• Home
 • »
 • News
 • »
 • national-international
 • »
 • ಬಾಂಗ್ಲಾದೇಶದ ಮಸೀದಿಯಲ್ಲಿ ಗ್ಯಾಸ್​ ಸೋರಿಕೆ; ಎಸಿ ಸ್ಫೋಟಗೊಂಡು 12 ಜನ ಸಾವು

ಬಾಂಗ್ಲಾದೇಶದ ಮಸೀದಿಯಲ್ಲಿ ಗ್ಯಾಸ್​ ಸೋರಿಕೆ; ಎಸಿ ಸ್ಫೋಟಗೊಂಡು 12 ಜನ ಸಾವು

ಬಾಂಗ್ಲಾದ ಮಸೀದಿಯಲ್ಲಿ ಗ್ಯಾಸ್ ಸೋರಿಕೆಯಿಂದ ಉಂಟಾದ ಸ್ಫೋಟ

ಬಾಂಗ್ಲಾದ ಮಸೀದಿಯಲ್ಲಿ ಗ್ಯಾಸ್ ಸೋರಿಕೆಯಿಂದ ಉಂಟಾದ ಸ್ಫೋಟ

ಢಾಕಾದಲ್ಲಿರುವ ಮಸೀದಿಯಲ್ಲಿ ಶುಕ್ರವಾರ ಪ್ರಾರ್ಥನೆ ಸಲ್ಲಿಸಿದವರು ವಾಪಾಸ್ ತೆರಳುವಾಗ ಈ ಘಟನೆ ನಡೆದಿದೆ. ಮಸೀದಿಯಲ್ಲಿ ಗ್ಯಾಸ್ ಸೋರಿಕೆಯಾಗಿ, ನೆಲ ಮಹಡಿಯಲ್ಲಿದ್ದ ಎಸಿಗಳು ಸ್ಫೋಟಗೊಂಡಿವೆ.

 • Share this:

  ಢಾಕಾ (ಆ. 5): ಬಾಂಗ್ಲಾದೇಶದ ಢಾಕಾದಲ್ಲಿರುವ ಮಸೀದಿಯೊಂದರಲ್ಲಿ ಎಸಿ (ಹವಾ ನಿಯಂತ್ರಣ) ಸ್ಫೋಟಗೊಂಡ ಪರಿಣಾಮ 12 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಜನರಿಗೆ ಸುಟ್ಟ ಗಾಯಗಳಾಗಿದ್ದು, ಸ್ಥಿತಿ ಗಂಭೀರವಾಗಿದೆ. ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಜನರು ಸೇರಿದ್ದ ವೇಳೆ ಈ ದುರಂತ ನಡೆದಿದೆ. ಗ್ಯಾಸ್ ಸೋರಿಕೆಯಾಗಿ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಬಾಂಗ್ಲಾದೇಶದ ನಾರಾಯಣ ಗಂಜ್ ಜಿಲ್ಲೆಯ ಮಸೀದಿಯಲ್ಲಿ ದುರಂತ ನಡೆದಿದೆ. ಸುಮಾರು 37 ಜನರಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ 20ಕ್ಕೂ ಹೆಚ್ಚು ಜನರ ಸ್ಥಿತಿ ತೀರಾ ಗಂಭೀರವಾಗಿದೆ ಎನ್ನಲಾಗಿದೆ. ಹೀಗಾಗಿ, ಈ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.


  ಢಾಕಾದಲ್ಲಿರುವ ಮಸೀದಿಯಲ್ಲಿ ನಡೆದ ಸ್ಫೋಟದಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ಶುಕ್ರವಾರ ಸಂಜೆ 9 ಗಂಟೆಗೆ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ, ತೆರಳುವಾಗ ಈ ಘಟನೆ ನಡೆದಿದೆ. ಮಸೀದಿಯಲ್ಲಿ ಗ್ಯಾಸ್ ಸೋರಿಕೆಯಾಗಿ, ನೆಲ ಮಹಡಿಯಲ್ಲಿದ್ದ ಎಸಿಗಳು ಸ್ಫೋಟಗೊಂಡಿವೆ. ಇದರಿಂದ ಬೆಂಕಿ ಹೊತ್ತಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 3 ಅಂತಸ್ತಿನ ಮಸೀದಿಯಲ್ಲಿ 100ಕ್ಕೂ ಹೆಚ್ಚು ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.


  ಇದನ್ನೂ ಓದಿ: Sushant Singh Death: ಸುಶಾಂತ್ ಸಿಂಗ್ ಸಾವಿನ ಪ್ರಕರಣ; ಸೆ. 9ರವರೆಗೆ ಶೋವಿಕ್ ಚಕ್ರವರ್ತಿ, ಮಿರಾಂಡಾ ಎನ್​ಸಿಬಿ ವಶಕ್ಕೆ


  ಶುಕ್ರವಾರ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದವರು ವಾಪಾಸ್ ತೆರಳುವಾಗ ಈ ಘಟನೆ ನಡೆದಿದೆ. ಅಲ್ಲಿದ್ದವರು ಬಾಗಿಲು, ಕಿಟಕಿಗಳನ್ನು ಮುಚ್ಚಿ, ಎಸಿ ಸ್ವಿಚ್ ಆಫ್ ಮಾಡುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ಸ್ಫೋಟ ಉಂಟಾಗಿದೆ. ಅಲ್ಲಿದ್ದವರಲ್ಲಿ ಬಹುತೇಕರಿಗೆ ಸುಟ್ಟ ಗಾಯದ ಗುರುತುಗಳಾಗಿವೆ. ಗ್ಯಾಸ್ ಸೋರಿಕೆ ಆಗಿದ್ದರಿಂದ ಅದನ್ನು ಉಸಿರಾಡಿ ಅನೇಕರು ಪ್ರಜ್ಞೆ ಕಳೆದುಕೊಂಡಿದ್ದಾರೆ. ಸದ್ಯಕ್ಕೆ 12 ಮಂದಿ ಸಾವನ್ನಪ್ಪಿದ್ದು, ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ.


  ಕಳೆದ ವರ್ಷ ಕೂಡ ಬಾಂಗ್ಲಾ ದೇಶದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಢಾಕಾದಲ್ಲಿ ಉಂಟಾಗಿದ್ದ ಸ್ಫೋಟದಲ್ಲಿ 78 ಜನರು ಸಾವನ್ನಪ್ಪಿದ್ದರು. ಅದಾದ ಒಂದೇ ತಿಂಗಳಲ್ಲಿ ಮತ್ತೊಂದು ಸ್ಫೋಟ ಸಂಭವಿಸಿ, 25 ಜನರು ಸಾವನ್ನಪ್ಪಿದ್ದರು.

  Published by:Sushma Chakre
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು