ಮೋದಿ ‘ಬುರೇ ದಿನ್​​’ ಗಯೇ, ರಾಹುಲ್​​ ಪ್ರಧಾನಿಯಾದಲ್ಲಿ ಬರಲಿದೆ ‘ಅಚ್ಚೇ ದಿನ್​​’: ಸಿಧು ನುಡಿ

ಕಾಂಗ್ರೆಸ್​​ ದೇಶಕ್ಕಾಗಿ ಗಾಂಧೀಜಿ, ಇಂದಿರಾ ಗಾಂಧಿ, ಸೋನಿಯಾ ಹಾಗೂ ರಾಹುಲ್​​ರನ್ನು ಒಳಗೊಂಡಂತೆ ನಾಲ್ಕು ಗಾಂಧಿಗಳನ್ನು ನೀಡಿದೆ, ಆದರೆ ಬಿಜೆಪಿ ನರೇಂದ್ರ ಮೋದಿ, ನೀರವ್​​ ಹಾಗೂ ಲಲಿತ್​​ ಮೋದಿ ಎಂಬ ಲೂಟಿಕೋರರನ್ನ ಕೊಟ್ಟಿದೆ- ನವಜೋತ್​​ ಸಿಂಗ್​ ಸಿಧು

Ganesh Nachikethu
Updated:December 2, 2018, 4:37 PM IST
ಮೋದಿ ‘ಬುರೇ ದಿನ್​​’ ಗಯೇ, ರಾಹುಲ್​​ ಪ್ರಧಾನಿಯಾದಲ್ಲಿ ಬರಲಿದೆ ‘ಅಚ್ಚೇ ದಿನ್​​’: ಸಿಧು ನುಡಿ
ನವಜೋತ್​​ ಸಿಂಗ್​​ ಸಿಧು
  • Share this:
ನವದೆಹಲಿ(ಡಿ.02): ಪ್ರಧಾನಿ ಮೋದಿ ಸರ್ಕಾರದ ‘ಅಚ್ಚೇ ದಿನ್’ ಮುಗಿದು ಹೋದ ಅಧ್ಯಾಯ, ಸದ್ಯಕ್ಕೆ ದೇಶ ಬುರೇ ದಿನ್ ಕಡೆಗೆ ಸಾಗುತ್ತಿದೆ ಎಂದು ಕಾಂಗ್ರೆಸ್​ ನಾಯಕ ನವಜೋತ್ ಸಿಂಗ್​​ ಸಿಧು ಅವರು ವ್ಯಂಗ್ಯವಾಡಿದ್ಧಾರೆ. ಕಾಂಗ್ರೆಸ್​​ ಅಧ್ಯಕ್ಷ ರಾಹುಲ್​​ ಗಾಂಧಿಯವರು ಅಧಿಕಾರಕ್ಕೆ ಬಂದಲ್ಲಿ ಬುರೇ ದಿನ್​​​ ಅಂತ್ಯವಾಗಲಿದೆ. ‘ಬುರೆ ದಿನ್​​ ಜಾನೇ ವಾಲಾ ಹೈ, ರಾಹುಲ್​​ ಜೀ ಆನೆ ವಾಲಾ ಹೈ’ ಎಂದು ಪ್ರಧಾನಿ ಮೋದಿಯವರ ವಿರುದ್ಧವೇ ಪಂಜಾಬ್​​ನ ಸಚಿವ ನವಜೋತ್ ಸಿಂಗ್​​ ಸಿಧು ಕುಟುಕಿದ್ದಾರೆ ಎನ್ನಲಾಗಿದೆ.

ರಾಜಸ್ಥಾನದ ಕೋಟ ಎಂಬ ಪ್ರದೇಶದಲ್ಲಿ ಮಾತಾಡಿದ ನಿವೃತ್ತ ಕ್ರಿಕೆಟಿಗ ಹಾಗೂ ಕಾಂಗ್ರೆಸ್​​ ನಾಯಕ ನವಜೋತ್​​ ಸಿಂಗ್​​ ಸಿಧು ಅವರು, ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕಾಂಗ್ರೆಸ್​​ ದೇಶಕ್ಕಾಗಿ ಗಾಂಧೀಜಿ, ಇಂದಿರಾ ಗಾಂಧಿ, ಸೋನಿಯಾ ಹಾಗೂ ರಾಹುಲ್​​ರನ್ನು ಒಳಗೊಂಡಂತೆ ನಾಲ್ಕು ಗಾಂಧಿಗಳನ್ನು ನೀಡಿದೆ, ಆದರೆ ಬಿಜೆಪಿ ನರೇಂದ್ರ ಮೋದಿ, ನೀರವ್​​ ಹಾಗೂ ಲಲಿತ್​​ ಮೋದಿ ಎಂಬ ಲೂಟಿಕೋರರನ್ನ ಕೊಟ್ಟಿದೆ. ಇದುವೇ ಕಾಂಗ್ರೆಸ್​ ಹಾಗೂ ಬಿಜೆಪಿ ನುಡವಿನ ಭಿನ್ನತೆಯೆಂದು ನವಜೋತ್​​ ಸಿಂಗ್​​ರು ಅಭಿಪ್ರಾಯಪಟ್ಟಿದ್ದಾರೆ.

ಇದೆ ವೇಳೆ ರಫೇಲ್ ಒಪ್ಪಂದದ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿವೃತ್ತ ಕ್ರಿಕೆಟರ್​​ ಟೀಕಾಪ್ರಹಾರ ನಡೆಸಿದ್ದಾರೆ. ಮೋದಿ ಒಬ್ಬ ಚೌಕಿದಾರ್ ಚೋರ. ರಫೇಲ್​ ಒಪ್ಪಂದದಲ್ಲಿ 500 ಕೋಟಿಯ ವಿಮಾನಕ್ಕೆ 1,600 ಕೋಟಿ ನೀಡಲಾಗಿದೆ. ಹೀಗಾಗಿ 1,100 ಕೋಟಿ ರೂಪಾಯಿ ಯಾರ ಜೇಬು ಸೇರಿದೆ? ಎಂಬುದನ್ನು ನೀವೆ ಯೋಚಿಸಬೇಕಿದೆ. ಚೌಕಿದಾರರ ನಾಯಿ ಕೂಡ ಕಳ್ಳರ ಪರವಾಗಿದೆ, ಈ ಒಪ್ಪದಿಂದ ಯಾರಿಗೆ ಲಾಭವಾಗಿದೆ? ಹೇಳಿ ಎಂದು ಪ್ರಧಾನಿ ಮೋದಿಯವರಿಗೆ ಪ್ರಶ್ನಿಸಿದರು.

ಇದನ್ನೂ ಓದಿ: ಕೇಂದ್ರ ಚುನಾವಣಾ ಆಯೋಗದ ಆಯುಕ್ತರಾಗಿ ಸುನೀಲ್ ಅರೋರಾ ಅಧಿಕಾರ ಸ್ವೀಕಾರ

ಈ ಹಿಂದೆ ಪ್ರಧಾನಿ ಬಂಡವಾಳಶಾಹಿಗಳ ಕೈಗೊಂಬೆ ಎಂದು ಸಿಧು ಲೇವಡಿ ಮಾಡಿದ್ದರು. ಹಾಗೆಯೇ ಮೋದಿಯವರ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಟೀಕಿಸಿದ್ದ ಸಿಧು, "ರಫೇಲ್ ಜೆಟ್‍ಗಳು ಫ್ರಾನ್ಸ್​ನಿಂದ ಬರಲಿವೆ. ಬುಲೆಟ್ ರೈಲುಗಳು ಜಪಾನ್‍ನಿಂದ ತರಿಸಲಾಗುತ್ತದೆ, ಆದರೆ ಇಲ್ಲಿನ ಜನ ಏನು ಮಾಡಬೇಕು? ಎಂದರು. ಪ್ರಧಾನಿ ಅವರು ಭಾರೀ ಸುಳ್ಳು ಹೇಳುತ್ತಿದ್ದಾರೆ. ರೈತರು ಕೇವಲ 1 ಲಕ್ಷ ರೂ. ಸಾಲ ಪಾವತಿಸಲು ಪರದಾಡುತ್ತಿದ್ದಾರೆ. ಆದರೆ, ಇದನ್ನೇ ಬಳಸಿಕೊಂಡು ಸರ್ಕಾರ ಡೋಲು ಬಡಿದು ಪ್ರಚಾರ ಮಾಡುತ್ತಿದೆ ಎಂದು ಪ್ರಧಾನಿಗೆ ಮಾರ್ಮಿಕವಾಗಿ ಮಾತಿನಿಂದಲೇ ತಿವಿದರು.

ಇನ್ನು ಪಾಕ್​​ ಪ್ರಧಾನಿ ಇಮ್ರಾನ್​​ ಖಾನ್​​ರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನವಜೋತ್​​ ಸಿಂಗ್​​ ಮೋದಿಯವರನ್ನು ಹಿಂದೊಮ್ಮೆ ಕಾಲೆಳೆದಿದ್ದರು. ಪ್ರಧಾನಿಯ ಹೆಸರನ್ನು ಹೇಳದಯೇ ಸಿಧು, ಮೋದಿ ಅವರನ್ನು ಟೀಕಿಸಿದ್ದರು. ಇಮ್ರಾನ್​ ಖಾನ್​ ಆಮಂತ್ರಣ ನೀಡಲಿಲ್ಲ ಎಂಬ ಕಾರಣಕ್ಕೆ ಪ್ರಧಾನಿ ಅಸೂಯೆಗೊಂಡಿದ್ದಾರೆ ಎನ್ನಲಾಗಿದೆ. ಆದರೆ, ಇಂದಿನ ಪಾಕ್ ಪ್ರಧಾನಿ ಬೇಜಾರಗಾಬಹುದು ಎಂಬ ಕಾರಣಕ್ಕೆ ಆಮಂತ್ರಣ ಇಲ್ಲದಿದ್ದರೂ, ಅವರ ಹುಟ್ಟುಹಬ್ಬಕ್ಕೆ ಭೇಟಿ ನೀಡಿದ್ರಾ? ಎಂಬ ಅನುಮಾನ ಮೂಡುತ್ತಿದೆ ಎಂದು ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು.

ಇದನ್ನೂ ಓದಿ: ಫ್ರಾನ್ಸ್ ಸರ್ಕಾರದ ವಿರುದ್ಧ ದಂಗೆ ಎದ್ದ ಜನರು; ತುರ್ತು ಪರಿಸ್ಥಿತಿ ಘೋಷಣೆ ಸಾಧ್ಯತೆಇಮ್ರಾನ್​ ಖಾನ್​ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡುವ ಸಮಾರಂಭಕ್ಕೆ ನವಜೋತ್​ ಸಿಧು ಹೋಗಿದ್ದರು. ಈ ವೇಳೆ, ಪಾಕ್ ಸೇನಾಧಿಕಾರಿಯನ್ನು ಅಪ್ಪಿಕೊಂಡು ವಿವಾದಕ್ಕೀಡಾಗಿದ್ದ ಸಿಧು ನಡೆ ದೇಶಾದ್ಯಂತ ಟೀಕೆಗೆ ಒಳಗಾಗಿತ್ತು. ಈ ಮೊದಲು ಬಿಜೆಪಿ ಸಂಸದರಾಗಿದ್ದ ನವಜೋತ್​ ಸಿಧು, ಪಕ್ಷದಲ್ಲಿ ತಮ್ಮನ್ನು ಕಡೆಗಣನೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಕೇಸರಿ ಪಡೆಗೆ ಗುಡ್​ ಬೈ ಹೇಳಿದ್ದರು. ಕಾಂಗ್ರೆಸ್​ ಸೇರಿ, ಗೆದ್ದು ಬಂದ ಅವರು ಈಗ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎನ್ನಲಾಗಿದೆ.

-------------
ಹಂಪಿ ಉತ್ಸವದ ಕುರಿತು ಶಾಸಕ ಸೋಮಶೇಖರ ರೆಡ್ಡಿ ಹೇಳಿಕೆ
First published: December 2, 2018, 4:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading