Lakhimpur Kheri Massacre| ಲಖೀಂಪುರ್​ ಖೇರಿ ರೈತ ಹತ್ಯಾಕಾಂಡದ ವಿರುದ್ಧ ಕ್ರಮಕ್ಕೆ ಆಗ್ರಹ; ರಾಷ್ಟ್ರಪತಿ ಭೇಟಿಗೆ ಕಾಂಗ್ರೆಸ್ ನಿಯೋಗ

ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಗುಲಾಂನಭಿ ಆಜಾದ್, ಎ.ಕೆ. ಆ್ಯಂಟನಿ ಮತ್ತು ಕೆ.ಸಿ. ವೇಣುಗೋಪಾಲ್ ಅವರನ್ನು ಒಳಗೊಂಡ ಕಾಂಗ್ರೆಸ್ ನಿಯೋಗ ಇಂದು ಮಧ್ಯಾಹ್ನ 1 ಗಂಟೆಗೆ ರಾಷ್ಟ್ರಪತಿಯನ್ನು ಭೇಟಿ ಮಾಡಿ ಲಖೀಂಪುರ್​ ಖೇರಿ ರೈತ ಹತ್ಯಾಕಾಂಡದ ಬಗ್ಗೆ ಸೂಕ್ತ ಕ್ರಮಕ್ಕೆ ಆಗ್ರಹಿಸಲಿದೆ.

ಲಖೀಂಪುರ್​ಖೇರಿ ಹಿಂಸಾಚಾರ.

ಲಖೀಂಪುರ್​ಖೇರಿ ಹಿಂಸಾಚಾರ.

  • Share this:
    ನವ ದೆಹಲಿ (ಅಕ್ಟೋಬರ್​ 13); ಉತ್ತರಪ್ರದೇಶದ ಲಖೀಂಪುರ್​ ಖೇರಿ (Lakhimpur Kheri) ಎಂಬಲ್ಲಿ ಅಕ್ಟೋಬರ್​ 03 ರಂದು ರೈತರ ಹತ್ಯಾಕಾಂಡ (Lakhimpur Kheri Massacre) ನಡೆದಿತ್ತು. ಕೇಂದ್ರ ಸಚಿವ ಅಜಯ್ ಮಿಶ್ರಾ (Ajay Mishra) ಅವರ ಪುತ್ರ ಆಶೀಶ್​ ಮಿಶ್ರಾ (Ashish Mishra) ತಮ್ಮ ದುಬಾರಿ ಕಾರ್​ ಅನ್ನು ರೈತ ಹೋರಾಟಗಾರರ ಮೇಲೆ ಹರಿಸಿದ್ದರು. ಈ ಘಟನೆಯಲ್ಲಿ ಕನಿಷ್ಟ 4 ಜನ ರೈತರು ಮೃತಪಟ್ಟಿದ್ದರು. ಅಲ್ಲದೆ, ನಂತರ ನಡೆದ ದೊಡ್ಡ ಗಲಭೆಗೆ ಈ ಘಟನೆ ಕಾರಣವಾಗಿತ್ತು. ಈ ಗಲಭೆಯಲ್ಲಿ ಓರ್ವ ಸ್ಥಳೀಯ ಪತ್ರಕರ್ತ ಸೇರಿದಂತೆ 5 ಜನ ಮೃತಪಟ್ಟಿದ್ದರು. ಒಟ್ಟು 9 ಜನರ ಸಾವಿಗೆ ಕಾರಣವಾಗಿದ್ದ ಈ ಗಲಭೆಗೆ ಸಚಿವ ಮತ್ತು ಆತನ ಪುತ್ರನೇ ನೇರ ಕಾರಣ ಎನ್ನಲಾಗಿದೆ. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​ (Supreme Court) ಸಹ ಮಧ್ಯಪ್ರವೇಶಿಸಿದ್ದು, ಸಚಿವ ಅಜಯ್ ಮಿಶ್ರಾ ಮತ್ತು ಆಶೀಶ್ ಮಿಶ್ರಾ ಸೇರಿದಂತೆ 13 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೂ ಅವರನ್ನು ಸಚಿವ ಸ್ಥಾನದಿಂದ ಇಳಿಸಲಾಗಿತ್ತು. ಹೀಗಾಗಿ ಈ ಪ್ರಕರಣದಲ್ಲಿ ಎಲ್ಲಾ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್​ ನಿಯೋಗ ಇಂದು ರಾಷ್ಟ್ರಪತಿಯನ್ನು ಭೇಟಿಯಾಗಲಿದೆ ಎನ್ನಲಾಗಿದೆ.

    ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಗುಲಾಂನಭಿ ಆಜಾದ್, ಎ.ಕೆ. ಆ್ಯಂಟನಿ ಮತ್ತು ಕೆ.ಸಿ. ವೇಣುಗೋಪಾಲ್ ಅವರನ್ನು ಒಳಗೊಂಡ ಕಾಂಗ್ರೆಸ್ ನಿಯೋಗ ಇಂದು ಮಧ್ಯಾಹ್ನ 1 ಗಂಟೆಗೆ ರಾಷ್ಟ್ರಪತಿಯನ್ನು ಭೇಟಿ ಮಾಡಿ ಲಖೀಂಪುರ್​ ಖೇರಿ ರೈತ ಹತ್ಯಾಕಾಂಡದ ಬಗ್ಗೆ ಚರ್ಚೆ ನಡೆಸಲಿದೆ. ಅಲ್ಲದೆ, ಈ ಘಟನೆಗೆ ಕಾರಣವಾದ ಸಚಿವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಎಂದು ಒತ್ತಾಯಿಸಲಿದೆ ಎಂದು ಕಾಂಗ್ರೆಸ್​ ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

    ಪೊಲೀಸರಿಗೆ ಸಿಕ್ಕಿದೆ ಸಿಸಿಟಿವಿ ಬ್ರಹ್ಮಾಸ್ತ್ರ;

    ಅಕ್ಟೋಬರ್ 3ರಂದು ಲಖೀಂಪುರ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಜೀಪ್ ಹತ್ತಿಸಲಾಗಿತ್ತು. ಕ್ಷಣಾರ್ಧದಲ್ಲೇ ಪ್ರತಿಭಟನೆ ಹಿಂಸೆಯ ರೂಪ ಪಡೆದುಕೊಂಡಿತ್ತು. ಉದ್ರಿಕ್ತ ಪ್ರತಿಭಟನಾಕಾರರು ಜೀಪ್ ಚಾಲಕನನ್ನು ಕೋಲುಗಳಿಂದ ಹೊಡೆದು ಕೊಂದಿದ್ದರು. ಘಟನೆಯಲ್ಲಿ ಮೂವರು ರೈತರು ಸೇರಿಂತೆ ಏಳು ಜನರು ಸಾವನ್ನಪ್ಪಿದ್ದರು. ಕೇಂದ್ರ ಸಚಿವರಿಗೆ ಕಪ್ಪು ಧ್ವಜ ಪ್ರದರ್ಶಿಸಿದ್ದಕ್ಕೆ ರೈತರ ಮೇಲೆ ವಾಹನ ಚಲಾಯಿಸಲಾಗಿದೆ. ವಾಹನದಲ್ಲಿ ಆಶಿಶ್ ಮಿಶ್ರಾ ಇದ್ದರು. ಘಟನೆ ಬಳಿಕ ಪೊಲೀಸರು ಆಶಿಶ್ ಮಿಶ್ರಾವರನ್ನ ರಕ್ಷಿಸಿ ಕರೆದುಕೊಂಡು ಹೋದರು ಎಂಬ ಆರೋಪಗಳನ್ನು ಮಾಡಿದ್ದರು. ಆದ್ರೆ ಸಚಿವರು ಮಾತ್ರ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದರು.

    ಕೇಂದ್ರ ಸಚಿವ ಅಜಯ್ ಮಿಶ್ರಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಆಶಿಶ್ ಮಿಶ್ರಾ ಬಂಧನವಾಗಬೇಕು ಎಂದು ವಿಪಕ್ಷಗಳು ಆಗ್ರಹಿಸಿದ್ದಾರೆ. ಶುಕ್ರವಾರವೇ ವಿಚಾರಣೆಗೆ ಹಾಜರಾಗುವಂತೆ ಎಸ್‍ಐಸಿ ಸಚಿವರ ಮನೆಗೆ ನೋಟಿಸ್ ಅಂಟಿಸಿತ್ತು. ಆದ್ರೆ ಶುಕ್ರವಾರ ಗೈರಾಗಿದ್ದ ಆಶಿಶ್ ಮಿಶ್ರಾ ಶನಿವಾರ ಪೊಲೀಸರ ಮುಂದೆ ಹಾಜರಾಗಿದ್ದ ವೇಳೆ ಬಂಧಿಸಲಾಗಿತ್ತು. ಪೊಲೀಸರಿಗೆ ಲಭ್ಯವಾಗಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆಶಿಶ್ ಮಿಶ್ರಾ ಇದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: Lakhimpur Kheri Massacre| ಲಖೀಂಪುರ್​ ರೈತ ಹತ್ಯಾಕಾಂಡ; ಹುತಾತ್ಮರಿಗೆ ದೇಶದ ಎಲ್ಲಾ ರೈತ ಸಮೂಹದಿಂದ ಅಂತಿಮ ನಮನ!

    ಬಿಳಿ ಶರ್ಟ್ ಧರಿಸಿರುವ 'ಆ' ವ್ಯಕ್ತಿ?

    ಪೊಲೀಸರು ಹಿಂಸಾಚಾರ ನಡೆದ ಘಟನಾ ಸ್ಥಳದ ಮಾರ್ಗದ ಮಧ್ಯೆದಲ್ಲಿರುವ ಕೆಲ ಅಂಗಡಿಗಳ ಮುಂಭಾಗದ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಲ್ಲಿ ಆಶಿಶ್ ಮಿಶ್ರಾ ಇರೋ ದೃಶ್ಯಗಳು ಸೆರೆಯಾಗಿವೆ ಎಂದು ವರದಿಯಾಗಿದೆ. ಚಾಲಕನ ಸಮೀಪದಲ್ಲಿ ಬಿಳಿ ಶರ್ಟ್ ಧರಿಸಿರುವ ವ್ಯಕ್ತಿಯನ್ನು ಆಶಿಶ್ ಮಿಶ್ರಾ ಎಂದು ಹೇಳಲಾಗುತ್ತಿದೆ. ಆದ್ರೆ ಈ ಸಂಬಂಧ ಯಾವುದೇ ವಿಡಿಯೋಗಳನ್ನು ಪೊಲೀಸರು ಬಹಿರಂಗಗೊಳಿಸಿಲ್ಲ. ಈ ಮೊದಲು ರೈತರ ಮೇಲೆ ಜೀಪ್ ಹತ್ತಿಸುತ್ತಿರುವ, ಚಾಲಕನನ್ನು ಥಳಿಸುತ್ತಿರುವ ಮತ್ತು ಜೀಪ್ ನಿಂದ ಓರ್ವ ಓಡಿ ಹೋಗುತ್ತಿರುವ ವಿಡಿಯೋ ತುಣುಕುಗಳು ವೈರಲ್ ಆಗಿದ್ದವು.
    Published by:MAshok Kumar
    First published: