Sonali Phogat: ನಟಿ ಸಾವಿನ ಕೇಸ್‌ಗೆ ಸಿಕ್ತು ಸ್ಫೋಟಕ ಟ್ವಿಸ್ಟ್! ಕೊಲೆ ಬಗ್ಗೆ ತಪ್ಪೊಪ್ಪಿಕೊಂಡರಾ ಆರೋಪಿಗಳು?

ಸೋನಾಲಿ ಪೋಗಟ್ ನಿಗೂಢ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಆರೋಪಿಗಳ ವಿಚಾರಣೆಯನ್ನು ಗೋವಾ ಪೊಲೀಸರು ತೀವ್ರಗೊಳಿಸಿದ್ದಾರೆ. ಈ ವೇಳೆ ಪ್ರಮುಖ ಆರೋಪಿಗಳು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೋನಾಲಿ ಪೋಗಟ್

ಸೋನಾಲಿ ಪೋಗಟ್

  • Share this:
ಗೋವಾ: ಹರ್ಯಾಣ (Haryana) ಬಿಜೆಪಿ ನಾಯಕಿ (BJP Leader), ನಟಿ (Heroine) ಹಾಗೂ ಬಿಗ್ ಬಾಸ್ ಸ್ಪರ್ಧಿ (Bigg Boss Contestant) ಸೋನಾಲಿ ಫೋಗಟ್ (Sonali Poghat) ನಿಗೂಢ ಸಾವಿನ ಪ್ರಕರಣದ ತನಿಖೆ (Death Case Enquiry) ಚುರುಕಾಗಿದೆ. ಸೋನಾಲಿ ಪೋಗಟ್ ಸಾವಿಗೂ ಮುನ್ನ ಪ್ರಮುಖ ಆರೋಪಿಯೊಬ್ಬರು (Accused) ಮಾದಕ ದ್ರವ್ಯ ಸೇವಿಸಿ ವಾಶ್‌ರೂಮ್‌ಗೆ ಕರೆದೊಯ್ದಿದ್ದಾರೆ ಎಂದು ಗೋವಾ ಪೊಲೀಸರು (Goa Police) ತಿಳಿಸಿದ್ದಾರೆ. ಇದೀಗ ಆರೋಪಿಗಳ ವಿಚಾರಣೆಯನ್ನು ಗೋವಾ ಪೊಲೀಸರು ತೀವ್ರಗೊಳಿಸಿದ್ದಾರೆ. ಈ ವೇಳೆ ಪ್ರಮುಖ ಆರೋಪಿಗಳು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಬ್ಬರು ಆರೋಪಿಗಳ ಬಂಧನ

ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗೋವಾದ ಪೊಲೀಸ್ ಮಹಾನಿರೀಕ್ಷಕ ಓಂವಿರ್ ಸಿಂಗ್, ಕೊಲೆ ಪ್ರಕರಣವನ್ನು ದಾಖಲಿಸಿದ ನಂತರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಸುಖ್ವಿಂದರ್ ಸಿಂಗ್ ಮತ್ತು ಸುಧೀರ್ ಸಂಗ್ವಾನ್ ಎಂದು ಗುರುತಿಸಲಾಗಿದೆ. ಇಬ್ಬರನ್ನು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (34) ಅಡಿಯಲ್ಲಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಸಂತ್ರಸ್ತೆಯ ಸಹೋದರ ರಿಂಕು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ ಅಂತ ಹೇಳಿದ್ದಾರೆ.

ಪಾನೀಯದಲ್ಲಿ ಮತ್ತು ಬರುವ ದ್ರವ ಬೆರೆಸಿದ್ರಾ ಆರೋಪಿಗಳು?

ಪ್ರಾಥಮಿಕ ತನಿಖೆಯ ನಂತರ, ಪ್ರಕರಣದ ಪ್ರಮುಖ ಆರೋಪಿಗಳಾದ ಸುಖ್ವಿಂದರ್ ಮತ್ತು ಸುಧೀರ್ ಅವರು ಸೋನಾಲಿ ಫೋಗಟ್‌ ಅವ್ರಿಗೆ ಪಾನೀಯದಲ್ಲಿ ಮತ್ತು ಬರುವ ಔಷಧಿ ಬೆರೆಸಿ ಕೊಟ್ಟಿದ್ದಾರೆ ಅಂತ ಹೇಳಲಾಗಿದೆ. ಜೊತೆಗೆ ಆರೋಪಿಗಳಿಬ್ಬರು ಸೋನಾಲಿಗೆ ಬಲವಂತವಾಗಿ ಆ ದ್ರವ ಕುಡಿಯುವಂತೆ ಮಾಡಿದ್ದಾರೆ ಅಂತಲೂ ಒಪ್ಪಿಕೊಂಡಿದ್ದಾರೆ. ಅವರು ಸಾಯುವ ಮುನ್ನ ಮುಂಜಾನೆ 4:30ರ ಸುಮಾರಿಗೆ ವಾಶ್‌ರೂಮ್‌ಗೆ ಎರಡು ಗಂಟೆಗಳ ಕಾಲ ಕರೆದೊಯ್ಯಲಾಯಿತು ಅಂತ ವಿಚಾರಣೆ ವೇಳೆ ತಿಳಿದು ಬಂದಿದೆ.

ಇದನ್ನೂ ಓದಿ: Sonali Phogat: ಬಿಗ್ ಬಾಸ್ ಸ್ಪರ್ಧಿ, ಬಿಜೆಪಿ ನಾಯಕಿಯದ್ದು ಸಾವಲ್ಲ, ಕೊಲೆ! ಕೇಸ್​ನಲ್ಲಿ ಟ್ವಿಸ್ಟ್

ವಾಶ್‌ ರೂಂನಲ್ಲಿ ನಡೆದಿದ್ದಾದರೂ ಏನು?

ಇನ್ನು ಆರೋಪಿಗಳು ಸೋನಾಲಿ ಪೋಗಟ್ ಅವರನ್ನು ವಾಶ್ ರೂಂಗೆ ಕರೆದೊಯ್ದಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾರೆ. ಆದರೆ ವಾಶ್‌ರೂಮ್‌ನೊಳಗೆ ಆಕೆಗೆ ಏನು ಮಾಡಲಾಗಿದೆ ಎಂಬುದನ್ನು ಬಹಿರಂಗಪಡಿಸಲು ಆರೋಪಿಗಳು ನಿರಾಕರಿಸಿದ್ದಾರೆ ಅಂತ ಪೊಲೀಸರು ಹೇಳಿದ್ದಾರೆ.

ಸಿಸಿಟಿವಿ ದೃಶ್ಯಾವಳಿ ಪಡೆದು ತನಿಖೆ

ಉತ್ತರ ಗೋವಾದ ಅಂಜುನಾ ಬೀಚ್‌ನಲ್ಲಿರುವ ಕರ್ಲೀಸ್ ಕ್ಲಬ್‌ನಿಂದ ಪಡೆದ ಸಿಸಿಟಿವಿ ದೃಶ್ಯಾವಳಿಗಳು ಪ್ರಧಾನ ಆರೋಪಿ ಸುಧೀರ್ ಸಾಂಗ್ವಾನ್ ಮತ್ತು ಸಹವರ್ತಿ ಸುಖ್ವಿಂದರ್ ಸಿಂಗ್ ಸತ್ತವರ ಜೊತೆ ಪಾರ್ಟಿ ಮಾಡುವುದನ್ನು ತೋರಿಸುತ್ತವೆ. ಇದೇ ಸಿಸಿಟಿವಿ ಫೂಟೇಜ್‌ಗಳನ್ನು ತನಿಖೆಗಾಗಿ ಬಳಸಿಕೊಳ್ಳಲಾಗಿದೆ ಅಂತ ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಆಗಸ್ಟ್ 22ರಂದು ಗೋವಾಕ್ಕೆ ಬಂದಿದ್ದ ನಟಿ

ಆಗಸ್ಟ್ 22ರಂದು ಗೋವಾಕ್ಕೆ ಪೋಗಟ್ ಆಗಮಿಸಿದ್ದ ವೇಳೆ ಸಾಗ್ವಾನ್ ಮತ್ತು ವಾಸಿ ಆಕೆಯ ಜತೆಗಿದ್ದರು. ಆಗಸ್ಟ್ 23ರಂದು ಪೋಗಟ್ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು. ಆದರೆ ಆಕೆಯ ಸಾವಿನ ಬಗ್ಗೆ ಮನೆಯವರು ಸಂಶಯ ವ್ಯಕ್ತಪಡಿಸಿ, ಇದೊಂದು ಕೊಲೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: Sonali Phogat: ಡ್ರಗ್ಸ್​ ಬೆರೆಸಿದ ನೀರು, 2 ತಾಸು ಟಾಯ್ಲೆಟ್​ನಲ್ಲಿ ಬಂದ್: ಸಿಸಿಟಿವಿಯಲ್ಲಿ ಬಯಲಾಯ್ತು ಸೋನಾಲಿ ಸಾವಿನ ರಹಸ್ಯ!

ಆಸ್ಪತ್ರೆಗೆ ಸಾಗಿಸುವ ಮುನ್ನವೇ ಸಾವನ್ನಪ್ಪಿದ್ದ ಸೋನಾಲಿ

ಸೋನಾಲಿ ಪೋಗಟ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಮೊದಲಿಗೆ ಹೇಳಲಾಗಿತ್ತು.ಅವರನ್ನು ಉತ್ತರ ಗೋವಾ ಜಿಲ್ಲೆಯ ಅಂಜುನಾ ಪ್ರದೇಶದಲ್ಲಿನ ಸೇಂಟ್ ಆಂಟೋನಿ ಆಸ್ಪತ್ರೆಗೆ ಮಂಗಳವಾರ ಕರೆತರುವಷ್ಟರಲ್ಲಿ ಮೃತಪಟ್ಟಿದ್ದರು. ಸಾಯುವ ಮುನ್ನ ತನ್ನ ತಾಯಿ, ಸಹೋದರ ಮತ್ತು ಸೋದರ ಮಾವನ ಜತೆ ಮಾತನಾಡಿದ್ದ ಸೋನಾಲಿ, ಸಾಕಷ್ಟು ಆತಂಕದಲ್ಲಿದ್ದರು. ತನ್ನ ಇಬ್ಬರು ಸಹಚರರ ವಿರುದ್ಧ ದೂರಿದ್ದರು ಎಂದು ಅವರ ಸಹೋದರ ರಿಂಕು ಆರೋಪಿಸಿದ್ದಾರೆ.
Published by:Annappa Achari
First published: