿ ಅಗರ್ವಾಲ್​ ಕಾನ್ಪೂರ್​ದ ಐಐಟಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು.


ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಅಗರ್ವಾಲ್ ನಿಧನಕ್ಕೆ ಸಂತಾಪ ಸೂಚಿಸಿ, "ಅಗರ್ವಾಲ್​ ಅವರು ನಮ್ಮ ದೇಶದ ಅಗ್ರಪಂಕ್ತಿಯ ಪರಿಸರವಾದಿ. ಗಂಗಾ ನದಿ ಶುದ್ಧೀಕರಣಕ್ಕಾಗಿ 109 ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡಿ, ಹೋರಾಟ ಮಾಡುತ್ತಲೇ ತಮ್ಮ ಪ್ರಾಣ ಬಿಟ್ಟರು. ಸಂಪೂರ್ಣ ನಿತ್ರಾಣಗೊಂಡಿದ್ದ ಅವರನ್ನು ನೆನ್ನೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ನಿಧನದ ನಂತರವಾದರೂ ಪ್ರಧಾನಿ ಮೋದಿ ಅವರು  ಗಂಗಾ ನದಿಯನ್ನು ಶುದ್ಧ ಮಾಡಲಿ. ಈ ಜಗತ್ತು ಶುದ್ಧ ಮನಸ್ಸುಗಳಿಗಲ್ಲ," ಎಂದು ಟ್ವಿಟರ್​ನಲ್ಲಿ ಸಂತಾಪ ಸೂಚಿಸಿದ್ದಾರೆ.
Loading...

First published:October 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ